Hitler Kalyana: ಮನೆಗೆ ವಾಪಸ್‌ ಬಂದ ಲೀಲಾ: ತಡೆದ ಎಜೆಗೆ ಜೋರು ಮಾಡಿದ ಸೊಸೆ

By ಪ್ರಿಯಾ ದೊರೆ

'ಹಿಟ್ಲರ್‌ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ, ಲೀಲಾಳನ್ನು ಮನೆಯಿಂದ ಹೊರಗೆ ಹಾಕಿ ಸಾಕಷ್ಟು ಸಮಯವಾಗಿದೆ. ಲೀಲಾ ತವರು ಮನೆಯಲ್ಲಿ ಕೊರಗುತ್ತಿದ್ದಾಳೆ.

ಮಾಡದ ತಪ್ಪಿಗೆ ಮಗಳು ಶಿಕ್ಷೆ ಅನುಭವಿಸುತ್ತಿದ್ದಾಳಲ್ಲ ಎಂದು ಲೀಲಾ ತಂದೆ ಹಾಗೂ ಸಹೋದರಿಯೂ ಕೊರಗುತ್ತಿದ್ದಾರೆ. ಆದರೆ, ಲೀಲಾ ತಾಯಿ ಕೌಸಲ್ಯ ಮಾತ್ರ ಯಾಕಾದರೂ ಮನೆಗೆ ಬಂದಳೋ ಎಂದು ದಿನ ಸುಪ್ರಭಾತ ಹಾಡುತ್ತಿದ್ದಾಳೆ.

ಎಜೆ ಮನೆಯಲ್ಲಿ ಸೊಸೆಯಂದಿರು ಫುಲ್‌ ಖುಷಿಯಾಗಿದ್ದಾರೆ. ಅಂತೂ ಇಂತೂ ಲೀಲಾಳನ್ನು ಮನೆಯಿಂದ ಹೊರಗೆ ಹಾಕಿದ್ದಾಯ್ತಲ್ಲ ಎಂದು ಸಂತೋಷವಾಗಿ ಎಂಜಾಯ್‌ ಮಾಡುತ್ತಿದ್ದಾರೆ.

ಅಜ್ಜಿ ಹೊಸ ಪ್ಲ್ಯಾನ್

ಅಜ್ಜಿ ಹೊಸ ಪ್ಲ್ಯಾನ್

ಎಜೆಗೆ ಲೀಲಾ ಮೇಲಿನ ಕೋಪ ಸ್ವಲ್ಪವೂ ಕಡಿಮೆಯಾಗಿಲ್ಲ. ತನ್ನ ಹೆಂಡತಿಯಾಗಿ, ತನ್ನ ಜೊತೆಯಲ್ಲೇ ಇದ್ದುಕೊಂಡು ಜೈಲಿಗೆ ಕಳಿಸಿದಳಲ್ಲ ಎಂದು ಕೋಪ ಮಾಡಿಕೊಂಡಿರುತ್ತಾನೆ. ಇದರ ಜೊತೆಗೆ ದುರ್ಗಾ ಬೇರೆ ಚಾಡಿ ಹೇಳಿರುತ್ತಾಳೆ. ಹೀಗಾಗಿ ಎಜೆ, ಲೀಲಾ ಕುತ್ತಿಗೆಯಲ್ಲಿದ್ದ ತಾಳಿಯನ್ನು ಎಲ್ಲರ ಮುಂದೆ ಕಿತ್ತು ಬಿಸಾಡಿರುತ್ತಾನೆ. ನಂತರ ಮನೆಯಲ್ಲಾದ ಅವಮಾನ ತಾಳದೆ ಲೀಲಾ ತವರು ಮನೆಗೆ ಹೋಗಿರುತ್ತಾಳೆ. ಅಜ್ಜಿ ಹೇಗಾದರೂ ಮಾಡಿ ಸೊಸೆಯನ್ನು ಮನೆಗೆ ಕರೆದುಕೊಂಡು ಬರಬೇಕೆಂದು ಪ್ಲಾನ್‌ ಮಾಡಿರುವ ಅಜ್ಜಿ, ಲೀಲಾ ಮನೆಗೆ ಹೋಗಿದ್ದಾಳೆ.

