Hitler Kalyana: ಪ್ರಾರ್ಥನಾಳ ಬಗ್ಗೆ ಸಂಪೂರ್ಣವಾಗಿ ತಿಳಿದ ಲೀಲಾ
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಮನೆಯವರೆಲ್ಲರೂ ಗೌರಿ-ಗಣೇಶ ಹಬ್ಬ ಯಾವುದೇ ತೊಂದರೆ ಇಲ್ಲದೇ ನೆರವೇರಿದ್ದಕ್ಕೆ ಖುಷಿ ಪಡುತ್ತಾರೆ. ಅಜ್ಜಿ ಖುಷಿಗೆ ಡ್ಯಾನ್ಸ್ ಕೂಡ ಮಾಡುತ್ತಾರೆ. ಸುಳ್ಳು ಹೇಳಿಕೊಂಡು ಅಂತರಾ ಹೆಸರಿನಲ್ಲಿ ಮನೆಯವರಿಗೆಲ್ಲಾ ಮೋಸ ಮಾಡುತ್ತಿರುವ ಪ್ರಾರ್ಥನಾ ಕಾಲ ಮುಗಿಯುತ್ತಿದೆ. ಲೀಲಾಳಿಗೆ ಪ್ರಾರ್ಥನಾಳ ಆಟಗಳು ಅರ್ಥವಾಗುತ್ತಿದೆ.
ಲೀಲಾ ಹೆಜ್ಜೆ ಹೆಜ್ಜೆಗೂ ಪ್ರಾರ್ಥನಾಳನ್ನು ಪರೀಕ್ಷೆ ಮಾಡುತ್ತಲೇ ಇದ್ದಾಳೆ. ತನಗೆ ಎಲ್ಲವೂ ಅರ್ಥವಾಗುತ್ತಿದ್ದರೂ ಏನೂ ಗೊತ್ತಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಈಗ ಅಂತರಾ ಬಹಳ ಬೇಕಾದವರಿಗೆ ಬಾಗಿನ ಕೊಡಬೇಕು ಎಂದು ಹೊರಟಿದ್ದಾಳೆ. ಲೀಲಾ ಯಾರದು ಎಂದು ತಿಳಿಯಲು ಅವಳ ಹಿಂದೆಯೇ ಹೋಗಿದ್ದಾಳೆ.

ಅಂತರಾಗೆ ಬಾಗಿಣ ನೀಡಿದ ಪ್ರಾರ್ಥನಾ
ಅಂತರಾಳನ್ನು ಹೂತಾಕಿರುವ ಸ್ಥಳಕ್ಕೆ ಪ್ರಾರ್ಥನಾ ಬರುತ್ತಾಳೆ. ಅಲ್ಲಿ ನಿಂತು ಅಂತರಾ ನಿನ್ನಿಂದ ನಾನು ಆ ಮನೆಗೆ ಹೋಗುವಂತಾಯ್ತು. ನಿನ್ನದೇ ರೂಪ ನನಗೆ ಸಿಕ್ಕಿರುವುದಕ್ಕೆ ಅಷ್ಟು ದೊಡ್ಡ ಮನೆ ಸಿಕ್ಕಿದೆ. ಪ್ರಾರ್ಥನಾ ಈಗ ಅಂತರಾ ಆಗಿ ಹೋಗಿದ್ದಾಳೆ. ನಿನ್ನನ್ನು ಹುಚ್ಚನಂತೆ ಪ್ರೀತಿಸುವ ಎಜೆ ಒಬ್ಬ ನನ್ನವನಾದರೆ, ಇನ್ನೆಲ್ಲವೂ ನನ್ನದೇ. ಮನೆಯಲ್ಲಿ ಎಲ್ಲರೂ ನನ್ನವಶವಾಗಿದ್ದಾರೆ. ಇನ್ನು ಸ್ವಲ್ಪ ದಿನದಲ್ಲೇ ಎಜೆ ಕೂಡ ನನ್ನವನಾಗುತ್ತಾನೆ ಎಂದೆಲ್ಲಾ ಸತ್ಯವನ್ನು ಹೇಳುತ್ತಿರುತ್ತಾಳೆ. ಇದನ್ನೆಲ್ಲಾ ಕೇಳಿಸಿಕೊಳ್ಳುವ ಲೀಲಾಳಿಗೆ ನೋವಾಗುತ್ತದೆ.
ಪ್ರಾರ್ಥನಾ ಬಗ್ಗೆ ತಿಳಿದ ಲೀಲಾ
ಇನ್ನು ಪ್ರಾರ್ಥನಾ ನಿನಗೆ ಪ್ರತೀ ವರ್ಷ ಬಂದು ಬಾಗಿನವನ್ನು ಕೊಡುತ್ತೇನೆ ಎಂದು ಹೇಳುತ್ತಾಳೆ. ಆಗ ಲೀಲಾ, ಅಂತರಾ ಅಕ್ಕ ಬರಬಹುದು ಎಂದು ಅಂದುಕೊಳ್ಳುತ್ತಾಳೆ. ಆಗ ಪ್ರಾರ್ಥನಾ ಎಲ್ಲಿಂದ ಬರುತ್ತೀಯಾ. ಮಣ್ಣಲ್ಲಿ ಮಣ್ಣಾಗಿರುವ ನೀನು ಬರೋದಕ್ಕೆ ಆಗಲ್ಲ. ತಗೋ ಬಾಗಿನ ಎಂದು ಬಿಸಾಡುತ್ತಾಳೆ. ಕೊನೆ ಗೌರಿ-ಗಣೇಶ ಹಬ್ಬದ ಶುಭಾಷಯ ಹೇಳಿ, ನಿನಗೆ ನಾನು ಥ್ಯಾಂಕ್ಸ್ ಹೇಳುತ್ತೀನಿ. ನಿನ್ನಂದಲೇ ನನಗೆ ಇಷ್ಟೆಲ್ಲಾ ಸಿಕ್ಕಿದೆ ಎಂದು ಹೇಳಿ ಅಲ್ಲಿಂದ ಹೊರಟು ಬಿಡುತ್ತಾಳೆ. ಲೀಲಾ ಸತ್ಯವನ್ನು ತಿಳಿದು ಕಣ್ಣೀರು ಹಾಕುತ್ತಾಳೆ.
ಅಂತರಾಳಿಗೆ ಮಾತು ಕೊಟ್ಟ ಲೀಲಾ
ಲೀಲಾ ಬಾಗಿನವನ್ನು ತೆಗೆದುಕೊಂಡು, ಎಜೆಯ ನಿಷ್ಕಲ್ಮಷವಾದ ನಿಮ್ಮ ಮೇಲಿನ ಪ್ರೀತಿಯನ್ನು ಬೇರೆ ಯಾರಿಗೂ ಸಿಗೋದಕ್ಕೆ ಬಿಡೋದಿಲ್ಲ. ನಿಮ್ಮ ಬದಲು ನಾನು ಬಂದಿದ್ದೀನಿ ಎಂಬುದನ್ನು ಎಜೆಗೆ ನಾನೇ ಅರ್ಥ ಮಾಡಿಸುತ್ತೇನೆ. ಅವರು ಹೊಸ ಜೀವನ ಶುರು ಮಾಡೋದಕ್ಕೆ ನಾನು ಸಹಕರಿಸುತ್ತೇನೆ. ನಿಮ್ಮ ಹೆಸರಲ್ಲಿ ಸುಳ್ಳು ಹೇಳಿಕೊಂಡು ಬಂದಿರುವ ಇವರನ್ನು ಸುಮ್ಮನೆ ಬಿಡುವುದಿಲ್ಲ. ಎಜೆಯ ಪ್ರೀತಿ ನಿಮಗೆ ಬಿಟ್ಟು ಬೇರೆಯವರಿಗೆ ಸಿಗುವುದಕ್ಕೆ ಬಿಡೋದಿಲ್ಲ ಎಂದು ಹೇಳಿ ಭಾಷೆ ಕೊಟ್ಟು ಬಾಗಿನವನ್ನು ತೆಗೆದುಕೊಂಡು ಅಲ್ಲಿಂದ ಹೊರಡುತ್ತಾಳೆ.

