Hitler Kalyana: ಪೊಲೀಸರ ಎದುರು ದುರ್ಗಾ ಸತ್ಯ ಬಾಯಿ ಬಿಡುತ್ತಾಳಾ..?

By ಪ್ರಿಯಾ ದೊರೆ

ಹಿಟ್ಲರ್‌ ಕಲ್ಯಾಣ ಧಾರಾವಾಹಿಯಲ್ಲಿ ಕಿಶೋರ್‌ಗೆ ಎಜೆ ಮೇಲೆ ಚಿಕ್ಕ ವಯಸ್ಸಿನಿಂದಲೂ ಕೋಪವಿದೆ. ಯಾವ ಕಾರಣಕ್ಕೆ ಅವನು ದ್ವೇಷ ಸಾಧಿಸುತ್ತಿದ್ದಾನೆ ಎಂಬುದು ಗೊತ್ತಿಲ್ಲ.

ಎಜೆ ಸ್ಥಾನವನ್ನು ತಾನು ಪಡೆಯಬೇಕು. ಇಡೀ ಆಸ್ತಿಗೆ ತಾನೇ ರಾಜನಾಗಬೇಕು ಎಂಬ ಆಸೆಯನ್ನು ಕಿಶೋರ್ ಇಟ್ಟುಕೊಂಡಿದ್ದಾನೆ. ಇದಕ್ಕಾಗಿ ಅವನು ಪ್ರಾರ್ಥನಾಳನ್ನು ಮುಂದಿಟ್ಟುಕೊಂಡು ಎಜೆಯನ್ನು ವಶ ಮಾಡಿಕೊಳ್ಳಲು ಮುಂದಾಗಿದ್ದಾನೆ.

Hitler Kalyana serial 02nd December episode written update

ಮನೆಯವರನ್ನು ದೂರಿದ ಪೊಲೀಸ್

ಸ್ವಂತ ಹೆಂಡತಿ ಎಂಬುದನ್ನೂ ಲೆಕ್ಕಿಸದೇ ದುರ್ಗಾಳನ್ನು ಕಿಶೋರ್‌ ಕಿಡ್ನ್ಯಾಪ್‌ ಮಾಡಿಸಿದ್ದ. ದುರ್ಗಾಳಿಗೆ ಮೊದಲೇ ಪ್ರಾರ್ಥನಾ ಬಗ್ಗೆ ತಿಳಿದಿತ್ತು. ಆದರೆ, ತನ್ನ ಪತಿ ಕಿಶೋರ್‌, ಏಜೆ ಮೇಲೆ ದ್ವೇಷ ಇಟ್ಟುಕೊಂಡಿದ್ದಾರೆ. ಅವರಿಂದಲೇ ಈ ಮನೆಗೆ ಕೆಟ್ಟದಾಗುತ್ತಿದೆ ಎಂಬುದನ್ನು ತಿಳಿದು ಶಾಕ್‌ ಆಗಿದ್ದಾಳೆ. ಇದರಿಂದ ದುರ್ಗಾ ಮನೆಗೆ ಬಂದಾಗಿನಿಂದಲೂ ಯಾರ ಜೊತೆಗೂ ಮಾತನಾಡುತ್ತಲಿಲ್ಲ. ಇದೀಗ ಇದ್ದಕ್ಕಿದ್ದ ಹಾಗೆಯೇ ಮನೆಗೆ ಪೊಲೀಸ್‌ ಕಮೀಷನರ್‌ ಬಂದಿದ್ದಾರೆ. ದುರ್ಗಾ ಕಿಡ್ನ್ಯಾಪ್‌ ವಿಚಾರದಲ್ಲಿ ಸಸ್ಪೆಕ್ಟ್‌ ನಿಮ್ಮ ಮನೆಯವರೇ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಮನೆಯವರು ಶಾಕ್‌ ಆಗಿದ್ದಾರೆ.

ಬೇಕಂತಲೇ ನಾಟಕ ಮಾಡಿದ ಲೀಲಾ

ದುರ್ಗಾಳನ್ನು ಲೀಲಾ ಎಷ್ಟು ಮಾತನಾಡಿಸಲು ಯತ್ನಿಸಿದರೂ ಬಾಯಿ ಬಿಡುತ್ತಿಲ್ಲ. ದುರ್ಗಾಳ ಮೌನ ಮನೆಯವರೆಲ್ಲರನ್ನೂ ಕಾಡುವಂತೆ ಮಾಡಿದೆ. ಯಾರು ಕಿಡ್ನ್ಯಾಪ್‌ ಮಾಡಿದರು. ಅದರ ಹಿಂದಿನ ಕಾರಣವೇನು ಎಂದು ತಿಳಿದುಕೊಳ್ಳಲು ಎಲ್ಲರೂ ದುರ್ಗಾಳನ್ನು ಮಾತನಾಡಿಸಲು ಯತ್ನಿಸುತ್ತಿದ್ದಾರೆ. ಆದರೆ, ಲೀಲಾಳಿಗೆ ಈ ಕಿಡ್ನ್ಯಾಪ್‌ ಮಾಡಿರುವುದು ಅಂತರಾಳೇ ಎಂಬ ಸತ್ಯ ಗೊತ್ತಾಗಿದೆ. ಆದರೆ, ಈ ಸತ್ಯವನ್ನು ಎಲ್ಲರ ಮುಂದೆ ಹೇಳಲು ಸಾಧ್ಯವಾಗುತ್ತಿಲ್ಲ. ಅದೇ ದುರ್ಗಾಳೇ ಬಾಯಿ ಬಿಟ್ಟು ಈ ಸತ್ಯವನ್ನು ಹೇಳಿದರೆ, ಅಂತರಾಳ ಆಟ ಇಲ್ಲಿಗೆ ಮುಗಿಸಬಹುದು ಎಂಬುದು ಲೀಲಾ ಪ್ಲಾನ್.‌ ಹಾಗಾಗಿ ಲೀಲಾ ನಾಟಕವೊಂದನ್ನು ಮಾಡಿದ್ದಾಳೆ.

