Hitler Kalyana: ಆಡಿಕೊಂಡ ದುರ್ಗಾಳಿಗೆ ಶಾಕ್ ಆಗುವಂತೆ ಮಾತನಾಡಿದ ಲೀಲಾ

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ಒಬ್ಬಳೇ ಏನೂ ಆಗೇ ಇಲ್ಲ ಎಂಬಂತೆ ನಡೆದುಕೊಂಡಿದ್ದಾಳೆ. ಎಲ್ಲರ ಯೋಗಕ್ಷೇಮವನ್ನು ವಿಚಾರಿಸುತ್ತಾ ತನ್ನ ನೋವನ್ನು ಒಳಗೇ ನುಂಗಿಕೊಳ್ಳುತ್ತಿದ್ದಾಳೆ. ಲೀಲಾ ಅತ್ತೆ ಪರಿಸ್ಥಿತಿ ಹೀಗಾಯ್ತಲ್ಲ ಎಂದು ಲಕ್ಷ್ಮೀ ನೊಂದುಕೊಂಡಿದ್ದಾಳೆ. ಊಟ ತಿಂಡಿ ಮಾಡದೇ ಹಾಗೆ ಉಳಿದಿದ್ದಾಳೆ. ಮೌನವಾಗಿರುವ ಲಕ್ಷ್ಮೀ ಅನ್ನು ಸಮಾಧಾನ ಮಾಡಲು ಲೀಲಾ ಬಂದಿದ್ದಾಳೆ.

ಮಗುವಿನಂತೆ ಲಕ್ಷ್ಮೀಗೆ ಬುದ್ಧಿ ಹೇಳಿದ ಲೀಲಾ ಗದರಿಸಿ ಜ್ಯೂಸ್ ಅನ್ನು ಕುಡಿಸಿದ್ದಾಳೆ. ಲೀಲಾ ಮಾತುಗಳಿಗೆ ಸೋತ ಲಕ್ಷ್ಮೀ ಉಪವಾಸವನ್ನು ಮುರಿದಿದ್ದಾಳೆ. ಇತ್ತ ದುರ್ಗಾ ಅಂತರಾಳನ್ನು ತನ್ನತ್ತ ಸೆಳೆದುಕೊಳ್ಳಲು ಯತ್ನಿಸಿದ್ದಾಳೆ. ಹೀಗಾಗಿ ದುರ್ಗಾ ಮಾತ್ರೆಯನ್ನು ತೆಗೆದುಕೊಂಡು ಬಂದಿದ್ದಾಳೆ. ಅಂತರಾ ಅತ್ತೆ ಎಂದು ಮಾತನಾಡಿಸಿದ್ದಕ್ಕೆ ಪ್ರಾರ್ಥನಾಳಿಗೆ ಕೋಪ ಬಂದಿದೆ. ದುರ್ಗಾ ಮೇಲೆ ಕೂಗಾಡಿದ್ದಾಳೆ. ತಕ್ಷಣವೇ ಬಂದ ಎಜೆ ಕೂಡ ಅಂತರಾಳನ್ನು ಸಮಾಧಾನ ಮಾಡಲು ಮುಂದಾಗಿದ್ದಾನೆ. ಆದರೆ, ಅಂತರಾ ಇಬ್ಬರ ಮೇಲೂ ಕೂಗಾಡಿದ್ದಾಳೆ. ಲೀಲಾ ಬಂದು ಸಮಾಧಾನ ಮಾಡಿದ್ದಾಳೆ.

Hitler Kalyana serial 03rd April Episode Written Update

ಅಂತರಾ ನೀವೊಬ್ಬರು ಬಿಟ್ಟು ಎಲ್ಲರೂ ಹೋಗಿ. ಯಾರೂ ನನಗೆ ಮುಖ ತೋರಿಸಬೇಡಿ ಎಂದು ಪ್ರಾರ್ಥನಾ ಹೇಳುತ್ತಾಳೆ. ಈ ಮಾತನ್ನು ಕೇಳಿ ದುರ್ಗಾಳಿಗೆ ಕೋಪ ಬರುತ್ತದೆ. ಲೀಲಾ ಒಂದೇ ದಿನಕ್ಕೆ ಅಂತರಾ ಅತ್ತೆಯನ್ನು ಹತ್ತಿರ ಮಾಡಿಕೊಂಡಿದ್ದಾಳೆ ಎಂದು ಮನದಲ್ಲೇ ಲೆಕ್ಕಾಚಾರ ಹಾಕುತ್ತಾಳೆ. ಇನ್ನು ಪ್ರಾರ್ಥನಾ ತನ್ನ ಸ್ನೇಹಿತೆ ರೂಪಾಳನ್ನು ಕರೆಸುವಂತೆ ಕೇಳುತ್ತಾಳೆ. ಲೀಲಾ, ಪ್ರಾರ್ಥನಾಳಿಗೆ ಸಮಾಧಾನ ಮಾಡಿ, ಮಾತ್ರೆ ಕೊಟ್ಟು ರೂಪಾ ಅವರನ್ನು ಕರೆಸುವುದಾಗಿ ಭರವಸೆ ನೀಡುತ್ತಾಳೆ.

