Hitler kalyana: ಲೀಲಾಳಿಗೆ ಹುಡುಗನನ್ನು ಹುಡುಕುತ್ತಿರುವ ಅಂತರಾ

By Priya Dore

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾ ಲೀಲಾಳಿಗೆ ಮದುವೆ ಮಾಡಲು ಮುಂದಾಗಿದ್ದಾಳೆ. ಈ ವಿಚಾರವಾಗಿ ಮಾತನಾಡಲು ಅಂತರಾ, ಕೌಸಲ್ಯಗೆ ಫೋನ್ ಮಾಡುತ್ತಾಳೆ. ಕೌಸಲ್ಯ, ಅಂತರಾ ತನಗೆ ಫೋನ್ ಮಾಡಿದ್ದಕ್ಕೆ ಫುಲ್ ಖುಷಿ ಪಟ್ಟಿದ್ದಾಳೆ. ಲೀಲಾ ವಿಚಾರವನ್ನು ಎಲ್ಲಾ ಹೇಳಬೇಕು ಎಂದು ಹೇಳುತ್ತಾಳೆ. ಎಜೆ ಮತ್ತು ಲೀಲಾ ಮದುವೆಯಾಗಿದ್ದಾರೆ ಎನ್ನುತ್ತಾಳೆ. ಆದರೆ ಕೌಸಲ್ಯ ಮಾತುಗಳನ್ನು ಅಂತರಾ ಕೇಳಿಸಿಕೊಳ್ಳುವುದಿಲ್ಲ.

ಬೇಕಂತಲೇ ವಿಶ್ವರೂಪ್ ಅಂತರಾಳನ್ನು ಮಾತನಾಡಿಸುತ್ತಾನೆ. ಹೀಗಾಗಿ ಅಂತರಾ ಕೌಸಲ್ಯ ಹೇಳಿದ್ದನ್ನು ಕೇಳಿಸಿಕೊಳ್ಳದೇ ನಿಮ್ಮ ಮಗಳಿಗೆ ಒಳ್ಳೆಯದಾಗುತ್ತದೆ. ಅದೇನೇ ಆಗಲಿ ಲೀಲಾಗೆ ಇನ್ನೊಂದು ಮದುವೆಯನ್ನು ಮಾಡಿಸಲೇಬೇಕು. ಈ ಮೂಲಕವಾದರೂ ಅವಳನ್ನು ಎಜೆ ಮನೆಯಿಂದ ಹೊರಗೆ ಕಳಿಸಬೇಕು ಎಂದು ದುರ್ಗಾ ಮತ್ತು ಸರಸ್ವತಿ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಅಂತರಾಳ ಕಿವಿಯನ್ನೂ ಊದಿದ್ದಾರೆ.

Hitler kalyana serial 02nd June Episode Written Update

ಲೀಲಾಗೆ ಇನ್ನೊಂದು ಮದುವೆ ಮಾಡಿದರೆ, ಈ ಮನೆಯಿಂದ ಹೊರಗೆ ಹೋಗಿ ಅವಳ ಬದುಕನ್ನೂ ಕಟ್ಟಿಕೊಳ್ಳುತ್ತಾಳೆ. ಆದರೆ ಈ ಮನೆಯಲ್ಲೇ ಇದ್ದರೆ, ಲೀಲಾ ಭವಿಷ್ಯ ಹಾಳಾಗುತ್ತದೆ. ನಾವೆಲ್ಲಾ ಮಾಡಿದ ಪ್ರಯತ್ನ ವಿಫಲವಾಗಿದೆ. ನೀವಾದರೂ ಲೀಲಾಳಿಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿ ಎಂದು ಹೇಳುತ್ತಾರೆ. ಅಂತರಾಗೆ ದುರ್ಗಾ ಮತ್ತು ಸರಸ್ವತಿ ಹೇಳಿದ ಮಾತುಗಳು ಸರಿ ಎನಿಸಿದೆ.

ಲೀಲಾಗೆ ಮತ್ತೊಂದು ಮದುವೆ?

ಅಂತರಾ ಈಗ ಲೀಲಾಳ ಬಳಿ ಮಾತು ತೆಗೆದುಕೊಂಡಿದ್ದಾಳೆ. ನಾನು ನಿನ್ನ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೆ ಪ್ರಶ್ನೆ ಮಾಡಬಾರದು ಎಂದು ಹೇಳಿ, ಈಗ ಲೀಲಾಳಿಗೆ ಮದುವೆ ಮಾಡಿಸಲು ಹುಡುಗನನ್ನು ಹುಡುಕುತ್ತಿದ್ದಾಳೆ. ಇದರಿಂದ ಲೀಲಾಳಿಗೆ ಈಗ ಸಂಕಷ್ಟ ಎದುರಾಗಿದೆ. ತಾನು ಎಜೆ ಹೆಂಡತಿ ಎಂಬ ಸತ್ಯವನ್ನೂ ಹೇಳಲಾಗದೇ, ಮದುವೆ ಬೇಡ ಎನ್ನಲು ಸಾಧ್ಯವಾಗುತ್ತಿಲ್ಲ. ಗಂಡ ಇರುವಾಗಲೇ ಮತ್ತೊಂದು ಮದುವೆ ಆಗುವುದು ಹೇಗೆ..? ಇದರ ಬಗ್ಗೆ ಅಂತರಾ ಅಕ್ಕನಿಗೆ ಹೇಗೆ ಅರ್ಥ ಮಾಡಿಸುವುದು ಎಂಬುದೇ ಗೊತ್ತಾಗುತ್ತಿಲ್ಲ. ಅಂತರಾ ಲೀಲಾ ಬದುಕನ್ನು ಹೇಗಾದರೂ ಮಾಡಿ ಸರಿ ಮಾಡಬೇಕು ಎಂದು ಹೀಗೆಲ್ಲಾ ಮಾಡುತ್ತಿದ್ದಾಳೆ.