ಸುಳ್ಳು ಹೇಳಿದ ವಿಶ್ವರೂಪ್

ಸುಳ್ಳು ಹೇಳಿದ ವಿಶ್ವರೂಪ್

ಮನೆಗೆ ಬಂದ ಅಜ್ಜಿ, ಲೀಲಾ ಬಳಿ ಮಾತನಾಡುತ್ತಿರುತ್ತಾಳೆ. ಲೀಲಾಗೆ ಬೇಸರ ಮಾಡಿಕೊಳ್ಳಬೇಡ. ಅದು ನಿನ್ನ ಮನೆ. ನಿನಗೆ ಹಕ್ಕಿದೆ ಬಾ ಎಂದು ಕರೆಯುತ್ತಾಳೆ. ಆಗ ವಿಶ್ವರೂಪ್‌ ಬಂದು ಎಜೆ ಸರ್‌ ನಿಮ್ಮ ನೆನಪಿನಲ್ಲಿ ಕೊರಗುತ್ತಿದ್ದಾರೆ. ಊಟ ಮಾಡುತ್ತಿಲ್ಲ. ನಿದ್ರೆ ಮಾಡುತ್ತಿಲ್ಲ. ಕೆಲಸ ಮಾಡುವಾಗಲೂ ನಿಮ್ಮದೇ ಯೋಚನೆ ಅವರಿಗೆ ಎಂದು ಸುಳ್ಳು ಹೇಳುತ್ತಾನೆ. ಅಜ್ಜಿಯೂ ವಿಶ್ವರೂಪ್‌ ಜೊತೆಗೆ ಸೇರಿಕೊಂಡು ಲೀಲಾಗೆ ಸುಳ್ಳು ಹೇಳಿ ಮನೆಗೆ ಕರೆದುಕೊಂಡು ಹೋಗಲು ಒಪ್ಪಿಸುತ್ತಾರೆ. ಮನೆಗೆ ಹೋಗುವಾಗ ಕೌಸಲ್ಯ ವ್ಯಂಗ್ಯವಾಗಿ ಮಾತನಾಡುತ್ತಾಳೆ. ಆದರೆ, ಇದಕ್ಕೆ ಬೇಸರ ಮಾಡಿಕೊಳ್ಳದ ಅಜ್ಜಿ, ನನ್ನ ಸೊಸೆಯನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳುತ್ತಾರೆ

ಎಜೆ ಕೋಪ ಹೆಚ್ಚಿಸಿದ ದುರ್ಗಾ

ಎಜೆ ಕೋಪ ಹೆಚ್ಚಿಸಿದ ದುರ್ಗಾ

ಅಜ್ಜಿ, ಲೀಲಾಳನ್ನು ಕರೆದುಕೊಂಡು ಬರುತ್ತಿದ್ದಾರೆ ಎಂಬ ಸತ್ಯ ತಿಳಿದ ದುರ್ಗಾ ಹೊಸ ಪ್ಲ್ಯಾನ್ ಮಾಡುತ್ತಾಳೆ. ಬೇಕಂತಲೇ ಎಜೆ ಬಳಿ ಹೋದ ದುರ್ಗಾ, ಅಜ್ಜಿ ಲೀಲಾಳನ್ನು ಕರೆತರುತ್ತಿರುವ ವಿಚಾರವನ್ನು ಹೇಳುತ್ತಾಳೆ. ಲೀಲಾ ಮನೆಗೆ ಬರುತ್ತಿರುವುದು ಖುಷಿಯಾಗುತ್ತಿದೆ ಎಂಬಂತೆ ನಾಟಕ ಮಾಡುತ್ತಾಳೆ. ಆದರೆ, ಸತ್ಯ ಅರ್ಥವಾಗದ ಎಜೆ ಕೂಗಾಡುತ್ತಾನೆ. ಲೀಲಾಗೆ ಈ ಮನೆಯಲ್ಲಿ ಇರುವ ಹಕ್ಕಿಲ್ಲ. ಅಮ್ಮ ಕರೆದುಕೊಂಡು ಬಂದರೂ ಅಷ್ಟೇ ಎಂದು ಸಿಟ್ಟಿನಿಂದ ಹೇಳುತ್ತಾನೆ. ಈ ಮಾತನ್ನು ಕೇಳಿ ದುರ್ಗಾ ಮನದೊಳಗೆ ಖುಷಿ ಪಡುತ್ತಿರುತ್ತಾಳೆ.

ಜೋರು ಮಾಡಿದ ಲೀಲಾ

ಜೋರು ಮಾಡಿದ ಲೀಲಾ

ಇನ್ನು ದುರ್ಗಾ ಬೇಕಂತಲೇ ಆರತಿಯನ್ನು ರೆಡಿ ಮಾಡಿಕೊಳ್ಳಿ ಎಂದು ಲಕ್ಷ್ಮಿ ಮತ್ತು ಸರಸ್ವತಿಗೆ ಹೇಳಿರುತ್ತಾಳೆ. ಮನೆಗೆ ಅಜ್ಜಿ ಮತ್ತು ಲೀಲಾ ಬರುತ್ತಿದ್ದಂತೆ ಎಜೆ ಬಾಗಿಲಲ್ಲೇ ನಿಂತಿರುತ್ತಾನೆ. ದುರ್ಗಾ ಸುಮ್ಮನೆ ನಾಟಕವಾಡುತ್ತಾಳೆ. ಲೀಲಾ ಅತ್ತೆ ಮನೆಗೆ ಬರಲಿ, ಒಪ್ಪಿಕೊಳ್ಳಿ ಎನ್ನುತ್ತಿರುತ್ತಾಳೆ. ಅಜ್ಜಿ ಎಜೆಯನ್ನು ನೋಡಿ ಏನು ಮಾಡುವುದು ಸುಳ್ಳು ಹೇಳಿ ಲೀಲಾಳನ್ನು ಕರೆದುಕೊಂಡು ಬಂದಿದ್ದೇವೆ ಎಂದು ಒಳಗೇ ಕೊರಗುವಾಗಲೇ, ಲೀಲಾನೇ ಈ ಮನೆಗೆ ಬರಲು ನನಗೂ ಹಕ್ಕಿದೆ ಎಂದು ಎಜೆಗೆ ಎದುರು ಮಾತನಾಡಿ ಒಳಗೆ ಬರುತ್ತಾಳೆ. ಇದರಿಂದ ಎಲ್ಲರೂ ಶಾಕ್‌ ಆಗುತ್ತಾರೆ.

More from Filmibeat

English summary
Hitler kalyana serial 24th January Episode Written Update. Ajji brings back home leela. AJ stops leela but she shouts and enter the house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X