Hitler Kalyana: ಅಂತರಾ ತಲೆಗೆ ಹುಳ ಬಿಟ್ಟ ಸೊಸೆಯಂದಿರು : ಲೀಲಾಗೆ ವಾರ್ನಿಂಗ್
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದುರ್ಗಾ ಹಾಗೂ ಸರಸ್ವತಿಯ ಹೊಸ ಪ್ಲಾನ್ ವರ್ಕೌಟ್ ಆಗಿದೆ. ಅಂತರಾ ಮತ್ತು ಲೀಲಾಳನ್ನು ದೂರ ಮಾಡಿ, ಲೀಲಾಗೆ ಗೇಟ್ ಪಾಸ್ ಕೊಡುವ ಐಡಿಯಾ ಸಕ್ಸಸ್ ಆಗಿದೆ. ಬೇಕಂತಲೇ ಅಂತರಾಳನ್ನು ಮಾತನಾಡಿಸಿದ ಸರಸ್ವತಿ, ದುರ್ಗಾ ಇಬ್ಬರೂ ಕಿವಿ ಚುಚ್ಚಿದ್ದಾರೆ. ಲೀಲಾ ಬದುಕಲ್ಲಿ ನಡೆಯ ಬಾರದ ಘಟನೆಯೊಂದು ನಡೆದು ಹೋಗಿದೆ ಎಂದಿದ್ದಾರೆ.
ದುರ್ಗಾ, ಸರಸ್ವತಿ ಮಾತನ್ನು ಕೇಳಿದ ಅಂತರಾ ತಲೆಗೆ ಹುಳ ಬಿಟ್ಟುಕೊಂಡಿದ್ದಾಳೆ. ಲೀಲಾ ಜೀವನದಲ್ಲಿ ನಡೆದಿರುವ ಕಹಿ ಘಟನೆ ಏನು ಎಂಬುದನ್ನು ತಿಳಿಯಲು ಮುಂದಾಗಿದ್ದಾಳೆ. ಲೀಲಾಳಿಗೆ ಆಗಿರುವ ಅನ್ಯಾಯದ ಬಗ್ಗೆ ತಿಳಿಯಲು ಅಂತರಾ ಈಗ ಮನೆಯಲ್ಲಿರುವವರನ್ನೆಲ್ಲಾ ಪ್ರಶ್ನಿಸುತ್ತಿದ್ದಾಳೆ. ಮೊದಲಿಗೆ ಲಕ್ಷ್ಮೀ ಅನ್ನು ವಿಚಾರಿಸಿದ ಅಂತರಾಳಿಗೆ ಸತ್ಯವೇ ತಿಳಿಯುವುದಿಲ್ಲ. ವಿಶ್ವರೂಪ್ ಕೂಡ ಆ ಘಟನೆಯನ್ನು ಮತ್ತೆ ನೆನಪಿಸಬೇಡಿ. ಅವರಿಗೆ ಬಹಳ ದೊಡ್ಡ ಅನ್ಯಾಯವಾಗಿದೆ ಎಂದು ಹೇಳಿ, ಮುಂದೇನು ಕೇಳಬೇಡಿ ಅಂತ ಹೇಳಿ ನುಳುಚಿಕೊಂಡಿದ್ದಾನೆ.

ಅಜ್ಜಿಯನ್ನು ವಿಚಾರಿಸಿದ ಅಂತರಾಳಿಗೂ ಉತ್ತರ ಸಿಕ್ಕಿಲ್ಲ. ಲೀಲಾ ತನ್ನ ಬದುಕು ಕತ್ತಲೆಯಲ್ಲಿದ್ದರೂ, ನಮ್ಮನ್ನೆಲ್ಲಾ ಬೆಳಕಿನಲ್ಲಿಟ್ಟಿದ್ದಾಳೆ. ಅವಳ ಬದುಕಿನ ಬಗ್ಗೆ ಸತ್ಯ ಹೇಳಲು ನನ್ನ ಕೈನಲ್ಲಿ ಸಾಧ್ಯವೇ ಇಲ್ಲ ಎಂದು ಹೇಳಿದ್ದಾಳೆ. ಇದನ್ನು ಎಜೆ ಬಳಿಯೇ ಕೇಳಬೇಕು ಎಂದು ಅಂತರಾ ಹೊರಟಿದ್ದಾಳೆ. ಲೀಲಾ ಆಗಲೂ ಕೂಡ ಲೀಳಾ ಅಂತರಾಳಿಗೆ ಸತ್ಯ ತಿಳಿಯದಂತೆ ನೋಡಿಕೊಂಡಿದ್ದಾಳೆ.
ಮನೆಯವರ ವಿರುದ್ಧ ನಿಂತ ಅಂತರಾ
ಅಂತರಾಳಿಗೆ ಬಹಳ ಬೇಸರವಾಗಿದೆ. ಹಾಗಾಗಿ ಅಂತರಾ ಎಲ್ಲರನ್ನೂ ಕರೆದು ಪ್ರಶ್ನೆ ಮಾಡಿದ್ದಾಳೆ. ಲೀಲಾ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಯಾರೂ ಬಾಯಿ ಬಿಟ್ಟು ಹೇಳುತ್ತಿಲ್ಲ. ಪ್ರತಿಯೊಬ್ಬರು ಘೋರವಾದ ಅನ್ಯಾಯ ಲೀಲಾಳಿಗೆ ಆಗಿದೆ ಎಂದು ಹೇಳುತ್ತಿದ್ದೀರಾ ಅಷ್ಟೇ. ಆದರೆ, ಏನದು ಎಂಬುದನ್ನು ಯಾರೂ ಬಾಯಿ ಬಿಡುತ್ತಿಲ್ಲ. ಹೇಳಲು ಲೀಲಾ ಕೂಡ ಸತ್ಯವನ್ನು ಹೇಳಲು ಬಿಡುತ್ತಿಲ್ಲ. ಹೀಗಾಗಿ ಅಂತರಾ ಲೀಲಾಳಿಗೆ ನೇರವಾಗಿ ಪರೀಕ್ಷೆ ಇಟ್ಟಿದ್ದಾಳೆ.

