Hitler Kalyana: ಮದುವೆ ಮನೆಗೆ ಅಂತರಾ ಬಂದಾಯ್ತು: ಎಜೆ ಕಣ್ಣಿಗೆ ಬೀಳುತ್ತಾಳಾ..?

By ಪ್ರಿಯಾ ದೊರೆ

'ಹಿಟ್ಲರ್‌ ಕಲ್ಯಾಣ' ಧಾರಾವಾಹಿಯಲ್ಲಿ ಸದ್ಯ ಲೀಲಾ ಮತ್ತು ಎಜೆಗೆ ಮದುವೆ ತಯಾರಿ ನಡೆಯುತ್ತಿದೆ. ಧಾರಾವಾಹಿಯಲ್ಲಿ ಮದುವೆಯ ಕಳೆ ಕಾಣುತ್ತಿದ್ದು, ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಎಜೆ ಮಕ್ಕಳು ಕೂಡ ತಮ್ಮ ತಮ್ಮ ಕೆಲಸವನ್ನು ಬಿಟ್ಟು ಮದುವೆಗೆಂದು ಆಗಮಿಸಿದ್ದಾರೆ. ಹೀಗಾಗಿ ಎಜೆ ಸೊಸೆಯಂದಿರು ಮದುವೆಯ ದೆಸೆಯಿಂದಲಾದರೂ ಪತಿಯರ ಜೊತೆಗೆ ಇರಲು ಅವಕಾಶ ಸಿಕ್ಕಿತು ಎಂದು ಖುಷಿಯಾಗಿದ್ದಾರೆ.

ಮದುವೆ ಮನೆಯಲ್ಲಿ ಎಜೆ ಮಕ್ಕಳು ಮತ್ತು ಸೊಸೆಯಂದಿರು ಹಾಡಿ ಕುಣಿದಿದ್ದಾರೆ. ಲೀಲಾ ಮತ್ತು ಎಜೆಯನ್ನು ಎಷ್ಟು ರಂಜಿಸಲು ಸಾಧ್ಯವೋ ಅಷ್ಟು ಮನರಂಜನೆಯನ್ನು ನೀಡಿದ್ದಾರೆ. ಅಜ್ಜಿ ಕೂಡ ವೇದಿಕೆ ಮೇಲೆ ಬಂದು ದುರ್ಗಾ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಮೆಹಂದಿ ಶಾಸ್ತ್ರ, ಗೌರಿ ಪೂಜೆ ಅಂತೆಲ್ಲಾ ಮನೆಯವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆದರೆ, ಲೀಲಾ ಹಾಗೂ ಎಜೆ ಮದುವೆಯಾಗುತ್ತಿರುವುದು ದುರ್ಗಾ ಮತ್ತು ಸರಸ್ವತಿಗೆ ಕೊಂಚವೂ ಇಷ್ಟವಿಲ್ಲ. ಆದರೂ ದುರ್ಗಾ ಆರಾಮಾಗಿ ಮದುವೆ ಮನೆಯಲ್ಲಿ ಓಡಾಡಿಕೊಂಡಿರುವುದನ್ನು ನೋಡಿ ಸಂಕಟ ಪಡುತ್ತಿದ್ದಾಳೆ.

Hitler Kalyana serial 27th March Episode Written Update

ಹೇಗಾದರೂ ಮಾಡಿ ಈ ಮದುವೆಯನ್ನು ಮುರಿಯಬೇಕು ಎಂದು ಸರಸ್ವತಿ ಯೋಚಿಸುತ್ತಿದ್ದರೆ, ದುರ್ಗಾ ಅಕ್ಕ ಯಾಕೆ ಏನೂ ತಲೆ ಕೆಡಿಸಿಕೊಂಡಿಲ್ಲ ಎಂದು ಗೊಂದಲದಲ್ಲಿದ್ದಾಳೆ. ಇತ್ತ ಲೀಲಾ ಮತ್ತು ಎಜೆಯಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ತೇಲಾಡುತ್ತಿದ್ದಾರೆ. ಎಜೆಗೆ ತಾನು ಇಷ್ಟಪಟ್ಟಂತೆ ಲೀಲಾ ಇದ್ದು, ಆಕೆಯ ಜೊತೆಗೆ ತನ್ನ ಮುಂದಿನ ಜೀವನವನ್ನು ನಡೆಸಬೇಕು ಎಂದು ಬಯಸಿದ್ದಾರೆ. ಅಂತರಾಳನ್ನು ಎಜೆ ಈಗ ಲೀಲಾಳಲ್ಲಿ ನೋಡುತ್ತಿದ್ದಾನೆ. ಇತ್ತ ಲೀಲಾ ಎಜೆ ಅಂತಹ ಒಳ್ಳೆಯ ವ್ಯಕ್ತಿಯನ್ನು ಪತಿಯಾಗಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದು, ಈ ಮದುವೆಯ ಮೂಲಕ ಅವರ ಜೊತೆಗೆ ಹೊಸ ಬಾಳನ್ನು ಪ್ರಾರಂಭಿಸಬೇಕು ಎಂದು ಕನಸು ಕಾಣುತ್ತಾ ತೇಲಾಡುತ್ತಿದ್ದಾಳೆ.

