Hitler kalyana: ಅಂತರಾ ಎದುರು ಲೀಲಾಳನ್ನು ಹೊಗಳಿದ ಅಜ್ಜಿ
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಕೌಸಲ್ಯ ಹಾಗೂ ಅಂತರಾ ಸಂಪರ್ಕದಲ್ಲಿ ಇದ್ದದ್ದು ಮನೆಯಲ್ಲಿ ಎಲ್ಲರಿಗೂ ಗೊತ್ತಾಗಿದೆ. ಲೀಲಾಳನ್ನು ಎಜೆ ಮನೆಯಿಂದ ಹೊರಗಾಕಲು ಅಂತರಾ ಯತ್ನಿಸುತ್ತಿರುವುದೂ ಗೊತ್ತಾಗಿದೆ. ಈ ಬಗ್ಗೆ ಲೀಲಾಳಿಗೆ ಅವರ ತಂದೆ ಮಾಹಿತಿಯನ್ನು ನೀಡಿದ್ದಾರೆ.
ಅಂತರಾ ಒಳ್ಳೆಯವಳು ಅಲ್ಲ ಎಂದು ಕೂಡ ಲೀಲಾಗೆ ಅರ್ಥ ಮಾಡಿಸಲು ಯತ್ನಿಸಿದ್ದಾರೆ. ಆದರೆ, ಲೀಲಾಳಿಗೆ ಇದೆಲ್ಲಾ ಸತ್ಯವೂ ಮುಂಚೆಯೇ ಗೊತ್ತಿತ್ತು. ಹಾಗಾಗಿ ಅವರ ತಂದೆ ಹೇಳಿದ್ದಕ್ಕೆ ಶಾಕ್ ಆಗದೇ, ಅದೆಲ್ಲವೂ ನನಗೂ ಗೊತ್ತಿದೆ ಅಪ್ಪ. ನೀವು ಅಮ್ಮನಿಗೆ ಮಾತ್ರ ಏನೂ ಹೇಳಬೇಡಿ ಎಂದು ಹೇಳುತ್ತಾಳೆ.

ಲೀಲಾ ಗುಣವನ್ನು ನೋಡಿ ಕೌಸಲ್ಯ ಅಳುತ್ತಾಳೆ. ನನ್ನನ್ನು ಕ್ಷಮಿಸುಬಿಡು ಎಂದು ಕೇಳುತ್ತಾಳೆ. ಲೀಲಾ, ಅಮ್ಮ ನಿನ್ನ ಒಳ್ಳೆಯ ಗುಣವನ್ನು ಅವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದಿದ್ದಾಳೆ.
ಅಪ್ಪನಿಗೆ ಸಮಾಧಾನ ಹೇಳಿದ ಲೀಲಾ
ಬಳಿಕ ಅವರ ತಂದೆಯ ಜೊತೆಗೆ ಮಾತನಾಡುವ ಲೀಲಾ, ಅಂತರಾಳಿಗೆ ಎಜೆ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲ. ಅವಳು ಮಾಡುತ್ತಿರುವುದೆಲ್ಲಾ ಕೇವಲ ನಾಟಕ. ನನ್ನನ್ನು ಈ ಮನೆಯಿಂದ ಹೊರಗೆ ಕಳಿಸಲು ಏನೇನು ಮಾಡುತ್ತಿದ್ದಾಳೆ ಎಂಬುದೆಲ್ಲಾ ನನಗೂ ಅರ್ಥವಾಗುತ್ತಿದೆ ಎಂದು ಲೀಲಾ ತಂದೆಯ ಬಳಿ ಹೇಳಿಕೊಳ್ಳುತ್ತಾಳೆ. ಆದರೆ, ಅಂತರಾ ಅಲ್ಲ ಅವಳು ಪ್ರಾರ್ಥನಾ ಎಂಬ ಸತ್ಯವನ್ನು ಮಾತ್ರ ಹೇಳುವುದಿಲ್ಲ.
ಪ್ರಾರ್ಥನಾಳಿಗೆ ಅಮ್ಮನ ಗಾಳ ಹಾಕಲು ಪ್ಲಾನ್
ತನ್ನ ತಾಯಿಯನ್ನು ಅಂತರಾ ಜೊತೆಗೆ ನಗುನಗುತಾ ಮಾತನಾಡಲು ಹೇಳುತ್ತಾಳೆ. ಅಲ್ಲದೇ, ಸ್ವಲ್ಪ ಕ್ಲೋಸ್ ಆಗಿ ಇದ್ದುಕೊಂಡು ಆಗಾಗ ಲೀಲಾಳನ್ನು ಬೈಯುವಂತೆಯೂ ಆಗ ಅಂತರಾಳ ಮುಂದಿನ ಪ್ಲಾನ್‌ಗಳನ್ನು ಕೌಸಲ್ಯ ಬಳಿ ಹೇಳಿಕೊಂಡರೆ, ತಾವು ಮುಂದಿನ ಹೆಜ್ಜೆಯನ್ನು ಇಡಬಹುದು ಎಂದು ಲೀಲಾ ಹೇಳುತ್ತಾಳೆ. ಸದ್ಯಕ್ಕೆ ಇಷ್ಟು ಸಾಕು. ಮುಂದೆ ನಾವು ಅಂತರಾಳನ್ನು ಹೇಗೆ ಮಟ್ಟ ಹಾಕುವುದು ಎಂಬುದನ್ನು ಯೋಚಿಸೋಣ ಎಂದು ಹೇಳುತ್ತಾಳೆ. ಲೀಲಾ ಅಮ್ಮ ಕೌಸಲ್ಯಳನ್ನು ಬಳಸಿಕೊಂಡು ಪ್ರಾರ್ಥನಾಳಿಗೆ ಖೆಡ್ಡಾ ತೋಡಲಿದ್ದಾಳೆ.

