Hitler kalyana: ಹೊಸ ಐಡಿಯಾ ಕೊಟ್ಟ ಕೌಸಲ್ಯ: ಅಂತರಾಗೆ ಯೂಟರ್ನ್
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾಗೆ ಪ್ರಾರ್ಥನಾ ಬಗ್ಗೆ ಸಂಪೂರ್ಣವಾಗಿ ಗೊತ್ತಾಗಿದೆ. ಈಗ ಲೀಲಾ ನಿಧಾನವಾಗಿ ತನ್ನ ಸ್ಥಾನವನ್ನು ಪಡೆದುಕೊಳ್ಳಲು ಮುಂದಾಗಿದ್ದಾಳೆ. ಅಂತರಾ ಹೆಸರು ಹೇಳಿಕೊಂಡು ಬಂದಿರುವ ಪ್ರಾರ್ಥನಾಳಿಗೆ ಸರಿಯಾದ ಪಾಠವನ್ನು ಕಲಿಸಬೇಕು ಎಂದು ಲೀಲಾ ಸ್ಕೆಚ್ ಹಾಕಿದ್ದಾಳೆ. ಹೀಗಾಗಿ ಈಗ ಲೀಲಾ ಗಮನವೆಲ್ಲಾ ಎಜೆ ಮೇಲಿದೆ.
ಡುಪ್ಲಿಕೇಟ್ ಅಂತರಾಳಿಗೆ ಪಾಠ ಕಲಿಸಬೇಕು ಎಂದರೆ, ಮೊದಲು ಎಜೆ ಮತ್ತು ತಾನು ಒಂದಾಗಬೇಕು. ನಂತರವೇ ಅವಳ ಬಣ್ಣ ಬಯಲು ಮಾಡಬೇಕು ಎಂದು ಹೇಳುತ್ತಾಳೆ.
ಲೀಲಾ ಬೇಕಂತಲೇ ಅಂತರಾ ಬಳಿ ಹೋಗಿ ಹೇ, ಪ್ರಾರ್ಥನಾ ನಿನ್ನ ಆಟವೆಲ್ಲಾ ನನ್ನ ಬಳಿ ನಡೆಯೋದಿಲ್ಲ. ನೀನು ಏನು ಅಂತ ನನಗೆ ತುಂಬಾ ಚೆನ್ನಾಗಿ ಗೊತ್ತು. ದುಡ್ಡಿನ ಪಿಶಾಚಿ. ಹಣಕ್ಕೋಸ್ಕರ ಏನು ಬೇಕಿದ್ದರೂ ಮಾಡುತ್ತೀಯಾ. ನಿನ್ನ ಬಗ್ಗೆ ನನಗೆಲ್ಲಾ ಗೊತ್ತಾಗಿದೆ. ನಿನ್ನನ್ನು ಮಾತ್ರ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಕಿರುಚಾಡುತ್ತಾಳೆ.

ಅಂತರಾಗೆ ಲೀಲಾನೇ ಸರಿ
ಒಂದು ಕ್ಷಣ ಅಂತರಾಳಿಗೆ ಶಾಕ್ ಆಗುತ್ತದೆ. ನಂತರ ಲೀಲಾ ಬೇಕಂತಲೇ ನನ್ನ ಫ್ರೆಂಡ್ ಪ್ರಾರ್ಥನಾ ನನ್ನ ಜೊತೆಲಿ ಇದ್ದುಕೊಂಡೇ ಮೋಸ ಮಾಡಿದ್ದಾಳೆ. ಅದಕ್ಕೆ ಅವಳಿಗೆ ಹೀಗೆಲ್ಲಾ ಬೈದಿದ್ದೀನಿ. ಅವಳನ್ನು ಮಾತ್ರ ಸುಮ್ಮನೆ ಬಿಡುವುದಿಲ್ಲ. ಈ ವಿಷಯವನ್ನೆಲ್ಲಾ ನಿಮ್ಮ ಮುಂದೆ ಹೇಳಿಕೊಂಡೆನಲ್ಲ. ನನಗೆ ಈಗ ಸಮಾಧಾನವಾಯ್ತು ಎಂದು ಹೇಳುತ್ತಾಳೆ. ಲೀಲಾ ಮಾತುಗಳಿಗೆ ಅಂತರಾ ನಡುಗಿ ಹೋಗುತ್ತಾಳೆ.
ರಾಮಚಂದ್ರ ಕೈಯಲ್ಲಿ ಕೌಸಲ್ಯ ಫೋನ್
ಇತ್ತ ರಾಮಚಂದ್ರ ಕೌಸಲ್ಯ ಮನೆಯಲ್ಲಿ ಇಲ್ಲದ ಕಾರಣ ಅಡುಗೆ ಮಾಡಲೆಂದು ಹೋಗುತ್ತಾನೆ. ಅಕ್ಕಿ ಡಬ್ಬಿಯಲ್ಲಿ ಕೌಸಲ್ಯ ಬಚ್ಚಿಟ್ಟಿದ್ದ ಮೊಬೈಲ್ ಸಿಗುತ್ತದೆ. ಮೊಬೈಲ್ ಅನ್ನು ನೋಡುತ್ತಿದ್ದಂತೆ ರಾಮಚಂದ್ರ ಹಾಗೂ ಚುಕ್ಕಿ ಇಬ್ಬರೂ ಶಾಕ್ ಆಗುತ್ತಾರೆ. ಮೊಬೈಲ್ ಅನ್ನು ಚೆಕ್ ಮಾಡಿದಾಗ ಅಂತರಾ ಜೊತೆಗೆ ಮಾತನಾಡಿರುವುದು ಗೊತ್ತಾಗುತ್ತದೆ. ಇಬ್ಬರಿಗೂ ಕೌಸಲ್ಯ ಮೇಲೆ ಕೆಂಡದಷ್ಟು ಕೋಪ ಬರುತ್ತದೆ. ಅವಳು ಮನೆಗೆ ಬರಲಿ ಗ್ರಹಚಾರ ಬಿಡಿಸುತ್ತೇನೆ ಎಂದು ಹೇಳುತ್ತಿರುತ್ತಾನೆ.