ಇನ್ನು ಅಜ್ಜಿಗೆ ಅಂತರಾಳಂತೆ ಕಂಡಿರುವ ಆ ಹುಡುಗಿ ಎಜೆ ಬಾಳಲ್ಲಿ ಬರಬಾರದು ಎಂದು ಸಿಕ್ಕಾಪಟ್ಟೆ ಯೋಚಿಸುತ್ತಿದ್ದು, ಆದಷ್ಟು ಬೇಗನೇ ಈ ಮದುವೆ ಸುಸೂತ್ರವಾಗಿ ನಡೆಯಲಿ ಎಂದು ಒದ್ದಾಡುತ್ತಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ಮನಸ್ಥಿತಿಯಲ್ಲಿದ್ದು, ಧಾರಾವಾಹಿಯಲ್ಲಿ ಮದುವೆ ಕಳೆ ಜೋರಾಗಿದೆ. ಆದರೆ, ದುರ್ಗಾ ಲೀಲಾ ಮತ್ತು ಎಜೆ ಮದುವೆ ಯಾವುದೇ ಕಾರಙಣಕ್ಕೂ ನಡೆಯಬಾರದು ಎಂದು ತೀರ್ಮಾನಿಸಿದ್ದಾಳೆ. ಹಾಗಾಗಿ ದುರ್ಗಾ ಅಂತರಾಳಂತೆ ಈರುವ ಆ ಹುಡುಗಿಯನ್ನು ಭೇಟಿ ಮಾಡಿದ್ದು, ಅವಳೇ ಈ ಮದುವೆಗೆ ಹೂವಿನ ಅಲಂಕಾರ ಮಾಡುವಂತೆ ಜವಾಬ್ದಾರಿಯನ್ನು ವಹಿಸಿದ್ದಾಳೆ. ಇದರಿಂದಾಗಿ ಮದುವೆಯ ಮನೆಯಲ್ಲಿ ಎಜೆ ಕಣ್ಣಿಗೆ ಅಂತರಾ ಬಿದ್ದರೆ, ಲೀಲಾ ಜೊತೆಗೆ ನಡೆಯಬೇಕಿರುವ ಮದುವೆ ನಿಂತು ಹೋಗುತ್ತದೆ ಎಂಬುದು ದುರ್ಗಾ ಪ್ಲ್ಯಾನ್.

Hitler Kalyana serial 27th March Episode Written Update

ದುರ್ಗಾ ತನ್ನ ಪ್ಲ್ಯಾನ್‌ ಬಗ್ಗೆ ಯಾರಿಗೂ ಹೇಳಿಲ್ಲ. ಹಾಗಾಗಿ ತನ್ನ ಪ್ಲಾನ್ ಸಕ್ಸಸ್ ಆಗುತ್ತೆ ಎಂದು ಖುಷಿಯಾಗಿ ಮದುವೆಯ ಮನೆಯಲ್ಲಿ ಎಂಜಾಯ್ ಮಾಡುತ್ತಿದ್ದಾಳೆ. ಇತ್ತ ಅಂತರಾ ಕೂಡ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದು, ಹೂವುಗಳೆಲ್ಲವೂ ಬಾಡಿ ಹೋಗಿವೆ ಎಂದು ತನ್ನ ಟೀಮ್ ಹುಡುಗರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಮದುವೆ ಮಂಟಪದ ಹೊರಗಡೆ ಎಜೆ ಹೆಸರನ್ನು ನೋಡಿ ಅಂತರಾಗೆ ಕೊಂಚ ಗಾಬರಿಯಾಗುತ್ತದೆ. ಇನ್ನು ಮದುವೆಯ ಮನೆಯಲ್ಲಿ ಖುಷಿ ಖುಷಿಯಾಗಿ ಓಡಾಡುತ್ತಿದ್ದ ಲಕ್ಷ್ಮೀ ಕಣ್ಣಿಗೆ ಅಂತರಾ ಬಿದ್ದಿದ್ದಾಳೆ.

ಅಂತರಾಳನ್ನು ನೋಡಿ ಶಾಕ್ ಆದ ಲಕ್ಷ್ಮೀ, ಸೀದಾ ಎಜೆಗೆ ತಿಳಿಸಲು ಹೋಗಿದ್ದಾಳೆ. ಅಲ್ಲಿ ಹೇಳಲಾಗದೇ ಈಗ ಲೀಲಾ ಬಳಿ ಹೊರಟಿದ್ದಾಳೆ. ಅಂತರಾ ಇರುವುದು ಮನೆಯವರಿಗೆಲ್ಲಾ ಗೊತ್ತಾದರೆ ಮದುವೆ ನಿಂತು ಹೋಗುವ ಸಾಧ್ಯತೆ ಹಚ್ಚಿದೆ. ಆದರೆ, ಈಕೆ ಅಂತರಾನೇ ಹೌದಾ ಇಲ್ಲವೇ, ಅಂತರಾಳಂತೆ ಇರುವ ಬೇರೆಯವಳ ಎಂಬ ಅನುಮಾನವೂ ಪ್ರೇಕ್ಷಕರಲ್ಲಿ ಕಾಡುತ್ತಿದೆ.

More from Filmibeat

English summary
Hitler Kalyana serial 27th March Episode Written Update: Here Is Details About Leela-AL marriage day anthara comes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X