ಅಜ್ಜಿ ಕಣ್ಣಿಗೆ ಕಾಣಿಸಿಕೊಂಡ ಅಂತರಾ: ಲೀಲಾ-ಎಜೆ ಪ್ರೀತಿ ಕಥೆ ಏನಾಗುತ್ತೆ..?

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆಗೆ ಈಗ ಲೀಲಾ ಮೇಲೆ ಪ್ರೀತಿ ಶುರುವಾಗಿದೆ. ತನ್ನ ಪ್ರೀತಿಯನ್ನು ಲೀಲಾ ಬಳಿ ಹೇಳಿಕೊಳ್ಳಬೇಕು ಎಂದು ಎಜೆ ಒದ್ದಾಡುತ್ತಿದ್ದಾನೆ.

ವಿಶ್ವರೂಪ್ ಹಾಗೂ ಅಜ್ಜಿ ಇಬ್ಬರೂ ಮಗ, ಸೊಸೆ ಒಂದಾಗಲಿ ಎಂದು ಏನೇನೋ ಪ್ಲ್ಯಾನ್ ಮಾಡುತ್ತಿದ್ದಾರೆ. ದುರ್ಗಾಳ ಪಿತೂರಿಗೂ ಪ್ಲ್ಯಾನ್ ಮಾಡಿ ಕೆಡಿಸುತ್ತಿದ್ದಾರೆ.

ಲಕ್ಷ್ಮೀ ಕೂಡ ಈಗ ದುರ್ಗಾಳ ಗುಂಪಿನಿಂದ ಹೊರ ಬಂದು, ಲೀಲಾ ಜೊತೆಗೆ ಸೇರಿಕೊಂಡಿದ್ದಾಳೆ. ಒಳ್ಳೆಯದನ್ನು ಮಾಡುವವರ ಜೊತೆಗೆ ಇರಬೇಕು ಎಂದು ತೀರ್ಮಾನ ಮಾಡಿದ್ದಾಳೆ.

ಪ್ರಪೋಸ್ ಮಾಡಲು ಒದ್ದಾಟ

ಪ್ರಪೋಸ್ ಮಾಡಲು ಒದ್ದಾಟ

ಎಜೆ, ಲೀಲಾಳಿಗೆ ಪ್ರೊಪೋಸ್ ಮಾಡಲು ಮುಂದಾಗಿದ್ದಾನೆ. ಇದಕ್ಕಾಗಿ ಒದ್ದಾಡುತ್ತಿರುವ ಎಜೆಗೆ ವಿಶ್ವರೂಪ್ ಟಿಪ್ಸ್ ಕೊಟ್ಟಿದ್ದಾನೆ. ಇಬ್ಬರೇ ದೇವಸ್ಥಾನಕ್ಕೆ ಹೋಗಿ, ಸಿಕ್ಕ ಅವಕಾಶವನ್ನು ಬಳಸಿಕೊಂಡು ಲೀಲಾಗೆ ಪ್ರಪೋಸ್ ಮಾಡಿ ಎಂದು ಹೇಳಿಕೊಟ್ಟಿದ್ದಾನೆ. ಎಜೆ ಕೂಡ ಲೀಲಾ ಜೊತೆಗೆ ಹೋಗಿದ್ದು, ದಾರಿಯಲ್ಲಿ ಪ್ರೀತಿಯನ್ನು ಹೇಳಿಕೊಳ್ಳಲು ಪ್ರಯತ್ನಿಸಿದ್ದಾನೆ. ಲೀಲಾಗೆ ಇದೆಲ್ಲವೂ ಅರ್ಥವಾದರೂ ತನಗೇನು ಗೊತ್ತಿಲ್ಲ ಎಂಬಂತೆ ನಾಟಕ ಮಾಡುತ್ತಿದ್ದಾಳೆ. ಇಬ್ಬರೂ ಒಟ್ಟಿಗೆ ಸೇರಬಾರದು ಎಂದು ದುರ್ಗಾ ಪಟ್ಟ ಪ್ರಯತ್ನವೆಲ್ಲಾ ವಿಫಲವಾಗುತ್ತಿದೆ. ಎಜೆ, ಲೀಲಾಗೆ ಪ್ರಪೋಸ್ ಮಾಡುವುದೊಂದೇ ಬಾಕಿ ಇದೆ.

