Hitler Kalyana: ಪ್ರಾರ್ಥನಾ ಎಂದು ಕರೆದು ಅಂತರಾಳನ್ನು ಪರೀಕ್ಷಿಸಿದ ಲೀಲಾ

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾಗೆ ಈಗ ಅಂತರಾಳನ್ನು ಪ್ರತಿ ಹಂತದಲ್ಲೂ ಪರೀಕ್ಷೆ ಮಾಡುವುದೇ ಕೆಲಸವಾಗಿದೆ. ಇದಕ್ಕಾಗಿ ಸಕಲ ತಯಾರಿಯನ್ನೂ ಮಾಡಿಕೊಂಡಿದ್ದಾಳೆ.

ಹಬ್ಬದ ದಿನ ಬೆಳಗ್ಗಿನಿಂದಲೇ ಅಂತರಾಳನ್ನು ಪರೀಕ್ಷೆ ಮಾಡುತ್ತಿದ್ದಾಳೆ. ತಡವಾಗಿ ಏಳಬೇಕು, ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು ಎಂದುಕೊಂಡಿದ್ದ ಅಂತರಾಳಿಗೆ ಹಬ್ಬದ ದಿನ ಗ್ರಹಾರ ಕೆಟ್ಟಿದೆ.

Hitler Kalyana serial 27th September episode written update

ಅಂತರಾ ಹಬ್ಬದ ದಿನ ತಣ್ಣೀರಿನಲ್ಲಿ ಸ್ನಾನ ಮಾಡಿ ಮಡಿಯಿಂದ ನೈವೇದ್ಯ ಮಾಡಬೇಕು ಎಂದು ಹೇಳಿ ಲೀಲಾ ಹೆದರಿಸಿದ್ದಾಳೆ. ಬೇರೆ ದಾರಿ ಇಲ್ಲದೇ ಅಂತರಾ ನೈವೇದ್ಯ ಮಾಡುತ್ತಿದ್ದಾಳೆ.

ಅಂತರಾ ಪರೀಕ್ಷೆ ಮಾಡುತ್ತಿರುವ ಲೀಲಾ

ನೈವೇದ್ಯ ತಯಾರಿಸಿದ ಅಂತರಾ ಹೊಟ್ಟೆ ಹಸಿವು ಎಂದು ಹೇಳಿ ಕಡಲೆ ಬೀಜ ತಿನ್ನುತ್ತಿರುತ್ತಾಳೆ. ಇದನ್ನು ಲೀಲಾ ಕದ್ದು ನೋಡುತ್ತಾಳೆ. ನಂತರ ನೈವೇದ್ಯ ರೆಡಿಯಾಯ್ತಾ ಎಂದು ಕೇಳುತ್ತಾಳೆ. ಆಗ ಅಂತರಾ ರೆಡಿಯಾಗಿದೆ ಎಂದು ರುಚಿ ನೋಡಲು ಹೋಗುತ್ತಾಳೆ. ಮತ್ತೆ ಲೀಲಾ ತಡೆದು ಬುದ್ಧಿ ಹೇಳುತ್ತಾಳೆ. ಲೀಲಾ ಹೋದಮೇಲೆ ಹಸಿವು ತಾಳಲಾರದೇ ಬಾಳೆಹಣ್ಣನ್ನು ಅಂತರಾ ತಿನ್ನುತ್ತಾಳೆ. ಇದನ್ನೆಲ್ಲಾ ಲೀಲಾ ಗಮನಿಸುತ್ತಲೇ ಇರುತ್ತಾಳೆ. ಅಂತರಾಳ ಪ್ರತಿಯೊಂದು ಹೆಜ್ಜೆಯನ್ನು ಕೂಡ ಲೀಲಾ ಪರೀಕ್ಷೆ ಮಾಡುತ್ತಿರುತ್ತಾಳೆ. ಇಂದೇ ಅಂತರಾಳ ಬಂಡವಾಳವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಲೀಲಾ ಯತ್ನಿಸುತ್ತಿದ್ದಾಳೆ.

ಲೀಲಾ ಎದುರು ಸಿಕ್ಕಿ ಬಿದ್ದಳಾ ಪ್ರಾರ್ಥನಾ..?

ಲ್ಯಾಂಡ್ ಲೈನ್‌ಗೆ ಕರೆ ಬರುತ್ತದೆ. ರಿಸೀವ್ ಮಾಡುವ ಲೀಲಾ, ಬೇಕಂತಲೇ ಪ್ರಾರ್ಥನಾ ಬೇಕಾ? ಎಂದು ಕೇಳುತ್ತಾಳೆ. ಆಗ ಪ್ರಾರ್ಥನಾ ಓಡಿ ಬಂದು ಫೊನ್ ತೆಗೆದುಕೊಳ್ಳುತ್ತಾಳೆ. ಯಾಕೆ ಎಂದು ಲೀಲಾ ಕೇಳಿದ್ದಕ್ಕೆ ಬೈಯುವುದಕ್ಕೆ ಎನ್ನುತ್ತಾಳೆ. ಇನ್ನು ಲೀಲಾ ಬೇಕಂತಲೇ ಪ್ರಾರ್ಥನಾ ಎಂಬ ಹೆಸರಿನ ತನ್ನ ಸ್ನೇಹಿತೆಯನ್ನು ಮನೆಗೆ ಕರೆಸಿರುತ್ತಾಳೆ. ಅಂತರಾ ಆ ಹೆಸರಿಗೆ ಹೇಗೆ ರಿಯಾಕ್ಟ್ ಮಾಡುತ್ತಾಳೆ ಎಂದು ತಿಳಿದುಕೊಳ್ಳಲು ಮನೆಗೆ ಕರೆದಿರುತ್ತಾಳೆ. ಮಾತು ಮಾತಿಗೂ ಲೀಲಾ ಪ್ರಾರ್ಥನಾ ಪ್ರಾರ್ಥನಾ ಎಂದು ಕರೆಯುತ್ತಿರುತ್ತಾಳೆ. ಇದು ಅಂತರಾಳಿಗೆ ಪದೇ ಪದೇ ತಿರುಗಿ ಮಾತನಾಡುವಂತೆ ಮಾಡುತ್ತದೆ.

