For Quick Alerts
  ALLOW NOTIFICATIONS  
  For Daily Alerts

  ಎಜೆ - ಶರಣ್ ಬಾಲ್ಯದ ಗೆಳೆಯರಂತೆ: 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಹಳ್ಳಿಮೇಷ್ಟ್ರು- ಸೂಜಿ ಬಂದಿದ್ಯಾಕೆ?

  By ಪ್ರಿಯಾ ದೊರೆ
  |

  ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಈಗ ಲೀಲಾ ಹಾಗೂ ಎಜೆ ಒಂದಾಗಿದ್ದಾರೆ. ಲೀಲಾ ಬಗ್ಗೆ ಯಾರು ಏನೇ ಹೇಳಿದರೂ ಎಜೆ ನಂಬುತ್ತಿಲ್ಲ. ಇವರಿಬ್ಬರ ನಡುವೆ ಪ್ರೀತಿಯ ಜೊತೆಗೆ ನಂಬಿಕೆಯೂ ಹೆಚ್ಚಾಗಿದೆ. ಹೀಗಾಗಿ ಇವರಿಬ್ಬರನ್ನೂ ಬೇರೆ ಮಾಡಲು ಸಾಧ್ಯವಾಗುತ್ತಿಲ್ಲ.

  ದುರ್ಗಾ ಹಾಗೂ ಸರಸ್ವತಿ ಮಾಡುವ ಪ್ರತಿಯೊಂದು ಪ್ಲ್ಯಾನ್‌ಗಳು ಕೂಡ ಈಗ ಉಲ್ಟಾ ಆಗುತ್ತಲೇ ಇದೆ. ಲೀಲಾಳನ್ನು ಹೇಗಾದರೂ ಮಾಡಿ ಮನೆಯಿಂದ ಹೊರಗೆ ಹಾಕಬೇಕು ಎಂದು ಹರಸಾಹಸ ಪಡುತ್ತಿದ್ದಾರೆ. ಆದರೆ ಅದ್ಯಾವುದೂ ಸಕ್ಸಸ್ ಆಗುತ್ತಿಲ್ಲ.

  ಬೇಲ್ ಪಡೆದು ಮನೆಗೆ ವಾಪಸ್ ಬಂದ ಅನು ಸಿರಿಮನೆ!ಬೇಲ್ ಪಡೆದು ಮನೆಗೆ ವಾಪಸ್ ಬಂದ ಅನು ಸಿರಿಮನೆ!

  ಹಾಗಾಗಿ ಈಗ ದುರ್ಗಾ, ಏಜೆ- ಲೀಲಾ ಒಂದಾಗಲು ಬಿಡಬೇಕು ಆಗಲೇ ಇವರಿಬ್ಬರನ್ನೂ ದೂರ ಮಾಡಬಹುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇವರಿಬ್ಬರು ಏನೇ ಪ್ಲ್ಯಾನ್‌ ಮಾಡಿದರೂ ಇಬ್ಬರೂ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಇದು ಸೊಸೆಯಂದಿರನ್ನು ಇನ್ನಷ್ಟು ಕುಗ್ಗುವಂತೆ ಮಾಡುತ್ತಿದೆ.

