Hitler Kalyana: ಅಂತರಾಳನ್ನು ಲಾಕ್ ಮಾಡಿದ ಎಜೆ : ಅಂತರಾ ಕತೆ ಇಲ್ಲಿಗೆ ಮುಗೀತಾ..?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾ ಎಜೆಯನ್ನು ಎಷ್ಟೇ ಕಂಟ್ರೋಲ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಅಂತರಾ ಮಾತನ್ನು ಕೇಳದ ಎಜೆ, ಲೀಲಾಳಿಗಾಗಿ ಸದಾ ಮಿಡಿಯುತ್ತಿರುತ್ತಾನೆ.

ಅಂತರಾ ಬೇಕಂತಲೇ ಎಜೆಯನ್ನು ಲೀಲಾ ಹುಟ್ಟುಹಬ್ಬದ ದಿನ ಹೊರಗಡೆ ಕರೆದುಕೊಂಡು ಹೋಗಿದ್ದರೂ, ಎಜೆ ಮನೆಗೆ ವಾಪಸ್ ಬಂದು ಲೀಲಾ ಹುಟ್ಟುಹಬ್ಬವನ್ನು ಆಚರಿಸುತ್ತಾನೆ. ಇದು ಅಂತರಾಳಿಗೆ ಬಹಳ ಕೋಪ ತರಿಸಿರುತ್ತದೆ. ಆದರೆ, ಇದನ್ನು ಯಾರ ಬಳಿಯೂ ತೋರಿಸಿಕೊಳ್ಳಲಾಗುವುದಿಲ್ಲ. ಲೀಲಾಳನ್ನು ಎಜೆಯಿಂದ ದೂರ ಇಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.

Hitler Kalyana serial 26 october episode written update

ದುರ್ಗಾ ಬಗ್ಗೆ ಕ್ಲೂ ಕೊಟ್ಟ ಅಂತರಾ

ಹೀಗಾಗಿ ಅಂತರಾ ಲೀಲಾ ಬಳಿ ಬಂದು ನೇರವಾಗಿ ಇನ್ನು ಮುಂದೆ ನೀನು ಎಜೆ ಜೊತೆಗೆ ಮಾತನಾಡಬಾರದು, ಅವರ ಬಗ್ಗೆ ಯೋಚಿಸಬಾರದು, ಎಜೆಯ ಯಾವ ಕೆಲಸವನ್ನೂ ಮಾಡಬಾರದು. ಎಜೆಯನ್ನು ನೋಡಲೂ ಬಾರದು ಎಂದು ಕಂಡೀಷನ್ ಹಾಕುತ್ತಾಳೆ. ಲೀಲಾಳಿಗೆ ಈಗಾಗಲೇ ಇವಳು ಪ್ರಾರ್ಥನಾ ಅಂತರಾ ಅಲ್ಲ ಎಂದು ತಿಳಿದಿರುವುದರಿಂದ ಅವಳ ಮಾತಿಗೆ ಸೊಪ್ಪು ಹಾಕುವುದಿಲ್ಲ.

ಅದೆಲ್ಲಾ ನಾನು ಯಾಕೆ ಮಾಡಬೇಕು. ನೀವು ನನ್ನನ್ನು ಹೇಗಿದ್ದೀನೋ ಹಾಗೆ ಬಿಟ್ಟರೆ ಸರಿ. ಇಲ್ಲ ಎಂದರೆ ನನಗೆ ಹೇಗೆ ಬೇಕೋ ಹಾಗೆ ಇರುತ್ತೇನೆ ಎಂದು ಹೇಳುತ್ತಾಳೆ. ಆಗ ಅಂತರಾ ಈ ಮನೆಯಲ್ಲಿ ನನ್ನ ಮಾತು ಕೇಳಿಕೊಂಡು ಇದ್ದರೆ ಸರಿ. ನನ್ನ ವಿರುದ್ಧವಾಗಿ ನಡೆದುಕೊಂಡವರು ಈಗಾಗಲೇ ಹೆಸರಿಲ್ಲದಂತೆ ಕಾಣೆಯಾಗಿದ್ದರೆ. ನಿನಗೂ ಅದೇ ಗತಿ ಬರುತ್ತೆ ಎಚ್ಚರ ಎಂದು ಹೇಳುತ್ತಾಳೆ.

