Hitler Kalyana: ಅಂತರಾ ಎಜೆಯನ್ನು ಕೊಲೆ ಮಾಡುತ್ತಾಳಾ..?
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದುರ್ಗಾ ಕಾಣೆಯಾದ ವಿಚಾರ ತಿಳಿದ ಕೂಡಲೇ ಎಜೆ ಬಳಿ ಕಿಶೋರ್ ಕೂಗಾಡುತ್ತಾನೆ. ನೀನು ಮೋಸಗಾರ ಎಂದೆಲ್ಲಾ ಬೈಯುತ್ತಾನೆ.
ಆತನ ಮಾತುಗಳಿಂದ ಮನೆಯವರಿಗೆಲ್ಲಾ ನೋವಾಗುತ್ತದೆ. ಕಿಶೋರ್ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ದೂರುತ್ತಾರೆ. ಆದರೆ, ಎಜೆಗೆ ತನ್ನ ತಪ್ಪು ತಿಳಿದಿರುವುದರಿಂದ ಕಿಶೋರ್ ಹೇಳಿದ್ದು ಸರಿ ಇದೆ ಎನ್ನುತ್ತಾನೆ.

ಎಜೆ ತನಗೆ ತಾನೇ ಶಿಕ್ಷೆ ಕೊಟ್ಟುಕೊಳ್ಳುತ್ತಾನೆ. ತನ್ನನ್ನು ಯಾರೂ ಮಾತನಾಡಿಸಬಾರದು, ತನ್ನ ಬಳಿ ಯಾರೂ ಬರಬಾರದು ಎಂದು ಹೇಳಿ ಮನೆಯಿಂದ ಹೊರಗೆ ನಿಂತು ತನಗೆ ತಾನೇ ಶಿಕ್ಷೆ ಪಡೆಯುತ್ತಾನೆ.
ಅಪ್ಪನ ಬಳಿ ಕ್ಷಮೆ ಕೇಳಿದ ಕಿಶೋರ್
ಎಜೆ ನಡೆಯಿಂದ ಮನೆಯವರು ಏನು ಮಾಡಬೇಕು ಎಂಬುದು ತಿಳಿಯದೇ ಒದ್ದಾಡುತ್ತಾರೆ. ಅಜ್ಜಿ ಮಗನ ಸ್ಥಿತಿ ಕಂಡು ನೊಂದು ಕೊಳ್ಳುತ್ತಾರೆ. ಕಿಶೋರ್‌ಗೆ ಬೈದು ಬುದ್ಧಿ ಹೇಳುತ್ತಾಳೆ. ಕಿಶೋರ್ ನೋವಿನಿಂದ ನರಳಿ, ಕೊನೆಗೆ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಬಳಿಕ ತಾನೇ ಎಜೆ ಬಳಿ ಹೋಗಿ ಕ್ಷಮೆ ಕೇಳುತ್ತಾನೆ. ದುರ್ಗಾಳನ್ನು ಮಿಸ್ ಮಾಡಿಕೊಂಡ ಕಾರಣ ಹೀಗೆಲ್ಲಾ ಮಾಡಬೇಕಾಯ್ತು. ನನಗೆ ಜೀವನ ಕೊಟ್ಟವರು ನೀವು. ಈ ಬದುಕು ಕೊಟ್ಟಿದ್ದು ನೀವು. ಆದರೆ, ನಾನು ದುರ್ಗಾಳನ್ನು ಕಳೆದುಕೊಳ್ಳುವೆ ಎಂಬ ಭಯದಲ್ಲೇ ಹೀಗೆಲ್ಲಾ ಮಾಡಬೇಕಾಯ್ತು. ನನ್ನನ್ನು ಕ್ಷಮಿಸಿ ಎಜೆ ಎಂದು ಎಲ್ಲರ ಮುಂದೆ ಕ್ಷಮೆ ಕೇಳುತ್ತಾನೆ.
ಕಿಶೋರ್‌ಗೆ ಲೀಲಾ ಹೇಳಿದ್ದೇನು..?
ಇನ್ನು ಕಿಶೋರ್‌ಗೆ ಸಮಾಧಾನ ಆಗಲಿ ಎಂದು ಲೀಲಾ ಹಾಲು ಹಾಗೂ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಾಳೆ. ದುರ್ಗಾಳನ್ನು ಹುಡುಕಿಸಲು ಎಜೆ ಎಲ್ಲಾ ಪ್ರಯತ್ನ ಪಡುತ್ತಿದ್ದಾರೆ. ನೀವು ಹೆಚ್ಚು ನೊಂದುಕೊಳ್ಳಬೇಡಿ. ನಾವು ಎಲ್ಲರೂ ಒಟ್ಟಿಗೆ ಸೇರಿ ದುರ್ಗಾಳನ್ನು ಹುಡುಕೋಣ ಎಂದು ಸಮಾಧಾನ ಮಾಡುತ್ತಾಳೆ. ಅಷ್ಟೇ ಅಲ್ಲದೇ, ದುರ್ಗಾ ಕಾಣೆಯಾಗಿರುವುದು ಅಂತರಾ ಕೈವಾಡ ಇದೆ ಎಂದು ಅನಿಸುತ್ತಿದೆ. ಇದನ್ನು ನಿಮ್ಮ ಬಳಿ ಮಾತ್ರವೇ ಶೇರ್ ಮಾಡುತ್ತಿದ್ದೇನೆ ಎಂದು ಸೀಕ್ರೆಟ್ ಅನ್ನು ಹಂಚಿಕೊಳ್ಳುತ್ತಾಳೆ. ಕಿಶೋರ್‌ಗೆ ಲೀಲಾ ಮಾತುಗಳನ್ನು ಕೇಳಿ ಶಾಕ್ ಆಗುತ್ತದೆ. ಲೀಲಾ ಮಾತನ್ನು ನಂಬುವ ಕಿಶೋರ್ ಮುಂದೇನು ಮಾಡುತ್ತಾನೋ ಕಾದು ನೋಡಬೇಕಿದೆ.

