Hitler Kalyana: ಎಜೆ ಕೈಯಲ್ಲಿ ಸಿಕ್ಕಿ ಬೀಳುತ್ತಾಳಾ ಅಂತರಾ? ಇಬ್ಬರೂ ಹೋಗಿದ್ದು ಎಲ್ಲಿಗೆ?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾಳನ್ನು ಬಹಳ ದೂರ ಇಟ್ಟಿದ್ದೇನೆ. ಅವಳು ನನ್ನ ಜೀವ. ಅವಳಿಗೆ ನಾನು ಯಾವುದೇ ನೋವು ಕೊಡಬಾರದು ಎಂದು ಅರ್ಥ ಮಾಡಿಕೊಂಡ ಎಜೆ, ಅಂತರಾಳನ್ನು ಹೊರಗೆ ಹೋಗೋಣ ಎಂದು ಕರೆಯುತ್ತಾನೆ.

ಇತ್ತ ಅಂತರಾ ಮತ್ತು ಎಜೆ ಹೊರಗೆ ಹೋಗುತ್ತಿರುವುದನ್ನು ತಿಳಿದ ಅಜ್ಜಿಗೆ, ಇಲ್ಲೇನೋ ನಡೆಯುತ್ತಿದೆ ಎಂದು ಗೆಸ್ ಮಾಡುತ್ತಾರೆ. ನನ್ನ ಮಗ ನನಗೆ ಹೇಳದೇ ಹೊರಗೆ ಹೋಗುವುದಿಲ್ಲ. ಆದರೆ, ಈಗ ನನಗೂ ಹೇಳದೇ ಅಂತರಾಳನ್ನು ಅಭಿ ಹೊರಗೆ ಕರೆದುಕೊಂಡು ಹೋಗಿದ್ದಾನೆ ಎಂದರೆ, ಇದರಲ್ಲೇನೋ ಅರ್ಥವಿದೆ ಎಂದು ಅಜ್ಜಿ ಆಲೋಚಿಸುತ್ತಾರೆ.

Hitler Kalyana serial 14th September episode written update

ಅಂತರಾಳಿಗೆ ಅಭಿ ಹೊರಗೆ ಹೋಗೋಣ ಎಂದು ಕರೆದಿದ್ದು ಖುಷಿ ಆಗುತ್ತದೆ. ಆದರೂ ಕೂಡ ನಾಟಕ ಮಾಡಲು, ಮನೆಯವರನ್ನೆಲ್ಲಾ ರೆಡಿ ಆಗೋದಕ್ಕೆ ಹೇಳುತ್ತೀನಿ ಎನ್ನುತ್ತಾಳೆ. ಆಗ ಎಜೆ ಒತ್ತಿ ಒತ್ತಿ ನಾನು ಮತ್ತು ನೀನು ಇಬ್ಬರೇ ಹೊರಗಡೆ ಹೋಗೋಣ. ಇದು ನಮ್ಮಿಬ್ಬರ ಏಕಾಂತದ ಸಮಯ ಎಂದು ಬಿಡಿಸಿ ಹೇಳುತ್ತಾನೆ.

ಅಂತರಾ ಜೊತೆಗೆ ಹೊರಟ ಎಜೆ

ಅಂತರಾ ಮಾತ್ರ ಲೀಲಾಳನ್ನು ಕರೆದುಕೊಂಡು ಹೋಗೋಣ ಎಂದು ಹೇಳುತ್ತಾಳೆ. ಆದರೆ, ಎಜೆ ಬೇಡ ಎನ್ನುತ್ತಾನೆ. ಲೀಲಾಳನ್ನು ಒಟ್ಟಿಗೆ ಹೊರಗೆ ಹೋಗೋಣ ಎಂದು ಕರೆಯುತ್ತಾಳೆ. ಆಗ ಅಭಿ ಅಂತರಾ ಮಾತುಗಳೀಗೆ ಬೇಸರ ಮಾಡಿಕೊಂಡು ಕಿರುಚಾಡುತ್ತಾನೆ. ನಾವಿಬ್ಬರೇ ಹೋಗೋಣ, ಯಾರೂ ಬೇಡ ಎಂದು ಹೇಳುತ್ತಾನೆ.

ಲೀಲಾಗೆ ಕಾಡುತ್ತಿರುವ ಮಾತುಗಳು

ಎಜೆ ಮತ್ತು ಅಂತರಾ ಒಂದಾಗುತ್ತಿರುವುದಕ್ಕೆ ಲೀಲಾ ಖುಷಿ ಏನೋ ಪಡುತ್ತಾಳೆ. ಆದರೆ, ತನಗೆ ಅಲ್ಲಿ ಜಾಗವಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಇದೇ ವೇಳೆಗೆ ಅಜ್ಜಿಯೂ ಬಂದು ಲೀಲಾಗೆ ಬುದ್ಧಿ ಹೇಳುತ್ತಾರೆ. ಎಲ್ಲಾ ತ್ಯಾಗ ಮಾಡಬೇಡ. ಅಂತರಾಳನ್ನು ನೋಡಿದರೆ, ಅವಳು ನಮ್ಮ ಮನೆಯವಳು ಎಂದು ಅನಿಸುವುದೇ ಇಲ್ಲ. ಅಂತರಾಳನ್ನ ಸೊಸೆ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ ಎಂದು ಹೇಳುತ್ತಾರೆ.

