Hitler kalyana: ದುರ್ಗಾಳಿಗೆ ಗ್ರಹಚಾರ ಬಿಡಿಸಿದ ಲೀಲಾ: ಎಜೆಗೆ ಸತ್ಯ ಗೊತ್ತಾಯ್ತಾ..?
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆಯ ಮೊದಲ ಪತ್ನಿ ಅಂತರಾ ಕಾರಣಾಂತರಗಳಿಂದ ಇದ್ದಕ್ಕಿದ್ದ ಹಾಗೆ ಮಾಯವಾಗಿರುತ್ತಾಳೆ. ಅಂತರಾ ಮನೆಯವರು ಎಜೆನೇ ಅಂತರಾಳಿಗೆ ಏನೋ ಮಾಡಿದ್ದಾರೆ ಎಂದು ತಿಳಿದಿದ್ದಾರೆ.
ಆದರೆ, ಇದ್ದಕ್ಕಿದ್ದ ಹಾಗೆಯೇ ಅಂತರಾ ಕಾಣೆಯಾಗಿದ್ದಳು. ಸುಮಾರು ವರ್ಷ ಬಾರದಿದ್ದ ಕಾರಣ ಅಜ್ಜಿ, ಎಜೆಗೆ ಮತ್ತೊಂದು ಮದುವೆಯನ್ನು ಮಾಡಿದ್ದಾರೆ.
ಎಜೆ ಕೂಡ ಅಂತರಾಳನ್ನು ಮರೆಯಲಾಗದೇ ಒದ್ದಾಡುತ್ತಿದ್ದ. ಆದರೆ ಇತ್ತೀಚೆಗೆ ಲೀಲಾಳಲ್ಲೇ ಅಂತರಾಳನ್ನು ಕಾಣಲು ಮುಂದಾಗಿದ್ದಾನೆ. ಇಬ್ಬರೂ ಈಗ ಪ್ರೀತಿಸುತ್ತಿದ್ದಾರೆ.

ಅಜ್ಜಿ ಆತಂಕ ತಿಳಿದ ದುರ್ಗಾ
ಈಗ ಪುನಃ ಕಾಣಿಸಿಕೊಂಡ ಅಂತರಾಳನ್ನು ಹುಡುಕಿಕೊಂಡು ಅಜ್ಜಿ ಹೋಗಿದ್ದಾಳೆ. ಅಜ್ಜಿಯ ಹಿಂದೆ ಬಿದ್ದ ದುರ್ಗಾಳಿಗೆ ಅಂತರಾ ಎದುರಾಗಿದ್ದಾಳೆ. ಆದರೆ, ದುರ್ಗಾ ಹಾಗೂ ಅಂತರಾ ಮಾತನಾಡಿದ್ದೇನು ಎಂಬುದು ಮಾತ್ರವೇ ಇನ್ನು ತಿಳಿದು ಬಂದಿಲ್ಲ. ಆದರೆ, ದುರ್ಗಾ ಅಂತರಾಳ ಫೋಟೋ ಹಾಕಿ ಪೇಪರ್ ಅನ್ನು ತಯಾರಿಸಿದ್ದಾಳೆ. ಇದರಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಬಗ್ಗೆ ಬರೆಸಿದ್ದಾಳೆ. ಈ ಪೇಪರ್ ಅನ್ನು ಎಜೆಗೆ ಸಿಗುವಂತೆ ಮಾಡಬೇಖು ಎಂದು ಪ್ಲ್ಯಾನ್ ಮಾಡಿದ್ದಾಳೆ. ಅಜ್ಜಿಯ ಆತಂಕವನ್ನು ತಿಳಿದ ದುರ್ಗಾ ಈಗ ಲೀಲಾ ವಿರುದ್ಧ ದೊಡ್ಡ ಪ್ಲ್ಯಾನ್ ಮಾಡಿದ್ದಾಳೆ.

ಲಕ್ಷ್ಮೀಗೆ ಕಪಾಳಮೋಕ್ಷ ಮಾಡಿದ ದುರ್ಗಾ
ಪೇಪರ್ ಮೂಲಕ ಎಜೆಗೆ ಅಂತರಾ ಬಗ್ಗೆ ತಿಳಿಸಲು ಮುಂದಾದ ದುರ್ಗಾಳಿಗೆ ಲಕ್ಷ್ಮೀ ಬುದ್ಧಿವಾದ ಹೇಳುತ್ತಾಳೆ. ಇದೆಲ್ಲಾ ಮಾಡಬೇಡಿ ಎಂದು ಹೇಳುತ್ತಾಳೆ. ಆದರೆ, ದುರ್ಗಾ ಕೋಪದಲ್ಲಿ ಲಕ್ಷ್ಮೀಗೆ ಕಪಾಳಕ್ಕೆ ಹೊಡೆಯುತ್ತಾಳೆ. ಲಕ್ಷ್ಮೀಗೆ ಈ ಮನೆಯಲ್ಲಿ ನಿನಗೇನು ಸ್ಥಾನವಿದೆ ಎಂದು ಅವಮಾನ ಮಾಡುತ್ತಾಳೆ. ಲಕ್ಷ್ಮೀಗೆ ಹಿಗ್ಗಾಮುಗ್ಗಾ ಬೈಯುತ್ತಾಳೆ. ನನ್ನ ಜೊತೆಗಿದ್ದರೆ, ನಿನಗೆ ಎಲ್ಲಾ ಸ್ಥಾನವೂ ಸಿಗುತ್ತೆ. ಆ ಬಿಕಾರಿ ಜೊತೆಗೆ ಇರೋರಿಗೆ ಯಾವ ಸ್ಥಾನವೂ ಇಲ್ಲ ಎಂದು ಬಾಯಿಗೆ ಬಂದ ಹಾಗೆ ಬೈಯುತ್ತಾಳೆ. ಇದರಿಂದ ಲಕ್ಷ್ಮೀ ಅವಮಾನಕ್ಕೆ ಒಳಗಾಗುತ್ತಾಳೆ.

ದುರ್ಗಾ ವಿರುದ್ಧ ಲೀಲಾ ಗರಂ
ಲಕ್ಷ್ಮೀ ದುಃಖದಲ್ಲಿ ಅಳುತ್ತಿರುತ್ತಾಳೆ. ಈ ಮನೆಯಲ್ಲಿ ತನ್ನ ಕಷ್ಟ ಕೇಳುವವರು ಯಾರೂ ಇಲ್ಲ ಎಂದು ಅಳುತ್ತಿರುತ್ತಾಳೆ. ಲೀಲಾ ಹಾಗೂ ವಿಶ್ವರೂಪ್ ಬಂದು ಸಮಾಧಾನ ಮಾಡುತ್ತಾರೆ. ಆಗ ದುರ್ಗಾ ನಡೆದದ್ದನ್ನೆಲ್ಲಾ ಹೇಳುತ್ತಾಳೆ. ಲೀಲಾ, ದುರ್ಗಾ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ. ದುರ್ಗಾಳದ್ದು ಅತಿಯಾಗಿದೆ. ಅವಳಿಗೆ ಮಾಡುತ್ತೇನೆ. ಇವತ್ತು ಅವಳ ಗ್ರಹಚಾರವನ್ನು ಬಿಡಿಸುತ್ತೀನಿ. ಇನ್ಯಾವತ್ತು ನಿನ್ನ ತಂಟೆಗೆ ಬರಬಾರದು ಹಾಗೆ ಮಾಡುತ್ತೇನೆ ಎಂದು ದುರ್ಗಾ ಬಳಿ ಹೋಗುತ್ತಾಳೆ.

Click it and Unblock the Notifications