Hitler kalyana: ಮನೆ ಬಿಟ್ಟು ಬಂದ ಲೀಲಾಳಿಗಾಗಿ ಪರಿತಪಿಸುತ್ತಿರುವ ದುರ್ಗಾ!
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾ ಹೆಸರಿನಲ್ಲಿ ಮನೆಗೆ ಬಂದಿರುವ ಪ್ರಾರ್ಥನಾಳದ್ದೇ ದರ್ಬಾರ್ ಆಗಿದೆ. ಎಲ್ಲವೂ ತಾನು ಹೇಳಿದಂತೆಯೇ ನಡೆಯಬೇಕು ಎನ್ನುತ್ತಿದ್ದಾಳೆ. ಅಜ್ಜಿ, ಲಕ್ಷ್ಮೀ, ಎಜೆಗೂ ಅಂತರಾಳಲ್ಲಿನ ಬದಲಾವಣೆಗಳು ಗೊಂದಲವನ್ನು ಮೂಡಿಸಿದೆ. ಲೀಲಾ ಮೇಲೆ ಕೋಪ ಮಾಡಿಕೊಳ್ಳುವುದು, ಸದಾ ಎಜೆ ಜೊತೆಗೆ ಇರಲು ಬಯಸುವುದು ಎಜೆಗೂ ಕಷ್ಟವಾಗಿದೆ.
ಇನ್ನು ಎಜೆ ಮಕ್ಕಳು ಬಿಸಿನೆಸ್ ಮಾಡುವ ಆಸೆಯಿಂದ ಮಾಡಿಕೊಂಡ ಎಡವಟ್ಟನ್ನು ಲೀಲಾಳೇ ಸರಿ ಮಾಡಿದ್ದಾಳೆ. ದುರ್ಗಾ ಮಾತು ನಂಬಿ ತನ್ನ ಹೆಸರಲ್ಲಿದ್ದ ಶೇರ್ ಅನ್ನು ಬರೆದುಕೊಟ್ಟಿದ್ದಾಳೆ.

ಎಜೆ ಮನೆಯವರನ್ನು ಬ್ಲಾಕ್ ಮಾಡಿದ ಕೌಸಲ್ಯ
ಈ ಮನೆಯಲ್ಲಿದ್ದರೆ, ಎಜೆಗೆ ಅಂತರಾ ಅಕ್ಕನ ಜೊತೆಗೆ ಆರಾಮಾಗಿ ಇರಲು ಆಗುವುದಿಲ್ಲ ಎಂದು ತಿಳಿದ ಲೀಲಾ ರಾತ್ರೋ ರಾತ್ರಿ ಮನೆ ಬಿಟ್ಟು ಬಂದಿದ್ದಾಳೆ. ನಾನಿನ್ನು ಅಲ್ಲಿಗೆ ಹೋಗುವುದಿಲ್ಲ ಎಂದು ಹೇಳಿದ್ದಾಳೆ. ಲೀಲಾ ತನ್ನ ಮನದಲ್ಲಿ ನೋವಿದ್ದರೂ ಯಾರ ಬಳಿಯೂ ಹೇಳಿಕೊಂಡಿಲ್ಲ. ಚುಕ್ಕಿ ಕೇಕ್ ಅಂಗಡಿಯನ್ನು ತೆರೆದು ತನ್ನದೇ ಬಿಸಿನೆಸ್ ಮಾಡಲಿ ಅಂತ ಲೀಲಾ ಓಡಾಡುತ್ತಿದ್ದಾಳೆ. ಈ ಬಿಸಿನೆಸ್ ನಿಂದ ತಮ್ಮ ಕಾಲಿನ ಮೇಲೆ ತಾವು ನಿಲ್ಲಬಹುದು ಎಂಬುದೇ ಅವಳ ಉದ್ದೇಶ.
ಇತ್ತ, ಕೌಸಲ್ಯಳಿಗೆ ಅಂತರಾ ಪತ್ರವನ್ನು ಬರೆದಿದ್ದು, ಯಾವುದೇ ಕಾರಣಕ್ಕೂ ಲೀಲಾ ಎಜೆ ಮನೆಗೆ ವಾಪಸ್ ಬರಬಾರದು. ಅದರಿಂದ ನಿನಗೆ ಲಾಭ ಎಂದು ಹಣದಾಸೆಯನ್ನು ತೋರಿಸಿದ್ದಾಳೆ. ಹಾಗಾಗಿ ಕೌಸಲ್ಯ ಲೀಲಾ ಇಲ್ಲದಿರುವಾಗ ಅವಳ ಮೊಬೈಲ್ ತೆಗೆದುಕೊಂಡು ಎಜೆ ಮನೆಯವರ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದಾಳೆ.

