Hitler Kalyana: ಬದಲಾದ ಅಂತರಾ ಬ್ಲಡ್ ಗ್ರೂಪ್: ಅನುಮಾನಗೊಂಡು ಪ್ರಶ್ನಿಸಿದ ಎಜೆ

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾ ವೇಷದಲ್ಲಿ ಪ್ರಾರ್ಥನಾ ಎಜೆಯ ಮನಸ್ಸನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಎಜೆ, ಅಂತರಾಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅಂತರಾ ಕೆಲವೊಮ್ಮೆ ತನ್ನ ಶಕ್ತಿ ಮೀರಿ ಎಜೆಯನ್ನು ಒಲಿಸಿಕೊಳ್ಳಲು ಯತ್ನಿಸುತ್ತಾಳೆ. ಆದರೆ ಎಜೆಯ ಕೆಲವೊಂದು ಪ್ರಶ್ನೆಗಳಿಗೆ ತಪ್ಪು ತಪ್ಪಾದ ಉತ್ತರಗಳನ್ನು ಕೊಡುತ್ತಿರುತ್ತಾಳೆ.

Hitler Kalyana serial 07th December episode written update

ಒರಿಜಿನಲ್ ಅಂತರಾಳಂತೆಯೇ ಪ್ರಾರ್ಥನಾ ಕಂಡರೂ ಕೂಡ ಅವಳ ಗುಣ ಇವಳಿಗೆ ಇಲ್ಲದ ಕಾರಣ, ಆಗಾಗ ಎಜೆಗೆ ಇವಳ ಮೇಲೆ ಅನುಮಾನ ಬರುತ್ತಿರುತ್ತದೆ.

ಲೀಲಾಳಲ್ಲಿ ಪ್ರೀತಿ ಕಾಣುತ್ತಿರುವ ಎಜೆ

ಇನ್ನು ಈಗ ಎಜೆ ಬಹಳ ಗೊಂದಲದಲ್ಲಿ ಇದ್ದಾನೆ. ದುರ್ಗಾ ಕಿಡ್ನ್ಯಾಪ್ ವಿಚಾರವನ್ನು ಬಹಳ ತಲೆ ಕೆಡಿಸಿಕೊಂಡಿದ್ದಾನೆ. ತನಗೆ ಈಗ ಹೆಂಡತಿಯ ಸಾಂಗತ್ಯ ಬೇಕೆಂದಾಗ ಅಂತರಾ ಬಳಿ ತನ್ನ ಮನದ ಭಾವನೆಗಳನ್ನು ಹೇಳಿಕೊಂಡು ಸಾಂತ್ವಾನ ಪಡೆಯಲು ಯತ್ನಿಸುತ್ತಾನೆ. ಆದರೆ, ಅಂತರಾ ಬಹಳ ಸ್ವಾರ್ಥಿಯಂತೆ ಮಾತನಾಡಿ ಎಜೆ ಮನಸ್ಸನ್ನು ಇನ್ನಷ್ಟು ವೀಕ್ ಆಗಿಸುತ್ತಿರುತ್ತಾಳೆ. ಆದರೆ, ಎಜೆಯ ಮನಸ್ಥಿತಿಯನ್ನು ಪ್ರತಿ ಹೆಜ್ಜೆಯಲ್ಲೂ ಗಮನಿಸುವ ಲೀಲಾ ಹಾಗಲ್ಲ.

ಏಜೆಗೆ ಲೀಲಾ ಮೇಲೆ ಆಸಕ್ತಿ

ಎಜೆಗೆ ಸಮಾಧಾನ ಆಗುವಂತಹ ಪ್ರೀತಿಯ ಮಾತುಗಳನ್ನಾಡಿ, ಕುಗ್ಗಿ ಹೋಗಿರುವ ಎಜೆಯ ಮನಸ್ಸಿಗೆ ಶಕ್ತಿ ನೀಡುತ್ತಿರುತ್ತಾಳೆ. ಇದು ತಿಳಿದೋ ತಿಳಿಯದೆಯೋ ಎಜೆಗೆ ಲೀಲಾ ಮೇಲಿನ ಆಸಕ್ತಿ ಹೆಚ್ಚಾಗುವಂತೆ ಮಾಡುತ್ತಲಿದೆ. ಆದರೆ, ಅಂತರಾಳಿಗೆ ಎಜೆಯ ಮನಸ್ಸನ್ನು ಒಲಿಸಿಕೊಳ್ಳುವ ಈ ಸುಲಭ ವಿಧಾನ ತಿಳಿಯುತ್ತಿಲ್ಲ. ಲೀಲಾ ಕೂಡ ಎಜೆ ಆದಷ್ಟು ಅಂತರಾಳಿಂದ ದೂರ ಇರಲಿ ಎಂದೇ ಪ್ರಾರ್ಥಿಸುತ್ತಿರುತ್ತಾಳೆ.

