Hitler Kalyana: ಲೀಲಾಳನ್ನು ತವರು ಮನೆಗೆ ಕಳಿಸುತ್ತಾಳಾ ಅಂತರಾ?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದುರ್ಗಾ ಇದ್ದಕ್ಕಿದ್ದ ಹಾಗೆಯೇ ನಾಪತ್ತೆ ಆಗಿದ್ದಾಳೆ. ಕೆಲಸದ ನೆಪ ಹೇಳಿ ಮಾಯವಾಗಿದ್ದು, ಲೀಲಾ ಅನುಮಾನಗೊಂಡಿದ್ದಾಳೆ.

ದುರ್ಗಾ ಕೇವಲ ಎಜೆ ಜೊತೆಗೆ ಸಂಪರ್ಕದಲ್ಲಿದ್ದಾಳೆ. ಎಜೆ ಮತ್ತು ಅಜ್ಜಿ ಇಬ್ಬರೂ ದುರ್ಗಾ ಹಾಗೂ ಅವಳ ಪತಿ ಕೆಲಸ ಎಂದು ಮನೆಯಿಂದ ದೂರ ಉಳಿದಿರುವುದಕ್ಕೆ ಬೇಸರ ಮಾಡಿಕೊಂಡಿದ್ದಾರೆ.

ಕೂತು ತಿಂದರೂ ಕರಗಲಾರದಷ್ಟು ಆಸ್ತಿ ಇದೆ ಆದರೂ ಮಕ್ಕಳೆಲ್ಲಾ ಹಬ್ಬ-ಹರಿದಿನಗಳಲ್ಲೂ ಎಂಜಾಯ್ ಮಾಡದೇ ಕೆಲಸ ಅಂತ ಹೊರಗೆ ಹೋಗಿದ್ದಾರೆ. ಇವರಿಗೆ ನಾನೇ ಬುದ್ಧಿ ಹೇಳುತ್ತೇನೆ ಎಂದು ಹೇಳುತ್ತಾನೆ.

hitler-kalyana-serial

ಲೀಲಾಳನ್ನು ಮನೆಯಿಂದ ಹೊರಗಾಕಲು ಪ್ಲಾನ್

ಲೀಲಾ ಮನೆ ಬಿಟ್ಟು ಅಂತರಾ ಮತ್ತು ಎಜೆ ಚೆನ್ನಾಗಿರಲಿ ಎಂದು ತವರು ಮನೆಗೆ ಹೋಗಿದ್ದಳು. ಆದರೆ, ಈಗ ವಾಪಸ್ ಬಂದಿರುವುದಕ್ಕೆ ಅಂತರಾಳಿಗೆ ಕಷ್ಟವಾಗುತ್ತಿದೆ. ಎಜೆ ಬೇರೆ ಲೀಲಾ ಮೇಲೆ ದಿನ ದಿಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾನೆ. ಅಂತರಾಳಿಗೆ ಈಗ ತನ್ನ ಕೆಲಸಗಳು ಸಾಗಬೇಕೆಂದರೆ, ಲೀಲಾ ಅದಕ್ಕೆಲ್ಲಾ ಅಡ್ಡವಾಗಿದ್ದಾಳೆ. ಹಾಗಾಗಿ ಏನಾದರೂ ಮಾಡಿ ಲೀಲಾಳನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ಪ್ಲಾನ್ ಮಾಡುತ್ತಿದ್ದಾಳೆ. ಈ ಬಗ್ಗೆ ಸರಸ್ವತಿ ಬಳಿ ಕಣ್ಣಿರು ಹಾಕುತ್ತಾ ಅಂತರಾ ಮಾತನಾಡುತ್ತಾಳೆ. ಸರಸ್ವತಿ ಪ್ಲಾನ್ ಒಂದನ್ನು ಹೇಳಿಕೊಡುತ್ತಾಳೆ. ಅಂತರಾ, ಎಜೆ ಬಳಿ ಮಾತನಾಡುತ್ತಾ ಲೀಲಾಳನ್ನು ಹಬ್ಬಕ್ಕೆ ತವರು ಮನೆಗೆ ಕಳಿಸೋಣ ಎಂದು ಹೇಳಿಕೊಡುತ್ತಾಳೆ.