Hitler Kalyana serial 14th September episode written update

ಅಂತರಾಗೆ ಅನುಮಾನ

ಅಜ್ಜಿಯ ಮಾತುಗಳನ್ನು ಕೇಳಿದ ಲೀಲಾಳಿಗೆ, ಈ ಹಿಂದೆ ದುರ್ಗಾ ಹೇಳಿದ್ದು ಕೂಡ ನೆನಪಾಗುತ್ತದೆ. ಅವರು ಅಂತರಾ ಅಲ್ಲ. ಈ ಮನೆಗೆ ಅವರಿಂದ ಮೋಸ ಆಗುತ್ತಿದೆ ಎಂದು ದುರ್ಗಾ ಹೇಳಿರುತ್ತಾಳೆ. ಅಲ್ಲದೇ, ಅಂತರಾ ಕೂಡ ದುರ್ಗಾ ಬಳಿ ಜೋರಾಗಿ ಮಾತನಾಡಿರುವುದನ್ನು ಕೇಳಿಸಿಕೊಂಡಿರುತ್ತಾಳೆ. ಇದೆಲ್ಲವೂ ಅಂತರಾಳಿಗೆ ಅನುಮಾನವನ್ನು ಮೂಡಿಸುತ್ತದೆ.

ನಾಟಕ ಮಾಡಿದ ಅಂತರಾ

ಇನ್ನು ಅಂತರಾ ಮತ್ತು ಎಜೆ ಇಬ್ಬರೇ ಕಾರಿನಲ್ಲಿ ಹೋಗುತ್ತಿರುತ್ತಾರೆ. ಅಂತರಾ ನಾವೀಗ ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಕೇಳುತ್ತಾಳೆ. ಆಗ ಎಜೆ ಸರ್ಪ್ರೈಸ್ ಹಾಗೆಲ್ಲಾ ಕೇಳಬೇಡ. ನಾವೀಗ ಹೋಗುತ್ತಿರುವ ಜಾಗ ನಿನಗೆ ತುಂಬಾನೇ ಇಷ್ಟವಾಗುತ್ತೆ. ಇದು ನಮ್ಮಿಬ್ಬರಿಗೂ ಬಹಳ ಫೆವರಿಟ್ ಜಾಗ ಎಂದು ಹೇಳುತ್ತಾನೆ. ಆದರೆ, ಅಂತರಾಳಿಗೆ ಆ ಜಾಗ ಗೊತ್ತಾಗುವುದಿಲ್ಲ. ಹೇಗಾದರೂ ಸಂದರ್ಭವನ್ನು ಮ್ಯಾನೇಜ್ ಮಾಡಬೇಕು ಎಂದು ನಾಟಕ ಮಾಡುತ್ತಾಳೆ. ನನಗೆ ಗೊತ್ತಾಯ್ತು ಯಾವುದು ಆ ಜಾಗ ಎಂದು ಆದರೆ ನಾನು ಹೇಳೋದಿಲ್ಲ. ನೀವು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದರೆ, ನಮ್ಮಿಬ್ಬರ ಪ್ರೀತಿ ಸ್ಟ್ರಾಂಗ್ ಎಂದು ಪ್ರೂವ್ ಆಗುತ್ತೆ ಎಂದು ಹೇಳಿ ಮ್ಯಾನೇಜ್ ಮಾಡುತ್ತಾಳೆ.

ಅಂತರಾ ಬಂಡವಾಳ ಎಜೆಗೆ ಗೊತ್ತಾಗುತ್ತಾ..?

ಎಜೆಗೆ ಅಂತರಾ ಬಗ್ಗೆ ಸಣ್ಣ ಅನುಮಾನ ಮೂಡಿರುವಂತೆ ಕಾಣುತ್ತಿದೆ. ಅದಕ್ಕಾಗಿಯೇ ಅವನು ಅಂತರಾಳನ್ನು ಸರ್ಪ್ರೈಸ್ ಆಗಿ ಹೊರಗೆ ಕರೆದುಕೊಂಡು ಹೋಗುತ್ತಿದ್ದಾನೋ ಏನೋ ಗೊತ್ತಿಲ್ಲ. ಇನ್ನು ಪ್ರೋಮೋದಲ್ಲಿ ಮೂಡಿ ಬಂದಂತೆ, ಅಂತರಾ ಇವಳು ಎಂಬುದನ್ನು ಎಜೆಯೇ ತಿಳಿದುಕೊಳ್ಳುತ್ತಾನಾ ಎಂಬ ಕುತೂಹಲವೂ ಮೂಡಿದೆ.

More from Filmibeat

English summary
Hitler Kalyana Kannada serial today Episode:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X