Hitler Kalyana: ಅಜ್ಜಿ ನಂತರ ಲೀಲಾಗೆ ಅಧಿಕಾರ ಹಸ್ತಾಂತರ: ಸೊಸೆಯಂದಿರಲ್ಲಿ ಹೆಚ್ಚಿದ ಹೊಟ್ಟೆ ಉರಿ

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ಈಗ ಎಜೆಯನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಹಾಗಾಗಿ ಎಜೆಗೆ ಇಷ್ಟವಾಗುವಂತೆ ನಡೆದುಕೊಳ್ಳುತ್ತಾಳೆ.

ತಾನೇ ಅಡುಗೆ ಮಾಡಿ ಬಡಿಸುತ್ತಾಳೆ. ಕಾಫಿ ಮಾಡುವುದು, ಎಜೆ ಬಟ್ಟೆಯನ್ನು ರೆಡಿ ಮಾಡುವುದು ಎಲ್ಲವನ್ನೂ ಮಾಡುತ್ತಾಳೆ. ಲೀಲಾಗೆ ಅಜ್ಜಿಯ ಸಪೋರ್ಟ್ ಕೂಡ ಇರುವುದರಿಂದ ಎಜೆ ಏನನ್ನೂ ಹೇಳುತ್ತಿಲ್ಲ.

ರಾತ್ರಿ ವೇಳೆ ಮಲಗುವಾಗ ಸುಮ್ಮನೆ ರೊಮ್ಯಾಂಟಿಕ್ ಹಾಡುಗಳನ್ನು ಹಾಡಿ ಎಜೆಯನ್ನು ಡಿಸ್ಟರ್ಬ್ ಮಾಡುತ್ತಾಳೆ. ಗುಡ್ ನೈಟ್ ಹೇಳಿ ಎಂದು ಪೀಡಿಸುತ್ತಾಳೆ. ಎಜೆಗೆ ದಾರಿ ಇಲ್ಲದೇ, ಲೀಲಾ ಅವತಾರವನ್ನು ನೋಡಿಕೊಂಡು ಸುಮ್ಮನಿದ್ದಾನೆ.

ಕನಸಿನಲ್ಲಿ ಕನವರಿಸಿದ ಲೀಲಾ

ಕನಸಿನಲ್ಲಿ ಕನವರಿಸಿದ ಲೀಲಾ

ಲೀಲಾ ರಾತ್ರಿ ಮಲಗಿದಾಗ ನಾನೇನು ತಪ್ಪು ಮಾಡಿಲ್ಲ ಎಜೆ. ಇದ್ಯಾವುದೂ ನನ್ನಿಂದ ಆಗಿದ್ದಲ್ಲ. ನೀವು ಅಪಾರ್ಥ ಮಾಡಿಕೊಂಡಿದ್ದೀರಾ. ನನ್ನನ್ನು ಕ್ಷಮಿಸಿ ಎಜೆ ಎಂದು ಕನವರಿಸುತ್ತಿರುತ್ತಾಳೆ. ಇದನ್ನು ಕೇಳಿಸಿಕೊಂಡ ಎಜೆ ಮೊದಲು ಲೀಲಾ ನಾಟಕ ಮಾಡುತ್ತಿದ್ದಾಳೆ ಎಂದು ತಿಳಿದುಕೊಳ್ಳುತ್ತಾನೆ. ಸತ್ಯ ಎಂದು ತಿಳಿದ ಮೇಲೆ ಲೀಲಾ ಬಗ್ಗೆ ಯೋಚಿಸಲು ಶುರು ಮಾಡುತ್ತಾನೆ. ಲೀಲಾ ಏನು ತಪ್ಪು ಮಾಡಿಲ್ವಾ.? ನಾನೇ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೀನಾ ಎಂದು ಯೋಚಿಸಲು ಶುರು ಮಾಡುತ್ತಾನೆ. ಲೀಲಾ ಮಾಡದಿದ್ದರೆ ಆ ತಪ್ಪುಗಳನ್ನು ಯಾರು ಮಾಡಿರಬಹುದು ಎಂದು ಎಷ್ಟು ಯೋಚಿಸಿದರೂ ಗೊತ್ತಾಗುವುದಿಲ್ಲ.

