Hitler Kalyana: ಅಂತರಾ ಆಸೆ ಪಟ್ಟ ಆ ಸೀರೆ ಯಾವುದು..? ಅದರ ಹಿಂದಿನ ಕಥೆ ಏನು..?
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಸದ್ಯ ಅಂತರಾ ಮನೆಗೆ ಹೊಂದಿಕೊಂಡು ಎಜೆಗೆ ಹತ್ತಿರವಾಗುತ್ತಿದ್ದಾಳೆ. ಸದಾ ಎಜೆ ಹಿಂದೆಯೇ ಇರುವ ಅಂತರಾಳಿಗೆ ಇನ್ನೂ ಯಾವ ನೆನಪೂ ಬಂದಿಲ್ಲ. ಇತ್ತ ಕೌಸಲ್ಯ ತನ್ನ ಮಗಳ ಬದುಕನ್ನೇ ಲಾಭವಾಗಿಸಿಕೊಂಡಿದ್ದಾಳೆ. ಸರಸ್ವತಿ ಮತ್ತು ದುರ್ಗಾ ಜೊತೆಗೆ ಕೈ ಜೋಡಿಸಿದ್ದು ಆಕೆ ಹಣದಾಸೆಗೆ ಮಗಳ ಜೀವನವನ್ನೇ ಬಲಿ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾಳೆ.
ಅಜ್ಜಿಗೆ ಮಗನ ಸಂತೋಷವೂ ಮುಖ್ಯ ಅದಕ್ಕಾಗಿ ಅಂತರಾಳನ್ನು ಒಪ್ಪಿಕೊಂಡಿದ್ದಾಳೆ. ಇದರ ಜೊತೆಗೆ ಲೀಲಾ ಬದುಕು ಮುಖ್ಯವಾಗಿರುವುದರಿಂದ ಅಜ್ಜಿ ಒಳಗೊಳಗೆ ಸಂಕಟ ಅನುಭವಿಸುತ್ತಿದ್ದಾಳೆ. ಅಜ್ಜಿ ಹಾಗೂ ಎಜೆ ಮಾತನಾಡುತ್ತಿರುತ್ತಾರೆ. ಈ ವೇಳೆ ಅಜ್ಜಿ ಎಜೆ ಬಳಿ ಕ್ಷಮೆ ಕೇಳುತ್ತಾರೆ. ಅಂದು ನೀನು ಮತ್ತು ಅಂತರಾ ಹೊರಗೆ ಹೊರಟಾಗ ತಡೆದಿದ್ದಕ್ಕೆ ಕ್ಷಮಿಸು. ನಿನಗಿದ್ದ ಗಂಡಾಂತರ ಈಗಿಲ್ಲ. ಈಗ ನೀನು ಅಂತರಾ ಜೊತೆಗೆ ಹೊರಗೆ ಹೋಗಬಹುದು ಎಂದು ಹೇಳುತ್ತಾರೆ. ಇದಕ್ಕೆ ಎಜೆಗೆ ಫುಲ್ ಖುಷಿಯಾಗುತ್ತದೆ.

ನೀನು ಏನೇ ಮಾಡಿದರು ನನಗೆ ಬೇಸರವಿಲ್ಲ ಅಮ್ಮ. ಇವತ್ತು ನಾನು ಅಂತರಾ ಜೊತೆಗೆ ಹೊರಗಡೆ ಹೋಗಲೇ ಎಂದು ಕೇಳುತ್ತಾನೆ. ಅದಕ್ಕೆ ಅಜ್ಜಿ ಹೋಗಬಹುದು ಎಂದು ಹೇಳುತ್ತಲೇ ಲೀಲಾ ಬಗ್ಗೆಯೂ ಯೋಚಿಸು. ಲೀಲಾ ಎದುರಿಗೇ ನೀನು ಮತ್ತೆ ಅಂತರಾ ಹೊರಗಡೆ ಹೋದರೆ ಅವಳಿಗೆ ಬೇಸರ ಆಗುತ್ತೆ ಅಲ್ವಾ ಎಂದು ಹೇಳುತ್ತಾಳೆ. ಅಜ್ಜಿ ಹೀಗೆ ಹೇಳುವುದನ್ನು ಅಂತರಾ ಕೇಳಿಸಿಕೊಂಡು ಬಿಡುತ್ತಾಳೆ. ತಕ್ಷಣವೇ ಅಂತರಾ ನಾನು ಎಜೆ ಹೊರಗೆ ಹೋದರೆ, ಲೀಲಾಗೆ ಯಾಕೆ ಬೇಸರವಾಗುತ್ತೆ ಎಂದು ಪ್ರಶ್ನಿಸುತ್ತಾಳೆ. ಆಗ ಎಜೆ ಉತ್ತರ ಕೊಡಲಾಗದೇ ತಬ್ಬಿಬ್ಬಾಗುತ್ತಾನೆ.
ಸೀರೆಗಾಗಿ ಆಸೆ ಪಟ್ಟ ಅಂತರಾ
ಈ ಸಂದರ್ಭದಲ್ಲಿ ಅಜ್ಜಿ ಸುಳ್ಳು ಹೇಳುತ್ತಾರೆ. ನೀನು ಮತ್ತೆ ಲೀಲಾ ದಿನ ಪೂರ್ತಿ ಒಟ್ಟಿಗೆ ಇರುತ್ತೀರಾ. ಈಗ ಅವಳನ್ನೇ ಬಿಟ್ಟು ನೀನು ಎಜೆ ಜೊತೆಗೆ ಹೊರಗಡೆ ಹೋದರೆ ಲೀಲಾಗೆ ಬೇಸರ ಆಗಲ್ವಾ ಎಂದು ಅಜ್ಜಿ ಕೇಳುತ್ತಾರೆ. ಈ ಮಾತಿಗೆ ಸರಿ ಎನ್ನುವ ಅಂತರಾ, ಆದರೆ ನಾನು ಎಜೆಗೆ ಒಟ್ಟಿಗೆ ಹೊರಗಡೆ ಹೋದರೆ ಲೀಲಾಗೆ ಖುಷಿ ಆಗುತ್ತೆ ಎನ್ನುತ್ತಾಳೆ. ಇದಕ್ಕೆ ಅಜ್ಜಿ ಅದು ಸರಿಯೇ ಎಂದು ಹೇಳಿ ಹೊರಟು ಬಿಡುತ್ತಾರೆ.