ದುರ್ಗಾ ಬಗ್ಗೆ ತಲೆ ಕೆಡಿಸಿಕೊಂಡ ಅಂತರಾ
ಇತ್ತ ದುರ್ಗಾಳನ್ನು ಹುಡುಕಲು ಎಜೆ ಸಾಕಷ್ಟು ಪ್ರಯತ್ನ ಪಡುತ್ತಿರುವುದು ಅಂತರಾಳಿಗೆ ಗೊತ್ತಾಗಿದೆ. ದುರ್ಗಾ ಕಾಣೆಯಾಗಿರುವುದರಲ್ಲಿ ತನ್ನ ಕೈವಾಡ ಇರುವುದು ಗೊತ್ತಾದರೆ, ತನ್ನ ಅಸ್ತಿತ್ವಕ್ಕೆ ಸಮಸ್ಯೆ ಆಗುತ್ತದೆ ಎಂಬುದು ಪಕ್ಕಾ ಆಗುತ್ತದೆ. ಇದರಿಂದ ಎಜೆ ಬಳಿ ಹೋಗಿ ಮಾತನಾಡಲು ಯತ್ನಿಸುತ್ತಾಳೆ. ದುರ್ಗಾಳನ್ನು ನಿಮ್ಮ ಜೊತೆಗೆ ನಾನೂ ಕೂಡ ಬಂದು ಹುಡುಕುತ್ತೇನೆ ಎನ್ನುತ್ತಾಳೆ. ಎಜೆ ಬೇಡ ಅಂತರಾ, ದುರ್ಗಾಳನ್ನು ಸೇವ್ ಮಾಡಲು ಹೋಗಿ ನಿನ್ನನ್ನು ರಿಸ್ಕ್‌ಗೆ ಹಾಕಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಆದರೆ ಅಂತರಾ ಹಠ ಮಾಡುತ್ತಾಳೆ.
ಎಜೆ ಕೊಲೆಗೆ ಮುಂದಾದ ಅಂತರಾ
ಎಜೆ ಮಲಗಿರುವಾಗ ಚಾಕು ಹಿಡಿದು ಬರುವ ಅಂತರಾ ಕೊಲೆ ಮಾಡಲು ಮುಂದಾಗುತ್ತಾಳೆ. ಎಜೆ ಬದುಕಿದ್ದರೆ, ತನಗೆ ಕಷ್ಟವಾಗುತ್ತದೆ. ದುರ್ಗಾಳನ್ನು ಎಜೆ ಹುಡುಕುತ್ತಾನೆ. ಆಗ ತನ್ನ ಬಗ್ಗೆ ದುರ್ಗಾ ಎಲ್ಲಾ ಸತ್ಯವನ್ನು ಹೇಳುತ್ತಾಳೆ. ಇದರಿಂದ ತನ್ನ ದಾರಿ ಸಂಪೂರ್ಣವಾಗಿ ಮುಚ್ಚಿ ಹೋಗುತ್ತದೆ ಎಂದು ಹೆದರಿದ್ದಾಳೆ. ಹಾಗಾಗಿ ತಾನು ಎಜೆಯನ್ನು ಕೊಂದರೆ ಇನ್ಮುಂದೆ ಯಾವುದೇ ಸಮಸ್ಯೆ ಇರುವುದಿಲ್ಲ. ಈ ಸಾಮ್ರಾಜ್ಯಕ್ಕೆ ತಾನೇ ಒಡತಿಯಾಗಿ ಮೆರೆಯಬಹುದು ಎಂದು ಭಾವಿಸಿ ಚಾಕು ಹಾಕುತ್ತಾಳೆ. ಆದರೆ, ಏನಾಗಿದೆ ಎಂಬುದು ಮುಂದಿನ ಸಂಚಿಕೆಯಲ್ಲಿ ತಿಳಿಯುತ್ತದೆ.


Click it and Unblock the Notifications