ದುರ್ಗಾ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಲೀಲಾ

ಈ ಮಾತನ್ನು ಕೇಳಿದ ಲೀಲಾ ಯೋಚಿಸಿದಾಗ, ಹೆಸರಿಲ್ಲದಂತೆ ಸೈಲೆಂಟ್ ಆಗಿ ಕಾಣೆಯಾಗಿರುವುದು ದುರ್ಗಾ. ದುರ್ಗಾ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕೇವಲ ಅವಳಿಂದ ಮೆಸೇಜ್ ಅಷ್ಟೇ ಬರುತ್ತಿದೆ. ದುರ್ಗಾಳಿಂದ ಒಂದು ಫೋನ್ ಕಾಲ್ ಕೂಡ ಬಂದಿಲ್ಲ. ಫೋನ್ ಮಾಡಿದರೆ, ರಿಸೀವ್ ಕೂಡ ಮಾಡುತ್ತಿಲ್ಲ ಎಂದು ಗೆಸ್ ಮಾಡುವ ಲೀಲಾ ಮನೆಯಲ್ಲಿ ಎಲ್ಲರ ಬಳಿ ಕೊನೆ ಬಾರಿ ದುರ್ಗಾಳನ್ನು ನೋಡಿದ್ಯಾರು. ಯಾರ ಬಳಿ ಮಾತನಾಡಿದಳು ಎಂಬುದನ್ನು ವಿಚಾರಿಸಿದ್ದಾಳೆ. ಲೀಲಾಳಿಗೆ ಇನ್ನೂ ದುರ್ಗಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ, ಪ್ರಾರ್ಥನಾ ಆಡಿದ ಮಾತಿಗೂ ದುರ್ಗಾ ಕಾಣೆಯಾಗಿರುವುದು ಕಾರಣವಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ.

Hitler Kalyana serial 26 october episode written update

ಅಂತರಾಳನ್ನು ಪ್ರಶ್ನಿಸಿದ ಎಜೆ

ಇನ್ನು ಎಜೆ ಅಂತರಾಳ ನಡವಳಿಕೆಯ ಬಗ್ಗೆ ಗಮನಿಸುತ್ತಲೇ ಇದ್ದ ಈಗ ಇದ್ದಕ್ಕಿದ್ದ ಹಾಗೆ ಅಂತರಾ ರೂಮಿಗೆ ಬಂದು ಪ್ರಶ್ನೆ ಮಾಡಲು ಶುರು ಮಾಡಿದ್ದಾನೆ. ನೀನು ಈ ಮನೆಯಿಂದ ಹೋದ ಮೇಲೆ ಎಲ್ಲಿದ್ದೆ. ಏನು ಮಾಡಿಕೊಂಡಿದ್ದೆ. ಯಾರ ಜೊತೆಗಿದ್ದೆ ಎಂದು ಪ್ರಶ್ನಿಸುತ್ತಾನೆ. ಅಂತರಾಳಿಗೆ ಎಜೆ ಪ್ರಶ್ನೆಗಳನ್ನು ಕೇಳಿ ಶಾಕ್ ಆಗುತ್ತದೆ. ಏನು ಉತ್ತರ ಕೊಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಅಂತರಾ ಮೌನವಾಗಿ ನಿಂತಿದ್ದಾಗ, ತಲೆ ಸುತ್ತು ಬರುತ್ತಿದೆಯಾ, ಸುಸ್ತಾಗುತ್ತಿದೆಯಾ ಎಂದಾಗ ಅಂತರಾ ಪ್ರತಿ ಸಲ ಕೊಡುವ ಕಾರಣಗಳನ್ನೇ ಎಜೆಗೆ ಹೇಳುತ್ತಾಳೆ.

ಎಜೆ ಬಳಿ ಸಿಕ್ಕ ಬಿದ್ದಳೇ ಅಂತರಾ..?

ಈಗ ಅಂತರಾಳಿಗೆ ಎಜೆ ಬಳಿ ಸಿಕ್ಕಿ ಹಾಕಿಕೊಂಡಿರುವುದು ಪಕ್ಕಾ ಆಗಿದೆ. ಆದರೆ, ಹೇಗೆ ಈ ಸಲ ಎಜೆಯನ್ನು ಯಾಮಾರಿಸುವುದು ಎಂಬುದು ತಿಳಿಯುತ್ತಿಲ್ಲ. ಅಭಿ ನನಗೆ ಎಲ್ಲ ನೆನಪು ಬಂದಿದೆ. ಆದರೆ, ನಾನು ಎಲ್ಲಿದ್ದೆ, ಏನು ಮಾಡಿಕೊಂಡಿದ್ದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾಳೆ. ಈ ಮಾತಿಗೆಲ್ಲಾ ಬಗ್ಗದ ಎಜೆ, ಏನೂ ನೆನಪಿಲ್ಲ ಎಂದರೆ ಯಾವಾಗಲೂ ನಿನಗೆ ಫೋನ್ ಕಾಲ್ ಬರುತ್ತಲ್ಲ ಯಾರದ್ದು, ಆಗಾಗ ಮನೆಯಿಂದ ಹೊರಗಡೆ ಹೋಗುತ್ತೀಯಲ್ಲ ಎಲ್ಲಿಗೆ ಎಂದು ಪ್ರಶ್ನಿಸುತ್ತಾರೆ. ಆಗ ಅಂತರಾ ತಬ್ಬಿಬ್ಬಾಗುತ್ತಾಳೆ.

More from Filmibeat

English summary
Hitler Kalyana: AJ asks questions to anthara.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X