Hitler Kalyana: ಅಂತರಾಳಿಗೆ ಸುಳ್ಳು ಹೇಳಿ ನಂಬಿಸಿದ ಲೀಲಾ: ಸೊಸೆಗಾಗಿ ನಾಟಕ ಮಾಡಿದ ಅತ್ತೆ

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಈಗ ಲೀಲಾ ಆಡಿದ್ದೇ ಆಟ. ಅವಳು ಹೇಳಿದ್ದೇ ವೇದವಾಕ್ಯ ಆಗಿದೆ. ಲೀಲಾ ಏನೂ ಮಾಡಿದರೂ ಸರಿಯಾಗಿಯೇ ಇರುತ್ತೆ ಎಂದು ಎಲ್ಲರೂ ನಂಬಿದ್ದಾರೆ.

ಅಂತರಾಳನ್ನು ಇಷ್ಟು ದಿನ ಸಪೋರ್ಟ್ ಮಾಡುತ್ತಿದ್ದ ಲೀಲಾ, ಈಗ ಇದ್ದಕ್ಕಿದ್ದ ಹಾಗೆಯೇ ಎಜೆಯನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಅವರು ನನ್ನವರು ಎನ್ನುತ್ತಿದ್ದಾಳೆ.

ಲೀಲಾ ಮಾತನ್ನು ಮನೆಯವರೆಲ್ಲರೂ ಒಪ್ಪಿದ್ದು, ಅಂತರಾಳಿಗಿಂತಲೂ ಲೀಲಾನೇ ಎಜೆಗೆ ಸರಿಯಾದ ಜೋಡಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಎಲ್ಲರೂ ಲೀಲಾ ಪ್ರೀತಿಗೆ ಸಪೋರ್ಟ್ ಮಾಡುತ್ತಿದ್ದಾರೆ.

Hitler-Kalyana-kannada-serial

ನಾಟಕ ಆಡಿ ನಂಬಿಸಿದ ಲೀಲಾ

ಲೀಲಾಗೆ ಅಂತರಾ ಯಾರು ಎಂಬುದು ತಿಳಿದಾಗಿನಿಂದ ಬಹಳ ಕಾನ್ಫಿಡೆನ್ಸ್ ಇಂದ ಆಟವಾಡಿಸುತ್ತಿದ್ದಾಳೆ. ಆಗಾಗ ಅಂತರಾಳನ್ನು ಹೆದರಿಸುವಂತೆ ನಾಟಕ ಮಾಡುತ್ತಿರುತ್ತಾಳೆ. ಈಗಂತೂ ಎಜೆ ಟಚ್ ಮಾಡಿದರೆ ಸಾಕು ತಲೆ ಸುತ್ತುತ್ತೆ, ನನಗೆ ಹುಷಾರಿಲ್ಲ, ನನ್ನನ್ನು ಎಜೆ ಸರ್ ನೋಡಿಕೊಂಡರೆ ಸರಿ ಹೋಗುತ್ತೆ ಎಂದೆಲ್ಲಾ ಹೇಳುತ್ತಿದ್ದಾಳೆ.

ಅಂತರಾಳಿಗೆ ಲೀಲಾ ಶಾಕ್

ಲೀಲಾ ಅವತಾರ ನೋಡಿ ಅಂತರಾ ಒಳಗೊಳಗೆ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದಾಳೆ. ಇದೀಗ ಲೀಲಾ, ಅಂತರಾ ಎದುರು ಮತ್ತೊಂದು ನಾಟಕ ಮಾಡಿದ್ದಾಳೆ. ಈ ಚಾಕುವಿನಿಂದ ನನ್ನನ್ನು ಚುಚ್ಚಿ ಸಾಯಿಸಿಬಿಡಿ ಅಕ್ಕ. ನನಗೆ ಎಜೆ ಮೇಲೆ ಒಂಥರಾ ಮನಸಾಗಿದೆ. ಅದು ತಪ್ಪು ಎಂದು ಸುಳ್ಳು ಹೇಳಿದ್ದಾಳೆ.