ಮನೆಬಿಟ್ಟು ಹೋಗದಿರಲು ಲೀಲಾ ಹರಸಾಹಸ

ಎಜೆ ಎಲ್ಲರೂ ಇರುವಾಗ ಲೀಲಾಳನ್ನು ಹಬ್ಬಕ್ಕೆ ಅಮ್ಮನ ಮನೆಗೆ ಹೋಗು ಎಂದು ಹೇಳುತ್ತಾನೆ. ಇದಕ್ಕೆ ಲೀಲಾ ಎಲ್ಲರ ಮುಂದೆ ಸುಮ್ಮನಿದ್ದು ಆಮೇಲೆ ಬಂದು ಜಗಳ ಮಾಡುತ್ತಾಳೆ. ನನಗೆ ಅಮ್ಮನ ಮನೆಗೆ ಹೋಗೋದಕ್ಕೆ ಇಷ್ಟವಿಲ್ಲ. ನನಗೆ ಇಲ್ಲೇ ಹಬ್ಬ ಮಾಡಬೇಕು. ಅಂತರಾ ಅಕ್ಕ ಹಬ್ಬ ಮಾಡುವುದನ್ನು ನೋಡಬೇಕು ಎಂದೆಲ್ಲಾ ಕೇಳಿಕೊಳ್ಳುತ್ತಾಳೆ. ಎಜೆ ಕೂಡ ಇದಕ್ಕೆ ಒಪ್ಪಿಕೊಳ್ಳುತ್ತಾನೆ. ಲೀಲಾಳಿಗೆ ಅಂತರಾ, ದುರ್ಗಾ ಹೇಳಿದಂತೆ ಡುಪ್ಲಿಕೇಟಾ ಅಥವಾ ಒರಿಜಿನಲ್ಲಾ ಎಂಬುದನ್ನು ಕಾದು ನೋಡಲು ಹಬ್ಬಕ್ಕೆ ಇಲ್ಲೇ ಇರಲು ಬಯಸುತ್ತಿದ್ದಾಳೆ.

hitler-kalyana-serial

ಲೀಲಾಳನ್ನು ಕರೆಯಲು ಬಂದ ಕೌಸಲ್ಯ

ಎಜೆಯಿಂದ ಲೀಲಾಳನ್ನು ತವರು ಮನೆಗೆ ಕಳಿಸಲು ಸಾಧ್ಯವಾಗಿಲ್ಲ ಎಂದು ಅಂತರಾ, ಕೌಸಲ್ಯಳನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಕೌಸಲ್ಯ ಮನೆಗೆ ಬಂದು ಮಗಳನ್ನು ಹಬ್ಬಕ್ಕೆ ಕಳಿಸಿಕೊಡಿ. ಲೀಲಾ ಇಲ್ಲ ಎಂದರೆ, ನಮ್ಮ ಮನೆಯಲ್ಲಿ ಹಬ್ಬವೇ ಆಗುವುದಿಲ್ಲ. ಲೀಲಾಳನ್ನು ನೀವು ಕಳಿಸಲೇಬೇಕು ಎಂದು ಹೇಳುತ್ತಾಳೆ. ಅಜ್ಜಿ ಬಂದು ಖಡಾಖಂಡಿತವಾಗಿ ಲೀಲಾಳನ್ನು ಕಳಿಸುವುದಿಲ್ಲ. ಲೀಲಾ ಇಲ್ಲೇ ಇರುತ್ತಾಳೆ ಎಂದು ವಾದ ಮಾಡುತ್ತಾರೆ. ಅಂತರಾ, ಕೌಸಲ್ಯಾಳಿಗೆ ಸಪೋರ್ಟ್ ಮಾಡುತ್ತಿರುತ್ತಾಳೆ.

ಲೀಲಾ ಪರ ನಿಂತ ತಂದೆ ರಾಮಚಂದ್ರ

ಲೀಲಾ ಬಂದು, ಇಲ್ಲ ನಾನು ಬರೋದಿಲ್ಲ ಎಂದಾಗ ಕೌಸಲ್ಯ ನಿಮ್ಮ ಅಪ್ಪನೇ ಕರೆದುಕೊಂಡು ಬರಲು ಹೇಳಿದ್ದಾರೆ. ನೀನು ಬರಲೇಬೇಕು ಎಂದು ಕರೆಯುತ್ತಾಳೆ. ಲೀಲಾ ಇಲ್ಲ ನಾನು ಬರುವುದಿಲ್ಲ ಎನ್ನುವ ವೇಳೆಗೆ ಎಜೆ ಮತ್ತು ರಾಮಚಂದ್ರ ಬರುತ್ತಾರೆ. ಲೀಲಾ ಎಲ್ಲಿಗೂ ಬರುವುದಿಲ್ಲ. ನಾವೆಲ್ಲರೂ ಇಲ್ಲೇ ಹಬ್ಬ ಮಾಡುತ್ತೇವೆ ಎಂದು ಹೇಳುತ್ತಾನೆ. ಈ ಮಾತು ಎಲ್ಲರಿಗೂ ಶಾಕ್ ಆಗುವಂತೆ ಮಾಡುತ್ತದೆ. ಒಟ್ನಲ್ಲಿ ಅಂತರಾ ಹೇಗೆ ಹಬ್ಬ ಮಾಡುತ್ತಾಳೆ ಎಂಬುದನ್ನು ಲೀಲಾ ನೋಡಿ, ದುರ್ಗಾ ಮಾತು ಎಷ್ಟು ಸತ್ಯ ಎಂದು ಅರ್ಥ ಮಾಡಿಕೊಳ್ಳುತ್ತಾಳಾ? ಕಾದು ನೋಡಬೇಕಿದೆ.

More from Filmibeat

English summary
hitler kalyana Kannada serial Today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X