Hitler Kalyana: ದುರ್ಗಾ ಪ್ಲ್ಯಾನ್ ಫ್ಲಾಪ್ : ಅಂತರಾ ಜಸ್ಟ್ ಮಿಸ್!
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾಳಿಗೆ ತನ್ನ ಮದುವೆ ನಿಂತಿದ್ದಕ್ಕೆ ಕೋಪ ಬಂದಿದೆ. ಈ ಮದುವೆಯೊಂದು ಆಗಿದ್ದರೆ, ತನ್ನೆಲ್ಲಾ ಆಸೆಗಳು ಸುಲಭವಾಗಿ ಕೈಗೆ ದಕ್ಕುತ್ತಿತ್ತು ಎಂಬುದು ಅಂತರಾ ಆಲೋಚನೆ. ಆದರೆ, ಲೀಲಾ ಬಂದು ಎಲ್ಲವನ್ನೂ ಹಾಳು ಮಾಡಿದ್ದಾಳೆ.
ಅಷ್ಟೇ ಅಲ್ಲದೇ, ಈಗ ಲೀಲಾ ಮತ್ತೆ ಮನೆಗೆ ಬಂದಿದ್ದಾಳೆ. ಹೀಗಾಗಿ ಅಂತರಾ ಕೌಸಲ್ಯಳಿಗೆ ಫೋನ್ ಮಾಡಿದ್ದಾಳೆ. ಅಂತರಾ ಕೌಸಲ್ಯಳನ್ನು ನನ್ನ ನಿನ್ನ ನಡುವೆ ನಡೆದ ಡೀಲ್ ಮುಗಿಯುವ ಮುನ್ನವೇ ನೀನು ಲೀಲಾಳನ್ನು ಮನೆಗೆ ಯಾಕೆ ಕಳಿಸಿದೆ ಎಂದು ಕ್ಲಾಸ್ ತೆಗೆದುಕೊಳ್ಳುತ್ತಾಳೆ.

ಅಂತರಾ ಜಸ್ಟ್ ಎಸ್ಕೇಪ್!
ಇದೇ ಕೋಪದಲ್ಲಿ ಇರುವ ವೇಳೆಗೆ ದುರ್ಗಾ ಲೀಲಾಳನ್ನು ಕರೆದುಕೊಂಡು ಬಂದು ಮರೆಯಲ್ಲಿ ನಿಲ್ಲಿಸುತ್ತಾಳೆ. ಅಂತರಾಳ ಒರಿಜಿನಲ್ ಮುಖವನ್ನು ನಿಮಗೆ ತೋರಿಸುತ್ತೇನೆ ಎಂದು ಕರೆದುಕೊಂಡು ಬರುತ್ತಾಳೆ. ದುರ್ಗಾ ಸೀದಾ ಅಂತರಾ ಬಳಿ ಹೋಗಿ, ಅತ್ತೆ ಅತ್ತೆ ಎಂದು ಸಾಫ್ಟ್ ಆಗಿ ಮಾತನಾಡುತ್ತಾಳೆ. ಮೊದಲೇ ಕೋಪದಲ್ಲಿದ್ದ ಅಂತರಾಳಿಗೆ ದುರ್ಗಾ ನಡೆದುಕೊಳ್ಳುವ ರೀತಿ ಮತ್ತಷ್ಟು ಕೋಪವನ್ನು ತರಿಸುತ್ತದೆ. ಹೀಗಾಗಿ ಅಂತರಾ ದುರ್ಗಾ ಮೇಲೆ ಕೋಪ ಮಾಡಿಕೊಳ್ಳುತ್ತಾಲೆ. ಜೋರಾಗಿ ಕೂಗಾಡುತ್ತಾಳೆ. ನನ್ನ ತಲೆ ಕೆಡಿಸಬೇಡ. ಈಗಾಗಲೇ ನಾನು ಅಪ್ಸೆಟ್ ಆಗಿದ್ದೀನಿ. ನಿನಗೆ ನನ್ನ ಬಗ್ಗೆ ಗೊತ್ತಲ್ವಾ ಎಂದು ಹೇಳುತ್ತಾಳೆ. ಆದರೆ, ತಾನು ಪ್ರಾರ್ಥನಾ ಎಂದು ಹೇಳುವುದರೊಳಗೆ ಲೀಲಾಳ ಸೀರೆ ಅಂತರಾಳಿಗೆ ಕಾಣಿಸುತ್ತದೆ. ಓಹ್.. ಇದು ದುರ್ಗಾ ಮಾಡಿರುವ ಟ್ರ್ಯಾಪ್ ಎಂದು ಅರ್ಥ ಮಾಡಿಕೊಂಡು. ಹೀಗೆಲ್ಲಾ ನಾಟಕ ಮಾಡುವುದಕ್ಕೆ ಆಗುವುದೇ ಇಲ್ಲ ಎಂದು ಹೇಳುತ್ತಾಳೆ.
ದುರ್ಗಾಳಿಗೆ ಕಾಣುತ್ತಿಲ್ಲ ಬೇರೆ ದಾರಿ
ಅತ್ತೆ ಲೀಲಾ ಬಳಿ ಅಂತರಾ ಬಣ್ಣವನ್ನು ಬಯಲು ಮಾಡಲು ಇದ್ದದ್ದು ಒಂದೇ ಒಂದು ದಾರಿ. ಈಗ ಅದೂಕೂಡ ಇಲ್ಲದಂತಾಯ್ತಲ್ಲ ಎಂದು ದುರ್ಗಾಳಿಗೆ ನೋವಾಗುತ್ತದೆ . ಇನ್ನು ದುರ್ಗಾ ಪತಿಗೂ ಅವಳ ಬಗ್ಗೆ ಗೊತ್ತಾಗಿದ್ದು, ಫೋನ್ ಮಾಡಿ ಬೈಯುತ್ತಿರುತ್ತಾನೆ. ಅದು ಏನು ಮಾಡುತ್ತೀಯೋ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಆಗಬಾರದು. ಲೀಲಾ ಅತ್ತೆಗೆ ತೊಂದರೆಯೂ ಆಗಬಾರದು. ಹಾಗೇನಾದರೂ ಆದರೆ, ನಿನ್ನನ್ನು ಮಾತ್ರ ನಾನು ಸುಮ್ಮನೇ ಬಿಡುವುದಿಲ್ಲ ಎಂದು ವಾರ್ನ್ ಮಾಡುತ್ತಾನೆ. ಇದರಿಂದ ದುರ್ಗಾಳಿಗೆ ದಾರಿಯೇ ಕಾಣುವುದಿಲ್ಲ.