ಇನ್ನು ರೇವತಿ ತನ್ನ ತಂದೆ-ತಾಯಿ ಮನೆಗೆ ಹೋಗಲು ಹೇಳುತ್ತಾಳೆ. ಆದರೆ, ರಾಮಚಂದ್ರ ಹಾಗೂ ಕೌಸಲ್ಯ ಇಬ್ಬರೂ ಕೂಡ ಇಲ್ಲ ಮಗಳು ಈ ಪರಿಸ್ಥಿತಿಯಲ್ಲಿ ಇರುವಾಗ ನಾವು ಹೇಗೆ ನೆಮ್ಮದಿಯಾಗಿ ಮನೆಗೆ ಹೋಗಲು ಸಾಧ್ಯ ಎನ್ನುತ್ತಾರೆ. ಇದೇ ವೇಳೆಗೆ ಬರುವ ಅಜ್ಜಿ, ನನ್ನನ್ನು ಕ್ಷಮಿಸಿ. ಹೀಗೆಲ್ಲಾ ಆಗುತ್ತೆ ಎಂದು ಊಹೆಯೂ ಮಾಡಿರಲಿಲ್ಲ. ನನ್ನ ಉಸಿರು ಇರುವವರೆಗೂ ಲೀಲಾ ಜೊತೆಗೆ ನಾನು ಇರುತ್ತೇನೆ. ಅವಳ ಜೀವನಕ್ಕೆ ಏನಾದರೂ ವ್ಯವಸ್ಥೆಯನ್ನು ಮಾಡೇ ಮಾಡುತ್ತೇನೆ ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿ ಲೀಲಾ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

Hitler Kalyana serial 03rd April Episode Written Update

ಇನ್ನು ಲೀಲಾ ಮತ್ತೆ ಮಲಗಲು ಸೋಫಾ ಬಳಿ ಬರುತ್ತಾಳೆ. ದುರ್ಗಾ ಬಂದು ಲೀಲಾಳನ್ನು ಆಡಿಕೊಳ್ಳುತ್ತಾಳೆ. ಮೆರೆಯೋ ಕಾಲ ಹೋಯ್ತು. ಇನ್ನೇನಿದ್ದರೂ ಮತ್ತೆ ಬೀದಿಗೆ ಬೀಳೋದೇ ಬಾಕಿ. ಈಗ ರೂಮಿನಿಂದ ಆಚೆ ಬಂದಿದ್ದೀಯಾ. ಮುಂದೆ, ಮನೆಯಿಂದ ಹೊರಗೆ ಬಳಿಕ ಬೀದಿಗೆ ಬೀಳೋದು ಗ್ಯಾರೆಂಟಿ. ಹೇಗಿದೆ ನನ್ನ ಪ್ಲಾನ್. ನಿನ್ನ ಆಟವೆಲ್ಲಾ ಮುಗಿಯಿತು ಎಂದು ಆಡಿಕೊಳ್ಳುತ್ತಾಳೆ.

ದುರ್ಗಾ ಎದುರಿಗೆ ಲೀಲಾ ಯಾವುದೇ ದುಃಖವನ್ನೂ ಹೇಳಿಕೊಳ್ಳದೇ, ನೀವು ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದೀರಾ. ಅಂತರಾ ಅಕ್ಕನನ್ನು ಕರೆದುಕೊಂಡು ಬಂದಿದ್ದಕ್ಕೆ ಥ್ಯಾಂಕ್ಸ್. ಎಜೆ- ಅಂತರಾ ಅಕ್ಕನನ್ನು ನೋಡಿದಾಗಿನಿಂದ ಖುಷಿಯಾಗಿದ್ದಾರೆ. ನನಗೆ ಇದಕ್ಕಿಂತ ಬೇರೇನು ಬೇಕು ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿ ದುರ್ಗಾ ಬೇಸರ ಮಾಡಿಕೊಂಡು ಹೋಗುತ್ತಾಳೆ.

Hitler Kalyana serial 03rd April Episode Written Update

ಇನ್ನು ಲೀಲಾ ತನ್ನ ನೋವನ್ನೆಲ್ಲಾ ಮನದಲ್ಲೇ ನುಂಗಿಕೊಳ್ಳುತ್ತಿರುತ್ತಾಳೆ. ಎಜೆ ಇನ್ಯಾವತ್ತೂ ತನ್ನ ಪಾಲಿಗೆ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಒಳಗೊಳಗೆ ನೋವು ಅನುಭವಿಸುತ್ತಿರುತ್ತಾಳೆ. ಆದರೆ ಇದನ್ನು ಯಾರ ಬಳಿಯೂ ಹೇಳುವುದಿಲ್ಲ. ಇನ್ನು ಎಜೆ, ರೂಪಾ ಅವರನ್ನು ಕರೆಸಿ, ಪ್ರಾರ್ಥನಾ ನನ್ನ ಹೆಂಡತಿ ಅಂತರಾ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ರೂಪಾಳಿಗೆ ಶಾಕ್ ಆಗುತ್ತದೆ.

More from Filmibeat

English summary
Hitler Kalyana serial 03rd April Episode Written Update. Here Is Detials About Anthara trusts leela. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X