ಲೀಲಾ ಮಾತಿಗೆ ಶಾಕ್ ಆದ ಅಂತರಾ

ಅವತ್ತು ಎಜೆ ಜೊತೆಗೆ ಹೆಂಡತಿ ರೀತಿ ನಾಟಕವಾಡಿದ್ದಕ್ಕೆ ನನಗೆ ಎಜೆ ಮೇಲೆ ಮನಸಾಗಿದೆ. ಇದರಿಂದ ಮುಂದೆ ಸಮಸ್ಯೆ ಆಗುತ್ತೆ. ಅದಕ್ಕೆ ನನ್ನನ್ನು ಕೊಂದು ಬಿಡಿ ಎಂದು ಹೇಳುತ್ತಾಳೆ. ಲೀಲಾ ಮಾತನ್ನು ನಂಬಿದ ಅಂತರಾ ಮೊದಲು ಕೋಪ ಮಾಡಿಕೊಳ್ಳುತ್ತಾಳೆ. ನಂತರ ನನ್ನ ಎದುರು ಸತ್ಯ ಹೇಳಿದೆಯಲ್ಲ ಅಷ್ಟೇ ಸಾಕು ಲೀಲಾ. ನೀನು ತುಂಬಾ ಒಳ್ಳೆಯವಳು. ಆದಷ್ಟು ನಿನ್ನ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೋ ಎಂದು ಬುದ್ಧಿ ಹೇಳುತ್ತಾಳೆ. ನಿನ್ನನ್ನು ನಾನು ಸಾಯಿಸುವುದಿಲ್ಲ. ಪಾಪ ನೀನು ಎಂದು ಅಂತರಾ ಹೇಳುತ್ತಿದ್ದಂತೆ ಲೀಲಾ ಒಳಗೊಳಗೆ ಖುಷಿ ಪಡುತ್ತಾಳೆ. ಲೀಲಾ ಬೇಕಂತಲೇ ಅಂತರಾ ಎದುರಿಗೆ ನಾಟಕ ಮಾಡುತ್ತಿದ್ದಾಳೆ.

ಲೀಲಾ -ಎಜೆ ಔಟಿಂಗ್ ಪ್ಲಾನ್

ಲೀಲಾ, ಅಂತರಾಳನ್ನು ಮಟ್ಟ ಹಾಕಲು ಒಂದು ಕಡೆ ಹೋರಾಡುತ್ತಿದ್ದರೆ, ಇತ್ತ ಲೀಲಾ ಪರ ಇರುವ ಮನೆಯವರೆಲ್ಲಾ ಎಜೆ-ಲೀಲಾಳನ್ನು ಒಂದು ಮಾಡಲು ಹರಸಾಹಸ ಪಡುತ್ತಿದ್ದಾರೆ. ಸರೋಜಿನಿ ಅಜ್ಜಿ ಎಜೆ ಎದುರು ಅಳುವಂತೆ ನಾಟಕ ಮಾಡಿದ್ದಾರೆ. ಲೀಲಾಗೆ ಮೈ ಹುಷಾರಿಲ್ಲ. ಸರಿ ಹೋಗಬೇಕು ಎಂದರೆ, ವೈದ್ಯರ ಬಳಿಗೆ ನೀನೇ ಕರೆದುಕೊಂಡು ಹೋಗಬೇಕು ಎಂದು ಒಪ್ಪಿಸಿದ್ದಾರೆ. ಈ ಮೂಲಕ ಲೀಲಾ ಮತ್ತು ಎಜೆ ಸ್ವಲ್ಪ ಕಾಲ ಮನೆಯಿಂದ ಹೊರಗಡೆ ಕಾಲ ಕಳೆಯಲಿ ಎಂಬುದು ಅಜ್ಜಿಯ ಪ್ಲಾನ್. ಹೀಗಾಗಿ ಎಜೆ ಮುಮದೆ ನಾಟಕ ಮಾಡಿ ಒಪ್ಪಿಸಿದ್ದಾರೆ.

ಅಂತರಾ ಸಂಕಷ್ಟ ಸರುಗಷ್ಟೇ ಗೊತ್ತು

ಈ ಪ್ಲಾನ್ ಬಗ್ಗೆ ಕೇಳಿದ ಸರಸ್ವತಿ ಹೊಟ್ಟೆ ಉರಿದುಕೊಂಡು ಸೀದಾ ಅಂತರಾ ಬಳಿ ಹೋಗಿದ್ದಾಳೆ. ಅಜ್ಜಿ ಮಾಡಿರುವ ಪ್ಲಾನ್ ಬಗ್ಗೆ ವಿವರವಾಗಿ ಹೇಳಿದ್ದಾಳೆ. ಇದೆಲ್ಲಾ ಬೇಕಂತಲೇ ಮಾಡಿದ್ದಾರೆ. ಲೀಲಾಗೆ ಏನೂ ಆಗಿಲ್ಲ ಎಂದು ಹೇಳಿದ್ದಾಳೆ. ಸದ್ಯ ಅಂತರಾಳ ಜೊತೆಗಿರುವುದು ಸರಸ್ವತಿ ಒಬ್ಬಳೇ. ಸರುಗೆ ತನ್ನ ಅತ್ತೆ ಅಂತರಾ ಈ ಮನೆಯಲ್ಲಿ ಉಳಿದುಕೊಂಡು ಲೀಲಾಗೆ ಗೇಟ್ ಪಾಸ್ ಕೊಡಬೇಕು. ಈಗ ಪ್ಲಾನ್ ಬಗ್ಗೆ ಕೇಳಿದ ಅಂತರಾ ಯಾವುದೇ ಕಾರಣಕ್ಕೂ ಎಜೆ ಅನ್ನು ಲೀಲಾ ಜೊತೆಗೆ ಕಳಿಸಬಾರದು ಎಂದು ಆಲೋಚಿಸುತ್ತಿದ್ದಾಳೆ.

More from Filmibeat

English summary
Hitler Kalyana Kannada serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X