ದುರ್ಗಾಳ ಮಾತಿನಿಂದ ಬೇಸರ
ಅಂತರಾ, ಫೋಟೋದಲ್ಲಿ ಇರುವ ಸೀರೆಯನ್ನು ತಾನು ಧರಿಸಲು ಆಸೆ ಪಡುತ್ತಾಳೆ. ಹಾಗಾಗಿ ಎಜೆ ಬಗ್ಗೆ ಆ ಸೀರೆ ಬಗ್ಗೆ ವಿಚಾರಿಸುತ್ತಾಳೆ. ಆದರೆ, ಎಜೆ ಅದನ್ನು ಅರ್ಥ ಮಾಡಿಕೊಳ್ಳದೇ, ಸೀರೆ ಬಗ್ಗೆ ಅಭಿ ಕಥೆ ಹೇಳುತ್ತಾನೆ. ಅಂತರಾ ಆ ಸೀರೆಯನ್ನು ಉಡಲೇಬೇಕು ಎಂಬ ಆಸೆಯಿಂದ ಲಕ್ಷ್ಮೀ ಬಳಿ ಫೋಟೋದಲ್ಲಿ ಅಂತರಾ ಉಟ್ಟಿರುವ ಸೀರೆ ಎಲ್ಲಿದೆ ಎಂದು ಕೇಳುತ್ತಾಳೆ. ಅದಕ್ಕೆ ಲಕ್ಷ್ಮೀ ನನಗೆ ಗೊತ್ತಿಲ್ಲ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿಸಿಕೊಳ್ಳುವ ಸರಸ್ವತಿ, ನಿಮಗೆ ಸೀರೆ ತಾನೇ ಬೇಕು ಬನ್ನಿ ಅತ್ತೆ ಎಂದು ದುರ್ಗಾ ಬಳಿ ಕರೆದುಕೊಂಡು ಹೋಗುತ್ತಾಳೆ.
ಲೀಲಾಗೆ ದುರ್ಗಾ ಅವಮಾನ
ದುರ್ಗಾ ಅತ್ತೆ ನಿಮ್ಮದೇ ಆ ಸೀರೆ. ಬನ್ನಿ ನಾನು ತೆಗೆದು ಕೊಡುತ್ತೇನೆ ಎಂದು ಹೇಳಿ ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ಆಗ ಅಂತರಾ, ಎಜೆ ಇಲ್ಲದಿರುವಾಗ ಅವರ ರೂಮ್ ನಿಂದ ಸೀರೆ ತೆಗೆದುಕೊಳ್ಳುವುದು ತಪ್ಪು ಎನ್ನುತ್ತಾಳೆ. ಆದರೆ ದುರ್ಗಾ ಕೇಳುವುದಿಲ್ಲ. ಇನ್ನು ಲೀಲಾ ಅಲ್ಲಿಗೆ ಬಂದು ದುರ್ಗಾಳನ್ನು ಬೈಯುತ್ತಾಳೆ ನೀನು ಮಾಡುತ್ತಿರುವುದು ತಪ್ಪು ಎನ್ನುತ್ತಾಳೆ. ಆಗ ದುರ್ಗಾ, ಲೀಲಾಗೆ ಅವಮಾನಿಸುತ್ತಾಳೆ. ಇದರಿಂದ ಅಂತರಾಳಿಗೆ ಬೇಸರವಾಗುತ್ತದೆ.
ಸೀರೆಯನ್ನು ತಂದುಕೊಡಲು ಹೇಳಿದ ಲೀಲಾ
ಅಂತರಾ ಅಲ್ಲಿ ಏನು ನಡೆಯಿತು, ಯಾಕೆ ಆ ಸೀರೆಯನ್ನು ಕೇಳಿದಳು ಎಂಬ ಸತ್ಯವನ್ನು ಲೀಲಾ ಬಳಿ ಹೇಳುತ್ತಾಳೆ. ಆಗ ಲೀಲಾ ಸೀರೆ ತಾನೇ ನಾನೇ ತಂದುಕೊಡುತ್ತೇನೆ ಎಂದಾಗ ಪುನಃ ದುರ್ಗಾ ಅವಮಾನಿಸುತ್ತಾಳೆ. ಆಗ ಲೀಲಾ ದುರ್ಗಾಳಿಗೆ ಹೋಗಿ ಸೀರೆಯನ್ನು ತಂದುಕೊಡು ಎಂದು ಹೇಳುತ್ತಾಳೆ. ಆದರೆ, ಆ ಸೀರೆಯನ್ನು ಎಜೆ ಒಪ್ಪಿಗೆ ಇಲ್ಲದೇ ತರುವುದರಿಂದ ಏನಾಗುತ್ತದೋ ಗೊತ್ತಿಲ್ಲ.


Click it and Unblock the Notifications











