For Quick Alerts
  ALLOW NOTIFICATIONS  
  For Daily Alerts

  ಏಜೆ ಕತೆ ಕೇಳಿ ಕೋರ್ಟ್ ಕೊಟ್ಟ ತೀರ್ಪೇನು..?

  By ಪ್ರಿಯಾ ದೊರೆ
  |

  ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಏಜೆ ಈಗ ಅಂತರಾ ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದಾನೆ. ಅಂತರಾ ಜೊತೆಗೆ ಜಗಳವಾಡಿದ ಸಿಡಿ ಕೋರ್ಟ್‌ನಲ್ಲಿ ಪ್ರಮುಖ ಸಾಕ್ಷಿಯಾಗಿದೆ. ಹಾಗಾಗಿ ಎಜೆ ಮೇಲೆ ಆರೋಪ ಬಂದಿದೆ.

  ಅದರ ಮತ್ತೊಂದು ಸಿಡಿಯನ್ನು ಹುಡುಕುತ್ತಿರುವಾಗ ಅಜ್ಜಿ ರೂಮಿನಲ್ಲಿ ಸಿಡಿ ಸಿಗುತ್ತದೆ. ಇದರಿಂದ ಮನೆಯಲ್ಲಿ ಎಲ್ಲರೂ ಶಾಕ್ ಆಗುತ್ತಾರೆ. ಆದರೆ, ಅಜ್ಜಿ ನೀನು ಸಿಡಿಯನ್ನು ಬೀಳಿಸಿಕೊಂಡಿದ್ದೆ, ನಾನೇ ತೆಗೆದಿಟ್ಟಿದ್ದೆ ಎಂದು ಹೇಳುತ್ತಾರೆ.

  ಈ ಸಿಡಿ ವಿಚಾರ ಬಂದಾಗ ಲೀಲಾ ಮತ್ತು ಅಜ್ಜಿ ಎಜೆ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಆಗ ಅಜ್ಜಿ ಅಭಿ ಮುಂಚೆ ಹೇಗೆ ಇದ್ದ ಎಂದು ಹೇಳುತ್ತಾನೆ. ಇದನ್ನು ಕೇಳಿದ ಲೀಲಾ ಶಾಕ್ ಆಗುತ್ತಾಳೆ.

  ಪತಿಯನ್ನು ಬದಲು ಮಾಡುತ್ತಾಳಾ..?

  ಪತಿಯನ್ನು ಬದಲು ಮಾಡುತ್ತಾಳಾ..?

  ಅಜ್ಜಿ ಲೀಲಾ ಜೊತೆಗೆ ಮಾತನಾಡುತ್ತಾ ಎಜೆ ಹೇಗೆ ಬದಲಾದ ಎಂಬ ಬಗ್ಗೆ ಹೇಳುತ್ತಿರುತ್ತಾರೆ. ಅಭಿರಾಮ್ ಜೈಶಂಕರ್ ಎಜೆಯಾಗಿ ಬದಲಾಗಿದ್ದಾಣೆ. ನನ್ನ ಮಗನನ್ನು ಮತ್ತೆ ನನಗೆ ವಾಪಸ್ ಸಿಗುವಂತೆ ಮಾಡು ಎಂದು ಕೇಳಿಕೊಳ್ಳುತ್ತಾಳೆ. ಲೀಲಾ ಅಜ್ಜಿಗೆ ಅಭಿರಾಮ್ ಅವರನ್ನು ಮೊದಲಿನಂತೆ ಮಾಡುತ್ತೇನೆ ಎಂದು ಮಾತುಕೊಡುತ್ತಾಳೆ. ಅಜ್ಜಿ ನೀನು ಹಾಗೆ ಮಾಡಬೇಖು ಎಂದರೆ ಅಭಿಗೆ ಸಂಬಂಧಿಸಿದ ಡೈರಿಯನ್ನು ನೀನು ಓದಬೇಕು ಎಂದು ಹೇಳುತ್ತಾಳೆ. ಆ ಡೈರಿಯಲ್ಲಿ ಅಂತರಾ ಮತ್ತು ಎಜೆ ಬಗ್ಗೆ ಎಲ್ಲಾ ವಿಚಾರವೂ ಇದೆ. ಅದು ಅಭಿ ಜೀವನ ಚರಿತ್ರೆ . ನೀನು ಅವನ ಹೆಂಡತಿಯಾಗಿ ಆ ಡೈರಿಯನ್ನು ಓದಲೇಬೇಕು ಎಂದು ಹೇಳುತ್ತಾಳೆ.

