Hitler Kalyana: ಅಣ್ಣ-ತಮ್ಮನ ಜಗಳಕ್ಕೆ ಲೀಲಾ ಕಾರಣಾಳೇ..?

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಅಂತರಾರದ್ದೇ ದೊಡ್ಡ ಕಥೆಯಾಗಿದೆ. ಅಂತರಾಳಿಗೆ ಹಳೆಯದ್ದು ಏನು ನೆನಪಾಗುತ್ತಿಲ್ಲ. ಎಜೆಗೆ ಅಂತರಾಳ ಬಳಿ ತನ್ನ ಭಾವನೆಗಳನ್ನು ಹೇಳಿಕೊಳ್ಳುವ ತುಡಿತ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಲೀಲಾ ತನ್ನ ಮುಂದಿನ ಭವಿಷ್ಯದ ಬಗ್ಗೆ ಯೋಚಿಸದೆಯೇ ಅಂತರಾ ಹಾಗೂ ಎಜೆಯನ್ನು ಒಂದು ಮಾಡಲು ಶತಪ್ರಯತ್ನ ಮಾಡುತ್ತಿದ್ದಾಳೆ. ಮನೆಯವರೆಲ್ಲಾ ಒಟ್ಟಾಗಿ ಖುಷಿಯಾಗಿ ಬಾಳಬೇಕು ಎಂದು ಬಯಸುತ್ತಿದ್ದಾಳೆ.

ಆದರೆ, ದುರ್ಗಾ ಮತ್ತು ಸರಸ್ವತಿ ಇಬ್ಬರೂ ಮನೆಯನ್ನು ಒಡೆಯುವುದರಲ್ಲೇ ಮುಳುಗಿದ್ದಾರೆ. ಲೀಲಾಳನ್ನು ಮನೆಯಿಂದ ಹೊರಗೆ ಹಾಗಿ ನೆಮ್ಮದಿ ಹುಡುಕುವ ಯತ್ನದಲ್ಲಿದ್ದಾರೆ. ಅಂತರಾಳನ್ನು ಧ್ಯಾನ ಅಭ್ಯಾಸವನ್ನು ಮಾಡಲು ಕರೆಯಲು ಹೋಗಿದ್ದಾನೆ. ಮಲಗಿರುವ ಅಂತರ ಎದುರಿಗೆ ಕುಳಿತಿದ್ದ ಎಜೆಯನ್ನು ನೋಡಿ ಅಂತರಾ ಶಾಕ್ ಆಗುತ್ತಾಳೆ. ಎಜೆ ತನ್ನ ಭಾವನೆಗಳನ್ನು ಹೇಳಿಕೊಳ್ಳಲು ಯತ್ನಿಸುತ್ತಾನೆ. ಹಾಗೆಯೇ ಅವಳನ್ನು ಧ್ಯಾನ ಮಾಡಲು ಕರೆದುಕೊಂಡು ಬರುತ್ತಾನೆ.

Hitler Kalyana serial 19th April Episode Written Update

ಅಂತರಾ ಕೂಡ ಎಜೆ ಮಾತುಗಳಿಗೆ ಒಪ್ಪುತ್ತಾಳೆ. ಧ್ಯಾನ ಮಾಡುವಾಗ ಅಂತರಾಳಿಗೆ ಎಜೆಯ ಹಂಬಲ, ಲೀಲಾಳ ಪ್ರಯತ್ನಗಳೆಲ್ಲವೂ ನೆನಪಾಗುತ್ತದೆ. ಎಲ್ಲರೂ ತನ್ನ ಹಳೆಯ ನೆನಪುಗಳು ಮರಳಿ ಬರಲಿ ಎಂದು ಮಾಡುತ್ತಿರುವ ಪ್ರಯತ್ನಗಳು ನೆನಪಾಗಿ ಅವಳಿಗೆ ಹಿಂಸೆಯಾಗುತ್ತದೆ. ಇದರಿಂದ ಅಂತರ ನನ್ನ ಕೈಯಲ್ಲಿ ಇದೆಲ್ಲಾ ಸಾಧ್ಯವಿಲ್ಲ ಎಂದು ಎದ್ದು ಬರುತ್ತಾಳೆ.

ಅಂತರಾ ತುಂಬಾನೇ ಡಿಸ್ಟರ್ಬ್ ಆಗಿರುತ್ತಾಳೆ. ಇದನ್ನು ನೋಡಿದ ರೂಪಾ ಪ್ರಶ್ನೆ ಮಾಡುತ್ತಾಳೆ. ಮೊದಲಿಗೆ ಅಂತರಾ ಏನು ಹೇಳಿಕೊಳ್ಳುವುದಿಲ್ಲ. ಬಳಿಕ ತನಗಾದ ಅನುಭವಗಳನ್ನು ಹೇಳಿಕೊಳ್ಳುತ್ತಾಳೆ. ರೂಪಾ ಸ್ವಲ್ಪ ಸಮಾಧಾನಕರ ಮಾತುಗಳನ್ನು ಆಡುತ್ತಾಳೆ. ಇದೆಲ್ಲವನ್ನು ಎಜೆ ಕೇಳಿಸಿಕೊಳ್ಳುತ್ತಾನೆ. ನಂತರ ಎಜೆ ಬಂದು ಅಂತರಾ ಜೊತೆಗಿನ ತನ್ನ ಭಾವನೆಗಳನ್ನು ಹಾಗೂ ಅವರಿಬ್ಬರ ಮಧ್ಯೆ ಇದ್ದ ಸಂಬಂಧಗಳ ಬಗ್ಗೆಯೂ ಹೇಳುತ್ತಾನೆ.