ಸತಾಯಿಸುತ್ತಿರುವ ಲೀಲಾ

ಸತಾಯಿಸುತ್ತಿರುವ ಲೀಲಾ

ವಿಶ್ವರೂಪ್, ಲೀಲಾಗೆ ಎಜೆ ಪ್ರಪೋಸ್ ಮಾಡಿದ ಕೂಡಲೇ ಒಪ್ಪಬಾರದು ಸ್ವಲ್ಪ ಸತಾಯಿಸಬೇಕು ಎಂದು ಹೇಳಿಕೊಟ್ಟಿದ್ದಾನೆ. ಇದಕ್ಕಾಗಿ ಲೀಲಾ ಕೂಡ ಎಜೆಯನ್ನು ಸತಾಯಿಸುತ್ತಿದ್ದಾಳೆ. ಇನ್ನು ಇವರಿಬ್ಬರ ಪ್ರೀತಿಗೆ ಅಜ್ಜಿ ಹಾಗೂ ವಿಶ್ವರೂಪ್ ಸೇತುವೆಯಾಗಿದ್ದಾರೆ. ಮಗ ಸೊಸೆಯನ್ನು ಒಂದು ಮಾಡಬೇಕು ಎಂದು ಅಜ್ಜಿ ವಿಶ್ವರೂಪ್ ಜೊತೆ ಸೇರಿ ಸಾಕಷ್ಟು ಪ್ಲ್ಯಾನ್‌ಗಳನ್ನು ಮಾಡಿದ್ದಾರೆ. ಈಗ ಇವರ ಪ್ಲ್ಯಾನ್‌ಗಳೆಲ್ಲಾ ವರ್ಕೌಟ್ ಆಗುತ್ತಿದ್ದು, ತಾವು ಅಂದುಕೊಂಡಂತೆಯೇ ನಡೆಯುತ್ತಿದೆ. ಎಜೆಯೂ ಲೀಲಾಳನ್ನು ಪ್ರಪೋಸ್ ಮಾಡಲು ಮುದ ಆಗಿದ್ದಾನೆ.

ಒಂದಾಗುವ ಸಮಯದಲ್ಲಿ ಅನಾಹುತ

ಒಂದಾಗುವ ಸಮಯದಲ್ಲಿ ಅನಾಹುತ

ಎಜೆ ಮತ್ತು ಲೀಲಾ ಇಬ್ಬರೂ ಒಂದಾಗುತ್ತಿರುವುದನ್ನು ದುರ್ಗಾ ಕೈಯಲ್ಲಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೇಗಾದರೂ ಮಾಡಿ ಇವರಿಬ್ಬರನ್ನು ಬೇರೆ ಮಾಡಬೇಕು ಎಂದು ದುರ್ಗಾ ಪ್ರಯತ್ನ ಪಡುತ್ತಲೇ ಇರುತ್ತಾಳೆ. ಆದರೆ ಅವಳ ಪ್ಲ್ಯಾನ್‌ಗಳೆಲ್ಲವೂ ಉಲ್ಟಾ ಆಗುತ್ತಿರುತ್ತದೆ. ಲಕ್ಷ್ಮೀ ಕೂಡ ದುರ್ಗಾ ಪ್ಲ್ಯಾನ್ ಹಾಳಾಗುವಂತೆ ಏನಾದರೂ ಒಂದು ಕೆಲಸ ಮಾಡುತ್ತಿರುತ್ತಾಳೆ. ಇನ್ನು ಎಜೆ ಮತ್ತು ಲೀಲಾಳ ಮುಂದಿನ ಬದುಕಿನ ಬಗ್ಗೆ ಸೂಚನೆ ಕೊಡಪ್ಪ ಎಂದು ಅಜ್ಜಿ ದೇವರನ್ನು ಕೇಳಿಕೊಳ್ಳುತ್ತಾಳೆ. ಆಗ ಅಜ್ಜಿ ಕೈಯಲ್ಲಿದ್ದ ಅರಿಶಿಣ-ಕುಂಕುಮ ಚೆಲ್ಲುತ್ತದೆ. ಇದರಿಂದ ಅಜ್ಜಿಗೆ ಭಯವಾಗುತ್ತದೆ. ಇದೇನಿದು ಅನಾಹುತ ಎಂದು ಅಂದುಕೊಳ್ಳುತ್ತಾಳೆ.

ಲೀಲಾ-ಎಜೆ ಮತ್ತೆ ದೂರಾಗುತ್ತಾರಾ..?

ಲೀಲಾ-ಎಜೆ ಮತ್ತೆ ದೂರಾಗುತ್ತಾರಾ..?

ಅಷ್ಟರಲ್ಲಿ ಅಜ್ಜಿ ಕಣ್ಣಿಗೆ ಅಂತರಾ ಕಾಣಿಸಿಕೊಳ್ಳುತ್ತಾಳೆ. ಅಂತರಾ ಬದುಕಿರುವುದು ಅಜ್ಜಿಗೆ ಗೊತ್ತಾಗುತ್ತದೆ. ಲೀಲಾ ಬಂದು ಎಜೆ ತನ್ನ ಬಗ್ಗೆ ಕಾಳಜಿ ತೋರಿಸುವುದನ್ನು ಹೇಳಿದರೂ ಅಜ್ಜಿಗೆ ಖುಷಿಯಾಗುವುದಿಲ್ಲ. ಅಂತರಾ ಬದುಕಿದ್ದಾಳೆ. ಅವಳು ಎಜೆ ಕಣ್ಣಿಗೆ ಬಿದ್ದರೆ, ಲೀಲಾ ಬದುಕು ಹಾಳಾಗುತ್ತದೆ. ಈಗೇನು ಮಾಡುವುದು ಎಂಬ ಯೋಚನೆಯಲ್ಲಿ ಅಜ್ಜಿ ಇದ್ದಾರೆ. ಅಂತರಾ ಬದುಕಿರುವುದು ಈಗ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.

More from Filmibeat

English summary
Hitler Kalyana serial 14th February Episode Written Update. AJ started loving leela. He is worried to propose leela.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X