Hitler Kalyana: ಅಂತರಾ ಜೊತೆಗಿರುವ ಮಾಸ್ಟರ್ ಪ್ಲಾನರ್ ಕಿಶೋರ್ ಯಾರೆಂದು ಗೊತ್ತಾಯ್ತಾ..?
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದುರ್ಗಾ ಮನೆಗೇನೋ ಬಂದಾಯ್ತು. ಆದರೆ, ಈಗ ತನ್ನನ್ನು ಕಿಡ್ನ್ಯಾಪ್ ಮಾಡಿದವರು ಯಾರು? ಎಂಬುದನ್ನು ತಿಳಿಸಿ ಹೇಳಬೇಕಿದೆ.
ದುರ್ಗಾ ಮಾತಿನಿಂದ ಮನೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ದೊಡ್ಡ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಆದರೆ, ದುರ್ಗಾ ಬಾಯಿ ಬಿಟ್ಟು ಕೂಡ ಮಾತನಾಡುತ್ತಿಲ್ಲ.

ದುರ್ಗಾ ಮೌನಕ್ಕೆ ಜಾರಿರುವುದು ಮನೆಯವರೆಲ್ಲರನ್ನು ಆತಂಕಗೊಳ್ಳುವಂತೆ ಮಾಡಿದೆ. ಆದರೆ ದುರ್ಗಾ, ಅಂತರಾ ಮತ್ತು ಕಿಶೋರ್ ಬೆದರಿಕೆಗೆ ಹೆದರಿಕೊಂಡಿದ್ದಾಳೆ.
ಭಯದಿಂದ ಸತ್ಯ ಮುಚ್ಚಿಟ್ಟ ದುರ್ಗಾ
ದುರ್ಗಾ ಒಬ್ಬಳೇ ರೂಮಿನಲ್ಲಿ ಕುಳಿತುಕೊಂಡು ಅಳುತ್ತಿರುತ್ತಾಳೆ. ಲೀಲಾ ಇದನ್ನು ಗಮನಿಸಿ, ದುರ್ಗಾಳಿಗೆ ಸಮಾಧಾನ ಮಾಡುತ್ತಿರುತ್ತಾಳೆ. ಹೀಗೆಲ್ಲಾ ನೀವು ಯಾರಿಗೂ ಹೆದರಿಕೊಂಡು ಕೊರಗಬೇಡಿ. ನಿಮ್ಮನ್ನು ಕಿಡ್ನ್ಯಾಪ್ ಮಾಡಿಸಿದ್ದು ಯಾರು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ, ನೀನು ಒಂದು ಸಲ ಅದು ಯಾರು ಎಂದು ಹೇಳು. ಆಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ನೀನು ಹೀಗೆ ಒಬ್ಬಳೇ ಕಣ್ಣೀರು ಹಾಕುತ್ತಾ ಕುಳಿತುಕೊಂಡರೆ, ಯಾವ ಪ್ರಯೋಜನವೂ ಇರುವುದಿಲ್ಲ. ಅಲ್ಲದೇ, ಮುಂದಿನ ದಿನಗಳಲ್ಲಿ ಈ ಮನೆಯಲ್ಲಿ ಬಹಳ ದೊಡ್ಡ ದೊಡ್ಡ ಸಮಸ್ಯೆಗಳು ಎದುರಾಗುತ್ತದೆ ಎಂದು ಹೇಳುತ್ತಾಳೆ. ಆಗ ಸತ್ಯ ಹೇಳುತ್ತೀನಿ ಎಂದು ದುರ್ಗಾ ಹೇಳುತ್ತಾಳೆ. ಅಷ್ಟರಲ್ಲಿ ಕಿಶೋರ್ ಹೇಳಿದ ಮಾತುಗಳನ್ನು ನೆನೆದು ಭಯಪಟ್ಟುಕೊಂಡು ನಾನು ಏನೂ ಹೇಳೋದಿಲ್ಲ ಎಂದು ಹೇಳಿ ಹೊರಟು ಹೋಗುತ್ತಾಳೆ.
ಅಂತರಾಳಿಗೆ ವಾರ್ನ್ ಮಾಡಿದ ಕಿಶೋರ್
ಇತ್ತ ಕಿಶೋರ್ ಮತ್ತು ಅಂತರಾ ಇಬ್ಬರೂ ಮನೆಯ ಹೊರಗಡೆ ಬಂದು ಭೇಟಿಯಾಗುತ್ತಾರೆ. ಅಂತರಾಳಿಗೆ ಕಿಶೋರ್ ಬೈಯುತ್ತಾನೆ. ಇಷ್ಟು ನಿಧಾನ ಮಾಡಿದರೆ ಕಷ್ಟವಾಗುತ್ತದೆ. ನಾವು ಆದಷ್ಟು ಬೇಗನೇ ನಮ್ಮ ಗುರಿ ಸಾಧಿಸಬೇಕು. ಏಜೆಯನ್ನು ನಿನ್ನ ವಶ ಮಾಡಿಕೊ ಎಂದು ಹೇಳುತ್ತಾನೆ. ಅಂತರಾ ತನಗೆ ಎಜೆಯನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಬಹಳ ಕಷ್ಟ ಆಗುತ್ತಿದೆ. ಏಜೆ ಸುಲಭವಾಗಿ ನನ್ನನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಮಾತನಾಡುತ್ತಿರುತ್ತಾರೆ.

