Hitler kalyana: ಅಜ್ಜಿಗೆ ಕೊಡಲು ವಿಷ ಬೆರೆಸಿದ ಹಾಲು ಅಂತರಾಳೇ ಕುಡಿಯುವಂತಾಯ್ತಾ..?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಜೆ ಈಗ ದುರ್ಗಾಳನ್ನು ಹುಡುಕಾಡುತ್ತಿದ್ದಾನೆ. ಪೊಲೀಸರು ಕೂಡ ಎಜೆಗೆ ಸಹಾಯ ಮಾಡುತ್ತಿದ್ದು, ದುರ್ಗಾಳ ಫೋನ್ ನಂಬರ್ ಅನ್ನು ಟ್ರ್ಯಾಕ್ ಮಾಡುತ್ತಿದ್ದಾರೆ.

ದುರ್ಗಾ ಓಡಾಡಿರುವ ಲೊಕೇಶನ್‌ಗಳು ಎಲ್ಲವೂ ನಾರ್ಮಲ್ ಆಗಿದ್ದರೂ ಕೂಡ ಒಂದು ಲೊಕೇಶನ್ ಮಾತ್ರವೇ ಟೆಂಷನ್ ಕೊಟ್ಟಿದೆ. ಅದೂ ಕೂಡ ಅಲ್ಲಿ ದುರ್ಗಾ ಒಂದು ದಿನ ಪೂರ್ತಿ ಒಬ್ಬಳೇ ಕಾಲ ಕಳೆದಿದ್ದಾಳೆ.

ಆ ಲೊಕೇಶನ್ ಯಾವುದು ಎಂದು ನೋಡಿದ ಎಜೆಗೂ ಕೂಡ ಶಾಕ್ ಆಗಿದೆ. ದುರ್ಗಾ ಯಾಕೆ ಅಲ್ಲಿದ್ದಳು? ಎಂದು ಎಜೆ ಯೋಚಿಸುತ್ತಿದ್ದಾನೆ. ಇಷ್ಟರಲ್ಲೇ ದುರ್ಗಾಳನ್ನು ಪತ್ತೆ ಮಾಡಬಹುದು.

Hitler-kalyana-Kannada-serial

ಅಂತರಾ ಪ್ಲಾನ್ ತಿಳಿದ ಲೀಲಾ

ಈಗ ಅಂತರಾ ಮೊದಲು ಅಜ್ಜಿಗೆ ಗೇಟ್ ಪಾಸ್ ಕೊಡಬೇಕು. ಆಗ ತನ್ನ ದಾರಿ ಕೊಂಚ ಸುಲಭವಾಗುತ್ತದೆ ಎಂದು ಆಲೋಚಿಸಿದ್ದಾಳೆ. ಅಜ್ಜಿಯನ್ನು ಸಾಯಿಸಿದಾಗ ಆ ಆರೋಪ ಲೀಲಾ ಮೇಲೆ ಮೇಲೆ ಬಂದರೆ ಇನ್ನೂ ಒಳ್ಳೆಯದು. ಆಗ ಲೀಲಾ ಜೈಲಿಗೆ ಹೋಗುತ್ತಾಳೆ. ಅಜ್ಜಿ ಯಮ ಲೋಕಕ್ಕೆ ಹೋಗುತ್ತಾರೆ ಎಂದು ಪ್ಲಾನ್ ಮಾಡುತ್ತಿದ್ದಾಳೆ. ತಾನೇ ಅಡುಗೆ ಮನೆಗೆ ಬಂದು ಹಾಲು ಕಾಯಿಸಿ, ವಿಷ ಬೆರೆಸುತ್ತಿರುತ್ತಾಳೆ. ಇದೇ ಸಮಯಕ್ಕೆ ಸರಿಯಾಗಿ ಲೀಲಾ ಅಡುಗೆ ಮನೆ ಬಳಿ ಬರುತ್ತಾಳೆ. ಅಂತರಾ ಒಬ್ಬಳೇ ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾಳೆ. ಈ ಹಾಲನ್ನು ಅಜ್ಜಿ ಕುಡಿದರೆ, ಯಮ ಲೋಕಕ್ಕೆ ಹೋಗುವುದು ಗ್ಯಾರೆಂಟಿ. ಆದರೆ, ಲೀಲಾನೇ ಈ ಹಾಲನ್ನು ಅಜ್ಜಿಗೆ ಕೊಡಬೇಕು. ಅದಕ್ಕೆ ಏನು ಮಾಡುವುದು ಎಂದು ಯೋಚಿಸುತ್ತಿರುತ್ತಾಳೆ.

