Hitler Kalyana: ಲೀಲಾ ಮನದಲ್ಲೇ ಉಳಿದ ʼಅಂತರಾʼಳದ ಮಾತುಗಳು

By ಪ್ರಿಯಾ ದೊರೆ

'ಹಿಟ್ಲರ್‌ ಕಲ್ಯಾಣ' ಧಾರಾವಾಹಿ ಈಗ ಕುತೂಹಲದ ಘಟ್ಟವನ್ನು ತಲುಪುವ ಹಾದಿಯಲ್ಲಿದೆ. ಪ್ರೇಕ್ಷಕರಿಗೂ ನಿತ್ಯ ಧಾರಾವಾಹಿಯನ್ನು ನೋಡದೇ ಹೋದರೆ, ಲಿಂಕ್‌ ಮಿಸ್‌ ಆಗಬಹುದು ಎಂಬ ಸ್ಥಿತಿಯಲ್ಲಿದ್ದಾರೆ. ಹಳೆಯ ಕಥೆಯನ್ನು ಹೊತ್ತು ಶುರುವಾದ 'ಹಿಟ್ಲರ್‌ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಹಿಂದೆ ದೊಡ್ಡ ರಹಸ್ಯವೇ ಇದೆ. ಅದು ಇಂದಲ್ಲ ನಾಳೆ ಗೊತ್ತಾಗುತ್ತೆ ಎಂದು ಪ್ರೇಕ್ಷಕರೂ ಕಾಯುತ್ತಿದ್ದಾರೆ.

ಈಗಾಗಲೇ ಎಜೆ ಸದಾ ಹಪಹಪಿಸುತ್ತಿದ್ದ ತನ್ನ ಮೊದಲ ಪತ್ನಿ ಅಂತರಾ ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟಾಗಿದೆ. ಆದರೆ, ಹಳೆಯ ಕಥೆ ಶುರುವಾಗುತ್ತೋ ಇಲ್ಲ ಹೊಸ ಕಥೆ ನಡೆಯುತ್ತೋ ಗೊತ್ತಿಲ್ಲ. ಹಿಟ್ಲರ್‌ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾ ಬಂದಾಗಿದೆ. ಲೀಲಾ ಎಜೆ ಮದುವೆ ನಿಂತಾಗಿದೆ. ಮುಂದೇನಿದ್ದರೂ, ಲೀಲಾ ಬದುಕು ಹೇಗೆ..? ಅಂತರಾ ಇಷ್ಟು ದಿನ ಎಲ್ಲಿದ್ದಳು ಎಂಬುದಷ್ಟೇ. ಹಳೆಯ ಹೆಂಡತಿ ಬಂದ ಕಾರಣ ಎಜೆ, ಲೀಲಾಳನ್ನು ಮದುವೆಯಾಗುವುದಿಲ್ಲ ಎಂದು ನೇರವಾಗಿ ತನ್ನ ನಿರ್ಧಾರವನ್ನು ಹೇಳಿದ್ದಾನೆ.

hitler kalyana serial 01st April Episode Written Update

ಎಜೆಗೆ ಲೀಲಾ ಮೇಲೆ ಕನಿಕರವಿದ್ದರೂ, ಅಂತರಾಳ ಮೇಲಿನ ಪ್ರೀತಿ ಆತನನ್ನು ಕಟ್ಟಿ ಹಾಕಿದೆ. ಅಂತರಾ ಇಷ್ಟು ವರ್ಷ ಎಲ್ಲಿದ್ದಳು. ಮನೆಯಿಂದ ಯಾಕೆ ಹೊರಟು ಹೋಗಿದ್ದಳು. ಈಗ ಹೇಗೆ ಬಂದಳು. ಅವಳಿಗೆ ಏನಾಗಿತ್ತು ಎಂಬ ಸಾವಿರಾರು ಪ್ರಶ್ನೆಗಳು ಎಜೆ ಮನದಲ್ಲಿ ಎದ್ದಿವೆ. ಆದರೆ, ಇದಕ್ಕೆಲ್ಲಾ ಉತ್ತರ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ. ಇತ್ತ ಅಜ್ಜಿ, ಲಕ್ಷ್ಮೀ ಹಾಗೂ ವಿಶ್ವರೂಪ್ ಗೆ ಲೀಲಾಳದ್ದೇ ಯೋಚನೆಯಾಗಿದೆ. ಹೀಗಾಯ್ತಲ್ಲಾ. ಎಜೆ ಅವರ ಜೊತೆಗೆ ಒಟ್ಟಿಗೆ ಇರಬೇಕಿದ್ದ ಲೀಲಾ, ಅಂತರಾ ಬಂದ ಕಾರಣ ದೂರ ಆಗಬೇಕಾಯ್ತಲ್ಲ ಎಂದು ಯೋಚಿಸುತ್ತಿದ್ದಾರೆ.