Hitler Kalyana serial 02nd December episode written update

ಜೈಲಿಗೆ ಹೋಗಲು ಸಿದ್ಧಳಾದ ಲೀಲಾ

ಪೊಲೀಸ್‌ ಕಮೀಷನರ್‌ಗೆ ಕರೆ ಮಾಡಿ ಮನೆಗೆ ಬಂದು ದುರ್ಗಾ ಕಿಡ್ನ್ಯಾಪ್‌ ವಿಚಾರದಲ್ಲಿ ಲೀಲಾನೇ ಸಸ್ಪೆಕ್ಟ್‌ ಎಂದು ನಾಟಕ ಮಾಡಬೇಕು, ಆಗ ದುರ್ಗಾ ಸತ್ಯ ಹೇಳಲು ಬಾಯಿ ಬಿಡಲಿ ಎಂದು ಪ್ಲಾನ್‌ ಮಾಡಿರುತ್ತಾಳೆ. ಅದೇ ರೀತಿಯಲ್ಲೇ ಪೊಲೀಸ್‌ ಕೂಡ ಮನೆಗೆ ಬಂದು ಲೀಲಾಳನ್ನು ಅರೆಸ್ಟ್‌ ಮಾಡಬೇಕು. ವಿಚಾರಣೆ ನಡೆಸಿ, ಸತ್ಯವನ್ನು ಬಾಯಿ ಬಿಡಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಕೂಡಲೇ ಮನೆಯವರಿಗೆಲ್ಲಾ ಶಾಕ್‌ ಆಗುತ್ತದೆ. ಲೀಲಾ ಅಂತಹ ಹುಡುಗಿ ಅಲ್ಲವೇ ಅಲ್ಲ, ಅವಳು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾಳೆ. ಅಂತಹವಳ ಮೇಲೆ ಇಂತಹ ಆರೋಪಗಳನ್ನು ಮಾಡಬೇಡಿ ಎಂದು ಕೇಳಿಕೊಳ್ಳುತ್ತಾರೆ. ಅಜ್ಜಿಗಂತೂ ಲೀಲಾ ಮೇಲೆ ಪೊಲೀಸರು ಆರೋಪಿಸಿದ್ದು, ಬಹಳ ನೋವುಂಟು ಮಾಡುತ್ತದೆ. ಅಂತರಾ ಮತ್ತು ಕಿಶೋರ್‌ಗೆ ಮನದಲ್ಲೇ ಖುಷಿಯಾಗುತ್ತಿರುತ್ತದೆ. ಆದರೆ, ಇದೆಲ್ಲವೂ ನಾಟಕ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ.

ಲೀಲಾಳಿಗಾಗಿ ಸತ್ಯ ಹೇಳುತ್ತಾಳಾ ದುರ್ಗಾ..?

ಲೀಲಾ ಕೂಡ ಜೈಲಿಗೆ ಹೋಗಲು ಸಿದ್ಧವಾಗಿರುತ್ತಾಳೆ. ನನಗೆ ಬೇಡಿ ಹಾಕಿ ಎಂದು ಕೈ ಮುಂದೆ ಕೊಡುತ್ತಾಳೆ. ಆದರೆ, ದುರ್ಗಾಳಿಗೆ ಆತಂಕವಾಗುತ್ತದೆ. ಲೀಲಾ ಅಂತ ಅತ್ತೆಯ ಮೇಲೆ ಸುಳ್ಳು ಆರೋಪ ಕೇಳಿ ಬಂದಿರುವುದು ಇಷ್ಟವಾಗುವುದಿಲ್ಲ. ಆಗ ದುರ್ಗಾ ಎದ್ದು ನಿಂತು ತನ್ನ ಕಿಡ್ನ್ಯಾಪ್‌ಗೆ ಲೀಲಾ ಕಾರಣ ಅಲ್ಲ ಎಂದು ಹೇಳುತ್ತಾಳೆ. ಪೊಲೀಸರು ಬೇರೆ ಯಾರು ಕಾರಣ. ನಿಮ್ಮನ್ನು ಕಿಡ್ನ್ಯಾಪ್‌ ಮಾಡಿಸಿದ್ದು ಯಾರು ಎಂದು ಕೇಳಿದಾಗ ದುರ್ಗಾ, ಕಿಶೋರ್‌ ಬೆದರಿಕೆಯಿಂದ ಏನೂ ಮಾತನಾಡುವುದಿಲ್ಲ. ರೂಮಿಗೆ ಓಡಿ ಹೋಗುತ್ತಾಳೆ.

More from Filmibeat

English summary
Hitler Kalyana serial kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X