Hitler Kalyana: ಎಜೆ ಮನೆಗೆ ಬಂದ ಅಂತರಾ: ರಾಮ್-ಲೀಲಾ ಪ್ರೀತಿಗೆ ಅಡ್ಡಿಯಾಗುತ್ತಾಳಾ..?

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಈಗ ರಾಮ್-ಲೀಲಾ ಪ್ರೀತಿ ಜೋರಾಗಿ ನಡೆಯುತ್ತಿದೆ. ಎಜೆ, ಲೀಲಾಳನ್ನು ಇಷ್ಟಪಡುತ್ತಿದ್ದು, ಅವಳ ಬಳಿ ಪ್ರೀತಿಯ ವಿಚಾರವನ್ನು ಹೇಳಿಕೊಳ್ಳಲು ಮುಂದಾಗಿದ್ದಾನೆ.

ಇನ್ನು ಲೀಲಾಗೆ ಹೇಗೆ ಪ್ರಪೋಸ್ ಮಾಡಿದರೆ ಇಷ್ಟವಾಗುತ್ತದೆ ಎಂಬುದನ್ನು ಕದ್ದು ಕೇಳಿಸಿಕೊಂಡಿದ್ದಾನೆ. ಎಜೆ ಪ್ರೀತಿಯನ್ನು ಹೇಳಿಕೊಳ್ಳಲಾಗದೇ ಒದ್ದಾಡುತ್ತಿರುವುದನ್ನು ನೋಡಿ ಲೀಲಾ ಮಜಾ ತೆಗೆದುಕೊಳ್ಳುತ್ತಿದ್ದಾಳೆ.

ಆದರೆ, ಅಜ್ಜಿಗೆ ಈಗ ಅಂತರಾಳದ್ದೇ ಯೋಚನೆಯಾಗಿದೆ. ಅಂತರಾ ಬದುಕಿದ್ದಾಳಾ..? ಅವಳು ನನ್ನ ಕಣ್ಣಿಗೆ ಮಾತ್ರ ಏಕೆ ಕಾಣಿಸಿಕೊಂಡಳು ಎಂಬ ಯೋಚನೆಯಲ್ಲಿ ಮುಳುಗಿದ್ದಾಳೆ.

ಲೀಲಾಗೆ ಸರ್ಪ್ರೈಸ್ ಕೊಡಲಿರುವ ಎಜೆ

ಲೀಲಾಗೆ ಸರ್ಪ್ರೈಸ್ ಕೊಡಲಿರುವ ಎಜೆ

ಲೀಲಾಗೆ ಸರ್ಪ್ರೈಸ್ ಕೊಡಬೇಕೆಂದು, ಬೆಳಗ್ಗಿನಿಂದ ರೂಮಿನಲ್ಲಿ ಕೂಡಿ ಹಾಕಲಾಗಿದೆ. ಮನೆಯನ್ನೆಲ್ಲಾ ಸಿಂಗಾರ ಮಾಡಲಾಗಿದೆ. ಲೀಲಾಗೆ ಎಜೆ ಪ್ರಪೋಸ್ ಮಾಡಲು ಲಕ್ಷ್ಮಿ, ಅಜ್ಜಿ ಹಾಗೂ ವಿಶ್ವರೂಪ್ ಕೂಡ ಸಪೋರ್ಟ್ ಮಾಡುತ್ತಿದ್ದಾರೆ. ಹೀಗಾಗಿ ಎಜೆ, ಲೀಲಾಗೆ ಇಷ್ಟ ಎಂದು ಮನೆಯವರೆಲ್ಲರ ಎದುರಿಗೂ ಪ್ರೀತಿಯ ವಿಚಾರವನ್ನು ಹೇಳಿಕೊಳ್ಳಬೇಕು. ಪ್ರಪೋಸ್ ಮಾಡಬೇಕು ಎಂದು ಮನೆಯವರನ್ನೆಲ್ಲಾ ಮನೆಗೆ ಕರೆಸಿದ್ದಾನೆ. ಆದರೆ, ಇದ್ಯಾವ ವಿಚಾರವೂ ಲೀಲಾಗೆ ಗೊತ್ತಾಗದಂತೆ ನೋಡಿಕೊಂಡಿದ್ದಾನೆ.

