Hitler Kalyana: ಎಜೆ ಪ್ರಶ್ನೆಗಳಿಗೆ ತಬ್ಬಿಬ್ಬಾದ ಅಂತರಾ, ಪ್ರಾರ್ಥನಾಳ ಆಟ ಬಯಲಾಯ್ತಾ?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಮನೆಯಲ್ಲಿ ಎಲ್ಲರಿಗೂ ಅಂತರಾ ನಡವಳಿಕೆ ಬೇಸರವನ್ನು ತರುತ್ತಿದೆ. ರೂಪಾ ಕೂಡ ಅಂತರಾಳನ್ನು ಬಿಟ್ಟು ಲೀಲಾಳಿಗೆ ಹೆಚ್ಚು ಸಪೋರ್ಟ್ ಮಾಡುತ್ತಾಳೆ. ದುರ್ಗಾ ಪ್ರಾರ್ಥನಾಳನ್ನು ಅಂತರಾ ಎಂದು ಮನೆಗೆ ಕರೆದುಕೊಂಡು ಬಂದಿದ್ದರಿಂದ ಅವಳೊಬ್ಬಳಿಗೆ ಮಾತ್ರವೇ ಸತ್ಯ ಗೊತ್ತಿದೆ.

ಆದರೆ, ಈಗ ದುರ್ಗಾಳಿಗೆ ಅಂತರಾ ತಿರುಗುಬಾಣವಾಗಿ ಪರಿಣಮಿಸಿದ್ದಾಳೆ. ಅಂತರಾ ಹೆಸರೇಳಿಕೊಂಡು ಬಂದಿರುವ ಪ್ರಾರ್ಥನಾ ಹಿಂದೆ ಕಾಣದ ಕೈ ಇದ್ದು, ಈಗ ಕಥೆಯಲ್ಲಿ ಟ್ವಿಸ್ಟಿಂಗ್ ಇದೆ. ಎಲ್ಲರಿಗೂ ಆ ವ್ಯಕ್ತಿ ಯಾರು ಎಂಬ ಕುತೂಹಲ ಮೂಡಿದೆ.

Hitler Kalyana serial 15 September episode written update

ಅಜ್ಜಿ ಮಾತು ಕೇಳಿ ಚಿಂತೆಗೊಳಗಾದ ಲೀಲಾ

ಲೀಲಾಳಿಗೆ ದುರ್ಗಾ ನೇರವಾಗಿ ಬಂದು ಅಂತರಾ ನಿಜವಲ್ಲ. ಅವಳು ನಾಟಕ ಮಾಡುತ್ತಿದ್ದಾಳೆ. ಅವಳ ಬಣ್ಣವನ್ನು ಬಯಲು ಮಾಡಬೇಕು. ಇಲ್ಲದೇ ಹೋದರೆ, ಈ ಮನೆಗೆ ತೊಂದರೆ ಆಗುವುದಂತೂ ಗ್ಯಾರೆಂಟಿ ಎಂದು ಲೀಲಾಳಿಗೆ ಹೇಳಿರುತ್ತಾಳೆ. ಆದರೆ, ಲೀಲಾಳಿಗೆ ದುರ್ಗಾ ಮಾತಿನ ಮೇಲೆ ಕೊಂಚವೂ ನಂಬಿಕೆಯೇ ಇರುವುದಿಲ್ಲ. ದುರ್ಗಾ ಮಾತುಗಳನ್ನು ಕೇಳಿದಾಗಿನಿಂದಲೂ ಪ್ರತಿಯೊಂದು ವಿಚಾರವನ್ನೂ ಗಮನಿಸುತ್ತಿರುವ ಲೀಲಾಳಿಗೆ ಈಗೀಗ ದುರ್ಗಾ ಹೇಳಿದ್ದು ನಿಜ ಇರಬಹುದು ಎಂದು ಯೋಚಿಸುತ್ತಿದ್ದಾಳೆ. ಯಾಕೆಂದರೆ, ಅಜ್ಜಿ ಕೂಡ ಅಂತರಾ ಬಗ್ಗೆ ಯಾಕೋ ಮನಸ್ಸು ಯಾವುದನ್ನೂ ಒಪ್ಪುತ್ತಿಲ್ಲ. ಅವಳು ನಡೆದುಕೊಳ್ಳುತ್ತಿರುವುದು ಯಾವುದೂ ಸೊಸೆ ಅಂತ ಅನಿಸುವುದೇ ಇಲ್ಲ ಎಂದು ಹೇಳಿರುತ್ತಾರೆ. ಈ ಎಲ್ಲಾ ಮಾತುಗಳು ಲೀಲಾಳನ್ನು ಗೊಂದ್ಲ್ಕ್ಪ್ಕೆ ನೂಕಿದೆ.

ದುರ್ಗಾ ವಾಪಸ್ ಬರೋದಿಲ್ಲ ಎಂದ ಲಕ್ಷ್ಮೀ!

