ಮತ್ತೆ ಸೋತ ಸೊಸೆಯಂದಿರು: ಲೀಲಾ ಪರ ನಿಂತ ಎಜೆ!
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾ ಈಗ ಎಜೆಗೆ ಫೇವರಿಟ್ ಆಗಿದ್ದಾಳೆ. ಎಜೆ ಏನೇ ನಿರ್ಧಾರ ತೆಗೆದುಕೊಳ್ಳುವಾಗಲೂ ಲೀಲಾ ಮಾತನ್ನು ಕೇಳಿಯೇ ಮಾಡುತ್ತಿದ್ದಾನೆ. ಇದು ಮನೆ ಸೊಸೆಯಂದಿರಿಗೆ ಸಂಕಷ್ಟವನ್ನು ತಂದಿದೆ. ಎಜೆ ಹಾಗೂ ಲೀಲಾಳನ್ನು ದೂರ ಮಾಡಬೇಕು ಎಂದು ಆಲೋಚಿಸುತ್ತಿದ್ದಾರೆ.
ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿ ಪದೇ ಪದೇ ಲೀಲಾ ಎದುರು ಸೋಲುತ್ತಿದ್ದಾರೆ. ಲೀಲಾ ವಿರುದ್ಧ ಏನೇ ಕಸರತ್ತು ಮಾಡಿದರು, ಅದರಿಂದ ಅವಳಿಗೆ ಒಳ್ಳೆಯದೇ ಆಗುತ್ತಿದೆ. ಮನೆಯಿಂದ ಲೀಲಾಳನ್ನು ಹೊರಗೆ ಹಾಕಲು ಪ್ರಯತ್ನಿಸುತ್ತಲೇ ಇದ್ದರೂ ಅದು ಉಲ್ಟಾ ಹೊಡೆಯುತ್ತಿದೆ. ಆದರೂ ಕೂಡ ತಮ್ಮ ಪ್ರಯತ್ನವನ್ನು ಬಿಡುತ್ತಿಲ್ಲ.
ಲೀಲಾಗೆ ಏನೇ ಆದರೂ ಈಗ ಎಜೆ ತುಂಬಾ ಕಾಳಜಿ ವಹಿಸುತ್ತಿದ್ದಾನೆ. ಲೀಲಾಗೆ ಏನೂ ಆಗದಂತೆ ನೋಡಿಕೊಳ್ಳುತ್ತಿದ್ದಾನೆ. ಇದರಿಂದ ಲೀಲಾ ಕೂಡ ಎಜೆ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿದ್ದಾಳೆ. ಕೆಲ ತಪ್ಪು ತಿಳುವಳಿಕೆಗಳು ಈಗ ದೂರವಾಗುತ್ತಿದೆ. ಇಬ್ಬರ ನಡುವೆ ಪ್ರೀತಿ ಹುಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ವಿಕ್ರಮ್ ಮಾತನ್ನು ನಂಬದ ಲೀಲಾ
ಎಜೆ ಮೊದಲ ಹೆಂಡತಿಯ ಸಾವು ನ್ಯಾಯವಾದದ್ದಲ್ಲ. ಆಕೆಯನ್ನು ಎಜೆ ಕೊಲೆ ಮಾಡಿದ್ದಾನೆ ಎಂದು ವಿಕ್ರಮ್ ಲೀಲಾಗೆ ಹೇಳಿದ್ದಾನೆ. ಮೊದ ಮೊದಲು ನಂಬಿದ್ದ ಲೀಲಾಗೆ ಈಗ ಎಜೆ ಮೇಲೆ ನಂಬಿಕೆ ಬಂದಿದೆ. ಹಾಗಾಗಿ ಲೀಲಾ, ವಿಕ್ರಮ್ ಸಂಪರ್ಕವನ್ನು ದೂರ ಮಾಡಿಕೊಂಡಿದ್ದಾಳೆ. ಆದರೆ ವಿಕ್ರಮ್ ಬಲವಂತವಾಗಿ ಲೀಲಾಳನ್ನು ಭೇಟಿಯಾಗಿದ್ದಾನೆ. ಲೀಲಾ ವಿಕ್ರಮ್ ಮಾತನ್ನು ಕೇಳೋದಕ್ಕೆ ತಯಾರಿಲ್ಲ. ನಿನಗೆ ಎಜೆ ಬಗ್ಗೆ ಗೊತ್ತಿಲ್ಲ. ಸುಖಾ ಸುಮ್ಮನೇ ಏನೇನೋ ಹೇಳಬೇಡ ಎಂದು ಹೇಳುತ್ತಾಳೆ. ಕೊನೆಗೆ ಇಬ್ಬರೂ ಜಗಳವಾಡಿ ಹೋಗುತ್ತಾಳೆ.

