Hitler Kalyana: ಪೂಜೆಯ ಸಮಯಕ್ಕೆ ಸರಿಯಾಗಿ ಎಜೆ ಮನೆಗೆ ಬಂದಾತ ಯಾರು..?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಪೊಲೀಸರ ಸಹಾಯದಿಂದ ಎಜೆ, ದುರ್ಗಾಳನ್ನು ಹುಡುಕುತ್ತಿದ್ದಾನೆ. ಆದರೆ ಅವಳು ಎಲ್ಲಿದ್ದಾಳೆ ಎಂಬುದೇ ಗೊತ್ತಾಗುತ್ತಿಲ್ಲ. ಲೀಲಾ ಮನೆಯ ಬಳಿ ಇಡೀ ಒಂದು ದಿನ ದುರ್ಗಾ ಕಾಲ ಕಳೆದಿರುವುದು ಲೊಕೇಶನ್ ಟ್ರ್ಯಾಕರ್ ಮೂಲಕ ತಿಳಿದು ಬಂದಿದೆ. ಹೀಗಾಗಿ ಎಜೆ, ರಾಮಚಂದ್ರ ಅವರಿಗೆ ಕರೆ ಮಾಡಿದ್ದಾನೆ.

ಸತ್ಯ ಹೇಳಿ ದುರ್ಗಾ ನಿಮ್ಮ ಮನೆಗೆ ಬಂದಿದ್ದಳಾ? ಎಂದು ಎಜೆ ಕೇಳಿದಾಗ ರಾಮಚಂದ್ರ, ದುರ್ಗಾ ಮನೆಗೆ ಬಂದಿದ್ದು, ಲೀಲಾ ಬಳಿ ಮಾತನಾಡಿದ್ದು, ಲೀಲಾ ಬಳಿಕ ದುರ್ಗಾಳನ್ನು ಮನೆಯಿಂದ ಹೊರಗೆ ಹಾಕಿದ್ದು, ದುರ್ಗಾ ಮಧ್ಯರಾತ್ರಿ ಆದರೂ ಚಳಿಯಲ್ಲಿ ಅಲ್ಲೇ ಉಳಿದ ಸತ್ಯವನ್ನು ಹೇಳುತ್ತಾರೆ.

hitler-kalyana-serial

ಲೀಲಾ ಮಾಡಿದ ಐಡಿಯಾ ಸಕ್ಸಸ್

ರಾಮಚಂದ್ರರ ಮಾತು ಕೇಳಿದ ಕೂಡಲೇ ಎಜೆಗೆ ಲೀಲಾ ಮೇಲೆ ಕೋಪ ಬರುತ್ತದೆ. ಹಾಗಾಗಿ ಲೀಲಾಳನ್ನು ಕರೆದು ಯಾಕೆ ಹಾಗೆ ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಲೀಲಾನೇ ಹಾಗೆಲ್ಲಾ ಹೇಳುವಂತೆ ತನ್ನ ತಂದೆಗೆ ಹೇಳಿಕೊಟ್ಟಿರುತ್ತಾಳೆ. ಎಜೆ, ಲೀಲಾಳನ್ನು ಪ್ರಶ್ನೆ ಮಾಡಿದಾಗ ಗಾಬರಿಯಾದವಳಂತೆ ನಟಿಸುತ್ತಾಳೆ. ದುರ್ಗಾ ಅವತ್ತು ನನ್ನನ್ನು ಮನೆಗೆ ವಾಪಸ್ ಕರೆಯಲು ಬಂದಿದ್ದಳು. ಅಂತರಾ ಮತ್ತು ಎಜೆ ಮತ್ತೆ ಮೊದಲಿನಂತೆ ಒಂದಾಗಬೇಕು. ಅವರಿಬ್ಬರೂ ಸಂಸಾರ ಶುರು ಮಾಡಬೇಕು. ಹಾಗೆ ಮಾಡಬೇಕು ಎಂದರೆ, ನೀವು ಆ ಮನೆಗೆ ಬರಬೇಕು ಎಂದು ಕೇಳಿಕೊಂಡರು. ಅದಕ್ಕೆ ಅವರನ್ನು ಮನೆಯಿಂದ ಆಚೆ ಹಾಕಿದೆ. ಆದರೆ, ಅವರು ರಾತ್ರಿಯೆಲ್ಲಾ ಮನೆ ಮುಂದೆಯೇ ಕಾಯುತ್ತಾರೆ ಎಂದು ಗೊತ್ತಿರಲಿಲ್ಲ ಎಂದು ಹೇಳುತ್ತಾಳೆ.