Hitler Kalyana serial 27th September episode written update

ಲೀಲಾಳಿಗೆ ಪೂಜೆ ಮಾಡುವ ಚಾನ್ಸ್

ಸದ್ಯ ಲೀಲಾ ಮಾಡಿದ ಹೆಸರಿನ ಪರೀಕ್ಷೆಯಲ್ಲಿ ಅಂತರಾ ಸೋತಿದ್ದಾಳೆ. ದೀಪ ಹಚ್ಚುವಾಗ ಕೈ ಸುಟ್ಟುಕೊಂಡ ಅಂತರಾಳನ್ನು ಎಜೆ ಪೂಜೆ ಮಾಡಬೇಡ ಎಂದು ಹೇಳಿ, ಲೀಲಾಳಿಗೆ ದೀಪ ಹಚ್ಚಲು ತಿಳಿಸುತ್ತಾನೆ. ಭೀಮನ ಅಮಾವಾಸ್ಯೆ, ವರಮಹಾಲಕ್ಷ್ಮೀ ಹಬ್ಬ ಎಲ್ಲವೂ ಕೂಡ ಲೀಲಾ ಆಚರಿಸಿದ್ದು, ಈಗ ಗೌರಿ-ಗಣೇಶ ಹಬ್ಬವನ್ನು ಕೂಡ ಲೀಲಾ ಪೂಜೆ ಮಾಡುವಂತೆ ಪರಿಸ್ಥಿತಿ ಬಂದಿದೆ. ಅಲ್ಲಿಗೆ ಈ ಮನೆಯ ಸೊಸೆ ಲೀಲಾ ಎಂಬುದನ್ನು ದೇವರು ಕೂಡ ಹೇಳದಂತಾಯ್ತು ಎಂದು ಅಜ್ಜಿ ಹಾಗೂ ಲಕ್ಷ್ಮೀ ಸಮಾಧಾನ ಪಟ್ಟುಕೊಳ್ಳುತ್ತಾರೆ.

ಸತ್ಯ ತಿಳಿದ ಲೀಲಾ ಮುಂದೇನು ಮಾಡಬಹುದು..?

ಅಂತರಾಳಿಗೆ ಇಷ್ಟ ಎಂದು ಹಬ್ಬದ ದಿನ ಮನೆಗೆ ಮಕ್ಕಳನ್ನು ಕರೆಸಿದ್ದಾಳೆ ಲೀಲಾ. ಈಗ ಅಂತರಾ ಬಳಿ ಸುಳ್ಳು ಹೇಳಿದ್ದಾಳೆ. ಇದೇ ಕೊನೆಯ ಪರೀಕ್ಷೆ ಎಂದು, ನೀವು ಪ್ರತೀ ವರ್ಷ ಗಣೇಶ ಹಬ್ಬದ ದಿನ ಮಕ್ಕಳನ್ನು ಕರೆಸಿ ಅವರಿಗೆ ಬಾಲ ಗಣೇಶನನ್ನು ಕೊಡುತ್ತೀರಾ ಎಂದು ಹೇಳುತ್ತಾಳೆ. ಅಂತರಾ ನಿಜ ಎಂದು ನಂಬಿ ಹೌದು ಹೌದು ಎಂದು ಹೇಳುತ್ತಾಳೆ. ಆದರೆ, ಅಂತರಾ ಮಕ್ಕಳನ್ನು ನೋಡಿ ರಾಕ್ಷಸ ಎಂದು ಬೈದುಕೊಳ್ಳುವುದನ್ನು ಕೂಡ ಲೀಲಅ ಕೇಳಿಸಿಕೊಳ್ಳುತ್ತಾಳೆ. ಮಕ್ಕಳು ದೇವರಿಗೆ ಆರತಿ ಮಾಡಿದ ಮೇಲೆ ಎಜೆ ಮತ್ತು ಲೀಲಾಳನ್ನು ನಿಲ್ಲಿಸಿ ಅವರಿಬ್ಬರಿಗೆ ಆರತಿ ನೀಡುತ್ತಾರೆ. ಇದು ಅಂತರಾಳಿಗೆ ಮುಜುಗರ ತರುತ್ತದೆ. ಲೀಲಾಳಿಗೆ ಅಂತರಾ ಡುಪ್ಲಿಕೇಟ್ ಎಂದು ಕನ್ಫರ್ಮ್ ಆಗಿದ್ದು, ಇನ್ಮುಂದೆ ಏನು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ.

More from Filmibeat

English summary
Hitler Kalyana Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X