Hitler Kalyana: ಕೌಸಲ್ಯ ಕೈಯಲ್ಲಿ ಹೊಸ ಅಸ್ತ್ರ: ಲೀಲಾ ಸೊಸೆಯಂದಿರಿಗೆ ಆತಂಕ
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆಗೆ ಬಂದಿರುವ ಗಂಡಾಂತರವನ್ನು ತಪ್ಪಿಸಲು ಲೀಲಾ ವ್ರತ ಮಾಡುತ್ತಿದ್ದಾಳೆ. ಆದರೆ ಇದನ್ನು ತಡೆಯಲು ಸೊಸೆಯಂದಿರು ಹರಸಾಹಸ ಪಡುತ್ತಿದ್ದಾರೆ. ಲೀಲಾ ಹಾಗೂ ಅಜ್ಜಿ ಇಬ್ಬರೂ ವ್ರತ ಮಾಡುವ ವಿಚಾರವನ್ನು ಎಜೆಗೆ ತಿಳಿಸಿರುವುದಿಲ್ಲ. ಇವರೆಲ್ಲಾ ದೇವಸ್ಥಾನಕ್ಕೆ ತೆರಳಿದ್ದಾರೆ ಎಂದು ಎಜೆ ತಿಳಿದುಕೊಂಡಿರುತ್ತಾರೆ. ದುರ್ಗಾ, ಸರಸ್ವತಿ ಕೂಡ ಲೀಲಾ ಜೊತೆಗೆ ದೇವಸ್ಥಾನಕ್ಕೆ ಬಂದಿದ್ದಾರೆ.
ಇತ್ತ ಲೀಲಾ ದೇವರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಅರಿಶಿನ ಹಚ್ಚಿದ ನೂಲನ್ನು ಬೇಕಂತಲೇ ಸರಸ್ವತಿ ತೆಗೆದು ಮುಚ್ಚಿಟ್ಟುಕೊಂಡಿದ್ದಾಳೆ. ಲೀಲಾ ಅರಿಶಿನದ ನೂಲು ಇಲ್ಲದೇ ಒದ್ದಾಡುತ್ತಿರುವುದನ್ನು ನೋಡಿ ದುರ್ಗಾ ಹಾಗೂ ಸರಸ್ವತಿ ಖುಷಿ ಪಟ್ಟಿದ್ದಾರೆ. ಅಜ್ಜಿ ವ್ರತ ಸಂಪೂರ್ಣ ಆಗದೇ ಹೋದರೆ, ತನ್ನ ಮಗ ಎಜೆಗೆ ಗಂಡಾಂತರ ಕಾದಿದೆಯಲ್ಲ ಎಂದು ಆತಂಕಗೊಂಡಿದ್ದಾಳೆ.

ಆದರೆ ಲೀಲಾ ಎಜೆಗೆ ಏನು ಆಗಲೂ ನಾನು ಬಿಡುವುದಿಲ್ಲ. ಈ ವ್ರತವನ್ನು ನಾನು ಮುಗಿಸಿಯೇ ಮುಗಿಸುತ್ತೇನೆ. ಆ ದೇವರು ನನಗೆ ಹೇಗಾದರು ಮಾಡಿ ವ್ರತವನ್ನು ಸಂಪೂರ್ಣ ಮಾಡಲು ಅವಕಾಶ ಮಾಡಿಕೊಡುತ್ತಾನೆ ಎಂದು ಹೇಳುತ್ತಾಳೆ. ಅದೇ ವೇಳೆಗೆ ಅಲ್ಲಿಗೆ ಒಬ್ಬರು ಬಂದು ಅರಿಶಿನದ ನೂಲನ್ನು ಕೊಡುತ್ತಾರೆ. ಆಗ ಲೀಲಾ ಖುಷಿಯಿಂದ ಅರಳಿ ಮರಕ್ಕೆ ನೂಲನ್ನು ಸುತ್ತುತ್ತಾಳೆ. ಇದನ್ನು ನೋಡಿದ ದುರ್ಗಾ ಮತ್ತು ಸರಸ್ವತಿ ಮತ್ತೆ ಕೋಪ ಮಾಡಿಕೊಳ್ಳುತ್ತಾರೆ.
ವ್ರತ ನಿಲ್ಲಿಸದೇ ಮುಗಿಸಲು ಮುಂದಾದ ಲೀಲಾ
ಲೀಲಾ ಮತ್ತು ಅಜ್ಜಿ ವ್ರತದ ಮುಂದಿನ ಕಾರ್ಯವನ್ನು ನಡೆಸಲು ದೇವಾಲಯದ ಒಳಕ್ಕೆ ಹೋಗುತ್ತಾರೆ. ಅಲ್ಲಿ ಅರ್ಚಕರು ಲೀಲಾ ಕೈಗೆ ದೀಪವನ್ನು ಕೊಟ್ಟು, ದೇವಸ್ಥಾನವನ್ನು ಮಂಡಿಯಲ್ಲಿ ಪ್ರದಕ್ಷಿಣೆ ಹಾಕಬೇಕು. ದೀಪವನ್ನು ಕೈಯಲ್ಲಿ ಹಿಡಿದು ಪ್ರದಕ್ಷಿಣೆ ಹಾಕಬೇಕು. ಯಾವುದೇ ಕಾರಣಕ್ಕೂ ದೀಪ ಆರಬಾರದು ಎಂದು ಹೇಳುತ್ತಾರೆ. ಇದನ್ನು ಕೇಳಿದ ಲೀಲಾ ನಾನು ಅರಾಮಾಗಿ ಮಾಡುತ್ತೇನೆ ಎಂದು ಹೇಳುತ್ತಾಳೆ.

