Hitler Kalyana: ನೋವಿನಲ್ಲಿ ಎಜೆ-ಲೀಲಾ; ದುರ್ಗಾಳಿಗೆ ವಾರ್ನಿಂಗ್ ಕೊಟ್ಟ ಅಂತರಾ!
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾ ಹಾಗೂ ಎಜೆ ಒಟ್ಟಿಗೆ ಇರಬಬೇಕು ಎಂದು ಲೀಲಾ ಮನೆ ಬಿಟ್ಟು ತವರು ಮನೆಯನ್ನು ಸೇರಿಕೊಂಡಿದ್ದಾಳೆ. ಇದರಿಂದ ಅಜ್ಜಿ ಊಟ-ತಿಂಡಿ ಬಿಟ್ಟು ಲೀಲಾ ಬೇಕು ಎಂದು ಹಠ ಹಿಡಿದಿದ್ದಾರೆ. ಲೀಲಾ ಇಲ್ಲದೇ ಇರುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ಎಜೆ ಮೌನವಾಗಿಯೇ ನೋವು ಅನುಭವಿಸುತ್ತಿದ್ದಾನೆ. ಎಜೆ ಸಂಕಟ ಅರ್ಥವಾದರೂ ಅಂತರಾ ಬೇಕಂತಲೇ ಏನೂ ಆಗೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಸದ್ಯ ಎಜೆಯನ್ನು ತನ್ನ ಕಡೆಗೆ ಒಲಿಸಿಕೊಳ್ಳಬೇಕು ಎಂದು ಅಂತರಾ ಭಾರಿ ಪ್ರಯತ್ನ ಮಾಡುತ್ತಿದ್ದಾಳೆ.

ಸಂಕಟಕ್ಕೆ ಸಿಲುಕಿರುವ ದುರ್ಗಾ
ದುರ್ಗಾಳಿಗೆ ಈಗ ಪ್ರಾರ್ಥನಾ ಈ ಮನೆಯಲ್ಲಿದ್ದಷ್ಟೂ ದಿನವೂ ಸಮಸ್ಯೆಯೇ ಎಂಬುದು ಗೊತ್ತಾಗಿದೆ. ಹೀಗಾಗಿ ದುರ್ಗಾ ಲೀಲಾ ಮನೆಗೆ ಹೋಗಿ ಸೆರಗೊಟ್ಟಿ ಬೇಡಿಕೊಳ್ಳುತ್ತಾಳೆ. ನೀನು ಮನೆಗೆ ಬಾ. ನಾನು ನಿನ್ನನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ. ನೀನು ಇಲ್ಲ ಎಂದರೆ ಸಮಸ್ಯೆ ದೊಡ್ಡದಾಗುತ್ತದೆ. ಅಂತರಾ ಹೆಸರು ಹೇಳಿಕೊಂಡು ಬಂದಿರುವವಳನ್ನು ನಾನೇ ಕರೆದುಕೊಂಡು ಬಂದಿದ್ದು. ಆದರೆ, ಈಗ ಅವಳಿಂದ ಸುಂದರವಾದ ನಮ್ಮ ಮನೆ ಸರ್ವನಾಶ ಆಗುತ್ತಿದೆ. ನೀನು ಆ ಮನೆಗೆ ದಯವಿಟ್ಟು ಬಾ. ಅಂತರಾ ಹೆಸರೇಳಿಕೊಂಡು ಬಂದಿರುವವಳನ್ನು ಮನೆಯಿಂದ ಆಚೆ ಹಾಕಬೇಕು. ಅದು ನಿನ್ನಿಂದ ಮಾತ್ರ ಸಾಧ್ಯ ಎಂದು ಕೇಳಿಕೊಂಡರೂ ಲೀಲಾ ಬರುವುದಿಲ್ಲ.
ಎಜೆ ನೆನಪಿಸಿಕೊಂಡು ಕೊರಗುತ್ತಿರುವ ಲೀಲಾ!
ಅಜ್ಜಿ ವಿಡಿಯೋ ಕಾಲ್ ಮಾಡಿ ಲೀಲಾ ಜೊತೆಗೆ ಗೋಳಾಡಿಕೊಂಡು ಮಾತನಾಡುತ್ತಾರೆ. ಮನೆಗೆ ದಯವಿಟ್ಟು ಬಾ. ನೀನಿಲ್ಲದೇ ನಾನು ಸೊರಗಿ ಹೋಗಿದ್ದೀನಿ. ನಾನು ಸಾಯುವ ಮುಂಚೆ ಬಾ ಎಂದೆಲ್ಲಾ ಕೇಳಿಕೊಂಡಿದ್ದಾರೆ. ಆದರೂ ಲೀಲಾ ಮನಸ್ಸು ಸ್ವಲ್ಪವೂ ಕರಗಿಲ್ಲ. ಒಬ್ಬಳೇ ಕೂತು ಲೀಲಾ ಎಜೆಯನ್ನು ನೆನಪು ಮಾಡಿಕೊಳ್ಳುತ್ತಾ ಕಣ್ಣಿರು ಹಾಕಿದ್ದಾಳೆ.

