Hitler Kalyana: ದುರ್ಗಾಳನ್ನು ಮನೆಗೆ ಕರೆತಂದ ಎಜೆ: ದುರ್ಗಾ ಸತ್ಯ ಹೇಳುತ್ತಾಳಾ..?
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾ, ದುರ್ಗಾಳನ್ನು ಕಿಡ್ನ್ಯಾಪ್ ಮಾಡಿಸಿದ್ದಾಳೆ. ಅವಳನ್ನು ಹುಡುಕಲು ಎಜೆ ಹರಸಾಹಸ ಪಡುತ್ತಿದ್ದಾನೆ.
ಇದೇ ಸಂದರ್ಭದಲ್ಲಿ ದುರ್ಗಾ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ತಾನು ಇರುವ ಸ್ಥಳದ ಬಗ್ಗೆ ಮಾಹಿತಿಯನ್ನು ನೀಡಿದ್ದಾಳೆ. ಈ ಮೂಲಕ ಈಗ ಪೊಲೀಸರು ದುರ್ಗಾ ಇರುವ ಸ್ಥಳಕ್ಕೆ ಹೊರಟಿದ್ದಾರೆ.

ಎಜೆ ಮತ್ತು ಅಂತರಾ ಕೂಡ ದುರ್ಗಾಳನ್ನು ರಕ್ಷಿಸಲು ಆಗಮಿಸುತ್ತಿದ್ದಾರೆ. ಅಂತರಾ ಹೇಗಾದರೂ ಮಾಡಿ ದುರ್ಗಾ, ಎಜೆಗೆ ಸಿಗದಂತೆ ಜಾಗ ಬದಲಾಯಿಸಲು ಯತ್ನಿಸಿದ್ದಾಳೆ.
ದುರ್ಗಾಳನ್ನು ಕಾಪಾಡಲು ಬಂದ ಮನೆಯವರು
ಅಂತರಾ ಪ್ರಯತ್ನ ವಿಫಲವಾಗಿದೆ. ಕಿಶೋರ್ ಮತ್ತು ಲೀಲಾ ಕೂಡ ಎಜೆಯನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ಪೊಲೀಸರಿಗಿಂತಲೂ ಮುನ್ನವೇ ಬಂದ ಮನೆಯವರು ದುರ್ಗಾ ಎಲ್ಲಿದ್ದಾಳೆ, ಎಂಬುದು ತಿಳಿಯದೇ ಹುಡುಕಾಡಿದ್ದಾರೆ. ಎಜೆ ರೌಡಿಗಳ ಜೊತೆಗೆ ದೊಡ್ಡ ಫೈಟ್ ಮಾಡಿದ್ದಾನೆ. ಇಡೀ ಫ್ಯಾಕ್ಟರಿಯಲ್ಲಿ ಎಲ್ಲಿ ಹುಡುಕಿದರೂ ದುರ್ಗಾ ಸಿಗುವುದಿಲ್ಲ. ದುರ್ಗಾಳನ್ನು ಹುಡುಕುತ್ತಿರುವಂತೆ ನಟಿಸಿದ ಅಂತರಾ ಒಂದು ಕಡೆ ಕುಳಿತುಕೊಂಡು ರೆಸ್ಟ್ ಮಾಡುತ್ತಿದ್ದಾಳೆ. ಕೊನೆಗೆ ದುರ್ಗಾ ತಾನಿರುವ ಜಾಗದಲ್ಲಿ ಶಬ್ಧ ಮಾಡಿ, ತನ್ನ ಇರುವಿಕೆಯ ಬಗ್ಗೆ ಕನ್ಫರ್ಮ್ ಮಾಡಿದ್ದಾಳೆ.
ದುರ್ಗಾಳಿಗಾಗಿ ಅಂತರಾ ಸಾಹಸ
ಅಷ್ಟೊತ್ತಿಗೆ ದುರ್ಗಾಳ ಕುತ್ತಿಗೆಗೆ ರೌಡಿ ಚಾಕು ಹಿಡಿದಿದ್ದು, ಎಲ್ಲರೂ ಗಾಬರಿಯಾಗಿದ್ದಾರೆ. ಆದರೆ ಅಂತರಾ ಧೈರ್ಯವಾಗಿ ಮುಂದೆ ಬಂದು ದುರ್ಗಾಳಿಗೆ ಏನೂ ಆಗದಂತೆ ನೋಡಿಕೊಂಡಿದ್ದಾಳೆ. ಕೈಗೆ ಗಾಯ ಮಾಡಿಕೊಂಡು ದುರ್ಗಾಳನ್ನು ರಕ್ಷಿಸಿದ್ದಾಳೆ. ಕೊನೆಯಲ್ಲಿ ಬರುವ ಪೊಲೀಸರು ರೌಡಿಗಳನ್ನು ಅರೆಸ್ಟ್ ಮಾಡಿದ್ದಾರೆ. ದುರ್ಗಾ ಸಿಕ್ಕ ಖುಷಿಯಲ್ಲಿ ಕಿಶೋರ್ ಕುಣಿದಾಡಿದ್ದು, ಎಲ್ಲರೂ ಒಟ್ಟಿಗೆ ಮನೆಗೆ ಹೋಗಿದ್ದಾರೆ. ಅಂತರಾ ಮಾಡಿದ ಸಾಹಸಕ್ಕೆ ಎಜೆ ಖುಷಿ ಪಟ್ಟಿದ್ದಾನೆ. ಆದರೆ, ಲೀಲಾಳಿಗೆ ದುರ್ಗಾಳನ್ನು ಕಿಡ್ನ್ಯಾಪ್ ಮಾಡಿಸಿದ ಅಂತರಾ ಯಾಕೆ ಈಗ ಸೇವ್ ಮಾಡಿದಳು ಅನ್ನೋ ಪ್ರಶ್ನೆ ತಲೆ ಕೆಡಿಸಿಕೊಂಡಿದ್ದಾಳೆ.