ಕಿಶೋರ್‌ನನ್ನು ನೋಡಿದ ಲೀಲಾ ತಂದೆ
ಇವರಿಬ್ಬರು ಹೀಗೆ ಮಾತನಾಡುವುದನ್ನು ಲೀಲಾ ತಂದೆ ರಾಮಚಂದ್ರ ನೋಡಿ ಬಿಡುತ್ತಾರೆ. ಕಿಶೋರ್ ಅಂತರಾಳಿಗೆ ಆ ಮನೆಯಲ್ಲಿ ಏನೇನು ಮಾಡಬೇಕು ಎಂಬುದನ್ನು ಹೇಳುತ್ತಿರುತ್ತಾನೆ. ಆಗ ರಾಮಚಂದ್ರ ಫೋಟೋ ತೆಗೆದುಕೊಳ್ಳಲು ಮೊಬೈಲ್ ಹುಡುಕುತ್ತಾನೆ. ಆದರೆ, ತನ್ನ ಬಳಿ ಮೊಬೈಲ್ ಇರುವುದಿಲ್ಲ. ತಕ್ಷಣವೇ ಮನೆಗೆ ಬಂದು ಹೆಂಡತಿ ಕೌಸಲ್ಯ ಬಳಿ ಎಲ್ಲಾ ಸತ್ಯ ಹೇಳುತ್ತಾನೆ. ಬಳಿಕ ಲೀಲಾಳಿಗೆ ಫೋನ್ ಮಾಡುತ್ತಾನೆ. ಲೀಲಾ ಆ ವ್ಯಕ್ತಿಯನ್ನು ಮತ್ತೆ ಎಲ್ಲಾದರೂ ನೋಡಿದರೆ, ಗುರುತು ಹಿಡಿಯುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಹು ಎಂದು ಹೇಳುತ್ತಾರೆ. ಲೀಲಾಳಿಗೆ ಅದು ಕಿಶೋರ್ ಎಂಬುದು ಗೊತ್ತಿಲ್ಲ. ಮುಂದೊಂದು ದಿನ ರಾಮಚಂದ್ರ, ಲೀಲಾ ಮನೆಗೆ ಬಂದಾಗ ಕಿಶೋರ್ ಸಿಕ್ಕಿ ಬೀಳಬಹುದು.
ಅಂತರಾಳ ಪ್ಲಾನ್‌ಗೆ ಲೀಲಾ ಹೊಸ ಪ್ಲಾನ್
ಇನ್ನು ಅಂತರಾ ಈಗ ಎಜೆ ರೂಮಿನಲ್ಲಿ ತನಗೆ ಜಾಗ ಮಾಡಿಕೊಳ್ಳಲು ಯತ್ನಿಸುತ್ತಿದ್ದಾಳೆ. ಎಜೆ ಬಳಿ ಕಣ್ಣೀರು ಹಾಕಿಕೊಂಡು ಇನ್ನೂ ಎಷ್ಟು ದಿನ ನಾನು ಹೀಗೆ ಬೇರೆ ರೂಮಿನಲ್ಲಿ ಇರಬೇಕು. ನಿಮ್ಮ ಜೊತೆಗೆ ನಾನು ಒಂದೇ ರೂಮಿನಲ್ಲಿ ಇರುವುದು ಯಾವಾಗ ಎಂದು ಕೇಳುತ್ತಾಳೆ. ಅಂತರಾಳ ಕಣ್ಣೀರಿಗೆ ಸೋತ ಎಜೆ ಸರಿ ಇಂದಿನಿಂದ ನನ್ನ ರೂಮಿನಲ್ಲೇ ಇರು ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡು ಲೀಲಾ ಬೇರೊಂದು ಪ್ಲಾನ್ ಅನ್ನು ಮಾಡುತ್ತಾಳೆ. ತನಗೆ ಅಂತರಾ ಅಕ್ಕನ ಮೇಲೆ ಪ್ರೀತಿ ಹೆಚ್ಚಾದಂತೆ ನಟಿಸಿ, ಇನ್ಮುಂದೆ ಅವರ ಪಕ್ಕಾ ಮಲಗುತ್ತೇನೆ ಎಂದು ಎಜೆ ಬಳಿ ಕೇಳುತ್ತಾಳೆ. ಎಜೆ, ಲೀಲಾಳ ಪ್ಲಾನ್ ಅನ್ನು ಅರಿಯದೇ, ಇನ್ಮುಂದೆ ಅಂತರಾ ಮತ್ತು ಲೀಲಾ ಇಬ್ಬರೂ ಒಟ್ಟಿಗೆ ಮಲಗಿ ಎಂದು ಹೇಳಿ ಹೊರಡುತ್ತಾನೆ.


Click it and Unblock the Notifications











