Hitler Kalyana: ತರಕಾರಿ ತರಲು ಮಾರ್ಕೆಟ್‌ಗೆ ಹೊರಟ ಎಜೆ: ಅಲ್ಲಿ ಆಗಿದ್ದೇನು..?
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ಹಾಗೂ ಎಜೆ ಇಬ್ಬರ ಜಾತಕವನ್ನು ಅಜ್ಜಿ ಪುರೋಹಿತರಿಗೆ ತೋರಿಸುತ್ತಾರೆ. ಆಗ ಪುರೋಹಿತರು ಮರು ಮಾಂಗಲ್ಯಧಾರಣೆ ಆಗಬೇಕು ಎನ್ನುತ್ತಾರೆ.
ಅದಕ್ಕೂ ಮುನ್ನ ಎಜೆ ಮತ್ತು ಲೀಲಾ ಒಂದಾದರೆ ಗಂಡಾಂತರ ಕಾದಿದೆ ಎಂದು ಹೇಳುತ್ತಾರೆ. ಇದಕ್ಕೆ ಹೆದರಿದ ಅಜ್ಜಿ ಬೇಗ ಮರು ಮಾಂಗಲ್ಯಧಾರಣೆ ಮಾಡಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಬೀಗರ ಬಳಿ ಮಾತನಾಡಿದ್ದಾರೆ. ಈ ವೇಳೆ ಎಜೆ ಮತ್ತು ಲೀಲಾ ಇಬ್ಬರೂ ಬೀಗರ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇದರಿಂದ ಮನೆಯವರೆಲ್ಲಾ ಖುಷಿಯಾಗಿದ್ದಾರೆ.

ಅತ್ತೆ ಮನೆಯಲ್ಲಿರುವ ಎಜೆ-ಲೀಲಾ
ಎಜೆ ಮತ್ತು ಲೀಲಾ ಹಾಯಾಗಿ ಅತ್ತೆಯ ಮನೆಯಲ್ಲಿದ್ದಾರೆ. ಕೌಸಲ್ಯ ಕೂಡ ಎಜೆಯಿಂದ ಲಾಭ ಮಾಡಿಕೊಳ್ಳಬೇಕು ಎಂದು ಸ್ಕೆಚ್ ಹಾಕಿದ್ದಾಳೆ. ಆದರೆ, ಅಜ್ಜಿ, ಲೀಲಾ ಮತ್ತು ಎಜೆ ಇಬ್ಬರೂ ದೂರ ಇರಬೇಕು ಎಂದು ರಾಮಚಂದ್ರ ಅವರಿಗೆ ಹೇಳಿ ಬಂದಿದ್ದಾರೆ. ಹಾಗಾಗಿ ಚುಕ್ಕಿ, ರಾಮಚಂದ್ರ ಇಬ್ಬರೂ ಸೇರಿ ಲೀಲಾ ಮತ್ತು ಎಜೆಯನ್ನು ಕಾವಲು ಕಾಯುತ್ತಿದ್ದಾರೆ. ಚುಕ್ಕಿ ಜೊತೆಗೆ ಲೀಲಾ ಮಲಗಿದ್ದು, ಮಾವನ ಜೊತೆಗೆ ಎಜೆ ಮಲಗುವಂತಾಗಿದೆ. ಇಬ್ಬರಿಗೂ ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಮಾಡುತ್ತಿದ್ದಾರೆ. ಹಾಗಿದ್ದರೂ ಎಜೆ ಮತ್ತು ಲೀಲಾ ನಡುವೆ ಮಾವ ಗೋಡೆಯಾಗಿ ನಿಂತಿದ್ದಾರೆ.

ದುರ್ಗಾ ಮಾತನ್ನು ನಂಬಿದ ಕೌಸಲ್ಯ
ದುರ್ಗಾ ಈಗ ಎಜೆ ಮತ್ತು ಲೀಲಾ ದೂರ ಆಗಲು ಹೊಸ ಪ್ಲ್ಯಾನ್ ಮಾಡಿದ್ದಾಳೆ. ಅದಕ್ಕೋಸ್ಕರ ಕೌಸಲ್ಯಳನ್ನು ಗಾಳದಂತೆ ಬಳಸಿಕೊಂಡಿದ್ದಾಳೆ. ಕಂಪನಿ ಸಂಪೂರ್ಣವಾಗಿ ಲಾಸ್ ಆಗಿದೆ. ಸಾಲಗಾರರು ಮನೆ ಮುಂದೆ ಬಂದು ನಿಲ್ಲುತ್ತಿದ್ದಾರೆ. ನಾವೆಲ್ಲರೂ ಬೀದಿಗೆ ಬರುವ ಸ್ಥಿತಿ ದೂರವಿಲ್ಲ. ಆದಷ್ಟು ಬೇಗ ಎಜೆ ಮತ್ತು ಲೀಲಾಳನ್ನು ನಮ್ಮ ಮನೆಗೆ ಕಳಿಸಿಕೊಡಿ. ಅವರಿಬ್ಬರು ಸಾಲಗಾರರಿಂದ ತಪ್ಪಿಸಿಕೊಂಡು ನಿಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳುತ್ತಾಳೆ. ಮೊದಲು ನಂಬದ ಕೌಸಲ್ಯ, ಎಜೆ ಐನೂರು ಕೋಟಿ ಎಂದು ಫೋನ್‌ನಲ್ಲಿ ಮಾತನಾಡಿದ್ದನ್ನು ಕೇಳಿ ನಿಜ ಎಂದು ನಂಬಿದ್ದಾಳೆ.

