Hitler Kalyana: ಲೀಲಾಳಿಗೆ ಲಕ್ ಮೇಲೆ ಲಕ್: ಅಂತರಾ ಪಜೀತಿ ಕೇಳೋರಿಲ್ಲ
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾ, ಎಜೆ ವಿಶ್ ಗಾಗಿ ಕಾಯುತ್ತಿರುತ್ತಾಳೆ. ಎಜೆಗೆ ಲೀಲಾ ಹುಟ್ಟುಹಬ್ಬ ಇರುವುದನ್ನೇ ಮರೆತು ಹೋಗಿರುತ್ತದೆ. ಆದರೆ, ಅಜ್ಜಿ ಫೋನ್ ಮಾಡಿ ವಿಷಯ ಹೇಳುತ್ತಾಳೆ. ಆಗ ಎಜೆ ಮನೆಗೆ ಬಂದು ಲೀಲಾಳ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾನೆ. ಇದು ಅಂತರಾಳಿಗೆ ಸಂಕಟವಾಗುವಂತೆ ಮಾಡುತ್ತದೆ.
ಎಜೆಯಿಂದ ವಿಶ್ ಪಡೆದ ಬಳಿಕ ಲೀಲಾ ಸಕತ್ ಖುಷಿಯಾಗುತ್ತಾಳೆ. ಕೊನೆಗೂ ತನ್ನ ಆಸೆ ನೆರವೇರಿತೆಂದು ಖುಷಿ ಪಡುತ್ತಾಳೆ. ಎಜೆ, ಲೀಲಾಳಿಗಾಗಿ ಸೀರೆ ಮತ್ತು ಒಡವೆಯನ್ನು ತಂದಿರುತ್ತಾನೆ.

ಸೀರೆ ಹಾಗೂ ಒಡವೆ ಕೊಟ್ಟು, ಅಂತರಾಳಿಗೆ ಲೀಲಾಳನ್ನು ರೆಡಿ ಮಾಡು ಎಂದು ಎಜೆ ಹೇಳುತ್ತಾನೆ. ಅಂತರಾ ವಿಧಿ ಇಲ್ಲದೇ ಲೀಲಾಳನ್ನು ರೆಡಿ ಮಾಡುತ್ತಾಳೆ.
ಕೊನೆಗೂ ಲೀಲಾ ಆಸೆ ನೆರವೇರಿತು
ಬೇಕಂತಲೇ ಲೀಲಾ, ಅಂತರಾಳನ್ನು ಉರಿಸುತ್ತಿರುತ್ತಾಳೆ. ನಮ್ ಮನೆಯವರು ತಂದು ಕೊಟ್ಟ ಸೀರೆ, ಒಡವೆ ಎಂದೆಲ್ಲಾ ರೇಗಿಸುತ್ತಿರುತ್ತಾಳೆ. ಅಂತರಾಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಸುಮ್ಮನಿರದೇ ಬೇರೇನು ಮಾಡಲೂ ಆಗುತ್ತಿಲ್ಲ. ಲೀಲಾ ಹೇಳಿದ್ದಕ್ಕೆ ತಲೆ ಆಡಿಸುತ್ತಿದ್ದಾಳೆ.
ಲೀಲಾ ಬರ್ತ್‌ಡೇ ಸೆಲಬ್ರೇಟ್ ಮಾಡಿದ ಎಜೆ
ಮನೆಯವರೆಲ್ಲಾ ಸೇರಿ ಲೀಲಾ ಹುಟ್ಟುಹಬ್ಬಕ್ಕೆ ಡೆಕೋರೆಟ್ ಮಾಡಿ ಕೇಕ್ ತರಿಸಿರುತ್ತಾರೆ. ಲೀಲಾ ಕೇಕ್ ಕಟ್ ಮಾಡಿ ಎಲ್ಲರಿಗೂ ತಿನ್ನಿಸಿ ಅಜ್ಜಿ ಮತ್ತು ಎಜೆ ಬಳಿ ಆಶೀರ್ವಾದ ಪಡೆಯುತ್ತಾಳೆ. ಎಜೆ ಬಳಿ ಆಶೀರ್ವಾದ ಪಡೆದಿದ್ದಕ್ಕೆ ಅಂತರಾ ಪ್ರಶ್ನೆ ಮಾಡುತ್ತಾಳೆ. ಆಗ ಲೀಲಾ ಮನೆ ಯಜಮಾನರು ಇವರು, ಇವರ ಆಶೀರ್ವಾದ ಬಹಳ ಮುಖ್ಯ ಎಂದು ಹೇಳಿ ಸುಮ್ಮನಾಗಿಸುತ್ತಾಳೆ. ಸರೂ ಮತ್ತು ಅಂತರಾ ಇಬ್ಬರೂ ಲೀಲಾ ಹುಟ್ಟುಹಬ್ಬವನ್ನು ಎಜೆ ಸೆಲಬ್ರೇಟ್ ಮಾಡಿದ್ದಕ್ಕೆ ಉರಿದುಕೊಳ್ಳುತ್ತಾರೆ. ಆದರೆ, ಅಜ್ಜಿ, ಲಕ್ಷ್ಮೀ ಮತ್ತು ರೂಪ ಎಲ್ಲರೂ ಲೀಲಾ ಹುಟ್ಟುಹಬ್ಬಕ್ಕೆ ಎಜೆ ವಿಶ್ ಮಾಡಿದರು ಎಂದು ಬಹಳ ಖುಷಿಯಿಂದ ಇದ್ದಾರೆ. ಇದರ ಫೋಟೋ ಮತ್ತು ವೀಡಿಯೋಗಳನ್ನು ಚುಕ್ಕಿಗೂ ಕಳಿಸಿ ಸಂಭ್ರಮಿಸಿದ್ದಾರೆ.

