Hitler Kalyana: ಹಬ್ಬ ಮರೆತ ಅಂತರಾ: ಲೀಲಾಳ ಕೈ ಸಿಕ್ಕಿ ಬೀಳುತ್ತಾಳಾ ಪ್ರಾರ್ಥನಾ?
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾ, ಅಂತರಾಳನ್ನು ಪರೀಕ್ಷೆ ಮಾಡಲು ಮುಂದಾಗಿದ್ದಾಳೆ. ಸಣ್ಣ ಸಣ್ಣ ವಿಚಾರದಲ್ಲೂ ಅಂತರಾಳ ನಡವಳಿಕೆಗಳನ್ನು ಗಮನಿಸುತ್ತಿದ್ದಾಳೆ.
ದುರ್ಗಾ ಹೇಳಿರುವಂತೆ ಅಂತರಾ ನಿಜವಾಗಲೂ ಯಾರು ಎಂದು ತಿಳಿಯುವುದೇ ಲೀಲಾಳ ಗುರಿಯಾಗಿದೆ. ಹೀಗಾಗಿ ಲೀಲಾ ಅಂತರಾಳನ್ನು ಹೆಚ್ಚು ಗಮನಿಸುತ್ತಿದ್ದಾಳೆ.
ಗೌರಿ-ಗಣೇಶ ಹಬ್ಬವನ್ನು ಕೂಡ ಅಂತರಾ ಹೇಗೆ ಆಚರಿಸುತ್ತಾಳೆ? ಎಂಬುದನ್ನು ನೋಡಲು ಲೀಲಾ ಬಹಳ ಕುತೂಹಲಗೊಂಡಿದ್ದಾಳೆ. ಆದರೆ, ಕೌಸಲ್ಯ ಇದಕ್ಕೆ ಅಡ್ಡಿಯಾಗಿದ್ದಾಳೆ.

ಕೌಸಲ್ಯ ಗ್ರಹಚಾರ ಕೆಟ್ಟಾಯ್ತು
ಅಂತರಾ ಬೇಕಂತಲೇ ಲೀಲಾಳನ್ನು ಮನೆಯಿಂದ ಹೊರಗಾಕುವ ಸಲುವಾಗಿ ಕೌಸಲ್ಯಾಳನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಕೌಸಲ್ಯ, ಲೀಲಾಳನ್ನು ಹಬ್ಬಕ್ಕೆ ಮನೆಗೆ ಕರೆದುಕೊಂಡು ಹೋಗಲು ಬಲವಂತ ಮಾಡುತ್ತಿದ್ದಾಳೆ. ಆದರೆ, ಎಜೆ ಮತ್ತು ಲೀಲಾ ತಂದೆ ರಾಮಚಂದ್ರ ಅದೇ ಸಮಯಕ್ಕೆ ಬಂದಿದ್ದು, ಲೀಲಾ ಇದೇ ಮನೆಯಲ್ಲಿ ಹಬ್ಬ ಆಚರಿಸುತ್ತಾಳೆ. ಅವಳನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುವ ಅಗತ್ಯವಿಲ್ಲ ಎಂದು ರಾಮಚಂದ್ರ ಹೇಳುತ್ತಾಳೆ. ಕೌಸಲ್ಯಳಿಗೆ ರಾಮಚಂದ್ರರನ್ನು ನೋಡಿದ ಕೂಡಲೇ ಕೈ ಕಾಲುಗಳ ನಡುಕ ಶುರುವಾಗುತ್ತದೆ. ನಾನು ನನ್ನ ಮಗಳ ಮನೆಗೆ ಬರಲಿ ಎಂದು ಹೇಳಿರಲಿಲ್ಲ. ಕೌಸಲ್ಯ ಬೇಕಂತಲೇ ಸುಳ್ಳು ಹೇಳುತ್ತಿದ್ದಾಳೆ. ಲೀಲಾ ಇಲ್ಲೇ ಹಬ್ಬ ಮಾಡಲಿ ಎಂದು ಕೌಸಲ್ಯಳನ್ನು ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗುತ್ತಾನೆ.
ಲೀಲಾ ಖುಷಿಗೆ ಕೊನೆಯೇ ಇಲ್ಲ
ಈಗ ಲೀಲಾಳಿಗೆ ಕೂಡ ಕೌಸಲ್ಯ ನಾಟಕ ಮಾಡುತ್ತಿದ್ದಾಳೆ ಎಂಬುದು ಗೊತ್ತಿರುತ್ತದೆ. ಆದರೆ, ಕೌಸಲ್ಯಗೆ ಸಪೋರ್ಟ್ ಮಾಡುತ್ತಿರುವವರು ಯಾರು ಎಂಬುದು ಗೊತ್ತಾಗುವುದಿಲ್ಲ. ಇನ್ನು ತಾನು ಇಲ್ಲೇ ಇರುವುದು ಕನ್ಫರ್ಮ್ ಆಗಿದ್ದಕ್ಕೆ ಲೀಲಾ ತುಂಬಾ ಖುಷಿ ಪಡುತ್ತಾಳೆ. ಸಂತಸವನ್ನು ಎಜೆ ಬಳಿ ಹಂಚಿಕೊಳ್ಳುತ್ತಾಳೆ. ನನ್ನನ್ನು ಇಲ್ಲೇ ಉಳಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್ ಅನ್ನು ಕೂಡ ಕೇಳುತ್ತಾಳೆ. ಇನ್ನು ಎಜೆಗೂ ಲೀಲಾ ಮನೆಯಲ್ಲಿ ಇರುವುದು ಬಹಳ ಖುಷಿ ತಂದಿದೆ.

