Hitler Kalyana: ಲೀಲಾಳನ್ನು ಮನೆಯಿಂದ ಆಚೆ ಹಾಕಲು ದುರ್ಗಾ ಹೊಸ ಪ್ಲ್ಯಾನ್

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಮತ್ತು ಅಂತರಾಳ ಪ್ರೀತಿ ಒಂದು ಕಡೆಯಾದರೆ, ವಿಶ್ವರೂಪ್ ಹಾಗೂ ರೂಪ ಪ್ರೀತಿ ಮತ್ತೊಂದು ಕಡೆ ಶುರುವಾಗಿದೆ. ವಿಶ್ವರೂಪ್, ರೂಪಾಳನ್ನು ಒಲಿಸಿಕೊಳ್ಳುವುದಕ್ಕಾಗಿ ಪದೇ ಪದೇ ಏನಾದರೂ ಒಂದು ಮಾಡುತ್ತಲೇ ಇದ್ದಾನೆ. ಈ ಬಾರಿ ಕೈಗೆ ರೂಪ ಎಂದು ಅಚ್ಚೆ ಅನ್ನು ಹಾಕಿಸಿಕೊಂಡಿದ್ದಾನೆ. ಇದನ್ನು ನೋಡಿದ ರೂಪ ಖುಷಿಪಡುತ್ತಾಳೆ.

ರೂಪ ಸೆಲ್ಫಿ ಕೇಳುತ್ತಾಳೆ. ಇನ್ನೇನು ವಿಶ್ವರೂಪ್ ಪ್ರೀತಿಯನ್ನು ಒಪ್ಪಿಕೊಳ್ಳಬೇಕು ಅಷ್ಟರಲ್ಲಿ ಎಡವಟ್ಟು ಆಗಿದೆ. ಇವಳಿಲ್ಲ ಎಂದರೆ ಇನ್ನೊಬ್ಬಳು ಬರುತ್ತಾಳೆ ಎಂದು ಹೇಳಿ ಸಿಕ್ಕಿ ಹಾಕಿಕೊಂಡಿದ್ದಾನೆ. ಅಂತರಾ ಎಜೆ ಜೊತೆಗೆ ಪ್ರೀತಿಯಲ್ಲಿ ಬಿದ್ದಾಗಿದೆ. ಅಂತರಾಳಿಗೆ ಈಗ ಎಜೆ ಬಿಟ್ಟು ಬೇರೇನೂ ಕಾಣುತ್ತಿಲ್ಲ. ಎಜೆ ಕೂಡ ಅಂತರಾ ಹೇಳಿದ್ದನ್ನು ಕೇಳುತ್ತಿದ್ದಾನೆ.

Hitler Kalyana serial 19th May Episode Written Update

ಅಂತರಾ ಹೇಳಿದಳು ಎಂದು ಎಜೆ ತನ್ನ ಸೂಟ್ ಅನ್ನು ಕೂಡ ಬದಲಾಯಿಸಿದ್ದಾನೆ. ಇದನ್ನೆಲ್ಲ ನೋಡಿ ಅಂತರಾಳಿಗೆ ಸಕತ್ ಖುಷಿಯಾಗಿದೆ. ಈ ಬಗ್ಗೆ ಅಂತರಾ ಒಬ್ಬಳೇ ರೂಮಿನಲ್ಲಿ ಮಾತನಾಡಿಕೊಳ್ಳುತ್ತಿದ್ದಾಳೆ. ತನಗೂ ಎಜೆಗೂ ಯಾಕೆ ಹೀಗೆಲ್ಲಾ ಆಗುತ್ತಿದೆ ಎಂದು ಒಬ್ಬಳೇ ನಗುತ್ತಾ ಮಾತನಾಡುತ್ತಿರುವುದನ್ನು ನೋಡಿ ರೂಪ ಹಾಗೂ ಲೀಲಾ ರೇಗಿಸಲು ಶುರು ಮಾಡಿದ್ದಾರೆ.

ವ್ರತದ ಬಗ್ಗೆ ವಿಚಾರಿಸಿದ ಅಂತರಾ

ಲೀಲಾ ವ್ರತ ಮಾಡಿದಾಗ ಮಂಡಿಗೆ ಪೆಟ್ಟು ಆಗಿದೆ. ಇದರಿಂದ ಕುಂಟುತ್ತಾ ನಡೆಯುತ್ತಿದ್ದಾಳೆ. ಲೀಲಾ ನಡೆಯುವ ರೀತಿಯನ್ನು ನೋಡಿ ಅಂತರಾ ಭಯಗೊಂಡಿದ್ದಾಳೆ. ಏನಾಯ್ತು ಎಂದು ಕೇಳಿದ್ದಕ್ಕೆ ರೂಪಾ ಬಾಯಿ ತಪ್ಪಿ ವ್ರತ ಮಾಡಿದರೆ, ಇನ್ನೇನಾಗುತ್ತೆ ಎಂದು ಹೇಳಿದ್ದಾಳೆ. ಇದರಿಂದ ಅಂತರಾ ವ್ರತನಾ ಯಾಕೆ ಮಾಡಿದ್ದು, ಏನಾಯ್ತು ಎಂದು ಕೇಳುತ್ತಾಳೆ.

