Hitler Kalyana: ದುರ್ಗಾಳನ್ನು ಕಿಡ್ನ್ಯಾಪ್ ಮಾಡಿರುವ ವಿಲನ್ ಯಾರು ಗೊತ್ತಾ..?
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಒಂದು ಕಡೆ ಅಂತರಾ, ಅಜ್ಜಿ ಕಥೆಯನ್ನು ಮುಗಿಸಿ, ಲೀಲಾಳನ್ನು ಮನೆಯಿಂದ ಹೊರಗೆ ಅಟ್ಟಲು ಏನೇನೋ ಪ್ಲಾನ್ ಮಾಡುತ್ತಿದ್ದಾಳೆ.
ಇತ್ತ ಎಜೆ ಮನೆಯಲ್ಲಿ ಯಾರಿಗೂ ತಿಳಿಸದಂತೆ ಸೀಕ್ರೆಟ್ ಆಗಿ ದುರ್ಗಾಳನ್ನು ಹುಡುಕಿಸುತ್ತಿದ್ದಾನೆ. ಆದರೆ, ದುರ್ಗಾ ಎಲ್ಲಿದ್ದಾಳೆ? ಏನಾಗಿದ್ದಾಳೆ? ಎಂಬ ಸುಳಿವು ಕೂಡ ಸಿಗುತ್ತಿಲ್ಲ.
ಅಂತರಾ, ಅಜ್ಜಿ ಮೇಲೆ ಮಾಡುತ್ತಿರುವ ಪ್ಲಾನ್‌ಗಳು ಲೀಲಾಳಿಗೆ ಹೇಗೋ ಗೊತ್ತಾಗುತ್ತಿದೆ. ಹಾಗಾಗಿ ಪ್ರತೀ ಸಲ ಅಜ್ಜಿಗೆ ಸಮಸ್ಯೆ ಬಂದಾಗ ಲೀಲಾನೇ ಕಾಪಾಡುತ್ತಿದ್ದಾಳೆ.

ದುರ್ಗಾಳಿಗಾಗಿ ಹುಡುಕಾಡಿದ ಎಜೆ
ಪೊಲೀಸ್ ಹಾಗೂ ಎಜೆ ಇಬ್ಬರಿಗೂ ಈಗ ದುರ್ಗಾ ಇರುವ ಜಾಗದ ಸುಳಿವು ಸಿಕ್ಕಿದೆ. ಮನೆಯಲ್ಲಿ ಯಾರ ಬಳಿಯೂ ವಿಚಾರ ಹೇಳದೇ, ಎಜೆ ಪೊಲೀಸರ ಜೊತೆಗೆ ಹೊರಗಡೆ ಹೊರಟಿದ್ದಾನೆ. ಅದ್ಯಾವುದೋ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ದುರ್ಗಾ ಇರುವ ಸುಳಿವು ಸಿಕ್ಕಿದೆ. ಹೀಗಾಗಿ ಇಡೀ ಕಟ್ಟಡ ಹುಡುಕಾಡಿದ್ದಾರೆ. ಆದರೆ, ಎಜೆ ಬರುವ ಸುಳಿವು ಸಿಕ್ಕ ವಿಲನ್, ದುರ್ಗಾ ಇದ್ದ ಸ್ಥಳವನ್ನು ಬದಲಾಯಿಸಿದ್ದಾನೆ. ಅಲ್ಲದೇ, ಅಲ್ಲೊಬ್ಬ ವ್ಯಕ್ತಿಗೆ ಹಣ ಕೊಟ್ಟು, ಎಜೆ ಎಂಬಾತ ಬಂದಾಗ ಅವನಿಗೆ ಚೀಟಿ ಕೊಡು ಎಂದು ಹೇಳಿದ್ದಾನೆ. ಚೀಟಿಯಲ್ಲಿ ಎಜೆ, ಬೆಟರ್ ಲಕ್ ನೆಕ್ಸ್ಟ್ ಟೈಂ ಎಂದು ಬರೆದಿದೆ. ಅಲ್ಲೊಂದು ಫೋನ್ ಇದ್ದು, ಅದು ರಿಂಗ್ ಆಗಿದೆ. ಎಜೆ ರಿಸೀವ್ ಮಾಡಿದಾಗ ವಿಲನ್ ಮಾತನಾಡಿದ್ದಾನೆ. ನೀನು ನನ್ನನ್ನು ಹಿಡಿಯಲು ಆಗುವುದಿಲ್ಲ ಎಂದು ಹೇಳಿದ್ದು, ಎಜೆ ನಾನೊಬ್ಬನೇ ಸಾಕು ದುರ್ಗಾಳನ್ನು ಕಾಪಾಡಿಕೊಳ್ಳುತ್ತೇನೆ ಎಂದು ಚಾಲೆಂಜ್ ಮಾಡಿದ್ದಾನೆ.
ಅಜ್ಜಿಯನ್ನು ಕೊಲ್ಲಲು ಮುಂದಾದ ಅಂತರಾ
ಇನ್ನು ಅಂತರಾ, ಲೀಲಾ ಮಲಗಿದಾಗ ಅವಳ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ಅಜ್ಜಿಗೆ ಮೆಸೇಜ್ ಮಾಡಿದ್ದಾಳೆ. ಯಾರಿಗೂ ಹೇಳದಂತೆ ಸ್ವಿಮ್ಮಿಂಗ್ ಪೂಲ್ ಬಳಿ ಬನ್ನಿ, ನಾನು ಎಜೆ ಬಗ್ಗೆ ನಿಮ್ಮ ಬಳಿ ಮಾತನಾಡಬೇಕು. ಯಾರಿಗೂ ಹೇಳದೇ, ಒಬ್ಬರೇ ಬನ್ನಿ ಎಂದು ಮೆಸೇಜ್ ಮಾಡಿದ್ದಾಳೆ. ಅಜ್ಜಿ, ಲೀಲಾನೇ ಕರೆದಿರಬೇಕು ಎಂದು ತಿಳಿದು ಬರುತ್ತಾರೆ. ಆದರೆ ಅಂತರಾ ಕರೆಂಟ್ ಶಾಕ್ ಒಡೆಯುವಂತೆ ಮಾಡಿದ್ದು, ಅಷ್ಟರಲ್ಲಿ ಲೀಲಾ ಬಂದು ಅಜ್ಜಿಯನ್ನು ಕಾಪಾಡಿದ್ದಾಳೆ.

