Hitler Kalyana: ಎಜೆ-ಲೀಲಾ ಮದುವೆ ಫಿಕ್ಸ್ ಆಯ್ತು: ಈಗ ದುರ್ಗಾ ಪ್ಲ್ಯಾನ್ ಏನು..?
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಜ್ಜಿ, ಲೀಲಾ ಹಾಗೂ ಎಜೆಯನ್ನು ದೂರವಿಟ್ಟಿದ್ದಾರೆ. ಈ ಕಾರಣದಿಂದಾಗಿ ಇಬ್ಬರೂ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಹೀಗಾಗಿ ಇಬ್ಬರೂ ಒಂದೇ ಮನೆಯಲ್ಲೇ ಇದ್ದರೂ ಪದೇ ಪದೇ ಫೋನ್ ಮಾಡುತ್ತಾ ಮಾತನಾಡುತ್ತಿರುತ್ತಾರೆ. ಇಬ್ಬರು ಒಬ್ಬರನ್ನೊಬ್ಬರು ನೋಡಿ, ಮಾತನಾಡಿ ಹಲವು ದಿನಗಳಾದಂತೆ ಬಿಹೇವ್ ಮಾಡುತ್ತಾರೆ.
ಇನ್ನು ಅಂತರಾಳನ್ನು ಎಜೆ ನೋಡಬಾರದು. ಲೀಲಾ ಹಾಗೂ ಎಜೆ ದೂರ ಆಗಬಾರದು ಎಂದು ಅಜ್ಜಿ ಇಬ್ಬರನ್ನು ಮನೆಯಿಂದ ಆಚೆಯೇ ಹೋಗದಂತೆ ನೋಡಿಕೊಳ್ಳುತ್ತಿದ್ದಾಳೆ.

ಖುಷಿ ಪಟ್ಟ ಲೀಲಾ-ಎಜೆ
ವಿಶ್ವರೂಪ್‌ನನ್ನು ಸಮಾಧಾನ ಮಾಡಿ ಎಜೆ ಮತ್ತು ಲೀಲಾ ಮನೆಗೆ ಕರೆದುಕೊಂಡು ಬರುತ್ತಾರೆ. ವಿಶ್ವರೂಪ್ ಇನ್ಮೇಲೆ ಏನಾದರೂ ನಾನು ಮನೆ ಬಿಟ್ಟು ಬರೋದಿಲ್ಲ ಎಂದು ಹೇಳುತ್ತಾನೆ. ಪುರೋಹಿತರಿಗೆ ಕಾಲ್ ಮಾಡಿದ ಅಜ್ಜಿ, ಇಬ್ಬರ ಮದುವೆ ಯಾವಾಗ ಮಾಡೋಣ ಎಂದು ಕೇಳಿದ್ದಾಳೆ. ಪುರೋಹಿತರು ಇನ್ನು ನಾಲ್ಕು ದಿನದಲ್ಲಿ ಎಜೆ ಹಾಗೂ ಲೀಲಾ ಅವರ ಮರು ಮಾಂಗಲ್ಯಧಾರಣೆ ಇಟ್ಟುಕೊಳ್ಳಲು ಒಳ್ಳೆಯ ಮುಹೂರ್ತ ಇದೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಎಲ್ಲರೂ ಖುಷಿ ಪಡುತ್ತಾರೆ. ಅಜ್ಜಿ ಇದು ಮರು ಮಾಂಗಲ್ಯ ಧಾರಣೆ ಅಷ್ಟೇ ಅಲ್ಲ, ಮದುವೆ ನಡೆದಂತೆ ನಡೆಯಬೇಕು. ಇದರಲ್ಲಿ ಸಪ್ತಪದಿಯ ಶಾಸ್ತ್ರವನ್ನು ಕೂಡ ಮಾಡಲೇಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿ ಲೀಲಾ ನಾಚಿಕೊಳ್ಳುತ್ತಾಳೆ.

ಮದುವೆ ಬಗ್ಗೆ ಎಜೆ ಆಸೆ ಏನು..?
ಇನ್ನು ಎಜೆ ಈ ಮದುವೆಯ ಜವಾಬ್ದಾರಿಯನ್ನು ದುರ್ಗಾಳಿಗೆ ಒಪ್ಪಿಸುತ್ತಾನೆ. ದುರ್ಗಾ, ಲೀಲಾ ಹೇಳಿದಂತೆ ಮದುವೆಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡು ಎಂದು ಹೇಳುತ್ತಾನೆ. ದುರ್ಗಾ ಸರಿ ಎಂದು ಹೇಳಿ, ಮನದಲ್ಲೇ, ಈ ಮದುವೆ ಅದು ಹೇಗೆ ನಡೆಯುತ್ತೋ ನಾನೂ ನೋಡುತ್ತೀನಿ. ನನ್ನ ಪ್ಲ್ಯಾನ್ ನಿಮ್ಮೆಲ್ಲರ ಆಸೆಯನ್ನು ನೀರು ಪಾಲು ಮಾಡುತ್ತೆ ಎಂದು ಅಂದುಕೊಳ್ಳುತ್ತಾಳೆ. ಇನ್ನು ಎಜೆ, ಅಂತರಾ ಜೊತೆಗೆ ಆದಂತೆಯೇ ಈಗಲು ಮದುವೆಯಾಗಬೇಕು ಎಂದು ಬಯಸಿದ್ದಾನೆ.