Hitler kalyana serial 02nd June Episode Written Update

ದುರ್ಗಾ, ಸರಸ್ವತಿಗೆ ಬುದ್ಧಿ ಹೇಳಿದ ಲಕ್ಷ್ಮಿ

ಇತ್ತ ದುರ್ಗಾ ಹಾಗೂ ಸರಸ್ವತಿ, ಲೀಲಾಳಿಗೆ ಮದುವೆ ಮಾಡಿ ಮನೆಯಿಂದ ಕಳಿಸುವಾಗ ಒಂದಷ್ಟು ತಮಗೆ ಬೇಡದ ಸೀರೆಗಳನ್ನು ಆರಿಸಿ ಇಟ್ಟಿರುತ್ತಾರೆ. ಇವನ್ನೆಲ್ಲಾ ಲೀಲಾಳಿಗೆ ಕೊಡಬೇಕು ಎಂದು ಮಾತನಾಡಿಕೊಳ್ಳುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಲಕ್ಷ್ಮೀ ಬರುತ್ತಾಳೆ. ಲಕ್ಷ್ಮೀ, ಸರಸ್ವತಿ ಹಾಗೂ ದುರ್ಗಾ ಇಬ್ಬರಿಗೂ ಬೈಯುತ್ತಾಳೆ. ಮದುವೆಯಾಗಿರುವ ಒಂದು ಹೆಣ್ಣಿಗೆ ಇನ್ನೊಂದು ಮದುವೆ ಮಾಡಿಸಲು ಹೊರಟಿದ್ದೀರಲ್ಲ ನಿಮಗೆ ಏನೂ ಅನಿಸಲ್ವಾ..? ಇದೆಲ್ಲಾ ಸರಿ ಇಲ್ಲ ಎಂದು ಪ್ರಶ್ನೆ ಮಾಡುತ್ತಾಳೆ.

ಲೀಲಾ ಬಳಿ ಏಜೆ ಮಾತು

ದುರ್ಗಾ ಮತ್ತು ಸರಸ್ವತಿ, ಮೊದಲು ಲೀಲಾ ಈ ಮನೆಯಿಂದ ಆಚೆ ಹೋಗಲಿ ಎಂದು ನಾವು ಪ್ಲಾನ್ ಮಾಡುತ್ತಿದ್ದರೆ ನಿನ್ನದೊಂದು ಎಂದು ಬೈಯುತ್ತಾರೆ. ಅಂತರಾ ಅತ್ತೆನೇ ಈಗ ಲೀಲಾಳಿಗೆ ಮದುವೆ ಮಾಡುತ್ತಿದ್ದಾರೆ. ಆದಷ್ಟು ಬೇಗ ಲೀಲಾ ಮನೆಯಿಂದ ಹೋಗಲಿ ಎನ್ನುತ್ತಾರೆ. ಎಜೆ, ಲೀಲಾಳನ್ನು ಕರೆದು ಮಾತನಾಡಿಸಿದ್ದಾನೆ. ಯಾಕೆ ಇತ್ತೀಚೆಗೆ ಬಹಳ ಬೇಸರದಲ್ಲಿರುತ್ತೀಯಾ ಎಂದು ಕೇಳುತ್ತಾನೆ. ನಿನಗೆ ಏನು ಬೇಕು ಕೇಳು. ಈ ಮನೆಗಾಗಿ ಎಷ್ಟೆಲ್ಲಾ ಮಾಡುತ್ತಿದ್ದೀಯಾ. ನೀನು ನಗುನಗುತಾ ಇರಬೇಕು ಎಂದು ಹೇಳುತ್ತಾನೆ.

Hitler kalyana serial 02nd June Episode Written Update

ಲಕ್ಷ್ಮಿಗೆ ಬೇಸರ

ಲೀಲಾ ಸತ್ಯ ಹೇಳಲಾಗದೇ, ಹಾಗೆಲ್ಲಾ ಏನಿಲ್ಲ. ಏನಾದರೂ ಬೇಕಿದ್ದರೆ ಕೇಳುತ್ತೀನಿ ಎಂದು ಹೇಳುತ್ತಾಳೆ. ಇತ್ತ ಒಬ್ಬಳೇ ನಿಂತು ಯೋಚಿಸುತ್ತಿರುವಾಗ ಲಕ್ಷ್ಮೀ ಬರುತ್ತಾಳೆ. ನಿಮಗೇನಾಗಿದೆ. ನೀವು ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾಳೆ. ಆದರೆ ಲೀಲಾ ಏನೂ ಅರ್ಥವಾಗದವಳಂತೆ ನಾಟಕ ಮಾಡುತ್ತಾಳೆ. ಇದರಿಂದ ಲಕ್ಷ್ಮೀಗೆ ಇನ್ನಷ್ಟು ಬೇಸರವಾಗುತ್ತದೆ. ಆದರೆ, ಲೀಲಾ ಕೂಡ ಈ ಸಂದರ್ಭದಲ್ಲಿ ಏನನ್ನೂ ಮಾಡಲಾಗುತ್ತಿಲ್ಲ.

More from Filmibeat

English summary
Hitler kalyana serial 02nd June Episode Written Update. here is details about Anthara is searching boy for leela. Anthara is planning to marry leela with other guy. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X