ಎಜೆಗೆ ಸಮಾಧಾನ ಮಾಡಿದ ಲೀಲಾ
ನಾಳೆ ಸಂಜೆಯೊಳಗೆ ನಿನ್ನ ಬದುಕಿನಲ್ಲಿ ನಡೆದಿರುವ ಕಹಿ ಘಟನೆಯನ್ನು ಹೇಳಲಿಲ್ಲವೆಂದರೆ, ಈ ಮನೆಯಲ್ಲಿ ಒಂದು ಹನಿ ನೀರು ಕುಡಿಯುವುದಿಲ್ಲ. ಜೊತೆಗೆ ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದಳೆ. ಎಜೆ ಅಂತರಾ ಕೇಳಿದ ಪ್ರಶ್ನೆಗೆ ದಂಗಾಗಿ ಹೋಗಿದ್ದಾನೆ. ಲೀಲಾ ಬದುಕಲ್ಲಿ ತನ್ನಿಂದಲೇ ಅನ್ಯಾಯವಾಗುತ್ತಿದೆ ಎಂದು ಗಿಲ್ಟ್ ಅನುಭವಿಸುತ್ತಿದ್ದಾನೆ.
ಗೊಂದಲ ಸೃಷ್ಟಿಸಿದ ಸೊಸೆಯಂದಿರು
ಎಜೆಗೆ ಲೀಲಾ ಸಮಾಧಾನ ಮಾಡಿದ್ದಾಳೆ. ನಿಮ್ಮಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ನೀವು ಯಾವ ತಪ್ಪನ್ನು ಮಾಡಿಲ್ಲ. ಯಾವುದೇ ಕಾರಣಕ್ಕೂ ಸತ್ಯವನ್ನು ಅಂತರಾ ಅಕ್ಕನಿಗೆ ಹೇಳುವುದು ಬೇಡ ಎಂದು ಹೇಳುತ್ತಾಳೆ. ಇನ್ನು ದುರ್ಗಾ ಮತ್ತು ಸರಸ್ವತಿ ಮತ್ತೆ ಅಂತರಾ ಬಳಿ ಮಾತನಾಡಿದ್ದಾರೆ. ಲೀಲಾ ಬದುಕಿನಲ್ಲಿ ದೊಡ್ಡ ಅನ್ಯಾಯವಾಗಿದೆ. ನಂಬಿಕೆ ದ್ರೋಹ ಆಗಿದೆ. ಆ ವ್ಯಕ್ತಿ ಲೀಲಾ ಬದುಕಿನಲ್ಲಿ ಆಟ ಆಡಿದ್ದಾರೆ.

ಲೀಲಾ ಸತ್ಯ ಹೇಳುತ್ತಾಳಾ?
ಲೀಲಾ ಅವರಿಗೆ ಈ ಮನೆಯನ್ನು ಬಿಟ್ಟು ಹೋಗಿ, ನಿಮ್ಮ ಬದುಕನ್ನು ಕಟ್ಟಿಕೊಳ್ಳಿ ಎಂದಿದ್ದಕ್ಕೆ ನಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಅವರಿಗೆ ನೀವೇ ನ್ಯಾಯ ಕೊಡಿಸಬೇಕು. ನೀವೇ ಏನಾದರೂ ಮಾಡಿ ಅವರಿಗೆ ಒಂದು ಬದುಕನ್ನು ಕೊಡಿಸಬೇಕು. ಇದಕ್ಕಿಂತ ಹೆಚ್ಚಿನದನ್ನು ನಾನು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿ ಹೋಗುತ್ತಾರೆ. ಈಗ ಲೀಲಾ ಯಾವ ಸುಳ್ಳನ್ನು ಹೇಳದೇ, ಸತ್ಯವನ್ನೇ ಹೇಳುವಂತೆ ಮಾಡಿದ್ದಾರೆ.


Click it and Unblock the Notifications