ಅಂತರಾಳನ್ನು ಪ್ರಶ್ನಿಸಿದ ಎಜೆ

ಇನ್ನು ಪ್ರಾರ್ಥನಾ ಅಲ್ಲಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಲೇ ಇರುತ್ತಾಳೆ. ಎಜೆ ಬಹಳ ಸೂಕ್ಷ್ಮಜೀವಿ ಆಗಿದ್ದು, ಆತನ ಬಳಿ ಬಹಳ ಎಚ್ಚರವಾಗಿರಬೇಕು. ಈ ಬಗ್ಗೆ ಕಿಶೋರ್ ಮತ್ತು ಅಂತರಾ ಮಾತನಾಡುತ್ತಿರುತ್ತಾರೆ. ತಮ್ಮ ಬಗ್ಗೆ ಮನೆಯಲ್ಲಿ ಯಾರಿಗಾದರೂ ಸತ್ಯ ತಿಳಿದರೆ, ಅವರನ್ನು ಕೊಂದು ಬಿಡಬೇಕು ಎನ್ನುವಾಗಲೇ ಎಜೆ ಬರುತ್ತಾನೆ. ಎಜೆ ತಮ್ಮ ಮಾತನ್ನು ಕೇಳಿಸಿಕೊಂಡ ಎಂದು ಹೆದರಿರುವ ಅಂತರಾಳಿಗೆ ನಿನ್ನ ಬ್ಲಡ್ ಗ್ರೂಪ್ ಯಾವಾಗ ಬದಲಾಯ್ತು ಎಂದು ಪ್ರಶ್ನಿಸುತ್ತಾನೆ. ಅಂತರಾಳಿಗೆ ಗಾಬರಿಯಾಗುತ್ತದೆ. ಯಾಕೆಂದರೆ, ಅಂತರಾಳ ನಿಜವಾದ ಬ್ಲಡ್ ಗ್ರೂಪ್ ಯಾವುದು ಎಂದು ತನಗೆ ತಿಳಿದೇ ಇರುವುದಿಲ್ಲ.

Hitler Kalyana serial 07th December episode written update

ಬ್ಲಡ್ ಗ್ರೂಪ್ ಬದಲಾಗಿದೆ

ಅಷ್ಟರಲ್ಲಿ ಎಜೆ ವೈದ್ಯರಿಗೆ ಕರೆ ಮಾಡಿ ಅಂತರಾ ಬ್ಲಡ್ ಗ್ರೂಪ್ O- ನೆಗೆಟಿವ್. ನಿಮ್ಮ ಫೈಲ್‌ನಲ್ಲಿರುವ ಬ್ಲಡ್ ಗ್ರೂಪ್ ತಪ್ಪಿದೆ ಎಂದು ಹೇಳಿ ಸರಿ ಪಡಿಸುತ್ತಾನೆ. ಆದರೆ, ವೈದ್ಯರು ನಾವು ಹಾಗೆಲ್ಲಾ ತಪ್ಪಾಗಿ ಬರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಎಜೆಗೆ ಅಂತರಾ ಮೇಲೆ ಅನುಮಾನ ಬರುವುದಕ್ಕಿಂತಲೂ ವೈದ್ಯರನ್ನೇ ಅನುಮಾನಿಸುತ್ತಾನೆ. ಆದರೂ ಕೂಡ ಮನದ ಮೂಲೆಯಲ್ಲಿ ವೈದ್ಯರು ಹಾಗೆಲ್ಲಾ ತಪ್ಪು ಮಾಡುವುದಿಲ್ಲ. ಅಂತರಾಳ ಬ್ಲಡ್ ಗ್ರೂಪ್ ಬದಲಾಗಲು ಹೇಗೆ ಸಾಧ್ಯ ಎಂದು ಯೋಚಿಸುತ್ತಿರುತ್ತಾನೆ. ಇದೇ ಸಮಯಕ್ಕೆ ಲೀಲಾ ಬಂದು ಎಜೆಯ ಮನಸ್ಸನ್ನು ತಿಳಿಗೊಳಿಸುವಂತೆ ಮಾತನಾಡುತ್ತಾಳೆ.

ದುರ್ಗಾಳಿಗೆ ಹಿಂಸೆ ನೀಡುತ್ತಿರುವ ಕಿಶೋರ್

ಇನ್ನು ಕಿಶೋರ್ ಪ್ರತಿದಿನ ದುರ್ಗಾಳಿಗೆ ಮಾನಸಿಕವಾಗಿ ಹಿಂಸೆ ಕೊಡುವುದರ ಜೊತೆಗೆ, ದೈಹಿಕವಾಗಿಯೂ ಹಿಂಸೆ ಮಾಡುತ್ತಿರುತ್ತಾನೆ. ನಿತ್ಯ ಯಾರ ಬಳಿಯಾದರೂ ಸತ್ಯ ಬಾಯಿ ಬಿಟ್ಟಿದ್ದೀಯಾ ಎಂದು ಹೊಡೆಯುತ್ತಲೇ ಇರುತ್ತಾನೆ. ಮತ್ತೆ ದುರ್ಗಾಳಿಗೆ ಹೊಡೆದು ಬೈಯುತ್ತಿರುತ್ತಾನೆ. ಆಗ ಅಂತರಾ ನೀನೇನಾದರೂ ಸತ್ಯ ಹೇಳಿದರೆ, ಈ ಮನೆಯನ್ನು ಸ್ಮಶಾನ ಮಾಡಬೇಕಾಗುತ್ತದೆ. ಅದೇ ರಕ್ತ ಅಂಟಿದ ಕೈಯನ್ನು ನಿನ್ನ ಕಣ್ಣೀರಿನಲ್ಲೇ ತೊಳೆದುಕೊಳ್ಳುತ್ತೀವಿ. ನಮ್ಮ ಗುರಿ ನಾವು ಮುಟ್ಟಲೇಬೇಕು. ನೀನು ಯಾರ ಬಳಿಯೂ ನಮ್ಮಿಬ್ಬರ ಬಗ್ಗೆ ಸತ್ಯ ಹೇಳಕೂಡದು ಎಂದು ವಾರ್ನಿಂಗ್ ಕೊಡುತ್ತಾಳೆ.

More from Filmibeat

English summary
Hitler Kalyana kannada serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X