Hitler Kalyana: ಮಗಳ ಪರ ನಿಂತ ಕೌಸಲ್ಯ: ಪ್ರಾರ್ಥನಾಗೆ ಕೊಟ್ಟ ಐಡಿಯಾ ಏನು..?
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾಳಿಗೆ ಎಜೆ ತಾಳಿಕಟ್ಟುವ ಸಂದರ್ಭದಲ್ಲೇ ಅಂತರಾ ಕಾಣಿಸಿಕೊಂಡಿದ್ದಾಳೆ. ಇದರಿಂದ ಎಜೆ ತಾಯಿಯನ್ನು ಕಟ್ಟದೇ, ಅಂತರಾಳನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಎಜೆ ಗಮನವೆಲ್ಲಾ ಈಗ ಸಂಪೂರ್ಣವಾಗಿ ಅಂತರಾಳ ಮೇಲಿದೆ. ವೈದ್ಯರು ಬೇರೆ, ಆಕೆಗೆ ಹಳೆಯದೆಲ್ಲಾ ಮರೆತು ಹೋಗಿದೆ ಎಂದಿದ್ದಾರೆ.
ಅಂತರಾಗೆ ಯಾವುದನ್ನು ನೆನಪು ಮಾಡಬೇಡಿ. ಶಾಕ್ ನಿಂದ ಜೀವವನ್ನೇ ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಅಂತರಾ ಎಜೆಯನ್ನು ನೋಡುವುದಕ್ಕೂ ಇಷ್ಟ ಪಡುತ್ತಿಲ್ಲ. ಎಜೆಗೆ ಇದರಿಂದ ನೋವಾಗಿದೆ. ತನ್ನ ಜೀವಕ್ಕೆ ಜೀವವಾಗಿರುವ ಅಂತರಾ ಯಾಕೆ ಹೀಗಾಡುತ್ತಿದ್ದಾಳೆ ಎಂದು ಬೇಸರ ಮಾಡಿಕೊಂಡಿದ್ದಾನೆ.

ಪ್ರಾರ್ಥನಾ, ರೂಪಾಳನ್ನು ಕೇಳಿದ್ದಾಳೆ. ಹೀಗಾಗಿ ಎಜೆ, ರೂಪಾಳನ್ನು ಕರೆಸಿದ್ದು, ಅಂತರಾ ಯಾರು..? ಆಕೆಯನ್ನು ಎಷ್ಟು ಪ್ರೀತಿಸುತ್ತಾರೆ. ಅಂತರಾ ಇದ್ದಕ್ಕಿದ್ದ ಹಾಗೆಯೇ ಅಂತರಾ ಕಾಣೆಯಾಗಿದ್ದು, ಇದೀಗ ಲೀಲಾಳನ್ನು ಮದುವೆಯಾಗಲು ಹೊರಟಾಗ ತನ್ನ ಹಳೆಯ ಪ್ರೀತಿ ಅಂತರಾ ಕಂಡಿದ್ದು, ವೈದ್ಯರು ಹಳೆಯದನ್ನು ಮರೆತಿರುವ ಬಗ್ಗೆ ಹೇಳಿದ್ದು ಎಲ್ಲವನ್ನೂ ರೂಪಾಳಿಗೆ ಹೇಳುತ್ತಾನೆ.
ಆಗ ರೂಪಾ ಎಜೆ ಮಾತನ್ನು ನಂಬಿ, ನಿಮ್ಮ ಪ್ರೀತಿಗೆ ನಾನು ಸಪೋರ್ಟ್ ಮಾಡುತ್ತೇನೆ ಸರ್. ಪ್ರಾರ್ಥನಾ ಮೇಡಂ ಜೊತೆಗೆ ಇಲ್ಲೇ ಇದ್ದು, ಅವರಿಗೆ ಅರ್ಥ ಮಾಡಿಸುತ್ತೇನೆ ಎಂದು ರೂಪಾ ಹೇಳುತ್ತಾಳೆ. ಎಜೆ, ರೂಪಾಳನ್ನು ರೂಮಿಗೆ ಕರೆದುಕೊಂಡು ಹೋಗುತ್ತಾನೆ. ಆಗ ಪ್ರಾರ್ಥನಾ, ಎಜೆಯನ್ನು ನೋಡಿ, ನೀವ್ಯಾಕೆ ಬಂದಿದ್ದು ಎಂದು ಕೇಳುತ್ತಾಳೆ. ಆಗ ರೂಪಾಳನ್ನು ಎಜೆ ಒಳಗೆ ಕಳಿಸಿ ಬರುತ್ತಾನೆ. ರೂಪಾ, ಪ್ರಾರ್ಥನಾಳನ್ನು ಸಮಾಧಾನ ಮಾಡಲು ಯತ್ನಿಸುತ್ತಾಳೆ.