ಕಣ್ಣೀರಿಟ್ಟ ಲೀಲಾ
ಹೀಗಾಗಿ ಲೀಲಾ ಮತ್ತು ಎಜೆ ಅನ್ನು ಮನೆಯಿಂದ ಆಚೆಗೆ ಕಳಿಸಲು ಕೌಸಲ್ಯ ಮುಂದಾಗಿದ್ದಾಳೆ. ತಿಂಡಿ ಬಡಿಸುವ ಬದಲು ಕೌಸಲ್ಯ ಪಾತ್ರೆಗಳನ್ನು ಕುಕ್ಕುತ್ತಿದ್ದಾಳೆ. ಇದರಿಂದ ರಾಮಚಂದ್ರ ಬೇಸರ ಮಾಡಿಕೊಳ್ಳುತ್ತಾನೆ. ಪಕ್ಕಕ್ಕೆ ಕರೆದುಕೊಂಡು ಹೋಗಿ ಬುದ್ದಿ ಹೇಳುತ್ತಾನೆ. ಆದರೂ ಕೌಸಲ್ಯ ಕೇಳುವುದಿಲ್ಲ. ಲೀಲಾ ಮತ್ತು ಚುಕ್ಕಿ ಬಂದು ಕೌಸಲ್ಯ ಬಳಿ ಮಾತನಾಡುತ್ತಾರೆ. ಹೀಗೆಲ್ಲಾ ಮಾಡಬೇಡಿ. ಎಜೆ ಮನೆಯಲ್ಲಿದ್ದಾರೆ ಎಂದು ಕೇಳುತ್ತಾರೆ. ಆದರೆ ಕೌಸಲ್ಯ ನನಗೆ ನೀವಿಬ್ಬರು ನಮ್ಮ ಮನೆಯಲ್ಲಿ ಇರುವುದು ಇಷ್ಟವಿಲ್ಲ. ಅದಕ್ಕೆ ಹೀಗೆ ಮಾಡುತ್ತಿದ್ದೇನೆ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾಳೆ. ಇದರಿಂದ ಲೀಲಾ ಮತ್ತು ಚುಕ್ಕಿ ಅಳುತ್ತಾರೆ.

ಮಾರ್ಕೆಟ್‌ನಲ್ಲಿ ಎಜೆ ಚೌಕಾಸಿ?
ಇನ್ನು ತರಕಾರಿ ತರುವ ವಿಚಾರಕ್ಕೆ ಲೀಲಾ, ಎಜೆಗೆ ಚಾಲೆಂಜ್ ಮಾಡುತ್ತಾಳೆ. ಎಜೆ ನಾನು ಮಿಡಲ್ ಕ್ಲಾಸ್ ಕುಟುಂಬದಲ್ಲೇ ಹುಟ್ಟಿ ಬೆಳೆದಿದ್ದು, ನನಗೂ ಚೌಕಾಸಿ ಮಾಡಲು ಬರುತ್ತೆ ಎಂದು ಹೇಳುತ್ತಾನೆ. ಐನೂರು ರೂಪಾಯಿಗೆ ತರಕಾರಿ ತಂದು ಅಡುಗೆ ಮಾಡುವುದಾಗಿ ಲೀಲಾಗೆ ಎಜೆ ಚಾಲೆಂಚ್ ಮಾಡುತ್ತಾನೆ. ಆದರೆ, ಮಾರ್ಕೆಟ್‌ಗೆ ಹೋಗಿ ಕ್ವಿಂಟಾಲ್ ಗಟ್ಟಲೆ ತರಕಾರಿ ಬೇಕು ಎನ್ನುತ್ತಾನೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.


Click it and Unblock the Notifications