ಅಜ್ಜಿಗೆ ಎಚ್ಚರಿಕೆ ನೀಡಿದ ಲೀಲಾ
ಅಜ್ಜಿಯನ್ನು ರೂಮಿಗೆ ಕರೆದುಕೊಂಡು ಹೋಗಿ, ನಿಮಗೆ ಯಾರು ಏನೇ ಹೇಳಿದರೂ, ಒಬ್ಬರೇ ಎಲ್ಲೂ ಹೋಗಬೇಡಿ. ನನಗೆ ತಿಳಿಯದೇ, ನನ್ನ ಜೊತೆ ಅಲ್ಲದೇ ನೀವು ಎಲ್ಲೂ ಹೋಗಬಾರದು ಎನ್ನುತ್ತಾಳೆ. ಆದರೆ ಅಜ್ಜಿ ಕೇಳುವುದಿಲ್ಲ. ಯಾಕೆ ಹೇಳು ಎಂದು ಕಾರಣ ಕೇಳುತ್ತಾಳೆ. ಆಗ ಲೀಲಾ, ಅಜ್ಜಿ ನಿಮಗೆ ಜೀವ ಭಯವಿದೆ. ಯಾರಿಂದ, ಯಾಕೆ ಅನ್ನೋದೆಲ್ಲಾ ಬೇಕಿಲ್ಲ ಎಂದು ಹೇಳುತ್ತಾಳೆ. ಅಜ್ಜಿಗೆ ಗಾಬರಿಯಾಗುತ್ತದೆ.
ಎಜೆ ಮಗ ಕಿಶೋರ್ ವಿಲನ್..?
ಹೊಸ ಎಪಿಸೋಡ್‌ನಲ್ಲಿ ವಿಲನ್ ಅನ್ನು ಬ್ಲರ್ ಆಗಿ ತೋರಿಸಲಾಗಿದೆ. ನೋಡಲು ಆತ ಎಜೆಯ ಹಿರಿಯ ಮಗ ಕಿಶೋರ್‌ನಂತೆಯೇ ಕಾಣುತ್ತಿದ್ದಾನೆ. ಎಜೆ ಮಗನೇ ಆಸ್ತಿ ಮೇಲಿನ ಆಸೆಗಾಗಿ ಹೀಗೆ ಮಾಡುತ್ತಿರಬಹುದಾ ಎಂಬ ಅನುಮಾನವೂ ಮೂಡಿದೆ. ದುರ್ಗಾಳನ್ನು ಅವನೇ ಬಚ್ಚಿಟ್ಟಿದ್ದು, ನಕಲಿ ಅಂತರಾಳನ್ನು ಕೂಡ ಕಿಶೋರ್ ಕಳಿಸಿರಬೇಕು ಎಂದು ವೀಕ್ಷಕರು ಊಹಿಸುತ್ತಿದ್ದಾರೆ. ಇಷ್ಟರಲ್ಲೇ ವಿಲನ್ ಯಾರು ಎಂದು ತಿಳಿದು ಬರಲಿದೆ. ಆದರೆ, ನಿಜವಾದ ವಿಲನ್ ಕಿಶೋರ್ ಆಗಿದ್ದರೆ? ಸ್ವಂತ ತಂದೆಗೆ ಯಾಕೆ ಹೀಗೆ ಮೋಸ ಮಾಡುತ್ತಿದ್ದಾನೆ ಎಂಬುದನ್ನು ತಿಳಿಯಬೇಕಿದೆ.


Click it and Unblock the Notifications