ಇತ್ತ ಅಜ್ಜಿ, ಎಜೆ ಜೊತೆಗೆ ಮಾತನಾಡುತ್ತಾರೆ. ನಿನ್ನ ಮನಸ್ಥಿತಿ ಈಗ ಹೇಗಿದೆಯೋ ಗೊತ್ತಿಲ್ಲ. ಆದರೆ, ಲೀಲಾ ಬಗ್ಗೆ ಯೋಚಿಸಿದ್ದೀಯಾ. ತಾನು ಕಂಡ ಕನಸೆಲ್ಲಾ ನನಸಾಯ್ತು ಎನ್ನುವಷ್ಟರಲ್ಲಿ ಎಲ್ಲವೂ ಸುಳ್ಳಾಗಿದೆ. ಬೇರೆ ಯಾರೇ ಲೀಲಾ ಜಾಗದಲ್ಲಿ ಇದ್ದಿದ್ದರೂ, ನಿಂತ ಜಾಗದಲ್ಲೇ ಕುಸಿದು ಬೀಳುತ್ತಿದ್ದರು. ಲೀಲಾ ಯಾವುದಕ್ಕೂ ಜಗ್ಗದೇ ಎಲ್ಲರಿಗೂ ಬೆನ್ನೆಲುಬಾಗಿ ನಿಂತಿದ್ದಾಳೆ. ಎಲ್ಲರ ಜೊತೆಗೆ ಏನೂ ಆಗೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಎಲ್ಲರಿಗೂ ಲೀಲಾನೇ ಸಮಾಧಾನ ಮಾಡುತ್ತಿದ್ದಾಳೆ. ನಿಜವಾಗಲೂ ಅವಳು ದೇವತೆನೇ. ಅವಳ ಬಗ್ಗೆ ಸ್ವಲ್ಪವಾದರೂ ಯೋಚಿಸಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ.
ಇನ್ನು ಕೌಸಲ್ಯ ದೇವರ ಮುಂದೆ ನಿಂತು ತನ್ನ ಮಗಳಿಗೆ ಒಳ್ಳೆಯದಾಗಲಿ. ಮಲತಾಯಿ ಆದರೂ ಯಾವತ್ತೂ ನನಗೆ ನೋವು ಕೊಟ್ಟಿಲ್ಲ. ನಾನೇ ಅವಳನ್ನು ತಿರಸ್ಕರಿಸಿದರೂ ಲೀಲಾ ನನ್ನ ಜೊತೆಗಿದ್ದಾಳೆ. ಅವಳಿಗೆ ಅನ್ಯಾಯವಾಗದೇ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುತ್ತಿರುತ್ತಾಳೆ. ಇದೇ ವೇಳೆಗೆ ಬರುವ ದುರ್ಗಾ ಮೊನ್ನೆಯಷ್ಟೇ ಮಗಳ ವಿರುದ್ಧ ಕಿಡಿಕಾರಿದ್ದ ನೀವು ಈಗ ಅವಳ ಪರ ನಿಂತಿದ್ದೀರಾ ಎಂದು ಹೀಯಾಳಿಸುತ್ತಾಳೆ. ದುರ್ಗಾ ಮಾತಿಗೆ ಕೌಸಲ್ಯ ಎದುರಾಡುತ್ತಾಳೆ.

ನೀನು ಏನೇ ಅಂದರೂ ನಾನು ನನ್ನ ಮಗಳಿಗೆ ಸಪೋರ್ಟ್ ಮಾಡುವುದು. ಲೀಲಾ ಮತ್ತು ಎಜೆ ಒಂದಾಗುತ್ತಾರೆ. ಅವರಿಬ್ಬರನ್ನೂ ಯಾರು ಬೇರೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ದುರ್ಗಾ, ಸಾಧ್ಯವೇ ಇಲ್ಲ. ಎಜೆ, ಲೀಲಾಳನ್ನು ಮರೆಯುತ್ತಾರೆ. ಅಂತರಾ ಅತ್ತೆ ಜೊತೆಯಾಗುತ್ತಾರೆ. ಲೀಲಾ ಮತ್ತು ಎಜೆ ಒಂದಾಗೊಲ್ಲ ಎಂದು ಇಬ್ಬರೂ ಚಾಲೆಂಜ್ ಮಾಡಿಕೊಳ್ಳುತ್ತಾರೆ.
ಇನ್ನು ಪ್ರಾರ್ಥನಾ ವಾಕಿಂಗ್ ಮಾಡುತ್ತಿರುತ್ತಾಳೆ. ಅವಳು ಒಬ್ಬಳೇ ಇರುವುದನ್ನು ನೋಡಿ ಬಂದ ಕೌಸಲ್ಯ, ನಿಮಗೆ ಇಲ್ಲಿರೋದಕ್ಕೆ ಇಷ್ಟ ಇಲ್ಲ ಅಲ್ವಾ.. ನಿಮ್ಮನ್ನು ಇಲ್ಲಿ ಯಾರೂ ಕಟ್ಟಿ ಹಾಕಿಲ್ಲ. ಆರಾಮಾಗಿ ಹೋದರೆ, ಗೇಟ್ ನಾಲ್ಕೇ ಹೆಜ್ಜೆ. ನಿಮಗೆ ಇರೋದಕ್ಕೆ ಇಷ್ಟ ಇಲ್ಲ ಅಂದರೆ ಹೋಗಬಹುದು. ಇಷ್ಟವಿಲ್ಲದ ಜಾಗದಲ್ಲಿ ಯಾಕೆ ಇರಬೇಕು ಎಂದು ಏನೇನೋ ಹೇಳಿ ಪ್ರಾರ್ಥನಾ ತಲೆಗೆ ಹುಳ ಬಿಟ್ಟು ಹೋಗುತ್ತಾಳೆ. ಇನ್ನು ಪ್ರಾರ್ಥನಾ ನಿಜವಾಗಿಯೂ ಇಲ್ಲಿಂದ ಹೊರಟು ಹೋಗುತ್ತಾಳಾ..?


Click it and Unblock the Notifications











