Hitler Kalyana: ದುರ್ಗಾಳಿಗಾಗಿ ಇಡೀ ದಿನ ಕಾಯುತ್ತಿರುವ ಲೀಲಾ: ಕೆಲಸ ಸಾಧಿಸಿಕೊಂಡ ಅಂತರಾ
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾ ವಾಪಸ್ ಬಂದಿರುವುದಕ್ಕೆ ಅಜ್ಜಿ ಬಹಳ ಯಂಗ್ ಆಗಿರುವಂತೆ ಆಕ್ಟೀವ್ ಆಗಿರುತ್ತಾರೆ. ನಿತ್ಯ ಯೋಗ ಮಾಡಿ ಸಣ್ಣಗಾಗಲು ಪ್ರಯತ್ನಿಸುತ್ತಿದ್ದಾರೆ.
ವೈದ್ಯರು ಕೂಡ ಅಜ್ಜಿ ಇಷ್ಟು ಬೇಗ ಹುಷಾರಾಗಿದ್ದು ನಿಜಕ್ಕೂ ಆಶ್ಚರ್ಯವೇ. ಹೀಗೇ ಆರೋಗ್ಯವಾಗಿರಿ ಎಂದು ಹೇಳುತ್ತಾರೆ. ಆಗ ಅಜ್ಜಿ ನನ್ನ ಸೊಸೆ ಲೀಲಾ ಇರುವವರೆಗೂ ನನಗೇನೂ ಆಗುವುದಿಲ್ಲ ಎಂದು ಹೇಳುತ್ತಾರೆ.
ಲಕ್ಷ್ಮೀಗೂ ಕೂಡ ಅಜ್ಜಿ ಚೇತರಿಸಿಕೊಂಡಿರುವುದು ಖುಷಿ ಕೊಟ್ಟಿದೆ. ಲೀಲಾ ಅತ್ತೆ ಈ ಮನೆಯಲ್ಲಿ ಇರುವವರೆಗೂ ಅಜ್ಜಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳುತ್ತಾಳೆ.

ದುರ್ಗಾಳಿಗಾಗಿ ಕಾಯುತ್ತಿರುವ ಲೀಲಾ
ಇನ್ನು ಲೀಲಾಳಿಗೆ ದುರ್ಗಾ ಹೇಳಿದ್ದೆಲ್ಲಾ ನಿಜ ಇರಬಹುದು ಎನಿಸಲು ಶುರುವಾಗಿದೆ. ಅಂತರಾಳಲ್ಲಿನ ಬದಲಾವಣೆಗಳನ್ನು ಗಮನಿಸುತ್ತಿದ್ದಾಳೆ. ಇದರೊಂದಿಗೆ ದುರ್ಗಾ ಬಳಿ ನಿಷ್ಠೂರವಾಗಿ ಮಾತನಾಡಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾಳೆ. ದುರ್ಗಾಳನ್ನು ಭೇಟಿ ಮಾಡಿ ಅವಳ ಬಳಿ ಕ್ಷಮೆ ಕೇಳಬೇಕು. ದುರ್ಗಾ ಜೊತೆಗೆ ಮುಕ್ತವಾಗಿ ಮಾತನಾಡಬೇಕು ಎಂದು ಬಯಸುತ್ತಿದ್ದಾಳೆ. ಆದರೆ ದುರ್ಗಾ ಮಾತ್ರ ಎಷ್ಟು ಹೊತ್ತಾದರೂ ಮನೆಗೆ ಬಂದೇ ಇಲ್ಲ. ಇದು ಒಂದು ಕಡೆ ಲೀಲಾಗೆ ಆತಂಕ ಸೃಷ್ಟಿಸಿದ್ದರೆ, ಮತ್ತೊಂದು ಕಡೆ ಬೇಕಂತಲೇ ತನ್ನಿಂದ ದೂರ ಉಳಿಯುತ್ತಿದ್ದಾಳೇನೋ ಎಂದು ಕಾಯುತ್ತಿದ್ದಾಳೆ.
ಯಾರ ಕೈಗೂ ಸಿಗದ ದುರ್ಗಾ
ಇನ್ನು ದುರ್ಗಾ ಬಿಸಿನೆಸ್ ಟ್ರಿಪ್ ಮೇಲೆ ಹೊರಗಡೆ ಹೋಗಿರುತ್ತಾಳೆ. ಈ ವಿಚಾರ ಎಜೆಗೆ ಗೊತ್ತಿರುತ್ತದೆ. ಆದರೆ, ದುರ್ಗಾ ಫೋನ್ ಆಫ್ ಆಗಿರುವುದು ಎಜೆಗೂ ಆತಂಕವನ್ನು ತಂದಿರುತ್ತದೆ. ಇನ್ನು ಲೀಲಾ, ದುರ್ಗಾಳಿಗೆ ವಾಯ್ಸ್ ಮೆಸೇಜ್ ಅನ್ನು ಕಳಿಸುತ್ತಾಳೆ. ಆದರೆ, ಆ ಕಡೆಯಿಂದ ಯಾವುದೇ ರೆಸ್ಪಾನ್ಸ್ ಇರುವುದಿಲ್ಲ. ಲೀಲಾ, ದುರ್ಗಾಳಿಗೆ ಕಾದು ಕಾದು ಬೇಸರ ಮಾಡಿಕೊಳ್ಳುತ್ತಾಳೆ. ಆದರೆ, ದುರ್ಗಾಳಿಗೆ ಹೊರಗಡೆ ಏನಾದರೂ ತೊಂದರೆ ಆಗಿದೆಯೋ ಏನೋ ಒಂದೂ ಗೊತ್ತಾಗುತ್ತಿಲ್ಲ.