ಅಂತರಾ ಬಗ್ಗೆ ಯೋಚಿಸುತ್ತಿರುವ ಅಭಿ
ಅಷ್ಟೆಲ್ಲಾ ಪ್ಲಾನ್ ಮಾಡಿದರೂ ಕೂಡ ಎಜೆ ತನ್ನ ಜೊತೆಗೆ ಇದ್ದುಕೊಂಡೇ ಲೀಲಾಳಿಗೆ ಶಾಪಿಂಗ್ ಮಾಡಿ, ಮನೆಗೆ ಕರೆದುಕೊಂಡು ಬಂದು ಹುಟ್ಟುಹಬ್ಬ ಆಚರಿಸಿದ ಎಂದು ಅಂತರಾ ಮತ್ತು ಸರಸ್ವತಿ ಯೋಚಿಸುತ್ತಿರುತ್ತಾರೆ. ಆದರೆ, ಎಜೆ, ಅಂತರಾಳ ನಡೆ ಬಗ್ಗೆ ಯೋಚಿಸುತ್ತಾ ಕುಳಿತಿರುತ್ತಾನೆ. ಇತ್ತೀಚೆಗೆ ಅಂತರಾ ಮೊದಲಿನಂತಿಲ್ಲ. ಬಹಳ ಸ್ವಾರ್ಥವಾಗಿ ಯೋಚಿಸುತ್ತಾಳೆ. ಅಲ್ಲದೇ, ಮೊದಲಿದ್ದ ಅಂತರಾ ಸಿಂಪಲ್ ಆಗಿ ಬದುಕಲು ಬಯಸುತ್ತಿದ್ದಳು. ಆದರೆ, ಈಗ ಐಷಾರಾಮಿ ಬದುಕನ್ನು ನಡೆಸಲು ಬಯಸುತ್ತಾಳೆ. ಅಲ್ಲದೇ, ಹೊರಗಡೆ ಕರೆದುಕೊಂಡು ಹೋದಾಗ ಗುಲ್ಕನ್ ಬನ್ ಅನ್ನು ಇಷ್ಟ ಪಡುತ್ತಿದ್ದ ಅಂತರಾ, ಎಜೆಗೆ ತಿಳಿಯದಂತೆ ಕಸಕ್ಕೆ ಬಿಸಾಡಿರುತ್ತಾಳೆ. ಈ ವಿಚಾರ ತಿಳಿದಾಗಿನಿಂದ ಎಜೆ, ಅಂತರಾಳ ನಡೆಯ ಬಗ್ಗೆಯೇ ಆಲೋಚಿಸುತ್ತಿದ್ದಾನೆ.
ಬಾಲ ಸುಟ್ಟ ಇಲಿಯಂತಾದ ಅಂತರಾ
ಲೀಲಾ ತನ್ನ ಕೆಲಸವನ್ನು ಸುಲಭವಾಗಿ ಸಾಧಿಸಿಕೊಳ್ಳುತ್ತಿದ್ದಾಳೆ. ನಿಧಾನವಾಗಿ ಅಂತರಾಳಿಗೆ ಆಕೆಯ ಸ್ಥಾನವನ್ನು ತೋರಿಸಿಕೊಡುತ್ತಿದ್ದಾಳೆ. ಅಂತರಾ ಏನೇ ಪ್ಲಾನ್ ಮಾಡಿದರೂ ಅದು ಫ್ಲಾಪ್ ಆಗುತ್ತಿದೆ. ಈಗ ಎಜೆ ತನ್ನ ಮಾತನ್ನೂ ಮೀರಿ, ಲೀಲಾಳಿಗೋಸ್ಕರ ಶಾಪಿಂಗ್ ಮಾಡಿಕೊಂಡು ಕರೆದು ತಂದಿರುವುದು ಇನ್ನಷ್ಟು ಸಿಟ್ಟು ತರಿಸಿದೆ. ಅಲ್ಲದೇ, ಲೀಲಾಳಿಗೆ ಫೋನ್ ಮಾಡಿ ಎಜೆ ತನಗಾಗಿ ಶಾಪಿಂಗ್ ಮಾಡುತ್ತಿದ್ದಾನೆ ಎಂದು ಕೊಚ್ಚಿಕೊಂಡಿದ್ದಳು. ಸುಮ್ಮನಿರದ ಲೀಲಾ ಈಗ ಬಂದು ಎಲ್ಲಿ ಎಜೆ ಸರ್ ನಿಮಗೆ ತೆಗೆದುಕೊಟ್ಟ ಬಟ್ಟೆ, ಒಡವೆಗಳನ್ನು ತೋರಿಸಿ ಎಂದು ಕೇಳುತ್ತಾಳೆ. ಅಂತರಾ ಇಲಿ ಸುಟ್ಟ ಬಾಲದಂತಾಗಿದ್ದು, ಕಸ್ಟಮೈಸ್ ಮಾಡಲು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಾಳೆ.


Click it and Unblock the Notifications