ಕೌಸಲ್ಯ ಹೊಸ ಲೆಕ್ಕಾಚಾರ
ಅಜ್ಜಿ, ಎಜೆ ಹಾಗೂ ಲೀಲಾ ಜೊತೆಗೆ ಅವರ ಆಸೆಯ ಬಗ್ಗೆ ಮಾತನಾಡುತ್ತಾರೆ. ಇಬ್ಬರೂ ಯಾವುದೇ ಕಾರಣಕ್ಕೂ ಒಬ್ಬರನ್ನೊಬ್ಬರು ಬಿಟ್ಟಿರಬಾರದು ಎಂದು ಬುದ್ಧಿವಾದ ಹೇಳುತ್ತಾರೆ. ಇತ್ತ ಕೌಸಲ್ಯ ಮದುವೆ ಇನ್ನು ನಾಲ್ಕು ದಿನ ಇದೆ ಎಂದು ತಿಳಿದು ಖುಷಿಯಾಗುತ್ತಾಳೆ. ಬೇಗನೆ ಹೋಗಿ ಅಳಿಯಂದಿರ ಜೊತೆಗೆ ಖುಷಿಯಾಗಿರಬೇಕು. ಅವರನ್ನು ಒಲಿಸಿಕೊಳ್ಳಬೇಕು. ನಾನು ಅವರಿಗೆ ಬೇಸರ ಮಾಡಿದ್ದೀನಿ. ಈಗ ಮೂರು ದಿನ ಮುಂಚೆಯೇ ಹೋಗಿ ಸ್ವಲ್ಪ ಕೆಲಸ ಮಾಡಬೇಕು ಎಂದು ಅಂದುಕೊಳ್ಳುತ್ತಾಳೆ.

ದುರ್ಗಾ ಹೇಳಿದ ಮಾತು ಕೇಳಿ ಶಾಕ್
ಲೀಲಾ, ವಿಶ್ವರೂಪ್, ಲಕ್ಷ್ಮೀ ಮೂವರು ಮದುವೆಯ ಡೆಕೋರೇಷನ್ ಬಗ್ಗೆ ತಲೆ ಕೆಡಿಸಿಕೊಂಡಿರುತ್ತಾರೆ. ಬಳಿಕ ಫ್ಲವರ್ ಡೆಕೋರೇಷನ್ ಅವರನ್ನು ಕರೆಸಿ, ಲಕ್ಷ್ಮೀ ಹೇಗೆಲ್ಲಾ ಇರಬೇಕು ಎಂದು ವಿವರಿಸುತ್ತಾಳೆ. ಅವರು ಹೊರಡುವಾಗ ದುರ್ಗಾ ಬಂದು ಎಜೆಗೆ ಬ್ಲೂ ಆರ್ಕಿಡ್ ಎಂದರೆ ಇಷ್ಟ. ಅದೇ ಹೂವು ಹೆಚ್ಚಾಗಿ ಇರಲಿ. ಲಕ್ಷ್ಮೀ ಹೇಳಿದಂತೆ ಅಚ್ಚುಕಟ್ಟಾಗಿ ಇರಲಿ ಎಂದು ಹೇಳಿ ಕಳಿಸುತ್ತಾಳೆ. ದುರ್ಗಾ ಮಾತನ್ನು ಕೇಳಿದ ಲಕ್ಷ್ಮೀ ಶಾಕ್ ಆಗುತ್ತಾಳೆ. ಇದೇನಿದು ನೀವಾ ದುರ್ಗಾ ಅಕ್ಕ ಎಂದು ಹೇಳುತ್ತಾಳೆ. ಅದಕ್ಕೆ ದುರ್ಗಾ ಎಜೆ ಖುಷಿಗಾಗಿ ಏನು ಬೇಕಿದ್ದರೂ ಮಾಡುತ್ತೇನೆ ಎಂದು ಹೇಳಿ ಹೊರಡುತ್ತಾಳೆ.


Click it and Unblock the Notifications











