Hitler Kalyana: ಎಡವಟ್ಟು ಲೀಲಾಗೆ ಎಜೆ ಕಪಾಳ ಮೋಕ್ಷ ಮಾಡಿದ್ದೇಕೆ?
ಎಡವಟ್ಟು ಲೀಲಾ ಒಂದಲ್ಲ ಒಂದು ಎಡವಟ್ಟು ಮಾಡಿ ಹಿಟ್ಲರ್ ಕೈ ಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾಳೆ. ಎಜೆ ಕೈಯಲ್ಲಿ ಏನಾದರೂ ಬೈಗುಳ ಕೇಳದಿದ್ದರೆ ಲೀಲಾಗೆ ತಿಂದ ಅನ್ನ ಜೀರ್ಣವಾಗುವುದೇ ಕಷ್ಟ. ಇನ್ನೂ ಎಜೆ ಮೀಟಿಂಗ್ ಸಲುವಾಗಿ ಮಂಗಳೂರಿಗೆ ತೆರಳುತ್ತಾರೆ ಎಂದು ಹೇಳಿದಾಗಲೇ ದೇವ್‌ಗೆ ಒಂದು ತರಹ ಕಿರಿ ಕಿರಿ. ಆದರೆ, ನಮ್ಮ ಲೀಲಾ ಮಾತ್ರ ಫುಲ್ ಖುಷಿ. ಯಾಕೆಂದ್ರೆ ಡೈರೆಕ್ಟರ್ ಒಬ್ಬರು ಲೀಲಾಗೆ ಕಾಲ್ ಮಾಡಿ ಎಜೆ ಮನೆನ ಒಂದು ದಿನ ಶೂಟಿಂಗ್ ಗೆ ಅವಕಾಶ ಮಾಡಿಕೊಡಬೇಕು ಎಂದು ಕೇಳಿದರು. ಮೊದಲು ಇದಕ್ಕೆ ಒಪ್ಪಿಗೆ ಕೊಡದ ಲೀಲಾ. ಡೈರೆಕ್ಟರ್ ಮಾತಿಗೆ ಮರುಳಾಗಿ ಒಪ್ಪಿಕೊಳ್ಳುತ್ತಾರೆ.
ಆದರೆ ಎಜೆ ಮನೆಯನ್ನು ಶೂಟಿಂಗ್ ಕೊಟ್ರೆ ಎಜೆ ಸುಮ್ನೆ ಬಿಡ್ತಾರಾ? ಅದಕ್ಕೆ ಎಜೆ ಇಲ್ಲದ ಸಮಯ ನೋಡಿಕೊಂಡು ಶೂಟಿಂಗ್‌ಗೆ ಬರ ಹೇಳುತ್ತಾಳೆ. ಇದಕ್ಕಿಂತ ಮುಂಚೆ ಎಜೆ ಅಮ್ಮನ ಒಂದು ಮಾತು ಕೇಳುತ್ತಾಳೆ ಲೀಲಾ . ಮೊದಲಿಗೆ ಅಷ್ಟೊಂದು ಆಸಕ್ತಿ ತೋರದ ಇವರು ಮತ್ತೆ ಆಗಬಹುದು ಎಂದು ಹೇಳಿದರು. ಎಜೆ ಮೀಟಿಂಗ್‌ಗೆ ಮಂಗಳೂರಿಗೆ ಹೋಗೋದನ್ನು ಕಾಯುತ್ತಿದ್ದ ಲೀಲಾ. ಎಜೆ ಮನೆ ಬಿಟ್ಟು ಹೋಗೋವರೆಗೂ ಕಾದು ಶೂಟಿಂಗ್‌ಗೆ ಬರಲು ಹೇಳುತ್ತಾಳೆ. ಈ ವೇಳೆ ದುರ್ಗಾ ಏನೂ ಓದುತ್ತಿರುವಾಗ, ಲೀಲಾ ಮಾತಾಡಿಸಿದಾಗ, ದುರ್ಗಾ ಲೀಲಾಳನ್ನೇ ಅಣಕ ಮಾಡುತ್ತಾಳೆ.