  ಏಜೆಯನ್ನು ಬಿಡುಗಡೆ ಮಾಡಿದ ಜಡ್ಜ್

  ಏಜೆಯನ್ನು ಬಿಡುಗಡೆ ಮಾಡಿದ ಜಡ್ಜ್

  ಕೋರ್ಟ್ ನಲ್ಲಿ ಎಜೆ ಅಂತರಾ ಜೊತೆಗೆ ಕಾರಣವೇನು ಎಂಬುದರ ಬಗ್ಗೆ ಇದ್ದ ಮತ್ತೊಂದು ಸಿಡಿಯನ್ನು ಪ್ಲೇ ಮಾಡುತ್ತಾನೆ. ಮತ್ತು ಅವನ ಹಾಗೂ ಅಮತರಾ ನಡುವೆ ಇದ್ದ ಪ್ರೀತಿಯ ಬಗ್ಗೆ ಹೇಳಿಕೊಳ್ಳುತ್ತಾನೆ. ಸಿಡಿ ನೋಡಿ, ಎಜೆ ಮಾತುಗಳನ್ನು ಕೇಳಿದ ಜಡ್ಜ್, ಅವರ ವಿರುದ್ಧ ದಾಖಲಾಗಿರುವ ದೂರಿಗೆ ಸರಿಯಾದ ಸಾಕ್ಷಾಧಾರಗಳಿಲ್ಲ ಎಂದು ಹೇಳಿ ಪ್ರಕರಣದಿಂದ ಖುಲಾಸೆಗೊಳಿಸುತ್ತಾರೆ. ಇನ್ನು ಎಜೆಗೆ ಆಲ್ ದಿ ಬೆಸ್ಟ್ ಕೂಡ ಹೇಳುತ್ತಾರೆ.

  ದುರ್ಗಾ ಎದುರು ಸತ್ಯ ಒಪ್ಪಿಕೊಂಡ ಲೀಲಾ

  ದುರ್ಗಾ ಎದುರು ಸತ್ಯ ಒಪ್ಪಿಕೊಂಡ ಲೀಲಾ

  ಗ್ಯಾರೇಜ್ ಗೆ ಹೋದ ಲೀಲಾ ಡೈರಿಯನ್ನು ತೆಗೆದು ಓದುತ್ತಾಳೆ. ಅಂತರಾ ಹಾಗೂ ಎಜೆ ಬಗ್ಗೆ ತಿಳಿದುಖುಷಿಯಾಗುತ್ತಾಳೆ. ಆದರೆ, ಲೀಲಾ ಮನದಲ್ಲಿ ಎಜೆ ಜೈಲಿಗೆ ಹೋಗಲು ತಾನೇ ಕಾರಣ ಎಂಬ ಗಿಲ್ಟ್ ಲೀಲಾಗೆ ಕಾಡುತ್ತಿರುತ್ತದೆ. ಹಾಗಾಗಿ ಲೀಲಾ ಈ ವಿಚಾರವನ್ನು ಎಜೆಗೆ ಹೇಳಬೇಕು ಎಂದು ತೀರ್ಮಾನಿಸುತ್ತಾಳೆ. ಈ ವೇಳೆ ದುರ್ಗಾಳನ್ನು ನೋಡಿದ ಲೀಲಾ ಮಾತನಾಡಿಸುತ್ತಾಳೆ. ದುರ್ಗಾ ನಿನ್ನ ಮನಸಲ್ಲಿರುವ ಗೊಂದಲ ಏನು ಹೇಳು ಎಂದು ಕೇಳಿದ್ದಕ್ಕೆ ಶಾಕ್ ಆಗುವ ಲೀಲಾ, ತನ್ನ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾಳೆ. ಎಜೆ ಹುಡುಕುತ್ತಿರುವ ವ್ಯಕತಿ ನಾನೇ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ದುರ್ಗಾ ಶಾಕ್ ಆಗುತ್ತಾಳೆ.

  ಲಕ್ಷ್ಮಿ ಲೀಲಾಗೆ ಮತ್ತೆ ಮುಳ್ಳಾಗುತ್ತಾಳಾ..?

  ಲಕ್ಷ್ಮಿ ಲೀಲಾಗೆ ಮತ್ತೆ ಮುಳ್ಳಾಗುತ್ತಾಳಾ..?

  ಇನ್ನು ಲಕ್ಷ್ಮೀ ಲೀಲಾ ವಿರುದ್ಧ ಮತ್ತೆ ಪಿತೂರಿ ಮಾಡಲು ಮುಂದಾಗಿದ್ದಾಳೆ. ಹಾಗಾಗಿ ಚುಕ್ಕಿಗೆ ಫೋನ್ ಮಾಡುತ್ತಾಳೆ. ಆಗ ಚುಕ್ಕಿ ಅಪರೂಪಕ್ಕೆ ಕಾಲ ಮಾಡಿದ್ದೇಕೆ ಎಂದು ಕೇಳುತ್ತಾಳೆ. ಲಕ್ಷ್ಮೀ ಬೇಕಂತಲೇ ಇನ್ನು ನಿನ್ನ ಮದುವೆ ಆಗಿಲ್ಲ. ನಿಮ್ಮ ತಂದೆ ನಿನ್ನ ಮದುವೆ ಮಾಡಲು ಎಷ್ಟು ಒದ್ದಾಡುತ್ತಿದ್ದಾರೆ. ಬೇರೆಯವರು ನಿನ್ನ ಜಾಗದಲ್ಲಿ ಇದ್ದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಚುಚ್ಚಿ ಮಾತನಾಡುತ್ತಾಳೆ. ಈ ಮಾತುಗಳನ್ನು ಕೇಳಿದ ಚುಕ್ಕಿ ಬೇಸರ ಮಾಡಿಕೊಳ್ಳುತ್ತಾಳೆ.

  English summary
  Hitler Kalyana Serial: In court starts telling love story of AJ and Anthara. Leela tells truth to durga about CD.
  Sunday, December 25, 2022, 8:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X