ಮನೆಗೆ ಬಂದ ಅಂತರಾ

ಮನೆಗೆ ಬಂದ ಅಂತರಾ

ಇನ್ನು ಎಜೆಗೆ ಇಷ್ಟವಾಗುವ ಆರ್ಕಿಡ್ ಹೂವನ್ನು ಆರ್ಡರ್ ಕೊಟ್ಟಿರುತ್ತಾನೆ. ಅದರಿಂದಲೇ ಲೀಲಾಳನ್ನು ಪ್ರಪೋಸ್ ಮಾಡಬೇಕು ಎಂದು ಅಂದುಕೊಂಡಿರುತ್ತಾನೆ. ಆ ಹೂವಿಗಾಗಿ ಕಾಯುವಾಗ, ಅಂತರಾ ಗಾಡಿಯಲ್ಲಿ ಬರುತ್ತಾಳೆ. ಮನೆಯನ್ನು ನೋಡಿ, ತನ್ನ ಹಳೆ ಬದುಕನ್ನು ನೆನಪು ಮಾಡಿಕೊಳ್ಳುತ್ತಾಳೆ. ಹೂವನ್ನು ಕೊಡಲು ಮುಖ ಮುಚ್ಚಿಕೊಳ್ಳುತ್ತಾಳೆ. ಅಜ್ಜಿ ಹೂವನ್ನು ತೆಗೆದುಕೊಳ್ಳುತ್ತಾರೆ. ಆದರೆ, ಎಜೆಗೆ ಅಂತರಾ ಇಲ್ಲೇ ಇದ್ದಾಳೆ ಎಂಬ ಭಾವನೆ ಶುರುವಾಗುತ್ತೆ. ಹಾಗಾಗಿ ಮನೆಯಿಂದ ಆಚೆ ಬರುತ್ತಾನೆ. ಎಜೆ ಮಾತು ಕೇಳಿದ ಅಜ್ಜಿ ಅಂತರಾಳನ್ನು ನೋಡಿ ಬಿಡುತ್ತಾಳೆ. ಆದರೆ, ಈ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಅಂತರಾ ಕೂಡ ಈಗ ಯಾಕೆ ಎಂಟ್ರಿ ಕೊಟ್ಟಿದ್ದಾಳೋ ಗೊತ್ತಿಲ್ಲ. ಅಷ್ಟಕ್ಕೂ ಎಜೆ ಮತ್ತು ಅಂತರಾ ಲೈಫ್‌ನಲ್ಲಿ ಹಿಂದೆ ಏನು ನಡೆದಿತ್ತೋ ಎಂಬುದನ್ನು ಇನ್ನೂ ಪ್ರೇಕ್ಷಕರಿಗೆ ತಿಳಿಸಿಕೊಟ್ಟಿಲ್ಲ. ಬಹುಶಃ ಇನ್ನು ಮುಂದೆ ಈ ಕಥೆಯನ್ನು ಹೇಳಬಹುದು ಎಂದು ನಿರೀಕ್ಷಿಸಲಾಗಿದೆ.

ದುರ್ಗಾ ಹೊಟ್ಟೆ ಉರಿ ಕಮ್ಮಿ ಆಗಿಲ್ಲ

ದುರ್ಗಾ ಹೊಟ್ಟೆ ಉರಿ ಕಮ್ಮಿ ಆಗಿಲ್ಲ

ಇನ್ನು ದುರ್ಗಾಳಿಗೆ ಲೀಲಾ ಮೇಲೆ ಕೋಪವಿದೆ. ಅವಳನ್ನು ಹೇಗಾದರೂ ಮಾಡಿ ಮನೆಯಿಂದ ಆಚೆ ಹಾಕಬೇಕು ಎಂದು ಅಂದುಕೊಂಡಿದ್ದಾಳೆ. ಸದ್ಯ ಎಜೆ ಲೀಲಾಗೆ ಪ್ರೊಪೋಸ್ ಮಾಡಲು ಮುಂದಾಗಿರುವುದು ಕೂಡ ಇಷ್ಟವಿರುವುದಿಲ್ಲ. ಆದರೆ, ಬೇರೆ ದಾರಿ ಇಲ್ಲದೇ ಸುಮ್ಮನಿದ್ದಾಳೆ. ದುರ್ಗಾ ಹಾಗೂ ಸರಸ್ವತಿ ಸಿಟ್ಟಿಗೆ ಆಗಾಗ ಲಕ್ಷ್ಮಿ ತುಪ್ಪಾ ಸುರಿಯುತ್ತಿರುತ್ತಾಳೆ. ಇನ್ನು ಲೀಳಾ ಮಲತಾಯಿ ಕೌಸಲ್ಯಳಿಗೂ ಕೋಪ ಕಡಿಮೆ ಆಗಿರುವುದಿಲ್ಲ. ಲೀಲಾ ಮೇಲೆ ಕೆಂಡ ಕಾರುತ್ತಿರುತ್ತಾಳೆ.

ಲೀಲಾ ಫುಲ್ ಖುಷ್

ಲೀಲಾ ಫುಲ್ ಖುಷ್

ಲೀಲಾಳಿಗೆ ಎಜೆ ಸರ್ಪ್ರೈಸ್ ಕೊಡುತ್ತಾನೆ. ಡೆಕೊರೇಷನ್ ನೋಡಿ ಲೀಲಾ ದಂಗಾಗಿಬಿಡುತ್ತಾಳೆ. ಎಜೆ, ಲೀಲಾಳನ್ನು ಮೊದಲು ಕ್ಷಮೆ ಕೇಳುತ್ತಾನೆ. ತಾನು ಈ ಹಿಂದೆ ನಡೆದುಕೊಂಡಿದ್ದನ್ನು ಕ್ಷಮಿಸು ಎಂದು ಹೇಳುತ್ತಾನೆ. ಲೀಲಾ ಪ್ರೊಪೋಸ್ ಮಾಡಲಿ ಎಂದು ಕಾತುರರಾಗಿದ್ದಾಳೆ. ಲೀಲಾ ಫುಲ್ ಖುಷ್ ಆಗಿದ್ದು, ನಾಳೆ ಎಜೆ ಪ್ರಪೋಸ್ ಮಾಡುತ್ತಾನಾ..? ಇಲ್ಲ ಅಂತರಾ ಬರುತ್ತಾಳಾ ಎಂದು ಕಾದು ನೋಡಬೇಕಿದೆ.

More from Filmibeat

English summary
Hitler Kalyana Serial 22nd February Episode Written Update. AJ started planning to propose leela. At the same time anthara comes to aj house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X