ಹಬ್ಬವನ್ನು ಮರೆತ ಅಂತರಾ
ವಿಶ್ವರೂಪ್ ಹಬ್ಬದ ತಯಾರಿಯನ್ನು ನಡೆಸುತ್ತಿದ್ದಾನೆ. ಅಂತರಾ ಮೊದಲೆಲ್ಲಾ ಹಬ್ಬವನ್ನು ಬಹಳ ಕಟ್ಟು ನಿಟ್ಟಾಗಿ ಮಾಡುತ್ತಿದ್ದಳು. ಗೋ ಮೂತ್ರದಿಂದ ಮನೆಯನ್ನು ಸಿಂಪಡಿಸಿ, ಶುದ್ಧಗೊಳಿಸಿ. ಉಪವಾಸದಿಂದ ಭಕ್ತಿ-ಶ್ರದ್ಧೆಯಿಂದ ಹಬ್ಬವನ್ನು ಆಚರಿಸುತ್ತಿದ್ದಳು. ಆದರೆ, ಈ ಅಂತರಾ ಹಬ್ಬವನ್ನು ಮರೆತಿದ್ದಾಳಾ ಎಂಬ ಅನುಮಾನ ಮೂಡುತ್ತಿದೆ. ಯಾಕೆಂದರೆ, ವಿಶ್ವರೂಪ್ ಗೋಮೂತ್ರವನ್ನು ಅಂತರಾಳಿಗೆ ನೀಡಲು ಹೋದಾಗ ಅಂತರಾ ಅಸಹ್ಯ ಪಟ್ಟುಕೊಂಡಿದ್ದಾಳೆ. ಇನ್ನು ಹಬ್ಬದ ದಿನವೂ ಅಂತರಾ ನಿದ್ದೆ ಮಾಡುತ್ತಿದ್ದು, ಲೀಲಾ ಎಚ್ಚರ ಮಾಡಲು ಪ್ರಯತ್ನಿಸಿದರೂ ಕೂಡಾಂತರಾ ಬಹಳ ನೆಗಲೆಕ್ಟ್ ಮಾಡಿದ್ದಾಳೆ. ಇದೆಲ್ಲವೂ ಕೂಡ ಲೀಲಾಳ ಅನುಮಾನವನ್ನು ಗಟ್ಟಿಗೊಳಿಸುತ್ತಿದೆ.
ಲೀಲಾ ಅನುಮಾನ ಕೊನೆಯಾಗುತ್ತಾ..?
ಅಂತರಾಳನ್ನು ಪರೀಕ್ಷಿಸಲೆಂದೇ ಲೀಲಾ ಹಬ್ಬದ ದಿನ ಎಚ್ಚರದಿಂದ ಇದ್ದಾಳೆ. ಈಗ ಅಂತರಾ ನೋಡಿದರೆ, ಹಬ್ಬದ ಬಗ್ಗೆ ಕೊಂಚವೂ ಆಸಕ್ತಿಯನ್ನು ತೋರುತ್ತಿಲ್ಲ. ಅದು ಬೇರೆ ಎಜೆ ಅಂತರಾ ಹಬ್ಬವನ್ನು ಹೇಗೆ ಆಚರಿಸುತ್ತಾಳೋ ಅದೇ ರೀತಿಯಲ್ಲಿ ಈ ಬಾರಿಯ ಹಬ್ಬ ಆಚರಣೆಯನ್ನು ಮಾಡಬೇಕು ಎಂದು ಹೇಳಿದ್ದಾನೆ. ಆದರೆ, ಅಂತರಾಳೇ ಹಬ್ಬದಿಂದ ದೂರ ಉಳಿದಿದ್ದು, ಇದರಿಂದ ಮನೆಯಲ್ಲಿ ರಂಪ ರಾಮಾಯಣ ನಡೆಯುವುದರ ಜೊತೆಗೆ ಲೀಲಾಳ ಅನುಮಾನಗಳು ಗಟ್ಟಿಗೊಂಡು ಮುಂದೆ ಅಂತರಾಳ ಮೂಲವನ್ನು ಕೆದಕುವುದರಲ್ಲಿ ಸಂಶಯವಿಲ್ಲ. ಹಾಗೊಂದು ವೇಳೆ. ಅಂತರಾ ಡುಪ್ಲಿಕೇಟ್ ಎಂದು ತಿಳಿದರೆ ಎಜೆ ಯಾವ ನಿರ್ಧಾರವನ್ನು ಕೈಗೊಳ್ಳುತ್ತಾನೆ? ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿದ್ದು, ಅಮತರಾ ಹಿಂದೆ ಇರುವ ಆ ವ್ಯಕ್ತಿ ಯಾರು ಎಂಬುದನ್ನು ತಿಳಿಯುವ ಕಾತುರವಿದೆ.


Click it and Unblock the Notifications