ಆದರೆ, ಲೀಲಾ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಇದನ್ನು ನೋಡಿ ಅಜ್ಜಿ ಮತ್ತಷ್ಟು ಗಾಬರಿಯಾಗಿದ್ದಾರೆ. ಲಕ್ಷ್ಮೀಗಂತೂ ಕೈ ಕಾಲು ಆಡುತ್ತಿಲ್ಲ. ಲೀಲಾ ಅವರ ಮನಸಲ್ಲಿ ಏನಿದೆ. ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂದೇ ಯೋಚಿಸುತ್ತಿದ್ದಾಳೆ.

hitler kalyana serial 01st April Episode Written Update

ಅಂತರಾಳಿಗೆ ಪ್ರಜ್ಞೆ ಬಂದ ಕೂಡಲೇ ಎಜೆ ಬಂದು ಮಾತನಾಡಿಸುತ್ತಾನೆ. ಅಂತರಾ ಎಂದು ಕರೆಯುತ್ತಾನೆ. ಇದರಿಂದ ಅಂತರಾ ಕೋಪ ಮಾಡಿಕೊಳ್ಳುತ್ತಾಳೆ. ನಾನು ಅಂತರಾ ಅಲ್ಲ ಪ್ರಾರ್ಥನಾ ಎಂದು ಹೇಳುತ್ತಾಳೆ. ದುರ್ಗಾ ಕೂಡ ಬಂದು ಅತ್ತೆ ಎಂದು ಮಾತನಾಡಿಸುತ್ತಾಳೆ. ಇದೇ ವೇಳೆಗೆ ಬಂದು ಲೀಲಾ ಅಕ್ಕ ಎನ್ನುತ್ತಾಳೆ. ಆಗ ಅಂತರಾ ಮತ್ತೆ ಕೂಗಾಡುತ್ತಾಳೆ.

ಲೀಲಾ ಅಂತರಾಳನ್ನು ಸಮಾಧಾನ ಮಾಡುತ್ತಾಳೆ. ಅಂತರಾಳ ಕೈ ಹಿಡಿದು, ಇದು ನಿಮ್ಮ ಮನೆ. ನೀವು ಇಲ್ಲೇ ಇದ್ದಿದ್ದು. ಆದರೆ ಈಗ ನಿಮಗೆ ಹುಷಾರಿಲ್ಲ. ಎಲ್ಲಾ ಮರೆತು ಹೋಗಿದ್ದೀರಾ. ಸ್ವಲ್ಪ ದಿನ ನಿಮಗೆ ಎಲ್ಲಾ ಗೊತ್ತಾಗುತ್ತೆ. ಈಗ ಮಲಗಿ ಎಂದು ರೆಸ್ಟ್‌ ಮಾಡಲು ಬಿಟ್ಟು ಬರುತ್ತಾಳೆ. ಎಜೆಗೆ ಆತಂಕ ಪಡಬೇಡಿ, ಅಂತರಾ ಅಕ್ಕ ಸರಿ ಹೋಗುತ್ತಾರೆ ಎಂದು ಸಮಾಧಾನ ಹೇಳುತ್ತಾಳೆ.

hitler kalyana serial 01st April Episode Written Update

ಇನ್ನು ಒಬ್ಬಳೇ ಇದ್ದಾಗ ಲೀಲಾ ಅಳುತ್ತಿರುತ್ತಾಳೆ. ಈ ವೇಳೆಗೆ ಬರುವ ಲೀಲಾ ತಂದೆ ಅವಳಿಗೆ ಸಮಾಧಾನ ಮಾಡುತ್ತಾನೆ. ಲೀಲಾ ಜೋರಾಗಿ ಅತ್ತು ಸಮಾಧಾನ ಮಾಡಿಕೊಳ್ಳುತ್ತಾಳೆ. ತನ್ನ ನೋವಿನ ಬಗ್ಗೆ ಯಾರಿಗೂ ಹೇಳಬೇಡಿ ಎಂದು ಭಾಷೆಯನ್ನೂ ತೆಗೆದುಕೊಳ್ಳುತ್ತಾಳೆ. ಇತ್ತ ದುರ್ಗಾಳಿಗೆ ಇಷ್ಟೆಲ್ಲಾ ಮಾಡಿದರೂ ಲೀಲಾ ಖುಷಿಯಾಗಿ ಇದ್ದಾಳಲ್ಲಿ ಎಂದು ಹೊಟ್ಟೆ ಉರಿಯುತ್ತಿದೆ.

ಇನ್ನು ಲಕ್ಷ್ಮೀ ಊಟ ಮಾಡದೇ, ಲೀಲಾ ಬಗ್ಗೆ ಯೋಚಿಸುತ್ತಿರುತ್ತಾಳೆ. ಲೀಲಾನೇ ಬಂದು ಲಕ್ಷ್ಮೀಗೆ ಸಮಾಧಾನ ಮಾಡುತ್ತಾಳೆ. ಆದರೆ, ಲೀಲಾ ಒಳಗೊಳಗೆ ಎಲ್ಲಾ ನೋವನ್ನೂ ಅನುಭವಿಸುತ್ತಿದ್ದಾಳೆ.

More from Filmibeat

English summary
Hitler Kalyana serial 01st April Episode Written Update. Here Is Details About Leela tries to calms down anthara. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X