ಸರಸ್ವತಿಗೆ ಉರಿಸಿದ ಲೀಲಾ
ಇನ್ನು ಲೀಲಾಳಿಗೆ ಪ್ರೇಮ ಜ್ವರ ಬಂದಿದೆ. ಲೀಲಾಲನ್ನು ಎಜೆ ತಾನೇ ನೋಡಿಕೊಳ್ಳುವುದಾಗಿಯೂ ಹೇಳಿರುತ್ತಾನೆ. ಇದನ್ನು ತಿಳಿದ ಸರಸ್ವತಿಗೆ ಹೊಟ್ಟೆ ಉರಿ ಶುರುವಾಗಿರುತ್ತದೆ. ಲೀಲಾಳನ್ನು ತಡೆದು ವ್ಯಂಗ್ಯವಾಗಿ ಮಾತನಾಡಿಸುತ್ತಾಳೆ. ನಿನಗೆ ಏನೋ ಆಗಿದೆಯಂತೆಯಲ್ಲ ಏನಾಯ್ತು ಎಂದು ಪ್ರಶ್ನೆ ಮಾಡುತ್ತಾಳೆ. ಲೀಲಾ ಸರಸ್ವತಿಯನ್ನು ಇನ್ನಷ್ಟು ಉರಿಸಬೇಕು ಎಂದು ನನಗೆ ಮೈಯೆಲ್ಲಾ ಚಳಿ ಚಳಿ ಅನಿಸುತ್ತೆ. ಆದರೆ, ಬೇರೇನೂ ಇಲ್ಲ. ನನಗೆ ಸೆಕೆಂಡ್ ಸೈಟ್ ಲವ್ ಆಗಿದೆ. ನಾನು ಈ ಸಲ ಎಜೆ ಅನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಎಂದು ಬೇಕಂತಲೇ ಹೇಳುತ್ತಾಳೆ. ಸರಸ್ವತಿ ಕೂಡ ಲೀಲಾ ಮಾತಿಗೆ ಹುಸಿ ಕೋಪಮಾಡಿಕೊಳ್ಳುತ್ತಾಳೆ.
ಅಂತರಾಳನ್ನು ಹೊಗಳಿದ ಅಜ್ಜಿ
ಇತ್ತ ಅಂತರಾ, ಸರಸ್ವತಿ ಬಳಿ ಲೀಲಾ ತನ್ನ ಸ್ಥಾನವನ್ನು ಕಿತ್ತುಕೊಳ್ಳುತ್ತಿದ್ದಾಳೆ. ಅವಳಿಂದ ನನ್ನ ಬದುಕು ಹಾಳಾಗುತ್ತಿದೆ ಎಂದು ಗೋಳಾಡುತ್ತಿರುತ್ತಾಳೆ. ಸರಸ್ವತಿ ಏನೇ ಆಗಲಿ ಅಂತರಾ ಅತ್ತೆ ನಾನು ನಿಮ್ಮ ಪರ ಇರುತ್ತೇನೆ. ಆ ಲೀಲಾಳಿಗೆ ಒಂದು ಗತಿ ಕಾಣಿಸುತ್ತೀನಿ ಎಂದು ಹೇಳುತ್ತಿರುತ್ತಾಳೆ. ಇದೇ ವೇಳೆಗೆ ಅಜ್ಜಿ ಮತ್ತು ಎಜೆ ಬಂದು ಯಾರಿಗೆ ಎಂದು ಕೇಳಿದ್ದಕ್ಕೆ, ಅಂತರಾ ಮತ್ತು ಸರಸ್ವತಿ ಇಬ್ಬರೂ ಕನಸಿನಲ್ಲಿ ಬಂದ ಮೋಹಿನಿಗೆ ಎಂದು ಸುಳ್ಳು ಹೇಳುತ್ತಾರೆ. ಆದರೆ, ಅಜ್ಜಿ ಕೆಟ್ಟ ಆಲೋಚನೆ ಇರುವವರಿಗೆ ಮೋಹಿನಿ ಕನಸು ಬೀಳುತ್ತದೆ. ನಮ್ಮ ಲೀಲಾಳಂತಹವರಿಗೆ ಏನೂ ಆಗುವುದಿಲ್ಲ ಎಂದು ಲೀಲಾಳನ್ನು ಅಜ್ಜಿ ಹಾಡಿ ಹೊಗಳುತ್ತಾರೆ.


Click it and Unblock the Notifications











