Hitler kalyana: ಜಸ್ಟ್ ಮಿಸ್ ಆದ ಅಂತರಾ : ದುರ್ಗಾ ಬಗ್ಗೆ ಎಜೆ ಮಾತನಾಡಿದ್ದೇನು..?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಜೆಯನ್ನು ಹೊರತುಪಡಿಸಿ ಮನೆಯವರಿಗೆಲ್ಲರಿಗೂ ಅಂತರಾ ನಿಜವಾದವಳಲ್ಲ ಎಂಬ ಅನುಮಾನ ಮೂಡಿದೆ. ಲೀಲಾ ಕೂಡ ಇದೇ ಸಮಯಕ್ಕಾಗಿ ಎದುರು ನೋಡುತ್ತಿದ್ದಳು. ಈಗ ಲೀಲಾಳಿಗೆ ಮನೆಯವರ ಸಹಾಯವೂ ಸಿಕ್ಕಂತಾಗಿದೆ. ಹಾಗಾಗಿ ಅಂತರಾ ಬಣ್ಣ ಬಯಲು ಮಾಡಲು ಮುಂದಾಗಿದ್ದಾಳೆ.

ಅಂತರಾಳನ್ನು ನಕಲಿ ಎಂದು ಸಾಬೀತು ಪಡಿಸುವ ಸಲುವಾಗಿ ಫಿಂಗರ್ ಪ್ರಿಂಟ್ ಮೂಲಕ ಆಧಾರ್ ಕಾರ್ಡ್‌ನಲ್ಲಿ ಯಾವ ಹೆಸರು ಇದೆ ಎಂದು ತಿಳಿಯಲು ಯೋಚಿಸಿದ್ದಾಳೆ. ಹೀಗಾಗಿ ಅಂತರಾ, ಅಜ್ಜಿ, ರೂಪ, ಲಕ್ಷ್ಮೀ ಹಾಗೂ ವಿಶ್ವರೂಪ್ ಸೇರಿಕೊಂಡು ಒಂದು ದೊಡ್ಡ ಪ್ಲಾನ್ ಮಾಡಿದ್ದಾರೆ.

Hitler kalyana serial 03rd November episode written update

ವಿಶ್ವರೂಪ್ ಮತ್ತು ರೂಪ ಆಫೀಸರ್ ವೇಶದಲ್ಲಿ ಬಂದು ಎಲ್ಲರ ಆಧಾರ್ ಕಾರ್ಡ್ ಅನ್ನು ಫಿಂಗರ್ ಪ್ರಿಂಟ್ ಮೂಲಕ ಚೆಕ್ ಮಾಡಲು ಪ್ಲಾನ್ ಹಾಕಿಕೊಂಡಿದ್ದಾರೆ. ಅದರಂತೆಯೇ ವಿಶ್ವರೂಪ್ ಹಾಗೂ ರೂಪ ಬಂದಿದ್ದಾರೆ.

ಅಂತರಾಳನ್ನು ಹಿಡಿಯಲು ಲೀಲಾ ಪ್ಲಾನ್

ಇತ್ತ ಎಜೆ ಮನೆಗೆ ಪೊಲೀಸ್ ಕಮೀಷನರ್ ಅನ್ನು ಕರೆಸಿದ್ದು, ಈಗ ಇವರಿಬ್ಬರೂ ಗೊಂದಲಕ್ಕೆ ಸಿಲುಕಿದ್ದಾರೆ. ಆದರೂ ಗಾಬರಿಯಾಗದೇ ಮನೆಯಲ್ಲಿ ಎಲ್ಲರ ಫಿಂಗರ್ ಪ್ರಿಂಟ್ ಅನ್ನು ಚೆಕ್ ಮಾಡಿದ್ದಾರೆ. ಇನ್ನು ಅಂತರಾ ಒಬ್ಬಳೇ ಬಾಕಿ ಇರುವುದು.

ದುರ್ಗಾಳಿಗಾಗಿ ಎಜೆ ಹುಡುಕಾಟ ಶುರು

ದುರ್ಗಾ ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ. ಕೆಲಸದ ಮೇಲೆ ಹೊರಗಡೆ ಹೊರಟ ದುರ್ಗಾ ಇನ್ನೂ ಮನೆಗೆ ಬಂದಿಲ್ಲ. ಯಾರ ಫೋನ್ ಕಾಲ್‌ಗೂ ರೆಸ್ಪಾನ್ಸ್ ಮಾಡುತ್ತಿಲ್ಲ. ಎಜೆಯ ಜೊತೆಗೂ ಸಂಪರ್ಕಕ್ಕೆ ಬರದ ದುರ್ಗಾ ಬಗ್ಗೆ ಈಗ ಎಲ್ಲರಿಗೂ ಯೋಚನೆಯಾಗಿದೆ. ಎಜೆ ದುರ್ಗಾಳಿಗೆ ಏನಾಗಿದೆ. ಅವಳು ಎಲ್ಲಿದ್ದಾಳೆ. ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿದ್ದಾಳಾ? ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಎಜೆ ಮುಂದಾಗಿದ್ದಾನೆ. ಹೀಗಾಗಿ ಪೊಲೀಸ್ ಕಮೀಷನರ್ ಅನ್ನು ಮನೆಗೆ ಕರೆಸಿದ್ದಾನೆ. ಅವರ ಬಳಿ ಸೀಕ್ರೆಟ್ ಆಗಿ ಎಜೆ ಮಾತನಾಡುತ್ತಾನೆ. ದುರ್ಗಾ ಬಹಳ ದಿನಗಳಿಂದ ಕಾಣುತ್ತಿಲ್ಲ. ಏನಾಗಿದೆಯೋ ಗೊತ್ತಾಗುತ್ತಿಲ್ಲ. ಹುಡುಕಬೇಕು ಎಂದು ಹೇಳುತ್ತಾನೆ. ಮನೆಯವರಿಗೂ ಕೂಡ ಈ ಸತ್ಯವನ್ನು ಎಜೆ ಯಾರಿಗೂ ಹೇಳಿಲ್ಲ.