ಲೀಲಾ, ಅಂತರಾಳನ್ನು ಯಾಮಾರಿಸಿದ್ದಾಳೆ. ನಾನು ವ್ರತ ಮಾಡುವಷ್ಟು ದೊಡ್ಡವಳಲ್ಲ. ದೇವಸ್ಥಾನ ಸುತ್ತಾಡಿ ಕಾಲು ನೋವು ಬಂದಿದೆ. ಸ್ವಲ್ಪ ಸಮಯ ಸರಿ ಹೋಗುತ್ತೆ ಎಂದು ಹೇಳಿದ್ದಾಳೆ. ಆದರೆ, ಇಂದಲ್ಲ ನಾಳೆ, ಲೀಲಾಳ ವ್ರತದ ಬಗ್ಗೆ, ಲೀಲಾ- ಎಜೆ ಮದುವೆ ಬಗ್ಗೆ ಅಂತರಾಳಿಗೆ ಗೊತ್ತಾಗುವುದಂತೂ ಗ್ಯಾರೆಂಟಿ. ಆದರೆ, ಅಂತರಾಳಿಗೆ ಸತ್ಯ ಗೊತ್ತಾದ ಮೇಲೆ ಏನಾಗುತ್ತದೋ ಗೊತ್ತಿಲ್ಲ.

Hitler Kalyana serial 19th May Episode Written Update

ಕೌಸಲ್ಯಗೆ ತಿರುಗೇಟು ಕೊಟ್ಟ ದುರ್ಗಾ

ಇನ್ನು ಕೌಸಲ್ಯ ಎಸಿ ಅನ್ನೇನೋ ದುರ್ಗಾ ಕೈಲಿಂದ ತರಿಸಿಕೊಂಡಳು. ಆದರೆ ಈ ಎಸಿ ಅನ್ನು ಫಿಟ್ ಮಾಡಿಸಲು ಈಗ ಮತ್ತೆ 4 ಸಾವಿರ ಹಣ ಕೊಡಬೇಕಿದೆ. ಇದರಿಂದ ಕೌಸಲ್ಯ ಜೇಬಿಗೆ ಕತ್ತರಿ ಬಿದ್ದಿದೆ. ಇದನ್ನು ತಪ್ಪಿಸುವ ಸಲುವಾಗಿ ಕೌಸಲ್ಯ ಮತ್ತೆ ದುರ್ಗಾಳನ್ನು ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದಾಳೆ. ಆದರೆ ದುರ್ಗಾ ಈ ಸಲ ಬಗ್ಗುವುದಕ್ಕೆ ತಯಾರಿಲ್ಲ.

ಈಗಲೇ ಅಂತರಾಳಿಗೆ ಸತ್ಯ ಹೇಳಿ. ಲೀಲಾಗೆ ಮದುವೆಯಾಗಿದೆ ಎಂದು ಹೇಳಲು ಫೋನ್ ನಂಬರ್ ಇದಿಯಾ ಇಲ್ಲ. ನಾನು ಕೊಡ್ಲಾ ಎಂದು ಕೇಳುತ್ತಾಳೆ. ಕೌಸಲ್ಯ ಗಾಬರಿಯಾಗಿ ಫೋನ್ ಅನ್ನು ಕಟ್ ಮಾಡಿ ಬಿಡುತ್ತಾಳೆ. ದುರ್ಗಾ ಕೈಕೊಟ್ಟರೆ ಮುಂದೇನು ಗತಿ ಎಂದು ಯೋಚಿಸುತ್ತಾಳೆ. ದುರ್ಗಾ ಸದ್ಯ ಹೊಸ ಪ್ಲಾನ್ ಮಾಡಿದ್ದಾಳೆ.

ದುರ್ಗಾ ಹೊಸ ಪ್ಲಾನ್ ಏನು..?

ಕೌಸಲ್ಯ ತಾನಾಗಿ ಹೋಗಿ ಲೀಲಾಗೆ ಮದುವೆಯಾಗಿದೆ ಎಂದು ಅಂತರಾ ಬಳಿ ಹೇಳಿದರೆ, ನನ್ನ ಮೆಚ್ಚಿನ ಸ್ನೇಹಿತೆ ನನ್ನಿಂದ ಮದುವೆಯಾಗಿರುವ ಸತ್ಯವನ್ನು ಮುಚ್ಚಿಟ್ಟಳು ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಜೊತೆಗೆ ಹುಡುಗಾ ಯಾರು ಎಂದು ಕೇಳಿದರೆ, ಲೀಲಾ ಅಂತೂ ಪ್ರಾಣ ಹೋದರೂ ಎಜೆ ಎಂದು ಹೇಳುವುದಿಲ್ಲ. ಇದರಿಂದ ಲೀಲಾ ಮನೆಯಿಂದ ಹೊರಗೆ ಹೋಗಬೇಕಾಗುತ್ತೆ. ನಮಗೂ ಇದೇ ಬೇಕಿರುವುದು ಎಂದು ಪ್ಲಾನ್ ಮಾಡಿದ್ದಾಳೆ.

More from Filmibeat

English summary
Hitler Kalyana serial 19th May Episode Written Update. here is details about durga says leela to tell the truth about leela marriage. This helps durga to send out leela. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X