Hitler Kalyana: ಸಂದರ್ಭವನ್ನು ಬಳಸಿಕೊಂಡು ವಿಶ್ವರೂಪ್‌ಗೆ ಗೇಟ್ ಪಾಸ್ ಕೊಟ್ಟ ದುರ್ಗಾ
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಂತರಾ ಕಥೆಯೇ ಮಿಸ್ಟರಿಯಾಗಿ ಉಳಿದಿರುವಾಗ, ಈಗ ಮತ್ತೊಂದು ಕತೆ ಶುರುವಾಗಿದೆ. ಆಸ್ಪತ್ರೆಯಲ್ಲಿ ಇರುವ ಆ ವ್ಯಕ್ತಿ ಯಾರು ಎಂಬುದನ್ನು ಇನ್ನು ಧಾರಾವಾಹಿ ಬಿಟ್ಟುಕೊಟ್ಟಿಲ್ಲ.
ಅಂತರಾ ಏನೋ ಎಜೆಯ ಮೊದಲ ಹೆಂಡತಿ ಆಗಿದ್ದವಳು. ಎಜೆ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ. ಆಕೆಯನ್ನು ಬಿಟ್ಟು ಒಂದು ಕ್ಷಣವೂ ಬಿಟ್ಟಿರುತ್ತಿರಲಿಲ್ಲ.
ಆದರೆ, ಆಕೆ ಇದ್ದಕ್ಕಿದ್ದ ಹಾಗೆಯೇ ಮನೆಯಿಂದ ಮಾಯವಾಗಿದ್ದಳು. ಈಗ ಪುನಃ ಕಾಣಿಸಿಕೊಂಡಿದ್ದು, ಇದು ಇನ್ನೂ ಎಜೆಗೆ ಗೊತ್ತಾಗಿಲ್ಲ. ಅಂತರಾ ಕತೆಯನ್ನು ನೋಡಲು ಪ್ರೇಕ್ಷಕರು ಕೂಡ ಕಾಯುತ್ತಿದ್ದಾರೆ.

ಆಸ್ಪತ್ರೆಯಲ್ಲಿರುವ ಆತ ಯಾರು?
ಈಗ ಧಾರಾವಾಹಿಯಲ್ಲಿ ಮತ್ತೊಂದು ಪಾತ್ರ ಕಾಣಿಸಿಕೊಂಡಿದೆ. ಅದೇ ಆಸ್ಪತ್ರೆಯಲ್ಲಿರುವ ವ್ಯಕ್ತಿ. ಆತ ಯಾರೆಂದು ಇನ್ನೂ ಮುಖ ಪರಿಚಯ ಕೂಡ ಮಾಡಿಸಿಲ್ಲ. ಎಜೆಗೆ ಆಸ್ಪತ್ರೆಯಿಂದ ಕರೆ ಬಂದಾಗ ನೋಡಲು ಹೋಗುತ್ತಾನೆ. ಆತನೊಂದಿಗೆ ಮಾತನಾಡುತ್ತಿರುತ್ತಾನೆ. ನೀನು ಇವತ್ತಲ್ಲ ನಾಳೆ ಸರಿ ಹೋಗುತ್ತೀಯ ಅನ್ನೋ ನಂಬಿಕೆ ನನಗಿದೆ. ಆ ದಿನಕ್ಕೋಸ್ಕರ ಕಾಯುತ್ತಿದ್ದೇನೆ ಎಂದು ಹೇಳುತ್ತಾನೆ. ಆಗ ಆತ ಎಜೆಗೆ ಕೈಯನ್ನು ಪರಚುತ್ತಾನೆ. ಇದರಿಂದ ಎಜೆ ಕೈ ಗಾಯವಾಗುತ್ತದೆ. ಬಹುಶಃ ಆ ವ್ಯಕ್ತಿಗೂ ಅಂತರಾ ಮಾಯವಾಗಿರುವುದಕ್ಕೂ ಏನೋ ಲಿಂಕ್ ಇದೆ ಎಂದು ಪ್ರೇಕ್ಷಕರು ಊಹಿಸಿದ್ದಾರೆ.