ಈ ವೇಳೆ ಎಜೆ ಅಂತರಾಳನ್ನು ನೀವು, ಹೋಗಿ, ಬನ್ನಿ ಎಂದು ಬಹುವಚನದಲ್ಲಿ ಮಾತನಾಡಿಸಲು ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಅಂತರ ನೀವು ನನ್ನನ್ನು ಏಕವಚನದಲ್ಲಿ ಮಾತನಾಡಿಸಬಹುದು ಎಂದು ಹೇಳುತ್ತಾಳೆ. ಇದರಿಂದ ಎಜೆಗೆ ಖುಷಿಯಾಗುತ್ತದೆ. ಅಂತರಾ ಆದಷ್ಟು ಬೇಗ ತನ್ನ ಬಗ್ಗೆ ನೆನಪು ಮಾಡಿಕೊಳ್ಳುತ್ತಾಳೆ. ಇಬ್ಬರೂ ಮತ್ತೆ ಸುಖ ಜೀವನವನ್ನು ನಡೆಸುತ್ತೇವೆ ಎಂಬ ಭರವಸೆ ಎಜೆಗೆ ಹೆಚ್ಚಾಗುತ್ತದೆ.

Hitler Kalyana serial 19th April Episode Written Update

ಇನ್ನು ಪ್ರೇಮ್ ಹಾಗೂ ಪ್ರಮೋದ್ ಕಿತ್ತಾಡಿಕೊಂಡಿದ್ದಾರೆ. ಸರಸ್ವತಿ ಮಾತ್ರೆಯನ್ನು ಬದಲಾಯಿಸಿದ ಕಾರಣ ಜಗಳ ಮಾಡುತ್ತಾರೆ. ಸರಸ್ವತಿ ಮನೆಯನ್ನು ಒಡೆಯಲು ಯತ್ನಿಸಿದ್ದಾಳೆ. ಇಬ್ಬರೂ ಮುನಿಸಿಕೊಂಡಿರುವುದನ್ನು ನೋಡಿ ಅಜ್ಜಿ ಬೇಸರ ಮಾಡಿಕೊಳ್ಳುತ್ತಾರೆ. ಲೀಲಾ ಇಬ್ಬರನ್ನು ಒಂದು ಮಾಡಲು ಯತ್ನಿಸುತ್ತಾಳೆ. ಆದರೆ ಇಬ್ಬರೂ ಸ್ವಾಭಿಮಾನ, ನ್ಯಾಯ ಎಂದೆಲ್ಲಾ ಹಠ ಹಿಡಿದಿದ್ದಾರೆ.

ಲೀಲಾಳಿಗೆ ಈಗ ಇದೇ ದೊಡ್ಡ ಯೋಚನೆಯಾಗಿದೆ. ಇಬ್ಬರೂ ಹೀಗೆ ಜಗಳ ಮಾಡಿಕೊಂಡರು. ಇವರಿಂದ ಮನೆ ಎರಡು ಭಾಗವಾದರೆ ಏನು ಚೆಂದ. ಇವರಿಬ್ಬರನ್ನು ಒಂದು ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದಾಳೆ. ಹೀಗಿರುವಾಗ ಸರಸ್ವತಿ ಖುಷಿಯಲ್ಲಿದ್ದು, ನಡೆದ ಘಟನೆಯನ್ನೆಲ್ಲಾ ದುರ್ಗಾಳಿಗೆ ಹೇಳುತ್ತಾಳೆ.

ದುರ್ಗಾ ಈಗ ಮತ್ತೊಂದು ಹೊಸ ಪ್ಲಾನ್ ಅನ್ನು ಮಾಡುತ್ತಾಳೆ. ಲೀಲಾ ಪ್ರಮೋದ್ ಹಾಗೂ ಪ್ರೇಮ್ ಜಗಳ ಮಾಡುವಂತೆ ಮಾಡಿದಳು. ಅವಳಿಂದ ಇಬ್ಬರೂ ಕಿತ್ತಾಡಿದ್ದಾರೆ ಎಂದು ಹಬ್ಬಿಸಬೇಕು. ಆಗ ಲೀಲಾ ಬೆಲೆ ಮನೆಯಲ್ಲಿ ಕಡಿಮೆ ಆಗುತ್ತೆ. ಇದರಿಂದ ನಮಗೆ ಬಹಳ ಒಳ್ಳೆಯದು ಎಂದು ಹೇಳುತ್ತಾಳೆ. ದುರ್ಗಾ ಮಾತನ್ನು ಕೇಳಿದ ಸರಸ್ವತಿ ಹೌದು. ಲೀಲಾಳನ್ನ ಹೇಗಾದರೂ ಮಾಡಿ ಈ ಮನೆಯಿಂದ ಹೊರಗೆ ಹಾಕಬೇಕು ಎಂದು ಹೇಳುತ್ತಾಳೆ.

More from Filmibeat

English summary
Hitler Kalyana serial 19th April Episode Written Update. Here Is Detials about Leela tries to console brothers at home. But they are fighting for silly reason. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X