ಮನೆಯಲ್ಲಿ ಸುಳ್ಳು ಹೇಳಿ ಬಂದಿದ್ದ ಲೀಲಾ
ಲೀಲಾ ಮನೆಯಲ್ಲಿದ್ದಾಗ ಎಜೆ ಎಲ್ಲಾದರೂ ಹೋಗುವ ಪ್ಲ್ಯಾನ್ ಇದ್ಯಾ ಎಂದು ಕೇಳುತ್ತಾನೆ. ಆಗ ಲೀಲಾ ಇಲ್ಲ, ಎಜೆ ಇವತ್ತು ಯಾವ ಪ್ಲಾನ್ ಕೂಡ ಇಲ್ಲ. ಹಾಗಾಗಿ ಮನೆಯಲ್ಲೇ ಇರುತ್ತೇನೆ. ಎಲ್ಲಿಗೂ ಹೋಗುತ್ತಿಲ್ಲ ಎಂದು ಹೇಳುತ್ತಾಳೆ. ಆಗ ಎಜೆ ಸರಿ ಎಂದು ಹೇಳಿ ಹೋಗುತ್ತಾನೆ. ಇನ್ನು ಲೀಲಾ, ಎಜೆ ಹೋಗುತ್ತಿದ್ದಂತೆಯೇ ವಿಶ್ವರೂಪ್ ಬಳಿ ನಾನು ಆಚೆ ಹೋಗುತ್ತಿದ್ದೇನೆ. ಎಜೆ ಬರುವುದಿದ್ದರೆ ಫೋನ್ ಮಾಡಿ ಹೇಳು ಎಂದು ಹೇಳಿ ಹೋಗುತ್ತಾಳೆ.

ಲೀಲಾ ವಿರುದ್ಧ ಸೊಸೆಯಂದಿರು ಪ್ಲ್ಯಾನ್
ಈಗ ಸೊಸೆಯಂದಿರು ಲೀಲಾಳನ್ನು ಎಜೆ ಬಳಿ ಸಿಕ್ಕಿ ಹಾಕಿಸುವುದಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಇದೇ ಸಮಯಕ್ಕೆ ಲೀಲಾ ಬೇರೆ ಎಜೆಗೆ ಸುಳ್ಳು ಹೇಳಿ ಆಚೆ ಹೋಗಿದ್ದಾಳೆ. ಇದರ ಬಗ್ಗೆ ಇಳಿದು ಈಗ ಎಜೆಗೆ ದೂರು ಒಪ್ಪಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ದುರ್ಗಾ ಬಿಸಿಯಲ್ಲೇ ಸುದ್ದಿ ಮುಟ್ಟಿಸಬೇಕು ಎಂದು ಎಜೆಗೆ ಕರೆ ಮಾಡಿದ್ದಾರೆ. ಕೂಡಲೇ ಮನೆಗೆ ಕರೆಸಿ ದೂರು ಒಪ್ಪಿಸಿದ್ದಾರೆ.

ಲೀಲಾ ಪರ ನಿಂತ ಎಜೆ
ಲೀಲಾ ಮನೆಗೆ ಬಂದಿದ್ದಾಳೆ. ಎಜೆ ಕಾರನ್ನು ನೋಡಿ ಭಯಗೊಂಡಿದ್ದಾಳೆ. ಹೇಗೋ ಮ್ಯಾನೇಜ್ ಮಾಡೋಣ ಎಂದುಕೊಂಡು ಹೋಗಿದ್ದಾಳೆ. ಆಗ ಸೊಸೆಯಂದಿರು ಗ್ರಹಚಾರ ಬಿಡಿಸಿ ಎಂದು ಹೇಳಿದ್ದಾರೆ. ಆಗ ಎಜೆ, ಲೀಲಾ ಮಾಡಿದ್ದರಲ್ಲಿ ತಪ್ಪೇನು ಇಲ್ಲ. ನೀವು ಕೂಡ ಎಲ್ಲೆಲ್ಲಿಗೆ ಹೋಗುತ್ತೀರಾ ಎಂದು ಗೊತ್ತಿದೆ. ಇದರಲ್ಲಿ ಲೀಲಾ ತಪ್ಪಿಲ್ಲ ಎಂದು ಹೇಳುತ್ತಾನೆ.


Click it and Unblock the Notifications











