Hitler Kalyana: ದುರ್ಗಾ ಎದುರಿಗೆ ಬಂದ ಅಂತರಾ: ಎಜೆ ಕಥೆ ಏನು..?

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಜ್ಜಿ ಲೀಲಾ ಹಾಗೂ ಎಜೆಯನ್ನು ಒಟ್ಟಿಗೆ ಇರಲು ಬಿಡುತ್ತಿಲ್ಲ. ಇಬ್ಬರನ್ನು ದೂರ ದೂರ ಇಟ್ಟಿದ್ದಾಳೆ. ಇದರಿಂದ ಎಜೆ-ಲೀಲಾ ಕಷ್ಟಪಡುತ್ತಿದ್ದಾರೆ.

ಮಾಂಗಲ್ಯಧಾರಣೆ ಆಗುವವರೆಗೂ ಇಬ್ಬರನ್ನೂ ದೂರ ಇಡಬೇಕು ಎಂದು ಅಜ್ಜಿ ಒದ್ದಾಡುತ್ತಿದ್ದಾರೆ. ಆದರೆ, ಇವರಿಬ್ಬರಿಗೂ ಅಜ್ಜಿ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ.

ಇತ್ತ ಚುಕ್ಕಿ ಕೆಲಸಕ್ಕೆ ಸೇರುವ ಮನಸ್ಸನ್ನು ಮಾಡಿದ್ದಾಳೆ. ಮನೆಯಲ್ಲೇ ಕುಳಿತಿರುವುದಕ್ಕಿಂತಲೂ ತನಗೆ ಬೇಕಾದದ್ದನ್ನು ತಾನೇ ಸಂಪಾದನೆ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿದ್ದಾಳೆ.

ಎಜೆ -ಲೀಲಾ ಮದುವೆಗೆ ಮುಹೂರ್ತ

ಎಜೆ -ಲೀಲಾ ಮದುವೆಗೆ ಮುಹೂರ್ತ

ಚುಕ್ಕಿ ಮನೆಯಲ್ಲಿ ಕೆಲಸಕ್ಕೆ ಹೋಗಲು ಪರ್ಮಿಷನ್ ಅನ್ನು ಕೇಳಿದ್ದಾಳೆ. ಇದಕ್ಕೆ ಅವರ ತಂದೆ ಸಂಪೂರ್ಣ ಒಪ್ಪಿಗೆಯನ್ನೂ ನೀಡಿದ್ದಾರೆ. ಆದರೆ, ಕೌಸಲ್ಯ ಪುನಃ ತಗಾದೆ ಎತ್ತಿದ್ದಾಳೆ. ಅವಳ ಮದುವೆ ಮಾಡಬೇಕು ಎಂದಿದ್ದಾಳೆ. ಮದುವೆಯ ಜವಾಬ್ದಾರಿಯನ್ನು ಎಜೆ ಹೊತ್ತಿದ್ದಾರೆ. ಅವರೇ ಮಾಡುತ್ತಾರೆ ಎಂದು ಹೇಳಿದ್ದಕ್ಕೆ ಕೌಸಲ್ಯ ಅವರಿಗೆ ಲಾಸ್ ಆಗಿದೆ ಎಂದು ಹೇಳುತ್ತಾಳೆ. ಆಗ ಚುಕ್ಕಿ, ಲಾಸ್ ಅಲ್ಲ ಐನೂರು ಕೋಟಿ ಲಾಭ ಆಗಿದೆ ಎಂದು ಮನವರಿಕೆ ಮಾಡುತ್ತಾಳೆ. ಆಗ ಕೌಸಲ್ಯ ತಾನು ತಪ್ಪು ಮಾಡಿದೆ ಇದಕ್ಕೆಲ್ಲಾ ದುರ್ಗಾನೇ ಕಾರಣ ಎಂದು ಮನದಲ್ಲೇ ನೊಂದುಕೊಳ್ಳುತ್ತಾಳೆ. ಇನ್ನು ಅಜ್ಜಿ ಲೀಲಾ ಮತ್ತು ಎಜೆಗೆ ಮದುವೆ ಮಾಡಲು ಮುಹೂರ್ತ ನೋಡಿದ್ದಾರೆ.