ದುರ್ಗಾಳಿಗೆ ಲೀಲಾ ಫೋನ್ ಮಾಡುತ್ತಾಳೆ. ಸ್ವಿಚ್ಛ್ ಆಫ್ ಬಂದಿದ್ದಕ್ಕೆ ಗಾಬರಿಯಾಗುತ್ತದೆ. ಆಗ ಲಕ್ಷ್ಮೀ ಬಳಿ ದುರ್ಗಾ ಎಲ್ಲಿಗೆ ಹೋಗಿದ್ದಾಳೆ. ಯಾವಾಗ ಬರಬಹುದು ಎಂದೆಲ್ಲಾ ವಿಚಾರಿಸುತ್ತಾಳೆ. ಆದರೆ, ಲಕ್ಷ್ಮೀ ದುರ್ಗಾ ವಾಪಸ್ ಬರುತ್ತಾರೆ ಅನ್ನೋ ನಂಬಿಕೇನೇ ಇಲ್ಲ. ಅವರು ಮನೆಗೆ ಮತ್ತೆ ಬರೋದಿಲ್ಲ ಅನಿಸುತ್ತೆ ಎಂದು ಹೇಳುತ್ತಾಳೆ. ಇದು ಲೀಲಾಳನ್ನು ಮತ್ತಷ್ಟು ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ. ಆದರೆ, ದುರ್ಗಾ ಎಲ್ಲಿಗೆ ಹೋಗಿದ್ದಾಳೆ ಎನ್ನುವುದು ಮಾತ್ರ ತಿಳಿದಿಲ್ಲ.

ಅಂತರಾ ಕನಸಿನ ಮನೆಗೆ ಬಂದ ಎಜೆ

ಇತ್ತ ಎಜೆ ಅಂತರಾಳನ್ನು ಅವರಿಬ್ಬರು ಕನಸು ಕಂಡು ನಿರ್ಮಾಣ ಮಾಡುತ್ತಿದ್ದ ಮನೆಯ ಬಳಿ ಕರೆದುಕೊಂಡು ಹೋಗುತ್ತಾನೆ. ಅಂತರಾ ಆಗ ಸುಳ್ಳು ಹೇಳುತ್ತಾಳೆ. ನಾನೂ ಕೂಡ ಇಲ್ಲಿಗೆ ಕರೆದುಕೊಂಡು ಬರುತ್ತೀರಾ ಎಂದುಕೊಂಡಿದ್ದೆ ಎನ್ನುತ್ತಾಳೆ. ಆದರೆ, ಅಂತರಾಳಿಗೆ ಈ ಮನೆಯ ಬಗ್ಗೆ ಏನೂ ಗೊತ್ತಿರುವುದಿಲ್ಲ. ಆದರೆ, ತನಗೆ ಹಿಂದಿನದೆಲ್ಲಾ ನೆನಪಿಗೆ ಬಂದಿದೆ ಎಂದು ಸುಳ್ಳು ಹೇಳಿರುತ್ತಾಳೆ. ಇದು ಈಗ ಅಂತರಾಳನ್ನು ಪೀಕಲಾಟಕ್ಕೆ ಸಿಲುಕುವಂತೆ ಮಾಡಿದೆ.

Hitler Kalyana serial 15 September episode written update

ಎಜೆ ಬಳಿ ಸಿಕ್ಕಿ ಬಿದ್ದ ಡ್ಯೂಪ್ಲಿಕೇಟ್ ಅಂತರಾ!?

ಎಜೆ ಆ ಮನೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾನೆ. ಈ ಮನೆ ಯಾರ ಕನಸು..? ತುಳಸಿ ಕಟ್ಟೆ ಎಲ್ಲಿ ಬರಬೇಕು ಎಂದೆಲ್ಲಾ ಪ್ರಶ್ನಿಸುತ್ತಾನೆ. ಆಗ ಅಂತರಾ ಸುಳ್ಳು ಹೇಳುತ್ತಾಳೆ. ಇದೆಲ್ಲವೂ ಎಜೆಗೆ ಅನುಮಾನ ತರಿಸುತ್ತದೆ. ಯಾಕೆ ಅಂತರಾ ನಿನಗೆ ಇದೆಲ್ಲಾ ನೆನಪಿಲ್ವಾ..? ಯಾಕೆ ಏನೇನೋ ಮಾತನಾಡುತ್ತಿದ್ದೀಯಾ ಎಂದು ಕೇಳುತ್ತಾನೆ. ಆಗ ಅಂತರಾಳಿಗೆ ಭಯವಾಗುತ್ತದೆ. ತಾನು ಸುಳ್ಳು ಹೇಳುತ್ತಿರುವುದು ಎಜೆಗೆ ಗೊತ್ತಾದರೆ ಕಷ್ಟವಾಗುತ್ತದೆ ಎಂದು ತಿಳಿದು ಸೈಡಿಗೆ ಹೋಗಿ ಇವಳ ಹಿಂದೆ ಇರುವ ವ್ಯಕ್ತಿಗೆ ಫೋನ್ ಮಾಡಿ ಮಾತನಾಡುತ್ತಾಳೆ. ಇದೇ ವೇಳೆಗೆ ಎಜೆ ಕೂಡ ಬರುತ್ತಾನೆ. ಎಜೆ ಎದುರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಾಳಾ ಎಂದು ಕಾದು ನೋಡಬೇಕಿದೆ.

More from Filmibeat

English summary
Hitler Kalyana serial 15 September episode written update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X