ಇದನ್ನು ಕಂಡ ಲೀಲಾ ದುರ್ಗಾಳ ಸ್ಥಾನ ಯಾವುದೆಂದು ಅವಳ ಸ್ಟೈಲ್‌ನಲ್ಲಿ ಹೇಳುತ್ತಾಳೆ. ಇದರಿಂದ ಕುಪಿತಗೊಂಡ ದುರ್ಗಾ ಅಲ್ಲಿಂದ ತೆರಳುತ್ತಾಳೆ. ಇನ್ನೂ ಶೂಟಿಂಗ್‌ಗೆ ಎಲ್ಲರೂ ಆಗಮಿಸುತ್ತಾರೆ. ಲೀಲಾಗೆ ಮನೆ ಕೆಲಸದ ಪಾತ್ರವನ್ನು ಕೊಡಲಾಗಿತ್ತು. ಅದರಲ್ಲಿ ಹೀರೋ ಬಂದು ಮನೆ ಕೆಲಸದವಳ ಕಪಾಳಕ್ಕೆ ಭಾರಿಸಬೇಕಾದ ಸೀನ್ ಇತ್ತು . ಹೀರೋ ಲೀಲಾ ಕೆನ್ನೆಗೆ ಬಾರಿಸಲು ಬಂದಾಗ ಎಲ್ಲಾ ಹಾಳಾಗುತ್ತಿತ್ತು. ಇನ್ನೂ ಈ ವೇಳೆ ಎಜೆ ಮೀಟಿಂಗ್ ಕ್ಯಾನ್ಸಲಾಗಿ ಮನೆಗೆ ಆಗಮಿಸಿದ್ದಾರೆ.

ಶೂಟಿಂಗ್‌ಗೆ ಮನೆ ಬಾಡಿಗೆ ಕೊಟ್ಟಿದ್ದೆ ತಪ್ಪಾಯಿತಾ ?
ಈ ವೇಳೆ ದುರ್ಗಾ , ಲಕ್ಷ್ಮೀ ಮನೆಯಲ್ಲಿ ಆಗುತ್ತಿರುವ ಎಲ್ಲಾ ವಿಚಾರವನ್ನು ಎಜೆಗೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಎಜೆ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಆಗಮಿಸಿದ್ದಾರೆ. ಕೆಲವರು ಶೂಟಿಂಗ್ ಕಡೆ ಗಮನ ಕೊಟ್ಟರೆ, ಇನ್ನೂ ಕೆಲವರು ಎಜೆ ಬರುತ್ತಿರುವುದನ್ನು ಕಂಡು ದಂಗಾದರು. ಎಜೆ ನೇರವಾಗಿ ಬಂದು ಲೀಲಾ ಕೆನ್ನೆಗೆ ಬಾರಿಸಿದ ಸನ್ನಿವೇಶ ಕೂಡ ನಡೀತು. ಇದನ್ನು ಕಂಡು ಅಲ್ಲಿ ನೆರೆದಿರುವವರು ಒಮ್ಮೆ ಭಯಭೀತರಾದ್ದಾರೆ.
ಎಜೆನ ಕಂಡು ದಂಗಾದರು. ಎಜೆ ಎಲ್ಲರನ್ನೂ ನೋಡಿ ಔಟ್ ಎಂದು ಹೇಳಿದ ಕೂಡಲೇ ಎಲ್ಲಾ ಮನೆಯಿಂದ ಹೊರಗೆ ಹೋಗಿಬಿಟ್ಟರು. ಶೂಟಿಂಗ್ ಅರ್ಧಕ್ಕೆ ನಿಂತು ಹೋದದ್ದನ್ನು ಕಂಡು ಡೈರೆಕ್ಟರ್ ಶೂಟಿಂಗ್ ಪರಿಪೂರ್ಣವಾಗದಿದ್ದರೆ ತುಂಬಾ ನಷ್ಟವಾಗುತ್ತದೆ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ. ಆದರೆ, ಲೀಲಾ ಕೆನ್ನೆಗೆ ಬಿದ್ದ ಏಟಿಗೆ ಲೀಲಾಗೆ ಎಜೆ ಬಳಿ ಮಾತನಾಡಲು ಭಯ. ಹೇಗೋ ಕಷ್ಟಪಟ್ಟು ಲೀಲಾ ಎಜೆ ಜೊತೆ ಮಾತನಾಡುತ್ತಾಳೆ. ಆದರೆ ಇದಕ್ಕೆಲ್ಲಾ ಎಜೆ ಒಪ್ಪುತ್ತಾರಾ?


Click it and Unblock the Notifications











