Hitler Kalyana: ಲೀಲಾ ಹಾಗೂ ಎಜೆ ಹೊರಟಾಗ ಹೊಟ್ಟೆ ಉರಿದುಕೊಂಡ ಅಂತರಾ
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾ, ಎಜೆಗೆ ಹತ್ತಿರವಾಗಲು ಯತ್ನಿಸುತ್ತಿದ್ದಾಳೆ. ಲೀಲಾಳಿಗೆ ಮನೆಯವರ ಜೊತೆಗೆ ತನ್ನ ತಾಯಿ ಮನೆಯಿಂದಲೂ ಸಪೋರ್ಟ್ ಇದೆ. ಎಜೆ ಹಿಂದೆ ಹಿಂದೆಯೇ ಸುತ್ತಾಡಲು ಲೀಲಾ ಶುರು ಮಾಡಿದ್ದಾಳೆ. ಯಾಕೆ ಲೀಲಾ ಹೀಗಾಡುತ್ತಿದ್ದಾಳೆ? ಎಂಬುದು ಎಜೆಗೆ ಅರ್ಥವಾಗುತ್ತಿಲ್ಲ. ಅವಳಿಗೆ ಹುಷಾರಿಲ್ಲ ಎಂದುಕೊಂಡಿದ್ದಾನೆ.
ಒಂಥರಾ ಜ್ವರ, ಸುಸ್ತು ಎಂದು ಲೀಲಾ ಕೂಡ ಆಗಾಗ ಬೇಕಂತಲೇ ಪ್ರಜ್ಞೆ ತಪ್ಪುತ್ತಿರುತ್ತಾಳೆ. ಹೀಗಾಗಿ ಎಜೆ, ಲೀಲಾಳಿಗೆ ನಿಜವಾಗಿಯೂ ಆರೋಗ್ಯ ಸಮಸ್ಯೆ ಇದೆ ಎಂದು ಅಂದುಕೊಂಡಿದ್ದಾರೆ.
ಅಜ್ಜಿ ಬೇರೆ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೇಬೇಕು ಎಂದು ನಾಟಕ ಮಾಡಿದ್ದಾಳೆ. ಎಜೆ ಇದಕ್ಕೆ ಒಪ್ಪಿರುವುದು ಅಂತರಾಳಿಗೆ ಸ್ವಲ್ಪವೂ ಇಷ್ಟವಿಲ್ಲ. ಹಾಗಾಗಿ ಅಂತರಾ, ಲೀಲಾ ಮತ್ತು ಎಜೆ ಆಚೆ ಹೋಗದಿರಲಿ ಎಂದು ಬೇರೆಯೇ ಪ್ಲಾನ್ ಮಾಡಿದ್ದಾಳೆ.

ಅಂತರಾ ಪ್ಲಾನ್ ತಲೆಕೆಳಗಾಯ್ತು
ಬೆಳಗ್ಗೆ ಎದ್ದ ಕೂಡಲೇ ಬಂದು ಎಜೆ ಬಳಿ ಅಂತರಾ ಮಾತನಾಡಿದ್ದಾಳೆ. ರಾತ್ರಿ ನಾವಿಬ್ಬರೂ ಆಚೆ ಸುತ್ತಾಡಿದ ಹಾಗೆ ಕನಸು ಬಿದ್ದಿತ್ತು. ನಾವು ಹೊರಗಡೆ ಹೋಗೋಣವಾ ಎಂದು ಕೇಳುತ್ತಾಳೆ. ಎಜೆ ಖಂಡಿತವಾಗಿಯೂ ಹೋಗೋಣ ಅಂತರಾ, ನನಗೆ ನೀನು ಬಿಟ್ಟು ಬೇರೆ ಯಾವುದೂ ಮುಖ್ಯವಲ್ಲ ಎಂದು ಹೇಳುತ್ತಾನೆ. ಈ ಮಾತು ಕೇಳಿ ಅಂತರಾಳಿಗೆ ಖುಷಿಯಾಗುತ್ತದೆ. ಆದರೆ ಎಜೆ ನಾಳೆ ಹೋಗೋಣ ಎಂದಾಗ ಅಂತರಾ ಪ್ಲಾನ್ ಉಲ್ಟಾ ಆಗುತ್ತದೆ.
