Hitler Kalyana: ಲೀಲಾ ವ್ರತಕ್ಕೆ ಭಂಗ ತಂದ ಸೊಸೆಯಂದಿರು

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾಗೆ ಸದ್ಯ ಅಂತರಾ ಹಾಗೂ ಎಜೆಯನ್ನು ಒಂದು ಮಾಡುವುದೇ ದೊಡ್ಡ ಕೆಲಸವಾಗಿದೆ. ಸದಾ ಅವರಿಬ್ಬರು ಒಟ್ಟಿಗೆ ಇರಲಿ ಎಂದು ಪ್ರಯತ್ನಿಸುತ್ತಿರುತ್ತಾಳೆ. ಇದೆಲ್ಲದರ ನಡುವೆ ಕೌಸಲ್ಯಗೆ, ಲೀಲಾ ಆ ಮನೆಗೆ ಏನೂ ಆಗದಿದ್ದರೆ, ತನಗೆ ಸಿಗುವ ಗೌರವ ಹಾಗೂ ಹಣ ಎರಡೂ ಕೈ ತಪ್ಪಿ ಹೋಗುತ್ತದೆ ಎನ್ನುವ ಚಿಂತೆ ಕಾಡತೊಡಗಿದೆ.

ಲೀಲಾನೇ ಎಜೆ ಪತ್ನಿ ಎಂದು ಅಂತರಾಗೆ ಹೇಳಲು ಆಗಾಗ ಪ್ಲಾನ್ ಮಾಡುತ್ತಿರುತ್ತಾಳೆ. ಇನ್ನು ಅಜ್ಜಿಗೆ ಲೀಲಾ ತನ್ನ ಬಾಳನ್ನು ತಾನೇ ಹಾಳು ಮಾಡಿಕೊಳ್ಳುತ್ತಿದ್ದಾಳೆ ಎಂಬ ಬೇಸರವಿದೆ. ಆದರೆ ಅಜ್ಜಿಗೆ ಸೊಸೆಯೂ ಬೇಕು ಮಗನೂ ಬೇಕಾಗಿರುವ ಕಾರಣ ಗೊಂದಲದ ಸ್ಥಿತಿಯಲ್ಲಿದ್ದಾಳೆ.

Hitler Kalyana serial 13th May Episode Written Update

ಎಜೆಗೆ ಗಂಡಾಂತರವಿದ್ದು, ಆದಷ್ಟು ಬೇಗ ಮರು ಮಾಂಗಲ್ಯಧಾರಣೆ ಮಾಡಿಸಬೇಕು ಎಂದುಕೊಂಡಿದ್ದರು. ಆದರೆ, ಅಂತರಾ ಬಂದು ಅದೆಲ್ಲವೂ ಹಾಳಾಗಿ ಹೋಯ್ತು. ಆದರೆ, ಎಜೆಗಿರುವ ಗಂಡಾಂತರವನ್ನು ತಪ್ಪಿಸಲು ಈಗ ಎಜೆಯ ಪತ್ನಿ ವ್ರತವನ್ನು ಮಾಡಬೇಕಿದೆ. ಅಜ್ಜಿಯ ಮುಖಾಂತರ ವಿಚಾರವನ್ನು ತಿಳಿದ ಲೀಲಾ ತಾನೇ ವ್ರತ ಮಾಡುವುದಾಗಿ ಹೇಳಿದ್ದಾಳೆ. ಅದೂ ಕೂಡ ಅಂತರಾ ಅಕ್ಕನಿಗೆ ಹುಷಾರಿಲ್ಲಲ. ಅವರು ಉಪವಾಸ ಮಾಡುವುದೆಲ್ಲಾ ಬೇಡ. ಅದಕ್ಕಾಗಿ ನಾನೇ ಈ ವ್ರತವನ್ನು ಮಾಡುತ್ತೇನೆ ಎಂದು ಲೀಲಾ ಹೇಳಿರುತ್ತಾಳೆ.

ಪತಿಗಾಗಿ ವ್ರತ ಮಾಡಲು ಮುಂದಾದ ಲೀಲಾ

ಅಜ್ಜಿಗೆ ಲೀಲಾ ಇಲ್ಲ ಅಂತರಾ ಯಾರಾದರೂ ಸರಿ ವ್ರತ ಮಾಡಿ ತನ್ನ ಮಗನನ್ನು ಗಂಡಾಂತರದಿಂದ ಪಾರು ಮಾಡಿದರೆ ಸಾಕು. ಅಷ್ಟೇ ಅಲ್ಲದೇ, ಅಜ್ಜಿ ಲೀಲಾಳನ್ನೇ ಸೊಸೆ ಎಂದು ಒಪ್ಪಿಕೊಂಡಿದ್ದು, ಆದಷ್ಟು ಬೇಗ ಎಜೆ ಮತ್ತು ಲೀಲಾಳನ್ನು ಒಂದು ಮಾಡುವ ಆಸೆಯೂ ಇದೆ. ಈ ಬಗ್ಗೆ ಆಗಾಗ ಎಜೆ ಬಳಿ ಅಜ್ಜಿ ಮಾತನಾಡುತ್ತಿರುತ್ತಾಳೆ. ಇನ್ನು ವ್ರತ ಮಾಡಲು ಲೀಲಾ ಒಪ್ಪಿಕೊಂಡಿದ್ದು, ಹೇಗೆ ಆಚರಿಸಬೇಕು ಎಂದು ಕೇಳಿ ತಿಳಿದುಕೊಂಡಿದ್ದಾಳೆ. ಅಜ್ಜಿ ಲೀಲಾಳಿಗೆ ಎಲ್ಲವನ್ನೂ ವಿವರವಾಗಿ ಹೇಳಿದ್ದಾರೆ.