ಮನೆಗೆ ಬಂದ ಕಿಶೋರ್

ಎಷ್ಟೇ ಹುಡುಕಾಡಿದರೂ ದುರ್ಗಾ ಬಗ್ಗೆ ಸುಳಿವು ಸಿಗದ ಕಾರಣ ಎಜೆ ತಲೆ ಕೆಡಿಸಿಕೊಂಡಿದ್ದಾನೆ. ಮನೆಯಲ್ಲಿ ದೀಪಾವಳಿ ಹಬ್ಬ ಕೂಡ ಸರಿಯಾಗಿ ಮಾಡಲು ಮನಸ್ಸಿಲ್ಲ. ಗೊಂದಲದಲ್ಲೇ ಎಜೆ ದೇವಿಗೆ ಪೂಜೆಯನ್ನು ಮಾಡುತ್ತಾನೆ. ಲೀಲಾ ಮನೆಯವರಿಗೆಲ್ಲಾ ಒಳ್ಳೆಯದಾಗಲಿ, ಪ್ರಾರ್ಥನಾ ಬಣ್ಣ ಬಯಲಾಗಲಿ ಎಂದು ದೇವರ ಬಳಿ ಕೇಳಿಕೊಳ್ಳುತ್ತಾಳೆ. ಎಜೆ, ದುರ್ಗಾ ಬಗ್ಗೆಯೇ ಯೋಚಿಸುತ್ತಾ ಆರತಿ ಮಾಡುತ್ತಾನೆ. ಬ್ಯಾಲೆನ್ಸ್ ತಪ್ಪಿ ಆರತಿ ತಟ್ಟೆ ಬೀಳುವಂತಾಗುತ್ತದೆ. ತಕ್ಷಣವೇ ಕಿಶೋರ್ ಬಂದು ತಂದೆಯ ಕೈಯನ್ನು ಹಿಡಿದುಕೊಳ್ಳುತ್ತಾನೆ.

hitler-kalyana-serial

ಕಿಶೋರ್ ಮಾತಿನ ಅರ್ಥವೇನು..?

ಯಾರಿಗೂ ಹೇಳದೆಯೇ ಎಜೆ, ಹಿರಿ ಮಗ ಕಿಶೋರ್ ಮನೆಗೆ ಬಂದಿದ್ದಾನೆ. ಕಿಶೋರ್ ಅನ್ನು ನೋಡಿ ಎಲ್ಲರಿಗೂ ಖುಷಿಯಾಗುತ್ತದೆ. ಕಿಶೋರ್ ಎಲ್ಲರನ್ನು ಮಾತನಾಡಿಸುತ್ತಾನೆ. ಆಗ ಅಂತರಾ, ಕಿಶೋರ್ ಅನ್ನು ಖುಷಿಯಿಂದ ಮಾತನಾಡಿಸುತ್ತಾಳೆ. ಆದರೆ ಕಿಶೋರ್ ಮಾತನಾಡುವುದೇ ಇಲ್ಲ. ಇದರಿಂದ ಅಂತರಾಳಿಗೆ ಮುಜುಗರವಾಗುತ್ತದೆ. ಇನ್ನು ಕಿಶೋರ್ ಮನೆಯವರಿಗೆಲ್ಲರಿಗೂ ಉಡುಗೊರೆಯನ್ನು ಕೊಡುತ್ತಾನೆ. ದುರ್ಗಾ ಎಲ್ಲಿ ಎಂದು ಕೇಳುತ್ತಾನೆ. ಆಗ ಎಜೆ ಅವಳು ಕೆಲಸದ ಮೇಲೆ ಹೊರಗಡೆ ಹೋಗಿದ್ದಾಳೆ. ಒಂದೆರಡು ದಿನದಲ್ಲಿ ಬರುತ್ತಾಳೆ ಎಂದು ಹೇಳುತ್ತಾನೆ.

ಎಜೆಗೆ ಧೈರ್ಯ ತುಂಬಿದ ಲೀಲಾ

ಕಿಶೋರ್, ಎಜೆ ಬಳಿ ದುರ್ಗಾ ಜೊತೆಗೆ ಮಾತನಾಡಬೇಕು. ಫೋನ್ ಮಾಡಿ ಕೊಡಿ ಮಾತನಾಡುತ್ತೇನೆ ಎಂದು ಕೇಳಿಕೊಳ್ಳುತ್ತಾನೆ. ಆದರೆ ಎಜೆ ಬೇರೆ ದಾರಿ ಇಲ್ಲದೇ, ಈಗ ಬೇಡ. ದುರ್ಗಾ ಬಂದಾಗ ಮಾತನಾಡು ಎಂದು ಹೇಳುತ್ತಾನೆ. ಲೀಲಾ ಬಂದು ಎಜೆಗೆ ಸಮಾಧಾನ ಮಾಡುತ್ತಾಳೆ. ಎಜೆಗೆ ಧೈರ್ಯ ತುಂಬುವ ಲೀಲಾ, ನೀವು ಎಜೆ ಆಗಿ ದುರ್ಗಾಳನ್ನು ಹುಡುಕಿ. ಆಗ ದುರ್ಗಾ ಸಿಗುತ್ತಾಳೆ. ಎಮೋಷನಲ್ ಆದಷ್ಟೂ ನಿಮಗೆ ದಾರಿ ಕಾಣಿಸುವುದಿಲ್ಲ ಎಂದು ಹೇಳುತ್ತಾಳೆ. ಎಜೆ ಕೂಡ ಲೀಲಾ ಮಾತನ್ನು ಕೇಳಿಸಿಕೊಳ್ಳುತ್ತಾನೆ.

More from Filmibeat

English summary
Hitler kalyana Kannada serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X