Hitler kalyana: ಒಂದಾಗುತ್ತಿರುವ ಎಜೆ -ಅಂತರಾಳನ್ನು ನೋಡಿ ಲೀಲಾಗೆ ಆತಂಕ
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾ, ಎಜೆಗೆ ಒಳ್ಳೆಯದಾಗಬೇಕು. ಎಜೆಗೆ ಬಂದಿರುವ ಗಂಡಾಂತರ ನಿವಾರಣೆ ಆಗಬೇಕು ಎಂದು ವ್ರತವನ್ನು ಮಾಡಿದ್ದಾಳೆ. ವ್ರತವನ್ನು ನಿಲ್ಲಿಸಲು ಸರಸ್ವತಿ ಹಾಗೂ ದುರ್ಗಾ ಏನೇ ಪ್ಲಾನ್ ಮಾಡಿದರೂ ಸಾಧ್ಯವಾಗುವುದಿಲ್ಲ. ಕಷ್ಟವಾದರೂ ಲೀಲಾ ಈ ವ್ರತವನ್ನು ಮಾಡಿ ಮುಗಿಸುತ್ತಾಳೆ. ಆದರೆ, ವ್ರತದ ಕೊನೆಯ ಹಂತವಾಗಿ ಲೀಲಾ, ಎಜೆ ಕೈಯಲ್ಲಿ ಸ್ವೀಟ್ ತಿನ್ನಿಸಿಕೊಳ್ಳಬೇಕು.
ಆದರೆ, ಅಂತರಾ ಸದಾ ಎಜೆ ಜೊತೆಗೆ ಇರುವುದರಿಂದ ಅದು ಸಾಧ್ಯವಾಗುತ್ತದೆಯಾ ಎಂಬ ಅನುಮಾನ ಮೂಡಿದೆ. ಇದೇ ಸಂದರ್ಭದಲ್ಲಿ ಎಜೆ ಅನ್ನು ನೋಡಲು ಅಂತರಾ ಫೌಂಡೇಷನ್‌ನಿಂದ ವಿದ್ಯಾರ್ಥಿಗಳು ಬಂದಿರುತ್ತಾರೆ. ಅವರು ತಂದಿರುವ ಸ್ವೀಟ್ ಅನ್ನು ಅನಿವಾರ್ಯವಾಗಿ ಲೀಲಾಗೂ ತಿನ್ನಿಸಬೇಕಾಗುತ್ತದೆ. ಇದರಿಂದ ವ್ರತದ ಬಗ್ಗೆ ಏನನ್ನೂ ಹೇಳದೇ ಲೀಲಾ ಯಾವುದೇ ವಿಘ್ನವಿಲ್ಲದೇ ವ್ರತವನ್ನು ಮಾಡಿ ಮುಗಿಸುತ್ತಾಳೆ.

ಪುರೋಹಿತರು ಕೂಡ ಫೋನ್ ಮಾಡಿ ಗಂಡಾಂತರ ನಿವಾರಣೆ ಆಗಿದೆ ಎಂದು ಹೇಳುತ್ತಾರೆ. ಇದರಿಂದ ಅಜ್ಜಿ ಹಾಗೂ ಲೀಲಾ ಇಬ್ಬರಿಗೂ ಖುಷಿಯಾಗುತ್ತದೆ. ಇನ್ನು ಲೀಲಾ ಆದಷ್ಟು ಬೇಗ ಎಜೆ ಹಾಗೂ ಅಂತರಾ ಒಂದಾಗಲಿ ಎಂದು ತನ್ನ ಕೈಲಾದ ಪ್ರಯತ್ನವನ್ನು ಪಡುತ್ತಲೇ ಇರುತ್ತಾಳೆ. ಇದು ಎಜೆಗೂ ಗೊತ್ತಿದೆ. ಲೀಲಾಳ ಒಳ್ಳೆಯ ಮನಸ್ಸು ಗೊತ್ತಿದ್ದರೂ ಕೂಡ ಅಮಂರಾ ಎದುರಿಗೆ ಲೀಲಾಳನ್ನು ಒಪ್ಪಿಕೊಳ್ಳಲು ಎಜೆಗೆ ಆಗುತ್ತಿಲ್ಲ. ಲೀಲಾಳಿಗೆ ಎಜೆ ಸಂತೋಷವೇ ಮುಖ್ಯವಾಗಿದೆ. ಹೀಗಾಗಿ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾಳೆ.
ದುರ್ಗಾಳನ್ನು ಕಾಡಿಸಿ ಎಸಿ ತರಿಸಿಕೊಂಡ ಕೌಸಲ್ಯ
ಇನ್ನು ದುರ್ಗಾ, ಲೀಲಾ ಮೇಲೆ ಉರಿದು ಬೀಳುತ್ತಿದ್ದು, ಅವಳನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ಪ್ಲಾನ್ ಮಾಡುತ್ತಿದ್ದರೆ, ಲೀಲಾಳನ್ನೇ ಗಾಳವಾಗಿ ಮಾಡಿಕೊಂಡಿರುವ ಕೌಸಲ್ಯ ಹಣ ಪಡೆಯುತ್ತಿದ್ದಾಳೆ. ಪದೇ ಪದೇ ದುರ್ಗಾಳನ್ನು ಬ್ಲ್ಯಾಕ್ ಮಾಡುತ್ತಿರುತ್ತಾಳೆ. ಇದೀಗ ಎಸಿ ಬೇಕು ಎಂದು ಎಜೆ ಹಾಗೂ ಲೀಲಾ ಮದುವೆಯ ಫೋಟೋವನ್ನು ಕಳಿಸಿ ಬೆದರಿಸಿದ್ದಾಳೆ.
ಅಂತರಾಳಿಗೆ ಯಾವುದೇ ಕಾರಣಕ್ಕೂ ಲೀಲಾ ಮತ್ತು ಎಜೆಯ ಮದುವೆ ವಿಚಾರ ತಿಳಿಯಬಾರದು ಎಂದು ಅಂದುಕೊಂಡಿದ್ದರೆ, ದುರ್ಗಾ ಇದೇ ಕಾರಣಕ್ಕಾಗಿ ಕೌಸಲ್ಯಳ ಮನೆಗೆ ಎಸಿ ಅನ್ನು ಕಳಿಸಿಕೊಡುತ್ತಾಳೆ. ಎಸಿ ಬಂದಿದ್ದಕ್ಕೆ ಕೌಸಲ್ಯ ಖುಷಿ ಪಡುತ್ತಾಳೆ. ಇತ್ತ ಅಂತರಾಳಿಗೆ ಹಳೆಯದೇನು ನೆನಪಿಗೆ ಬಂದಿಲ್ಲ.