ದುರ್ಗಾಳನ್ನು ನಂಬದ ಲೀಲಾ
ಮುಂದೆ ಏನು ಮಾಡುವುದು ಎಂದು ಯೋಚಿಸುತ್ತಾ, ದುರ್ಗಾಳ ಒಬ್ಬಳೇ ಅಳುತ್ತಿರುತ್ತಾಳೆ. ಇದೇ ಸಂದರ್ಭಕ್ಕೆ ಬರುವ ಲೀಲಾ, ಇದೆಲ್ಲಾ ದುರ್ಗಾ ಆಡುತ್ತಿರುವ ನಾಟಕ ಎಂದು ತಿಳಿದುಕೊಂಡಿದ್ದಾಳೆ. ಹಾಗಾಗಿ ದುರ್ಗಾ ಬಳಿ ಬಂದು ಸಾಕು ದುರ್ಗಾ ಇಷ್ಟೋಂದು ನಾಟಕ ಮಾಡಬೇಡ. ಮತ್ತೆ ನಿನ್ನನ್ನು ನಂಬಿ ನಾನು ಮೋಸ ಹೋಗಲು ತಯಾರಿಲ್ಲ. ಇನ್ನು ನಿನ್ನ ನಾಟಕವನ್ನು ಸಾಕು ಮಾಡು. ಅಂತರಾ ಅಕ್ಕನ ಬಗ್ಗೆ ಇಲ್ಲ ಸಲ್ಲದ ವಿಚಾರವನ್ನು ಹೇಳಬೇಡ ಎಂದು ಹೇಳುತ್ತಾಳೆ.
ಫುಲ್ ಎನರ್ಜಿಯಲ್ಲಿ ಅಜ್ಜಿ
ಮತ್ತೆ ನನ್ನ ಸೊಸೆ ಲೀಲಾ ಬಂದಿದ್ದಾಳೆ ಎಂದು ಎಜೆ ತಾಯಿಗೆ ತುಂಬಾ ಖುಷಿಯಲ್ಲಿದ್ದಾರೆ. ಹೀಗಾಗಿ ಜೋಷ್ ನಲ್ಲಿ ಇರುವ ಅಜ್ಜಿ ಎಲ್ಲರಿಗೂ ಬುದ್ಧಿ ಹೇಳುತ್ತಾರೆ. ಚೂಡಿದಾರ್ ಧರಿಸಿಕೊಂಡು ವ್ಯಾಯಾಮ ಮಾಡುತ್ತಾ ನಾನು ಇನ್ನೂ ಸ್ಲಿಮ್ ಆಗುತ್ತೇನೆ. ಇನ್ಮುಂದೆ ಡಯಟ್ ಮಾಡುತ್ತೇನೆ. ನೀವೂ ಕೂಡ ಮಾಡಬೇಕು ಅಂತ ಅಜ್ಜಿ ವಿಶ್ವರೂಪ್, ಲಕ್ಷ್ಮೀ ಹಾಗೂ ರೂಪಾಳಿಗೆ ಬುದ್ಧಿ ಹೇಳುತ್ತಿದ್ದಾರೆ.


Click it and Unblock the Notifications