Hitler kalyana serial 03rd November episode written update

ಬೆರಳು ಸುಟ್ಟುಕೊಂಡ ಅಂತರಾ

ಇನ್ನು ಅಂತರಾ ಫಿಂಗರ್ ಟೆಸ್ಟ್ ಮಾಡಿದರೆ, ತಾನು ಪ್ರಾರ್ಥನಾ ಎಂಬ ಸತ್ಯ ಗೊತ್ತಾಗುತ್ತದೆ ಎಂದು ಗಾಬರಿಯಾಗಿದ್ದಾಳೆ. ಹೀಗಾಗಿ ಒಂದು ನಿಮಿಷ ಬರುತ್ತೇನೆ ಎಂದು ರೂಮಿಗೆ ಹೋಗಿದ್ದಾಳೆ. ಈಗ ಏನು ಮಾಡುವುದು, ಬಂದಿರುವ ಸಂಕಷ್ಟದಿಂದ ತಪ್ಪಿಸಿಕೊಳ್ಳುವುದು ಹೇಗೆ? ಎಂದು ಟೆನ್ಷನ್ ಮಾಡಿಕೊಳ್ಳುತ್ತಾಳೆ. ಈಗ ಸಿಕ್ಕಿಬಿದ್ದರೆ, ಡೈರೆಕ್ಟ್ ಆಗಿಯೇ ನಾನು ಜೈಲಿಗೆ ಹೋಗಬೇಕಾಗುತ್ತದೆ ಎಂದು ಆತಂಕಗೊಂಡಿದ್ದಾಳೆ. ಆದರೆ ಈಗ ಫಿಂಗರ್ ಪ್ರಿಂಟ್ ನೀಡದೇ ಬೇರೆ ದಾರಿ ಇಲ್ಲ. ಹಾಗಾಗಿ ತನ್ನ ಕೈಯನ್ನು ಐರನ್ ಬಾಕ್ಸ್‌ಗೆ ಇಟ್ಟು ಸುಟ್ಟುಕೊಂಡಿದ್ದಾಳೆ.

ಅಜ್ಜಿಯನ್ನು ಸಾಯಿಸಲು ಮುಂದಾದ ಅಂತರಾ

ಫಿಂಗರ್ ಪ್ರಿಂಟ್ ರೀಡ್ ಆಗದ ಕಾರಣ ಮನೆಯವರೆಲ್ಲಾ ಶಾಕ್ ಆಗುತ್ತಾರೆ. ಆದರೆ, ಈ ವಿಚಾರದಲ್ಲಿ ಮನೆಯವರು ಎಜೆ ಎದುರು ಹೆಚ್ಚು ತಲೆ ಕೆಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸುಮ್ಮನಾಗುತ್ತಾರೆ. ಅಜ್ಜಿ ಇಷ್ಟೆಲ್ಲಾ ಪ್ಲಾನ್ ಮಾಡಿದರೂ ಅಂತರಾ ಸಿಕ್ಕಿ ಬೀಳಲಿಲ್ಲ ಎಂದು ಯೋಚಿಸುತ್ತಿರುತ್ತಾಳೆ. ಇದೆಲ್ಲಾ ಅಜ್ಜಿಯ ಪ್ಲಾನ್ ಎಂದು ತಿಳಿದ ಅಂತರಾಳಿಗೆ ಕೋಪ ಬರುತ್ತದೆ. ಹಾಗಾಗಿ ಅಂತರಾ, ಅಜ್ಜಿಯನ್ನು ಮೊದಲು ಸಾಯಿಸಿ ಬಿಟ್ಟರೆ ಸಮಸ್ಯೆಯೇ ಬರುವುದಿಲ್ಲ ಎಂದು ಯೋಚಿಸಿದ್ದಾಳೆ. ಹೀಗಾಗಿ ಹಾಲಿನಲ್ಲಿ ವಿಷ ಬೆರೆಸಲು ಮುಂದಾಗಿದ್ದಾಳೆ.

More from Filmibeat

English summary
Hitler kalyana Kannada serial today Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X