ಲೀಳಾಗೆ ತೊಂದರೆ ಕೊಟ್ಟ ಸೊಸೆಯಂದಿರು
ಆದರೆ ದುರ್ಗಾ ಮತ್ತು ಸರಸ್ವತಿ ಇಬ್ಬರೂ ಇನ್ನೂ ಏನಾದರೂ ಮಾಡಿ ವ್ರತವನ್ನು ಅರ್ಧಕ್ಕೆ ನಿಲ್ಲುವಂತೆ ಮಾಡಬೇಕು ಎಂದು ಮತ್ತೊಂದು ಪ್ಲಾನ್ ಅನ್ನು ಮಾಡುತ್ತಾರೆ. ಗಾಜಿನ ಚೂರುಗಳನ್ನು ದುರ್ಗಾ ತರಿಸಿಕೊಳ್ಳುತ್ತಾಳೆ. ಹೂವಿನಲ್ಲಿ ಅದನ್ನು ಮಿಕ್ಸ್ ಮಾಡಿ ಲೀಲಾ ಪ್ರದಕ್ಷಿಣೆ ಹಾಕುವ ಕಡೆಗೆ ಹಾಕುತ್ತಾರೆ. ಲೀಲಾ ಮಂಡಿಯಲ್ಲಿ ಪ್ರದಕ್ಷಿಣೆ ಹಾಕುವಾಗ ಗಾಜು ಚುಚ್ಚಿಕೊಂಡು ಮಂಡಿಯಲ್ಲಿ ರಕ್ತ ಬರುತ್ತದೆ. ಆದರೂ ಲೀಲಾ ವ್ರತವನ್ನು ಮುಗಿಸುತ್ತಾಳೆ.
ಲೀಲಾ ತಲೆ ಸುತ್ತಿ ಬಿದ್ದಾಗ ಎಜೆ ಮನದಲ್ಲಿ ಸಂಕಟ ಶುರುವಾಗುತ್ತದೆ. ಯಾಕೆ ಹೀಗೆ ಆಗುತ್ತಿದೆ ಎಂಬುದು ಎಜೆಗೆ ತಿಳಿಯುವುದಿಲ್ಲ. ಆದರೆ, ದುರ್ಗಾ ಹಾಗೂ ಸರಸ್ವತಿಗೆ ಲೀಲಾ ವ್ರತವನ್ನು ಮಾಡಿದ್ದು ಬೇಸರವನ್ನು ತರುತ್ತದೆ.

ಕೌಸಲ್ಯ ಬ್ಲ್ಯಾಕ್ ಮೇಲ್
ಇತ್ತ ದುರ್ಗಾ ಕೌಸಲ್ಯಳಿಗೆ ಕೊಟ್ಟ ಹತ್ತು ಲಕ್ಷದ ಚೆಕ್ ಅನ್ನು ಅವರ ಪತಿ ಅರಿದು ಹಾಕಿರುತ್ತಾನೆ. ಇದರಿಂದ ಕೌಸಲ್ಯ ಹಣ ಕೇಳಿಕೊಂಡು ದುರ್ಗಾಳಿಗೆ ಕಾಲ್ ಮಾಡುತ್ತಾಳೆ. ಆದರೆ, ದುರ್ಗಾ ಮತ್ತು ಸರಸ್ವತಿ ಹಣ ಕೊಡುವುದಿಲ್ಲ ಎಂದು ಜೋರು ಮಾಡುತ್ತಾರೆ. ಆಗ ಕೌಸಲ್ಯ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಮೂರು ಜನ ಪಾಟ್ನರ್ಸ್. ನನಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಲೀಲಾ ಹಾಗೂ ಎಜೆಯ ಮದುವೆಯ ಫೋಟೋಗಳನ್ನು ದುರ್ಗಾಳಿಗೆ ಕಳಿಸುತ್ತಾಳೆ. ಇದನ್ನು ಅಂತರಾಗೆ ತೋರಿಸುತ್ತೇನೆ ಎಂದು ಕೌಸಲ್ಯ ಬ್ಲ್ಯಾಕ್ ಮೇಲ್ ಮಾಡುತ್ತಾಳೆ. ಈ ಫೋಟೋಗಳನ್ನು ನೋಡಿದ ದುರ್ಗಾ ಹಾಗೂ ಸರಸ್ವತಿ ಇಬ್ಬರು ಕೂಡ ಶಾಕ್ ಆಗುತ್ತಾರೆ.


Click it and Unblock the Notifications