ಅಂತರಾಗೆ ಸರಸ್ವತಿ ಸಪೋರ್ಟ್
ಇತ್ತ ಲೀಲಾ, ಎಜೆ ಮೇಲೆ ಲವ್ ಆಗಿದೆ ಎಂದು ಹೇಳಿ ಎಜೆ ಹಿಂದೆ ಹಿಂದೆಯೇ ಸುತ್ತುತ್ತಿರುತ್ತಾಳೆ. ಲೀಲಾಗೆ ಹುಷಾರಿಲ್ಲ ಎಂದುಕೊಂಡು ಎಜೆ ಹಣೆ ಮುಟ್ಟಿದ್ದಕ್ಕೆ ತಲೆ ತಿರುಗಿ ಬೀಳುತ್ತಾಳೆ. ನಾನು ಇನ್ಮೇಲೆ ಎಜೆ ಹಿಂದೆ ಹಿಂದೆನೆ ಇರುತ್ತೀನಿ ಎಂದು ಲಕ್ಷ್ಮೀ ಬಳಿ ಹೇಳುತ್ತಿರುತ್ತಾಳೆ. ಈ ಮಾತನ್ನು ಕೇಳಿಸಿಕೊಳ್ಳುವ ಸರಸ್ವತಿ ಅಂತರಾ ಬಳಿ ಹೋಗಿ ಎಲ್ಲಾ ವಿಚಾರವನ್ನು ಹೇಳುತ್ತಾಳೆ. ನಿಮಗೆ ನಾನು ಯಾವಾಗಲೂ ಜೊತೆಯಾಗಿ ಇರುತ್ತೀನಿ. ಆ ಲೀಲಾಳನ್ನು ಮೊದಲು ಮನೆಯಿಂದ ಹೊರಗೆ ಹಾಕಿ ಎಂದು ಹೇಳಿಕೊಡುತ್ತಾಳೆ. ಅಂತರಾಳಿಗೆ ಸರಸ್ವತಿಯಿಂದ ಬಹಳ ಸಹಾಯವಾಗುತ್ತಿದೆ. ಲೀಲಾಳನ್ನು ಮನೆಯಿಂದ ಹೊರಗೆ ಹಾಕಲು ಸರಸ್ವತಿಯೂ ಅಂತರಾಳಿಗೆ ಸಹಾಯ ಮಾಡುತ್ತಾಳೆ ಎಂಬ ಖುಷಿಯೂ ಇದೆ.
ಲೀಲಾಗೆ ಸತ್ಯ ಹೇಳಿದ ರಾಮಚಂದ್ರ
ಕೌಸಲ್ಯ ಮನೆಗೆ ಬರುತ್ತಿದ್ದಂತೆ ರಾಮಚಂದ್ರ ಹಾಗೂ ಚುಕ್ಕಿ ಇಬ್ಬರೂ ಬೈಯುತ್ತಾರೆ. ಸ್ವಂತ ಮಗಳ ಬದುಕನ್ನೇ ಹಾಳು ಮಾಡುವ ತಾಯಿ, ನಿನಗೆ ಯಾವತ್ತೂ ಒಳ್ಳೆಯದಾಗೊಲ್ಲಾ ಎಂದು ಬೈಯುತ್ತಾರೆ. ಈ ಕೂಡಲೇ ಮನೆ ಬಿಟ್ಟು ಹೋಗು. ಈ ಮನೆಯಲ್ಲಿ ನಿನಗೆ ಜಾಗವಿಲ್ಲ ಎಂದು ಹೇಳುತ್ತಾರೆ. ಆಗ ಕೌಸಲ್ಯ, ದುಡ್ಡಿನ ಆಸೆಗೆ ಹೀಗೆಲ್ಲಾ ಮಾಡಿಬಿಟ್ಟೆ. ಅಂತರಾ, ಲೀಲಾಳನ್ನು ಆ ಮನೆಯಿಂದ ಆಚೆ ಹಾಕಲು ಪ್ಲಾನ್ ಮಾಡುತ್ತಿದ್ದಾಳೆ. ನೀವು ನನ್ನನ್ನು ಬಳಸಿಕೊಂಡು ಅಂತರಾ ಬಂಡವಾಳ ಹೊರಗೆ ಹಾಕಬಹುದು ಎಂದು ಐಡಿಯಾ ಕೊಡುತ್ತಾಳೆ. ಈ ಮಾತನ್ನು ಕೇಳಿದ ರಾಮಚಂದ್ರ, ಲೀಲಾಳಿಗೆ ಫೊನ್ ಮಾಡಿ ನಡೆದ ಘಟನೆಯನ್ನೆಲ್ಲಾ ಹೇಳುತ್ತಾನೆ.


Click it and Unblock the Notifications