ಸರುಗೆ ಲೀಲಾ ಚಾಲೆಂಜ್

ತಕ್ಷಣವೇ ತಲೆ ಉಪಯೋಗಿಸುವ ಲೀಲಾ. ಈ ಹಾಲನ್ನು ಅಜ್ಜಿ ಕುಡಿಯಬಾರದು. ಅಂತರಾನೇ ಕುಡಿಯುವಂತೆ ಮಾಡಬೇಕು ಎಂದು ಪ್ಲಾನ್ ಮಾಡುತ್ತಾಳೆ. ಅದಕ್ಕಾಗಿಯೇ ಲೀಲಾ, ಸರಸ್ವತಿಯನ್ನು ಬಳಸಿಕೊಳ್ಳುತ್ತಾಳೆ. ಸೀದಾ ಸರು ಬಳಿ ಹೋಗಿ ನಿಮ್ಮ ಅಂತರಾ ಅತ್ತೆ ನಿನ್ನನ್ನು ಬೈಯ್ದುಕೊಳ್ಳುತ್ತಿದ್ದಾರೆ. ನೀನೇ ಅತ್ತೆ ಅತ್ತೆ ಅಂತ ಅವರ ಹಿಂದೆ ಸುತ್ತುವುದು ಎಂದು ಚಾಡಿ ಹೇಳುತ್ತಾಳೆ. ಆದರೆ, ಸರು ಇದನ್ನು ಒಪ್ಪಲು ತಯಾರಿರುವುದಿಲ್ಲ. ಯಾಕೆಂದರೆ, ಅವಳಿಗೆ ಅಂತರಾ ಮೇಲೆ ಅಪಾರವಾದ ನಂಬಿಕೆ. ಹಾಗಾಗಿ ಸಾಧ್ಯವೇ ಇಲ್ಲ ಎನ್ನುತ್ತಾಳೆ. ಆಗ ಲೀಲಾ, ನಿನ್ನ ಮಾತು ಒಪ್ಪಬೇಕು ಎಂದರೆ, ನೀನು ಈಗಲೇ ಹೋಗಿ ನಿಮ್ಮ ಅತ್ತೆ ಅಂತರಾಗೆ ನಿನ್ನ ಕೈಯ್ಯಾರೆ ಹಾಲು ಕುಡಿಸಬೇಕು. ಇಲ್ಲ ಅಂದರೆ ನೀನು ಸೋತಂತೆ ಅಂತ ಚಾಲೆಂಜ್ ಮಾಡುತ್ತಾಳೆ. ಇದಕ್ಕೆ ಕೂಡ ಸರು ಒಪ್ಪಿಕೊಳ್ಳುತ್ತಾಳೆ.

Hitler-kalyana-Kannada-serial

ಹಾಲು ಚೆಲ್ಲಿದ ಅಂತರಾ

ಸರು ಅಡುಗೆ ಮನೆಗೆ ಹೋಗುತ್ತಾಳೆ. ಅಂತರಾ ಬಳಿ ನೀವ್ಯಾಕೆ ಕೆಲಸ ಮಾಡುತ್ತಿದ್ದೀರಾ ?ಎಂದು ಕೇಳುತ್ತಾಳೆ. ಆಗ ಅಂತರಾ, ತನಗೆ ಹಾಲು ಕುಡಿಯಬೇಕು ಅನಿಸಿತು ಅದಕ್ಕೆ ಬಂದೆ ಎನ್ನುತ್ತಾಳೆ. ತನಗೇ ಹಾಲು ಎಂದು ಹೇಳಿ, ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿ ಬೀಳುತ್ತಾಳೆ. ಇದರಿಂದ ಸರಸ್ವತಿ ಇವತ್ತು ನಾನೇ ನಿಮಗೆ ಹಾಲು ಕುಡಿಸುತ್ತೇನೆ ಎಂದು ಬಲವಂತವಾಗಿ ಅಂತರಾಳಿಗೆ ಹಾಲು ಕುಡಿಸಲು ಮುಂದಾಗುತ್ತಾಳೆ. ಆಗ ಅಂತರಾ ಬೇರೆ ದಾರಿ ಇಲ್ಲದೇ, ಹಾಲನ್ನು ಚೆಲ್ಲಿ ಬಿಡುತ್ತಾಳೆ.

ಅಜ್ಜಿಯನ್ನು ನೋಡಿ ಖುಷಿ ಪಟ್ಟ ಲೀಲಾ

ಅದೇ ಸಮಯಕ್ಕೆ ಅಜ್ಜಿ ಅಡುಗೆ ಮನೆಗೆ ಬಂದು ಅಂತರಾಳಿಗೆ ಬೈಯುತ್ತಾರೆ. ಹಾಲು ಚೆಲ್ಲಿದ್ದೀಯಾ, ಮೊದಲು ಕ್ಲೀನ್ ಮಾಡು ಎಂದು ಹೇಳಿ ಹೋಗುತ್ತಾಳೆ. ಅಂತರಾಳಿಗೆ ಹಾಲು ವೇಸ್ಟ್ ಆಯ್ತು, ತನ್ನ ಪ್ಲಾನ್ ಕೂಡ ವರ್ಕ್ ಆಗಲಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಆದರೆ ಲೀಲಾ, ಅಜ್ಜಿ ಬಳಿ ಹೋಗಿ ತಬ್ಬಿಕೊಂಡು ಮುದ್ದಾಡುತ್ತಾಳೆ. ನಾನು ಇರುವವರೆಗೂ ಅಜ್ಜಿಗೆ ಏನೂ ಆಗದಂತೆ ಕಾಪಾಡಬೇಕು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ.

More from Filmibeat

English summary
Hitler kalyana Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X