ಲೀಲಾ ಮಗು ಎಂದ ಎಜೆ
ನಾನು ತಾನೇ ಮುಖ್ಯ ಇಂದೇ ಹೋಗೋಣ ಎಂದು ಹಠ ಮಾಡುತ್ತಾಳೆ. ಆಗ ಎಜೆ ಇವತ್ತು ನನಗೆ ಪರ್ಸನಲ್ ಕೆಲಸವಿದೆ ಎಂದು ಹೇಳುತ್ತಾನೆ. ಅಂತರಾಳಿಗಿಂತಲೂ ಪರ್ಸನಲ್ ಅಂದರೆ ಏನು ಎಂದು ಕೇಳುತ್ತಾಳೆ. ಲೀಲಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಅವಳಿಗೆ ಹುಷಾರಿಲ್ಲ ಎಂದು ಹೇಳುತ್ತಾನೆ. ಲೀಲಾ ಮಗುವಿನಂತೆ ಅವಳ ಜೊತೆಗೆ ಯಾರಾದರು ಹೋಗಬೇಕು ಎಂದು ಹೇಳುತ್ತಾನೆ. ಆದರೆ, ಅಂತರಾ ಬೇಸರ ಮಾಡಿಕೊಳ್ಳುತ್ತಾಳೆ. ಎಜೆ ಕೂಡ ಬೇರೆ ದಾರಿ ಇಲ್ಲದೇ, ಏನೂ ಮಾತನಾಡುವುದಿಲ್ಲ.
ಹಳೇ ಸೀನ್ ಮರುಕಳಿಸಿದ ಲೀಲಾ
ಲೀಲಾ ಮನೆಯಿಂದ ಹೊರಗೆ ಹೋಗುವಾಗ ಖುಷಿಯಿಂದ ರೆಡಿಯಾಗಿ ಹೊರಟಿರುತ್ತಾಳೆ. ಈ ಹಿಂದೆ ಒಮ್ಮೆ ಎಜೆ ಅಂತರಾಳನ್ನು ಕರೆದುಕೊಂಡು ಹೋಗುವಾಗ ಲೀಲಾ ಕೂಡ ನಮ್ಮ ಜೊತೆಗೆ ಬರಲಿ ಎಂದು ಹೇಳಿದಾಗ ಎಜೆ ಬೇಡ ಎಂದಿದ್ದ ಇದರಿಂದ ಲೀಲಾ ಮನಸ್ಸಿಗೆ ಬೇಸರವಾಗಿತ್ತು. ಆಗ ಅಂತರಾ ಖುಷಿ ಪಟ್ಟಿದ್ದಳು. ಈಗ ಮತ್ತದೇ ಸೀನ್ ಮರುಕಳಿಸುತ್ತದೆ. ಲೀಲಾ ಬೇಕಂತಲೇ ಅಂತರಾ ಅಕ್ಕ ನೀವು ನಮ್ಮ ಜೊತೆಗೆ ಆಸ್ಪತ್ರೆಗೆ ಬನ್ನಿ ಎಂದು ಕರೆಯುತ್ತಾಳೆ. ಆಗ ಎಜೆ ಯಾರೂ ಬೇಡ ನಾನು ಲೀಲಾ ಇಬ್ಬರೇ ಹೋಗಿ ಬರುತ್ತೇವೆ ಎನ್ನುತ್ತಾನೆ. ಇದು ಅಂತರಾಳಿಗೆ ಹರ್ಟ್ ಆಗುತ್ತದೆ. ಆಗ ಲೀಲಾ ಮತ್ತು ಅಜ್ಜಿ ಇಬ್ಬರೂ ಮನದೊಳಗೇ ಖುಷಿ ಪಡುತ್ತಾರೆ.
ಬೇಸರ ಮಾಡಿಕೊಂಡ ಎಜೆ
ಇನ್ನು ದಾರಿಯಲ್ಲಿ ಆಸ್ಪತ್ರೆಗೆ ಹೋಗುವಾಗ ಲೀಲಾ, ಎಜೆ ತಲೆ ತಿನ್ನುತ್ತಿರುತ್ತಾಳೆ. ಆದರೆ ಎಜೆ ಮೌನವಾಗಿರುತ್ತಾನೆ. ಯಾಕೆ ಎಂದು ಕೇಳಿದ್ದಕ್ಕೆ ಎಜೆ, ಅಂತರಾಳಿಗೆ ಬೇಸರ ಮಾಡಿದೆ. ಅವಳು ಬರುತ್ತೀನಿ ಎಂದಾಗ ಬೇಡ ಎಂದೆ, ಅದಕ್ಕೆ ಮನಸ್ಸಿಗೆ ಸ್ವಲ್ಪ ಬೇಸರವಾಗಿದೆ ಎಂದು ಎಜೆ ಹೇಳುತ್ತಾನೆ. ಈ ಮಾತು ಕೇಳಿದ ಲೀಲಾಗೆ ಏನೂ ಅನ್ನಿಸುವುದಿಲ್ಲ. ಎಜೆ ಪಾಪ ಆದರೆ, ಅಂತರಾ ನಾಟಕ ಮಾಡುತ್ತಿರುವುದು, ಲೀಲಾಳಿಗೆ ಗೊತ್ತಿರುವುದರಿಂದ ಏನೂ ಅನಿಸದು.


Click it and Unblock the Notifications