ಮನೆಗೆ ಬಂದ ದುರ್ಗಾ
ಮನೆಗೆ ಬಂದ ದುರ್ಗಾಳನ್ನು ಎಲ್ಲರೂ ಖುಷಿಯಿಂದ ಸ್ವಾಗತಿಸಿದ್ದಾರೆ. ಆದರೆ ದುರ್ಗಾ ಮುಖದಲ್ಲಿ ಖುಷಿಯೂ ಕಾಣುತ್ತಿಲ್ಲ. ನೆಮ್ಮದಿಯೂ ಇಲ್ಲ. ಅಂತರಾ ಈಗ ಎಜೆ ಮನಸ್ಸನ್ನು ಗೆಲ್ಲುತ್ತಿದ್ದೇನೆ ಎಂಬ ಖುಷಿ ಇದೆ. ಎಜೆ ಕೂಡ ಅಂತರಾ ಮೇಲೆ ಪ್ರೀತಿ ಹೆಚ್ಚಿಸಿಕೊಂಡಿದ್ದಾನೆ. ಈ ಮನೆಗಾಗಿ ಅಂತರಾ ತನ್ನ ಪ್ರಾಣವನ್ನು ಲೆಕ್ಕಿಸಲಿಲ್ಲ ಎಂದು ನಂಬಿದ್ದಾನೆ. ಆದರೆ, ಇದರ ಹಿಂದಿರುವ ಅಂತರಾಳ ಆಟ ಎಜೆಗೆ ತಿಳಿಯುತ್ತಿಲ್ಲ. ಇನ್ನು ಎಜೆ, ದುರ್ಗಾ ಬಳಿ ಬಂದು ಇದೆಲ್ಲಾ ಹೇಗಾಯ್ತು. ಇದರ ಹಿಂದೆ ಯಾರ ಕೈವಾಡವಿದೆ ಎಂದು ಹೇಳು. ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ದುರ್ಗಾ ಒಂದು ಮಾತೂ ಆಡದ ಕಾರಣ, ಅವಳಿಗೆ ನಿನಗೆ ಮನಸಾದಾಗ ಹೇಳು. ಮೊದಲು ರೆಸ್ಟ್ ಮಾಡು ಎಂದು ಎಜೆ ಹೇಳಿದ್ದಾರೆ. ಆದರೆ. ದುರ್ಗಾ ಇದರ ಹಿಂದೆ ಇರುವುದು ಅಂತರಾ ಎಂಬ ಸತ್ಯವನ್ನು ಹೇಳುತ್ತಾಳಾ ಕಾದು ನೋಡಬೇಕಿದೆ.
ದುರ್ಗಾ ಪಾತ್ರ ಬದಲಾವಣೆ
ಇನ್ನು ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದುರ್ಗಾ ಪಾತ್ರವನ್ನು ನಂದಿನಿ ಮೂರ್ತಿ ನಿಭಾಯಿಸುತ್ತಿದ್ದರು. ಆದರೆ ಈತ್ತೀಚೆಗೆ ಆಕೆ ಧಾರಾವಾಹಿಯಿಂದ ಹೊರ ನಡೆಯಬೇಕಾಗಿತ್ತು. ನಂದಿನಿ ಗರ್ಭಿಣಿ ಆದ ಕಾರಣ, ಧಾರಾವಾಹಿ ಕೈ ಬಿಡಬೇಕಾಯ್ತು. ಇನ್ನು ದುರ್ಗಾ ಪಾತ್ರ ಬದಲಾಗಿದ್ದು, ಈಗ ಈ ಪಾತ್ರಕ್ಕೆ ನಟಿ ರಿತು ಆಗಮಿಸಿದ್ದಾರೆ. 'ಮಂಗಳಗೌರಿ ಮದುವೆ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ರಿತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗ ದುರ್ಗಾ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.


Click it and Unblock the Notifications