ಪ್ರಾರ್ಥನಾ ಗ್ರಹಚಾರ ಕೆಟ್ಟಾಯ್ತು
ಲೀಲಾಳಿಗೆ ಈಗ ಎಲ್ಲಾ ಸತ್ಯವೂ ಅರ್ಥವಾಗಿದ್ದು, ಪ್ರಾರ್ಥನಾಳನ್ನು ಮನೆಯಿಂದ ಹೊರಗೆ ಹೇಗೆ ಕಳಿಸಬೇಕು ಎಂದು ಯೋಚಿಸುತ್ತಿದ್ದಾಳೆ. ಎಜೆ ಗಣಪನ ಎದುರು ನಿಂತು, ತನ್ನ ಮನದಲ್ಲಿನ ಗೊಂದಲಗಳ ಬಗ್ಗೆ ಹೇಳಿಕೊಳ್ಳುತ್ತಾನೆ. ನನ್ನ ಪ್ರೀತಿ ಕಳೆದು ಹೋಯ್ತು ಎನ್ನುವಾಗ ಲೀಲಾ ಬಂದಳು. ಲೀಲಾಳನ್ನು ಒಪ್ಪಿಕೊಳ್ಳುವ ವೇಳೆಗೆ ಮತ್ತೆ ನನ್ನ ಪ್ರೀತಿ ಸಿಕ್ಕಿದೆ. ಈಗ ನಾನು ಯಾವುದನ್ನು ಒಪ್ಪಿಕೊಳ್ಳಬೇಕು ಎಂಬುದು ಅರ್ಥವಾಗುತ್ತಿಲ್ಲ. ನನಗೆ ನೀನೇ ದಾರಿ ತೋರು ಭಗವಂತ ಎಂದು ಕೇಳಿಕೊಳ್ಳುತ್ತಾನೆ.
ಪ್ರಾರ್ಥನೆಗೆ ಇರಿಸು ಮುರಿಸು
ಇದೇ ಸಮಯಕ್ಕೆ ಲೀಲಾಳಿಗೆ ಸತ್ಯವೆಲ್ಲಾ ಅರ್ಥವಾಗಿದೆ. ಹೀಗಾಗಿ ಬೇಕಂತಲೇ ಪ್ರಾರ್ಥನಾಳನ್ನು ಬಹಳ ವ್ಯಂಗ್ಯವಾಗಿ ಮಾತನಾಡಿಸುತ್ತಾಳೆ. ಎಲ್ಲಿಗೆ ಹೋಗಿದ್ದು, ನನ್ನನ್ನು ಕರೆದುಕೊಂಡು ಹೋಗಿ ಎಂದು ಕೇಳುತ್ತಾಳೆ. ಲೀಲಾ ಮಾತುಗಳು ಪ್ರಾರ್ಥನಾಳಿಗೆ ಇರಿಸು ಮುರಿಸು ಉಂಟು ಮಾಡುತ್ತದೆ.


Click it and Unblock the Notifications