ಎಜೆಯಿಂದ ಅಂತರ ಕಾಯ್ದುಕೊಂಡ ಲೀಲಾ
ಇನ್ನು ಎಜೆ ಸದಾ ಲೀಲಾಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿರುತ್ತಾನೆ. ಆದರೆ, ಲೀಲಾ, ಅಂತರಾ ಮತ್ತು ಎಜೆ ಒಂದಾಗಲಿ ಎಂದು ದೂರ ದೂರ ಹೋಗುತ್ತಿರುತ್ತಾಳೆ. ಈ ಕಾರಣಕ್ಕಾಗಿಯೇ ಲೀಲಾ ಮನೆ ಬಿಟ್ಟು ತನ್ನ ತವರು ಮನೆಗೆ ಹೋಗಿರುತ್ತಾಳೆ. ಆದರೆ, ಅಜ್ಜಿ ಅನಾರೋಗ್ಯದಿಂದಾಗಿ ವಾಪಸ್ ಬರುತ್ತಾಳೆ. ಎಜೆ, ಲೀಲಾಳನ್ನು ಏಕಾಂತದಲ್ಲಿ ಮಾತನಾಡಿಸಲು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಲೀಲಾ ಅವಕಾಶ ಮಾಡಿಕೊಡುವುದೇ ಇಲ್ಲ. ಯಾಕೆ ಎಂದೆಲ್ಲಾ ಮಾತನಾಡಿಸಿದರೂ ಲೀಲಾ ಸರಿಯಾಗಿ ಉತ್ತರ ಕೊಡದೇ ಹೋಗುತ್ತಾಳೆ. ಇದು ಎಜೆಗೂ ನೋವು ತರುತ್ತದೆ.
ಅಂತರಾ ಪ್ಲಾನ್ ಸಕ್ಸಸ್
ಲೀಲಾ ಎಜೆಯನ್ನು ದೂರ ಇಡುವುದನ್ನು ನೋಡಿದ ಅಂತರಾ ಅವಳು ಎಜೆಗೆ ಹತ್ತಿರವಾಗಲು ಪ್ರಯತ್ನಿಸುತ್ತಾಳೆ. ಹೀಗಾಗಿ ಸರಸ್ವತಿ ಬಳಿ ಎಜೆ ತನ್ನಿಂದ ದೂರ ಇದ್ದಾರೆ. ತನ್ನ ಸಂಸಾರ ಹಾಳಾಗುತ್ತಿದೆ ಎಂದು ಕಣ್ಣೀರು ಹಾಕುತ್ತಾಳೆ. ಅತ್ತೆಗೆ ನೋವಾಗುತ್ತಿದೆ ಎಂದು ಸರಸ್ವತಿ, ಎಜೆಗೆ ಹೋಗಿ ಅಂತರಾಳ ಕಷ್ಟವನ್ನು ಹೇಳುತ್ತಾಳೆ. ಆಗ ಎಜೆಗೂ ಅಂತರಾಳನ್ನು ದೂರವಿಟ್ಟಿದ್ದೇನೆ. ಅವಳಿಗೆ ನೋವು ಕೊಡುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಂಡು, ಅಂತರಾ ರೂಮಿಗೆ ಬರುತ್ತಾನೆ. ಅಂತರಾ ಬೇಕಂತಲೇ ಕೊರಗುತ್ತಿರುವವಳಂತೆ ಕೂತಿರುತ್ತಾಳೆ. ಆಗ ಎಜೆ ಯಾಕೀಗೆ ಇದ್ದೀಯಾ. ನನ್ನನ್ನು ಕ್ಷಮಿಸು ನಾನು ನಿನ್ನನ್ನು ತುಂಬಾ ನೆಗಲೆಕ್ಟ್ ಮಾಡಿದ್ದೀನಿ ಎಂದೆಲ್ಲಾ ಹೇಳುತ್ತಾನೆ. ಬಳಿಕ ಇಬ್ಬರೂ ಆಚೆ ಹೋಗೋಣವಾ ಎಂದು ಕೇಳುತ್ತಾನೆ. ಈ ಮಾತನ್ನು ಕೇಳಿದ ಅಂತರಾಳಿಗೆ ಶಾಕ್ ಆಗುತ್ತದೆ. ಜೊತೆಗೆ ಖುಷಿಯೂ ಪಡುತ್ತಾಳೆ.


Click it and Unblock the Notifications