ಸಂಕಟ ಅನುಭವಿಸುತ್ತಿರುವ ಎಜೆ, ಅಜ್ಜಿ
ಇತ್ತ ಮನೆಯಲ್ಲಿ ಲೀಲಾ ಕಾಣಿಸದೆ ಎಲ್ಲರೂ ದುಃಖದಲ್ಲಿದ್ದಾರೆ. ಅಂತರಾಳಿಗೆ ಲೀಲಾ ಮನೆ ಬಿಟ್ಟು ಹೋಗಿರುವುದು ಖುಷಿ ಕೊಟ್ಟಿದೆ. ಹಾಗಾಗಿ ಸ್ಪೆಷಲ್ ಅಡುಗೆಯನ್ನು ಮಾಡಿದ್ದಾಳೆ. ಆದರೆ, ಅಜ್ಜಿ ಮತ್ತು ಎಜೆ ಇಬ್ಬರೂ ಮನದಲ್ಲೇ ದುಃಖವನ್ನು ಅನುಭವಿಸುತ್ತಿದ್ದಾರೆ. ಲೀಲಾಳನ್ನು ಬಿಟ್ಟಿರಲಾರದೇ ಎಜೆ ಒಳಗೊಳಗೇ ದುಃಖ ಅನುಭವಿಸುತ್ತಿದ್ದಾರೆ. ಅಜ್ಜಿ ಈ ಮನೆ ಬೆಳಕು. ನನ್ನ ಮುದ್ದಿನ ಸೊಸೆ ಇಲ್ಲ ಎಂದು ಅಳುತ್ತಲೇ ಇದ್ದಾರೆ. ಊಟ, ತಿಂಡಿ ಬಿಟ್ಟು ಕೂತಿದ್ದಾರೆ.
ಲೀಲಾ ಇಲ್ಲದೇ ಖುಷಿಯಲ್ಲಿರುವ ಅಂತರಾ
ಅಂತರಾಳಿಗಂತೂ ಲೀಲಾ ಮನೆ ಬಿಟ್ಟು ಹೋಗಿರುವುದು ಖುಷಿ ಕೊಟ್ಟಿದೆ. ಅಭಿ ಅನ್ನು ಸಂಪೂರ್ಣವಾಗಿ ತನ್ನ ವಶ ಮಾಡಿಕೊಳಳಬೇಕು. ಇಡೀ ಆಸ್ತಿ ಅನ್ನು ತನ್ನ ಹೆಸರಿಗೆ ಮಾಡಿಕೊಂಡು ಮೆರೆಯಬೇಕು ಎಂದು ಆಸೆ ಪಟ್ಟಿದ್ದಾಳೆ. ದುರ್ಗಾಳಿಗೆ ಅಂತರಾ ಬಗ್ಗೆ ಸತ್ಯ ಗೊತ್ತಿರುವುದರಿಂದ ಅವಳನ್ನು ಹೆದರಿಸಿ ಬೆದರಿಸಿಕೊಂಡಿದ್ದಾಳೆ. ಸತ್ಯ ಹೇಳಿದರೆ ಮನೆಯಲ್ಲಿ ರಕ್ತಪಾತವಾಗುತ್ತದೆ. ಬಾಯಿ ಮುಚ್ಚಿಕೊಂಡು ಇರು ಎಂದು ದುರ್ಗಾಳಿಗೆ ಅಂತರಾ ವಾರ್ನಿಂಗ್ ಮಾಡಿದ್ದಾಳೆ.
ಲೀಲಾ ನೋಡಲು ಬಂದ ದುರ್ಗಾ
ಹೀಗೆ ಬಿಟ್ಟರೆ ಅಂತರಾ ಮಿತಿ ಮೀರುತ್ತಾಳೆ. ಈ ಮನೆಯನ್ನು ಸಂಭಾಳಿಸಲು ಲೀಲಾನೇ ಸರಿ. ಇಷ್ಟು ದಿನ ನಾನು ಅಪಾರ್ಥ ಮಾಡಿಕೊಂಡಿದ್ದೆ. ಲೀಲಾ ಕಾಲಿಗೆ ಬಿದ್ದು ಸತ್ಯ ಹೇಳಬೇಕು. ಈ ಮನೆಯನ್ನು ಅಂತರಾಳಿಂದ ಕಾಪಾಡಲು ಹೇಳಬೇಕು ಎಂದುಕೊಳ್ಳುತ್ತಾಳೆ. ಅದೇ ಸಮಯಕ್ಕೆ ಲಕ್ಷ್ಮೀ ಬಂದು ಲೀಲಾ ಮನೆ ಬಿಟ್ಟು ಹೋಗಿರುವುದನ್ನು ಹೇಳುತ್ತಾಳೆ.
ಈ ಮಾತನ್ನು ಕೇಳಿದ ದುರ್ಗಾಳಿಗೆ ಶಾಕ್ ಆಗುತ್ತದೆ. ಸೀದಾ ಕೌಸಲ್ಯ ಮನೆಗೆ ಹೋಗಿ ಲೀಲಾಳನ್ನು ಮಾತನಾಡಿಸಲು ಯತ್ನಿಸುತ್ತಾಳೆ. ಆದರೆ, ಕೌಸಲ್ಯ, ಬಾಗಿಲಿನಲ್ಲೇ ದುರ್ಗಾಳನ್ನು ತಡೆದು, ನಿಮ್ಮ ಸಹವಾಸ ನಮಗೆ ಬೇಡ. ನನ್ನ ಮಗಳ ಬದುಕನ್ನು ಹಾಳು ಮಾಡಿದ್ದು ಸಾಕು ಎಂದು ಹೇಳಿ ಬಾಗಿಲು ಹಾಕುತ್ತಾಳೆ.


Click it and Unblock the Notifications