ಸರಸ್ವತಿ ಮತ್ತು ದುರ್ಗಾ ಇಬ್ಬರಿಗೂ ಲೀಲಾ ವ್ರತ ಮಾಡುವುದು ಬೇಕಿಲ್ಲ. ಹಾಗಾಗಿ ಅಜ್ಜಿ ಬಳಿ ವಾದ ಮಾಡುತ್ತಾರೆ. ಆದರೆ, ಲೀಲಾ ಯಾರು ಏನೇ ಮಾಡಿದರೂ ಸರಿ. ಈ ವ್ರತವನ್ನು ನಾನೇ ಮಾಡುತ್ತೀನಿ ಎಂದು ಮುಂದಾಗಿದ್ದಾಳೆ.

Hitler Kalyana serial 13th May Episode Written Update

ಒಂದಾಗುತ್ತಿರುವ ಅಂತರಾ ಎಜೆ

ಇತ್ತ ಎಜೆ ಮತ್ತು ಅಂತರಾ ಹಂತ ಹಂತವಾಗಿ ಒಂದಾಗುತ್ತಿದ್ದಾರೆ. ಅಂತರಾಳಿಗೆ ಯಾವ ಹಳೆಯ ನೆನಪುಗಳು ಇಲ್ಲದಿದ್ದರೂ ಕೂಡ ತಾನೇ ಅಂತರಾ ಎಂಬುದನ್ನು ನಂಬಲು ಪ್ರಾರಂಭಿಸಿದ್ದಾಳೆ. ಹೀಗಾಗಿ ಹೆಚ್ಚು ಸಮಯ ಎಜೆಯ ಜೊತೆಗೆ ಕಾಲ ಕಳೆಯುತ್ತಾಳೆ. ಸದಾ ಎಜೆ ಜೊತೆಗೆ ಏನಾದರೂ ಒಂದು ಮಾತುಗಳನ್ನು ಆಡುತ್ತಿರುತ್ತಾಳೆ. ಅಂತರಾ ಹೀಗೆ ನಡೆದುಕೊಳ್ಳುವುದಕ್ಕೆ ಎಜೆ ಖುಷಿಯಾಗಿದ್ದಾನೆ.

ಲೀಲಾ ವ್ರತ ಕೆಡಿಸಿದ ಸೊಸೆಯಂದಿರು

ಲೀಲಾ ವ್ರತ ಮಾಡುವ ಸಲುವಾಗಿ ದೇವಸ್ಥಾನಕ್ಕೆ ಬಂದಿರುತ್ತಾಳೆ. ಸೊಸೆಯಂದಿರಾದ ದುರ್ಗಾ ಮತ್ತು ಸರಸ್ವತಿ ಕೂಡ ಬಂದಿರುತ್ತಾರೆ. ಲೀಲಾ ವ್ರತ ಮಾಡುವಾಗ ಹೇಗಾದರೂ ಮಾಡಿ ಕೆಡಿಸಬೇಕು ಎಂದು ಪ್ಲಾನ್ ಮಾಡುತ್ತಿರುತ್ತಾರೆ. ಸರಸ್ವತಿಗೆ ಇದೆಲ್ಲಾ ಇಷ್ಟವಿರುವುದಿಲ್ಲ. ದುರ್ಗಾ ಸರಸ್ವತಿಗೆ ಅರಿಶಿನ ಹಚ್ಚಿದ ನೂಲನ್ನು ತೆಗೆದುಕೊಂದಡು ಬಚ್ಚಿಡು ಎಂದು ಹೇಳುತ್ತಾಳೆ. ಸರಸ್ವತಿ ನೂಲಿನ ಉಂಡೆಯನ್ನು ತೆಗೆದಿಟ್ಟುಕೊಳ್ಳುತ್ತಾಳೆ.

ವ್ರತ ಸಂಪೂರ್ಣವಾಗಲು ಲೀಲಾ ಆ ನೂಲನ್ನು ಅರಳಿ ಮರಕ್ಕೆ ಸುತ್ತಬೇಕು. ಆದರೆ, ಈಗ ನೂಲು ಕಾಣಿಸುತ್ತಿಲ್ಲ. ಇದರಿಂದ ಅಜ್ಜಿ, ಲೀಲಾ ಇಬ್ಬರೂ ಕಂಗಾಲಾಗಿದ್ದಾರೆ. ದುರ್ಗಾ ಮತ್ತು ಸರಸ್ವತಿ ಇವರ ಪರಿಸ್ಥಿತಿಯನ್ನು ನೋಡಿ ಖುಷಿ ಪಡುತ್ತಿರುತ್ತಾರೆ.

More from Filmibeat

Hitler Kalyana serial 13th May Episode Written Update. here is detials about Durga and Saraswathi plans to disturb leela vratha for AJ in temple. Know more.

English summary
Hitler Kalyana serial 13th May Episode Written Update. here is detials about Durga and Saraswathi plans to disturb leela vratha for AJ in temple. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X