   ಆಕ್ಟಿಂಗ್ ಮಾಡಿ ಗೆದ್ದ ಲೀಲಾ

  ಆಕ್ಟಿಂಗ್ ಮಾಡಿ ಗೆದ್ದ ಲೀಲಾ

  ಸೊಸೆಯಂದಿರ ಜೊತೆಗೆ ವಾಗ್ವಾದಕ್ಕೆ ಇಳಿದ ಲೀಲಾಗೆ ಆಕ್ಟಿಂಗ್ ಬಗ್ಗೆ ಪಾಠ ಮಾಡಲಾಗುತ್ತದೆ. ಆಗ ಲೀಲಾ ಆಕ್ಟಿಂಗ್‌ನಲ್ಲಿ ನಾವು ಪಂಟರು ಎಂದೆಲ್ಲಾ ಮಾತನಾಡುವಾಗ, ಸೊಸೆಯಂದಿರು ನಿಮ್ಮ ಆಕ್ಟಿಂಗ್ ಅನ್ನು ನಿಜ ಎಂದು ಎಜೆ ನಂಬಬೇಕು ಎಂದು ಚಾಲೆಂಜ್ ಮಾಡುತ್ತಾರೆ. ಆಗ ಲೀಲಾ ತಲೆ ನೋವು ಎಂದು ನಾಟಕ ಮಾಡುತ್ತಾಳೆ. ಲೀಲಾ ಆಡಿದ ನಾಟಕಕ್ಕೆ ಎಜೆ ಶಾಕ್ ಆಗುತ್ತಾನೆ. ಲೀಲಾಗೆ ಏನಾಯ್ತು ಎಂದು ಕೇಳುತ್ತಾನೆ. ಲೀಲಾ ನಾನಿನ್ನು ಹೆಚ್ಚು ಸಮಯ ಬದುಕಲ್ಲ ಅನ್ಸತ್ತೆ ಅಂತೆಲ್ಲಾ ಮಾತನಾಡಿದಾಗ ಎಜೆಗೆ ಭಯವಾಗುತ್ತದೆ. ನಾನಿರುವವರೆಗೂ ನಿನಗೆ ಏನೂ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಆಗ ಲೀಲಾ ತಾನು ಮಾಡಿದ್ದು ನಾಟಕ ಎಂದು ಹೇಳುತ್ತಾಳೆ.

  'ಜೊತೆ ಜೊತೆಯಲಿ' ಬದಲು 'ಶ್ರೀರಸ್ತು ಶುಭಮಸ್ತು'? ಎರಡು ಧಾರಾವಾಹಿಗಳ ಭವಿಷ್ಯವೇನು?'ಜೊತೆ ಜೊತೆಯಲಿ' ಬದಲು 'ಶ್ರೀರಸ್ತು ಶುಭಮಸ್ತು'? ಎರಡು ಧಾರಾವಾಹಿಗಳ ಭವಿಷ್ಯವೇನು?

   ಲೀಲಾಳ ಸ್ಥಿತಿ ಕಂಡು ಹೆದರಿದ ಎಜೆ

  ಲೀಲಾಳ ಸ್ಥಿತಿ ಕಂಡು ಹೆದರಿದ ಎಜೆ

  ನಾಟಕವಾಡಿದ್ದನ್ನು ನೋಡಿ ಎಜೆ, ಲೀಲಾಗೆ ಬೈಯುತ್ತಾನೆ ಎಂದು ಸೊಸೆಯಂದಿರು ತಿಳಿದಿದ್ದರು. ಆದರೆ ಎಜೆ, ಲೀಲಾಳನ್ನು ಬೈಯ್ಯುವ ಬದಲು ಹೊಗಳಿದ್ದಾನೆ. ನೀನು ಮಾಡಿದ್ದು ಆಕ್ಟಿಂಗ್ ಅಂತಾನೇ ಗೊತ್ತಾಗಲಿಲ್ಲಾ ಎಂದು ಹೇಳಿ ನಿನಗೊಂದು ಸರ್ಪ್ರೈಸ್ ಇದೆ. ನಾನು ಹೇಳುವ ಜಾಗಕ್ಕೆ ಹೋಗು ಎಂದು ಹೇಳುತ್ತಾನೆ. ವಿಶ್ವರೂಪ್ ಜೊತೆ ಮಾತನಾಡಿದ ಎಜೆ, ಲೀಲಾಗೆ ಒಳ್ಳೆಯ ಸರ್ಪ್ರೈಸ್ ಅನ್ನು ಕೊಡಲು ತೀರ್ಮಾನ ಮಾಡುತ್ತಾನೆ.

   'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಿಶ್ವಿಕಾ

  'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಿಶ್ವಿಕಾ

  ಎಜೆ ಹೇಳಿದ ಜಾಗಕ್ಕೆ ಲೀಲಾ ಹೋಗುತ್ತಾಳೆ. ಅಲ್ಲಿ ನಟಿ ನಿಶ್ವಿಕಾ ಬಂದಿರುತ್ತಾಳೆ. ಅವಳನ್ನು ನೋಡಿದ ಲೀಲಾ ಫುಲ್ ಖುಷಿಯಾಗುತ್ತಾಳೆ. ನಿಶ್ವಿಕಾ ಬಗ್ಗೆ ಲೀಲಾ ತುಂಬಾನೇ ಮಾತನಾಡಿ ಅವರು ನಟಿಸಿರುವ 'ಗುರು ಶಿಷ್ಯರು' ಸಿನಿಮಾದ ಹಾಡುಗಳು ಹಾಗೂ ಇತರೆ ವಿಷಯವನ್ನು ಮಾತನಾಡುತ್ತಾಳೆ. ಆಗ ನಿಶ್ವಿಕಾ ನಿಮ್ಮಂತಹ ಅಭಿಮಾನಿಗಳನ್ನು ನೋಡುವುದಕ್ಕೆ ಖುಷಿಯಾಗುತ್ತದೆ ಎಂದು ಹೇಳುತ್ತಾರೆ. ನಂತರ ಲೀಲಾ ಹೋಟೆಲ್ ಒಳಗೆ ಹೋಗುತ್ತಾಳೆ.

  ಆದಿಗೆ ಇನ್ನು ಅಮ್ಮನ ಮೇಲೆ ಅನುಮಾನ : ಮಗನ ಪ್ರೀತಿ ಕಂಡು ಖುಷಿಯಾಗುತ್ತಿದ್ದಾಳೆ ಅಖಿಲಾ..!ಆದಿಗೆ ಇನ್ನು ಅಮ್ಮನ ಮೇಲೆ ಅನುಮಾನ : ಮಗನ ಪ್ರೀತಿ ಕಂಡು ಖುಷಿಯಾಗುತ್ತಿದ್ದಾಳೆ ಅಖಿಲಾ..!

   ಶರಣ್-ನಿಶ್ವಿಕಾ ಜೊತೆ ಲೀಲಾ ಮಾತು

  ಶರಣ್-ನಿಶ್ವಿಕಾ ಜೊತೆ ಲೀಲಾ ಮಾತು

  ತಕ್ಷಣ ಆಚೆ ಬರುವ ಲೀಲಾ ಎಜೆಗೆ ಕರೆ ಮಾಡಿ ಅವರು ನನ್ನನ್ನು ಬಹಳ ಬೈದು ಬಿಟ್ಟರು ಎಂದು ಬೇಸರದಿಂದ ಹೇಳುತ್ತಾಳೆ. ಆಗ ಎಜೆ ಅಲ್ಲಿಗೆ ಬರುತ್ತಾನೆ. ಶರಣ್ ಎಂಟ್ರಿಕೊಟ್ಟು ಎಜೆಯನ್ನು ಅಭಿ ಎಂದು ಕರೆದು ತಬ್ಬಿಕೊಳ್ಳುತ್ತಾನೆ. ಆಗ ನಿನ್ನ ಬೈಯದೇ ಇದ್ದಿದ್ದರೆ ಅಭಿ ಬರುತ್ತಿರಲಿಲ್ಲ. ಹಾಗಾಗಿ ಬೈದದ್ದು ಎಂದು ಶರಣ್ ಹೇಳುತ್ತಾರೆ. ಇಬ್ಬರೂ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು ಮಾತನಾಡಲು ಶುರು ಮಾಡುತ್ತಾರೆ. ಒಟ್ನಲ್ಲಿ ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಶರಣ್ ಹಾಗೂ ನಿಶ್ವಿಕಾ ಎಂಟ್ರಿ ಸರ್ಪ್ರೈಸಿಂಗ್ ಆಗಿದೆ.

  English summary
  hitler kalyana serial 20th September Episode Written Update. Leela acting makes AJ feel happy and he plans her to give big surprise. Then leela feels happy
  Wednesday, September 21, 2022, 20:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X