ಅಜ್ಜಿಗೆ ಸಿಗದ ಅಂತರಾ

ಅಜ್ಜಿಗೆ ಸಿಗದ ಅಂತರಾ

ಇನ್ನು ಅಜ್ಜಿ, ಲೀಲಾ ಹಾಗೂ ಎಜೆ ಒಂದಾಗಿರಬೇಕು. ಇವರಿಬ್ಬರ ಮಧ್ಯೆ ಯಾರೂ ಬರಬಾರದು ಎಂದು ಒದ್ದಾಡುತ್ತಿದ್ದಾಳೆ. ಅಂತರಾಳನ್ನು ನೋಡಿರುವ ಅಜ್ಜಿಗೆ ಈಗ ರಾಮ್ ಬದುಕಿನ ಬಗ್ಗೆ ಆತಂಕ ಹೆಚ್ಚಾಗಿದೆ. ಮನೆಯಿಂದ ಹೋದ ಅಂತರಾ ಈಗ ವಾಪಸ್ ಬಂದಿದ್ದಾಳೆ. ಇದರಿಂದ ಲೀಲಾ ಬಾಳಿಗೆ ತೊಂದರೆ ಆಗುತ್ತೆ ಎಂದು ಗಾಬರಿಯಾಗಿದ್ದಾಳೆ. ಹೀಗಾಗಿ ಅಜ್ಜಿ, ಅಂತರಾಳನ್ನು ಹುಡುಕಾಡುತ್ತಿದ್ದಾಳೆ. ಆದರೆ, ಅಜ್ಜಿಗೆ ಅಂತರಾ ಸಿಗುತ್ತಿಲ್ಲ. ಹೂವಿನ ಅಂಗಡಿಗೆ ಹೋಗಿ ನೇರವಾಗಿ ಹೋಗುತ್ತಾಳೆ. ಆದರೂ ಅಲ್ಲೂ ಅಂತರಾಳ ಯಾವುದೇ ಮಾಹಿತಿ ಅಜ್ಜಿಗೆ ಸಿಗುವುದಿಲ್ಲ.

ದುರ್ಗಾಳಿಗೆ ಎದುರಾದ ಅಂತರಾ

ದುರ್ಗಾಳಿಗೆ ಎದುರಾದ ಅಂತರಾ

ಇತ್ತ ಅಜ್ಜಿ ಮನದಲ್ಲಿ ಏನೋ ನಡೆಯುತ್ತಿದೆ. ಅದು ಏನು ಎಂದು ತಿಳಿಯಲು ದುರ್ಗಾ, ಅಜ್ಜಿಯ ಹಿಂದೆ ಬಿದ್ದಿದ್ದಾಳೆ. ಅಜ್ಜಿ ಹೂವಿನ ಅಂಗಡಿಗೆ ಹೋದಾಗ ಫಾಲೋ ಮಾಡಿದ್ದಾಳೆ. ಅಲ್ಲಿ ಅಜ್ಜಿ ಅಂತರಾ ಬಗ್ಗೆ ಮಾತನಾಡಿದ್ದಕ್ಕೆ ಶಾಕ್ ಆಗಿದ್ದಾಳೆ. ಅಜ್ಜಿ ಹೋದ ಮೇಲೆ ಮಾಹಿತಿಯನ್ನೂ ಪಡೆದುಕೊಂಡ ದುರ್ಗಾ, ವಾಪಸ್ ಬರುವಾಗ ಶಾಕ್ ಆಗಿದ್ದಾಳೆ. ಯಾಕೆಂದರೆ, ದುರ್ಗಾಳಿಗೆ ಅಂತರಾ ಎದುರಾಗಿದ್ದಾಳೆ. ಅಂತರಾಳನ್ನು ನೋಡುತ್ತಿದ್ದಂತೆ ದುರ್ಗಾ ದಂಗಾಗಿದ್ದಾಳೆ.

ಅಂತರಾಳನ್ನು ದುರ್ಗಾ ಬಳಸಿಕೊಳ್ಳುತ್ತಾಳಾ..?

ಅಂತರಾಳನ್ನು ದುರ್ಗಾ ಬಳಸಿಕೊಳ್ಳುತ್ತಾಳಾ..?

ಈಗ ಅಂತರಾ, ದುರ್ಗಾ ಎದುರಿಗೆ ಬಂದಿರುವುದರಿಂದ ಸಮಸ್ಯೆ ದೊಡ್ಡದಾಗುತ್ತದೆ ಎಂಬ ಭಯ ಕಾಡುತ್ತಿದೆ. ಲೀಲಾ ಹಾಗೂ ಎಜೆಯನ್ನು ದೂರ ಮಾಡಬೇಕು ಎಂದು ಕಾಯುತ್ತಿರುವ ದುರ್ಗಾ, ಈಗ ಅಂತರಾಳನ್ನು ಬಳಸಿಕೊಳ್ಳಬಹುದು ಎಂಬ ಅನುಮಾನ ಪ್ರೇಕ್ಷಕರಲ್ಲಿ ಕಾಡುತ್ತಿದೆ. ಹಾಗೇನಾದರೂ ಆದರೆ, ಎಜೆ ಬಾಳಲ್ಲಿ ಮತ್ತೊಂದು ದೊಡ್ಡ ಬಿರುಗಾಳಿ ಏಳಲಿದೆ. ಅಷ್ಟಕ್ಕೂ ಈಕೆ ಅಂತರಾನಾ? ಅಥವಾ ಅಂತರಾಳಂತೆ ಇರುವ ಮತ್ತೊಂದು ಹುಡುಗಿನಾ ಎಂಬ ಪ್ರಶ್ನೆ ಕೂಡ ಪ್ರೇಕ್ಷಕರಲ್ಲಿ ಕಾಡುತ್ತಿದೆ. ಆದರೆ, ಸತ್ಯ ತಿಳಿಯಲು ಕಾಯಬೇಕಿದೆ.

More from Filmibeat

English summary
Hitler Kalyana serial 16th March Episode Written Update. Ajji is struggling for AJ and leela. But anthara is entered and durga finds her. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X