ವಿಶ್ವರೂಪ್‌ಗೆ ಬೈದ ಎಜೆ
ಎಜೆ ಆಸ್ಪತ್ರೆಯಿಂದ ಬಂದು ಅಜ್ಜಿಯ ಬಳಿ ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾನೆ. ಅಜ್ಜಿ ದುಃಖದಿಂದ ಅಳುತ್ತಾರೆ. ನಮ್ಮ ಮನೆಯಲ್ಲಿ ಎಲ್ಲವೂ ಚೆನ್ನಾಗಾಗುತ್ತಿದೆ. ಎಲ್ಲರೂ ಮದುವೆಗೆ ಬರುತ್ತಿದ್ದಾರೆ. ಆದರೆ ಅವನು ಮಾತ್ರವೇ ಬರೋದಿಲ್ಲ ಎಂದು ಕಣ್ಣೀರು ಹಾಕುತ್ತಿರುತ್ತಾರೆ. ಎಜೆ ಸಮಾಧಾನ ಮಾಡಿ ಬರುತ್ತಾರೆ. ಗಾಯಕ್ಕೆ ಔಷಧಿ ಹಚ್ಚಿಕೊಳ್ಳುವಾಗ ವಿಶ್ವರೂಪ್ ಬಂದು ತಮಾಷೆ ಮಾಡುತ್ತಾನೆ. ಈ ಗಾಯಕ್ಕೆ ಲೀಲಾನೇ ಕಾರಣ. ಇಬ್ಬರ ನಡುವಿನ ಪ್ರೀತಿಯಿಂದ ಈ ಗಾಯವಾಗಿದೆ ಎಂದು ತಮಾಷೆ ಮಾಡುತ್ತಾನೆ. ಇದರಿಂದ ಎಜೆ ಕೋಪ ಮಾಡಿಕೊಂಡು ಪರ್ಸನಲ್ ವಿಚಾರಕ್ಕೆ ಬರಬೇಡ ಎಂದು ಬೈದು ಕಳಿಸುತ್ತಾನೆ.

ಸಂದರ್ಭ ಲಾಭ ಮಾಡಿಕೊಂಡ ದುರ್ಗಾ
ಈ ಸಂದರ್ಭವನ್ನು ಉಪಯೋಗಿಸಿಕೊಂಡ ದುರ್ಗಾ, ವಿಶ್ವರೂಪ್‌ಗೆ ವ್ಯಂಗ್ಯವಾಗಿ ಮಾತನಾಡುತ್ತಾಳೆ. ನಿನಗೆ ಈ ಮನೆಯಲ್ಲಿ ಬೆಲೆಯಿಲ್ಲ. ಬೇಕಂತಲೇ ಪರೋಕ್ಷವಾಗಿ ಆಗಿ ಎಜೆ ನಿಮ್ಮನ್ನು ಮನೆಯಿಂದ ಹೋಗಲು ಹೇಳಿದ್ದಾರೆ. ಆದರೆ, ಅದು ನಿಮಗೆ ಅರ್ಥವಾಗಿಲ್ಲ ಎಂದು ಹೇಳುತ್ತಾಳೆ. ಇದರಿಂದ ಬೇಸರಗೊಂಡ ವಿಶ್ವರೂಪ್ ಮನೆಯಿಂದ ಹೊರಡುತ್ತಾನೆ. ದುರ್ಗಾ ಮನೆಯಲ್ಲಿ ಇಲ್ಲದಿರುವುದಕ್ಕೆ ಖುಷಿ ಪಡುತ್ತಾಳೆ. ಆದರೆ, ಎಜೆಗೆ ನಂಬಿಕೆಯೇ ಬರುವುದಿಲ್ಲ.

ವಿಶ್ವರೂಪ್ ಕಪಾಳಕ್ಕೆ ಒಡೆದು ತಬ್ಬಿದ ಎಜೆ
ವಿಶ್ವರೂಪ್ ಇಲ್ಲದೇ ಎಜೆಗೆ ಇರಲು ಕಷ್ಟವಾಗುತ್ತದೆ. ಅವನು ಹೇಗೆ ಮನೆ ಬಿಟ್ಟು ಹೋದ. ಇದೇ ಅವನ ಮನೆ. ಈ ಮನೆ ಬಿಟ್ಟು ಎಲ್ಲಿಗೆ ಹೋಗಿದ್ದಾನೆ ಎಂದು ಹುಡುಕಲು ಹೋಗುತ್ತಾನೆ. ಆಗ ಲೀಲಾ ಕೂಡ ಜೊತೆಗೆ ಹೋಗುತ್ತಾಳೆ. ದಾರಿಯಲ್ಲಿ ಇಬ್ಬರಿಗೂ ವಿಶ್ವರೂಪ್ ಸಿಗುತ್ತಾನೆ. ಆಗ ಪ್ರೀತಿಯಿಂದ ಎಜೆ, ವಿಶ್ವರೂಪ್ ಕಪಾಳಕ್ಕೆ ಹೊಡೆದು. ನನ್ನ ಬಿಟ್ಟು ಹೋಗುತ್ತೀಯಾ ಎಂದು ತಬ್ಬಿಕೊಳ್ಳುತ್ತಾನೆ. ಮತ್ತೆ ವಿಶ್ವರೂಪ್ ಮನೆಗೆ ಬರುತ್ತಾನೆ.


Click it and Unblock the Notifications