ಸೊಸೆಗಾಗಿ ಒಡೆತನ ಹಸ್ತಾಂತರ

ಸೊಸೆಗಾಗಿ ಒಡೆತನ ಹಸ್ತಾಂತರ

ಇನ್ನು ಅಜ್ಜಿಗೆ ಲೀಲಾ ಬಗ್ಗೆ ಯೋಚನೆ ಶುರುವಾಗುತ್ತೆ. ದುರ್ಗಾ, ಲಕ್ಷ್ಮಿ ಹಾಗೂ ಸರಸ್ವತಿ ಸದಾ ಲೀಲಾ ಮೇಲೆ ಜಿದ್ದು ಸಾಧಿಸುತ್ತಿರುತ್ತಾರೆ. ಆದರೆ, ಅಜ್ಜಿ ಇರುವ ಕಾರಣ ಲೀಲಾಗೆ ಹೆಚ್ಚು ತೊಂದರೆ ಆಗುತ್ತಿಲ್ಲ. ತಾನು ಸತ್ತರೆ ಲೀಲಾ ಕಥೆ ಏನು ಎಂದು ಭಯವಾಗುತ್ತೆ. ಅದಕ್ಕಾಗಿ ಅಜ್ಜಿ ಒಂದು ಧೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ. ಅದಕ್ಕಾಗಿ ಲಾಯರ್ ಅನ್ನು ಕರೆಸುತ್ತಾಳೆ. ತನ್ನ ನಂತರ ಅಧಿಕಾರವೆಲ್ಲವೂ ತನ್ನ ಸೊಸೆ ಲೀಲಾಗೆ ಹೋಗಬೇಕು ಎಂದು ವಿಲ್ ಮಾಡಿಸುತ್ತಾಳೆ.

ಲೀಲಾಳನ್ನು ನೋಡಿದ ಎಜೆ

ಲೀಲಾಳನ್ನು ನೋಡಿದ ಎಜೆ

ಇತ್ತ ಲೀಲಾ ಒಬ್ಬಳೇ ಬಾಲ್ಕನಿಯಲ್ಲಿ ನಿಂತು ಅಳುತ್ತಿರುತ್ತಾಳೆ. ಆದರೆ ಲೀಲಾ ಯಾಕೆ ನೊಂದುಕೊಂಡಿದ್ದಾಳೆ ಎಂಬುದು ತಿಳಿಯುವುದಿಲ್ಲ. ಹೀಗೆ ಲೀಲಾ ಅಳುವುದನ್ನು ಎಜೆ ನೋಡುತ್ತಾನೆ. ಸದಾ ಎಲ್ಲರ ಬಳಿಯೂ ತಮಾಷೆ ಮಾಡಿಕೊಂಡು ಲೀಲಾ ಇರುತ್ತಾರೆ. ಆದರೆ ಈಗ ಬಾಲ್ಕನಿಯಲ್ಲಿ ಲೀಲಾ ಯಾಕೆ ಒಬ್ಬಳೆ ಅಳುತ್ತಾ ನಿಂತಿದ್ದಾಳೆ. ಲೀಲಾ ಅಳುವಂತಹದ್ದು ಈಗ ಏನಾಯ್ತು ಎಂದು ಎಜೆ ಯೋಚಿಸುತ್ತಾನೆ.

ಅಮ್ಮನ ನಿರ್ಧಾರಕ್ಕೆ ಮರು ಮಾತಾಡದ ಎಜೆ

ಅಮ್ಮನ ನಿರ್ಧಾರಕ್ಕೆ ಮರು ಮಾತಾಡದ ಎಜೆ

ಬಝರ್ ಮಾಡುವ ಅಜ್ಜಿ ಎಲ್ಲರನ್ನೂ ಕರೆಯುತ್ತಾಳೆ. ಆದರೆ ಎಲ್ಲರೂ ಎಜೆ ಬಝರ್ ಒತ್ತಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ, ಅಜ್ಜಿ ಎಲ್ಲರನ್ನೂ ಕರೆದು ಮುಖ್ಯವಾದ ನಿರ್ಧಾರವನ್ನು ತಿಳಿಸಬೇಕಿತ್ತು ಎಂದು ಹೇಳುತ್ತಾಳೆ. ತನ್ನ ನಂತರ ಈ ಮನೆಯಲ್ಲಿ ಲೀಲಾಗೆ ಎಲ್ಲಾ ಅಧಿಕಾರ ಇರುತ್ತದೆ. ಲೀಲಾ ಒಪ್ಪಿಗೆ ಇಲ್ಲದೇ ಏನೂ ಮಾಡುವಂತಿಲ್ಲ ಎಂದು ಅಜ್ಜಿ ಹೇಳುತ್ತಾಳೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗುತ್ತಾರೆ. ಸೊಸೆಯಂದಿರಂತೂ ಎಲ್ಲಾ ಅಧಿಕಾರ ಲೀಲಾಳಿಗೆ ಹೋಯ್ತಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ. ವಿಶ್ವರೂಪ್ ಮಾತ್ರ ಖುಷಿ ಪಡುತ್ತಾನೆ. ಇನ್ನು ಎಜೆ ಅಮ್ಮನ ಈ ನಿರ್ಧಾರಕ್ಕೆ ಒಂದೂ ಮಾತನಾಡುವುದಿಲ್ಲ. ಎಜೆ ಮಾತನಾಡದ್ದನ್ನು ನೋಡಿದ ವಿಶ್ವರೂಪ್ ಗೊಂದಲಕ್ಕೊಳಗಾಗುತ್ತಾನೆ.

More from Filmibeat

English summary
Hitler Kalyana serial 02nd February Episode Written Update.Ajji transfers her rights to leela. Daughter in laws are worried for loosing rights.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X