ಎಜೆಯನ್ನು ಬಿಟ್ಟಿರಲು ಆಗುವುದಿಲ್ಲ. ಆದರೆ, ತಾನು ಅಲ್ಲಿದ್ದರೆ ಅಂತರಾ ಮತ್ತು ಎಜೆಗೆ ಸಮಸ್ಯೆ ಆಗುತ್ತದೆ. ಹಾಗಾಗಿ ಹೋಗುವುದು ಬೇಡ ಎಂದು ಗಟ್ಟಿ ಮನಸ್ಸು ಮಾಡಿಕೊಂಡು ಲೀಲಾ ತವರು ಮನೆಯಲ್ಲಿದ್ದಾಳೆ. ಎಜೆ ಕೂಡ ಲೀಲಾಳನ್ನು ಮಿಸ್ ಮಾಡಿಕೊಳ್ಳುತ್ತಿರುತ್ತಾನೆ. ಲೀಲಾಳಿಗೆ ಫೋನ್ ಮಾಡಿ ಮಾತನಾಡುತ್ತಾನೆ. ಲೀಲಾಳಿಗೆ ಖುಷಿಯ ಜೊತೆಗೆ ಆತಂಕವೂ ಹೆಚ್ಚಾಗಿ ಏದುಸಿರು ಬಿಡುತ್ತಾ ಮಾತನಾಡುತ್ತಿರುತ್ತಾಳೆ. ಎಜೆಗೆ ಲೀಲಾ ಭಾವನೆಗಳು ಅರ್ಥವಾಗುತ್ತದೆ.
ದುರ್ಗಾ ಬಗ್ಗೆ ತಿಳಿದ ಅಂತರಾ
ಇತ್ತ ಅಂತರಾಳಿಗೆ ಮನೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬ ಮಾಹಿತಿಯನ್ನು ಕೌಸಲ್ಯ ಕೊಡುತ್ತಿರುತ್ತಾಳೆ. ಹೀಗಾಗಿ ಕೌಸಲ್ಯ ಮನೆಗೆ ದುರ್ಗಾ ಬಂದು ಲೀಲಾಳ ಬಳಿ ಮಾತನಾಡಿದ್ದನ್ನೆಲ್ಲಾ ಹೇಳುತ್ತಾಳೆ. ಇದರಿಂದ ಅಂತರಾಳಿಗೆ ದುರ್ಗಾ ಮೇಲೆ ಕೋಪ ಬರುತ್ತದೆ. ಅಲ್ಲದೇ ದುರ್ಗಾ ಸರಸ್ವತಿಗೆ ಇನ್ಮುಂದೆ ಅಂತರಾ ಜೊತೆಗೆ ಮಾತನಾಡಬೇಡ. ಆದಷ್ಟು ಅವರನ್ನು ಅವಾಯ್ಡ್ ಮಾಡು ಎಂದು ಹೇಳಿಕೊಡುತ್ತಿರುತ್ತಾಳೆ. ಇದನ್ನು ಕೇಳಿಸಿಕೊಂಡ ಅಂತರಾ ಬರುತ್ತಾಳೆ.
ದುರ್ಗಾಳಿಗೆ ಅಂತರಾ ವಾರ್ನಿಂಗ್
ದುರ್ಗಾಳಿಗೆ ಅಂತರಾ ಬೆದರಿಕೆ ಹಾಕಿದ್ದು, ಲೀಲಾಳನ್ನು ಈ ಮನೆಗೆ ಕರೆತರುವ ಪ್ರಯತ್ನ ಯಾಕೆ ಮಾಡಿದೆ. ನನ್ನ ದಾರಿಗೆ ಅಡ್ಡ ಬಂದರೆ ಸುಮ್ಮನೇ ಇರುವುದಿಲ್ಲ ಎಂದು ವಾರ್ನಿಂಗ್ ಕೊಡುತ್ತಾಳೆ. ದುರ್ಗಾ ನಿನಗೆ ಎಷ್ಟು ಹಣ ಬೇಕಾದರೂ ಕೊಡುತ್ತೀನಿ ಇಲ್ಲಿಂದ ಹೊರಟು ಬಿಡು ಎಂದು ಹೇಳುತ್ತಾಳೆ. ಅದಕ್ಕೆ ಅಂತರಾ, ನೀನು ಕೊಡುವ ಜುಜುಬಿ ಹಣ ಯಾರಿಗೆ ಬೇಕು. ನಾನು ಇಲ್ಲೇ ಇದ್ದರೆ ನನಗೆ ಅಭಿ, ಅಭಿಯ ಹೆಂಡತಿ ಅನ್ನೋ ಗೌರವ, ಪ್ರೀತಿ ಜೊತೆಗೆ ಹಣ, ಅಂತಸ್ತು ಸಿಗುತ್ತದೆ. ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾಳೆ. ಅಲ್ಲದೇ ತನ್ನ ದಾರಿಗೆ ಅಡ್ಡ ಬರಬೇಡ ಎಂದು ವಾರ್ನಿಂಗ್ ಕೊಡುತ್ತಾಳೆ.


Click it and Unblock the Notifications