ಪ್ರೀತಿಯಲ್ಲಿ ಬಿದ್ದ ಅಂತರಾ
ಎಜೆಯ ಮಾತುಗಳನ್ನು ಕೇಳುತ್ತಾ, ಅವನ ಪ್ರೀತಿಯ ಬಗ್ಗೆ ತಿಳಿದುಕೊಳ್ಳುತ್ತಿರುವ ಅಂತರಾಳಿಗೆ ಈಗ ಎಜೆ ಮೇಲೆ ಪ್ರೀತಿ ಹುಟ್ಟಿದೆ. ಎಜೆಯನ್ನು ತನ್ನ ಗಂಡ ಎಂದು ಒಪ್ಪಿಕೊಳ್ಳುತ್ತಿದ್ದಾಳೆ. ಹಾಗಾಗಿ ಎಜೆ ಮತ್ತು ಆರ್ಯ ಇಬ್ಬರು ಹೆಚ್ಚು ಸಮಯ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಎಜೆ ತನ್ನ ಅಂತರಾ ಜೊತೆಗಿನ ಹಳೆಯ ಬದುಕು ಹಾಗೂ ಅವಳ ಮೇಲಿನ ಪ್ರೀತಿ ಎಲ್ಲವನ್ನು ಹೇಳಿಕೊಂಡು ಖುಷಿಯಿಂದ ಇದ್ದಾನೆ. ಇದನ್ನು ನೋಡಿ ಲೀಲಾಗೆ ಖುಷಿಯಂತೂ ಆಗುತ್ತಿದೆ.
ಲೀಲಾ ಮನದಲ್ಲಿ ಶುರು ಆತಂಕ
ಆದರೆ, ಲೀಲಾಗೆ ಇತ್ತೀಚೆಗೆ ಮನದಲ್ಲಿ ಸಂಕಟವೂ ಆಗುತ್ತಿದೆ. ಆದರೆ, ಆ ಸಂಕಟವನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತರಾ ಎಜೆಯ ಎಲ್ಲಾ ಕೆಲಸಗಳನ್ನೂ ತಾನೇ ಮಾಡುತ್ತಿದ್ದಾಳೆ. ಇದನ್ನೆಲ್ಲಾ ನೋಡಿದ ಲೀಲಾಗೆ ಬೇಸರವಾಗುತ್ತಿದೆ. ಎಜೆ ಹಾಗೂ ಅಂತರಾ ಇಬ್ಬರೂ ಒಂದಾಗುತ್ತಿದ್ದಾರೆ ಎಂಬುದನ್ನು ನೋಡಿ ಖುಷಿಯಾದರೂ ತನ್ನ ಗಂಡ ಇನ್ಮುಂದೆ ತನ್ನವರಲ್ಲ ಎಂಬ ನೋವು, ಆತಂಕ ಕೂಡ ಲೀಲಾಳನ್ನು ಕಾಡುತ್ತಿದೆ.


Click it and Unblock the Notifications











